ಫೆ.24ಕ್ಕೆ ತೆರೆ ಮೇಲೆ `ವಿಕ್ರಾಂತ್​ ರೋಣ’ನ ಆರ್ಭಟ: 3ಡಿಯಲ್ಲಿ ಕಿಚ್ಚನನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್​ ಕಾತುರ!

2022ರ ಫೆ.24ರಂದು ವಿಶ್ವಾದ್ಯಂತ ‘ವಿಕ್ರಾಂತ್​ ರೋಣ’ ತೆರೆಕಾಣಲಿದೆ. ಈ ವಿಚಾರವನ್ನು ಸೋಷಿಯಲ್​ ಮೀಡಿಯಾ ಮೂಲಕ ಕಿಚ್ಚ ಸುದೀಪ್​ ಮತ್ತು ಚಿತ್ರತಂಡದವರು ಬಹಿರಂಗಪಡಿಸಿದ್ದಾರೆ. 

ವಿಕ್ರಾಂತ್​ ರೋಣ ಸಿನಿಮಾದ ಪೋಸ್ಟರ್​

ವಿಕ್ರಾಂತ್​ ರೋಣ ಸಿನಿಮಾದ ಪೋಸ್ಟರ್​

  • Share this:
ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep)​ ಅವರ ಬುಹು  ನಿರೀಕ್ಷಿತ ಸಿನಿಮಾ ‘ವಿಕ್ರಾಂತ್​ ರೋಣ’ (Vikrant Rona) ಯಾವಾಗ ರಿಲೀಸ್​ ಆಗುತ್ತೆ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ವರ್ಷವೇ ವಿಕ್ರಾಂತ್​ ರೋಣನ ಆರ್ಭಟ ನಡೆಯಲಿದೆ ಎಂದು ಫ್ಯಾನ್ಸ್(Fans) ಅಂದುಕೊಂಡಿದ್ದರು. ಆದರೆ. ವಿಕ್ರಾಂತ್​ ರೋಣನ ದರ್ಶನ ಸಿಗುವುದು ಮುಂದಿನ ವರ್ಷ ಅಂತ ಖಿಚಿತವಾಗಿದೆ. ಕಿಚ್ಚ ಸುದೀಪ್ ಮತ್ತು ಅನೂಪ್ ಬಂಡಾರಿ(Anup Bhandari) ಕಾಂಬಿನೇಷನ್‌ನಲ್ಲಿ ಮೂಡಿ ಬಂದಿರುವ ವಿಕ್ರಾಂತ್ ರೋಣ ಸಿನಿಮಾವನ್ನು 2022ರ ಫೆಬ್ರವರಿ 24ರಂದು ರಿಲೀಸ್​ ಮಾಡಲಾಗುತ್ತಿದೆ. 37 ಸೆಕೆಂಡ್​ಗಳ ಟೀಸರ್ ವಿಡಿಯೋ ರಿಲೀಸ್​ ಮಾಡುವ ಮೂಲಕ ಡೇಟ್ ಅನೌನ್ಸ್(Announce)​ ಮಾಡಿದ್ದಾರೆ. 2022ರ ಫೆ.24ರಂದು ವಿಶ್ವಾದ್ಯಂತ ‘ವಿಕ್ರಾಂತ್​ ರೋಣ’ ತೆರೆಕಾಣಲಿದೆ. ಈ ವಿಚಾರವನ್ನು ಸೋಷಿಯಲ್​ ಮೀಡಿಯಾ ಮೂಲಕ ಕಿಚ್ಚ ಸುದೀಪ್​ ಮತ್ತು ಚಿತ್ರತಂಡದವರು ಬಹಿರಂಗಪಡಿಸಿದ್ದಾರೆ. ಅದ್ದೂರಿಯಾಗಿ ಸಿನಿಮಾ ಮೂಡಿಬಂದಿದ್ದು, ಜಾಕ್​ ಮಂಜುನಾಥ್​ ಹಾಗೂ ಅಲಂಕಾರ್​ ಪಾಂಡಿಯನ್​ ನಿರ್ಮಾಣ ಮಾಡಿದ್ದಾರೆ.

The World Gets A New Hero On Feb 24, 2022 #VikrantRonaOnFeb24 @anupsbhandari @JackManjunath @Asli_Jacqueline @nirupbhandari @AJANEESHB @neethaofficial @shaliniartss @Alankar_Pandian @Kichchacreatiin @ZeeStudios_ @TSeries @LahariMusic @VikrantRona #VikrantRona pic.twitter.com/V2hER6qFebದಿ ವರ್ಲ್ಡ್​ ಗೆಟ್ಸ್​ ಎ ನ್ಯೂ ಹೀರೋ!

ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ 3ಡಿ(3D) ಯಲ್ಲಿ ನೀವು ವಿಕ್ರಾಂತ್ ರೋಣ ಆಬ್ಬರವನ್ನು ಕಣ್ತುಂಬುಕೊಳ್ಳಬಹುದು. ಡೇಟ್ ಅನೌನ್ಸ್ ಮಾಡಿರುವ ಈ ವಿಡಿಯೋದಲ್ಲಿ ದಿ ವರ್ಲ್ಡ್‌ ಗೆಟ್ಸ್‌ ಅ ನ್ಯೂ ಹೀರೋ ಆನ್ Feb 24th 2020 ಎಂದು ನೀವು ನೋಡಬಹುದು. ಜೊತೆಗೆ ಸುದೀಪ್​ ಬೈಕ್​ ಮೇಲೆ ಕುಳಿತಿರುವ ಫೋಟೋ ಕೂಡ ಈ ವಿಡಿಯೋದಲ್ಲಿದೆ. ಇನ್ನೂ ವಿಕ್ರಾಂತ್​ ರೋಣ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಒಂದೇ ದಿನ ಬಿಡುಗಡೆಯಾಗುತ್ತಿದೆ. ಕೇವಲ ಈ 30 ಸೆಕೆಂಡ್​ ವಿಡಿಯೋ ನೋಡಿಯೇ ಫ್ಯಾನ್ಸ್​ ಥ್ರಿಲ್​ ಆಗಿದ್ದಾರೆ. ದಿನದಿಂದ ದಿನಕ್ಕೆ ಈ ಸಿನಿಮಾ ಮೇಲಿರುವ ನಿರೀಕ್ಷೆ ಹೆಚ್ಚಾಗುತ್ತಿದೆ.

ಇದನ್ನು ಓದಿ : ನಾಗಚೈತನ್ಯನಿಂದ ದೂರಾದ ಮೇಲೆ ಸತ್ತೇ ಹೋಗ್ತಿನಿ ಅಂದ್ಕೊಂಡಿದ್ದೆ: ಮನದಾಳದ ಮಾತು ಬಿಚ್ಚಿಟ್ಟ ಸಮಂತಾ!

ಕಿಚ್ಚನ ಬರ್ತ್​ಡೇಗೆ ರಿಲೀಸ್​ ಆಗಿತ್ತು ‘ಡೆಡ್​ ಮ್ಯಾಮ್​ Anthem’!

ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್‍ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ವಿಕ್ರಾಂತ್ ರೋಣ. ಬಹು ಕೋಟಿ ವೆಚ್ಚದಲ್ಲಿ ತಯಾರಾಗಿರುವ ಈ ಸಿನಿಮಾದ ಬಗ್ಗೆ ಈಗಾಗಲೇ ಸಾಕಷ್ಟು ನಿರೀಕ್ಷೆ ಇದೆ, ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಚಿತ್ರತಂಡ ಕಿಚ್ಚನ ಹುಟ್ಟುಹಬ್ಬದ ಪ್ರಯುಕ್ತ ವಿಕ್ರಾಂತ್ ರೋಣ ಸಿನಿಮಾದ ಡೆಡ್ ಮ್ಯಾನ್ ಆಂಥೆಮ್ ಎಂಬ ಟೀಸರ್‌ನನ್ನು ಬಿಡುಗಡೆಗೊಳಿಸಿ ಅಭಿಮಾನಿಗಳ ಕೂತುಹಲವನ್ನು ಮತ್ತಷ್ಟು ಕೆರಳಿಸಿತ್ತು. ಇದೀಗ ಸಿನಿಮಅ ಡೇಟ್​ ಅನೌನ್ಸ್ ಆಗಿದೆ

ಇದನ್ನು ಓದಿ : ‘ಅಖಂಡ’ನಿಗಾಗಿ ಚಿತ್ರಮಂದಿರಕ್ಕೆ ಬಂದ ಅಘೋರಿಗಳು : ಬಾಲಯ್ಯನ ಶಿವತಾಂಡವಕ್ಕೆ ಮೊಳಗಿತು ಶಂಖನಾದ!

ರೋಣನ ಜೊತೆ ಜಾಕ್ವಲಿನ್ ಸಖತ್​ ಸ್ಟೆಪ್ಸ್​!​ 

ವಿಕ್ರಾಂತ್ ರೋಣ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫೆರ್ನಾಂಡಿಸ್ ಕೂಡ ಕಾಣಿಸಿಕೊಂಡಿದ್ದಾರೆ. ಅವರು ಚಿತ್ರೀಕರಣಕ್ಕೆ ಬಂದ ಫೋಟೋಗಳು, ಹಾಗೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಫೋಟೋಗಳು ಸಖತ್​ ವೈರಲ್ ಆಗಿತ್ತು. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.
Published by:Vasudeva M
First published: