• Home
  • »
  • News
  • »
  • entertainment
  • »
  • Kiccha Sudeep: ಕಿಚ್ಚನಿಗೆ ತಿನ್ನೋದಕ್ಕಿಂತ ಅಡುಗೆ ಮಾಡಿ ಬಡಿಸೋದು ಇಷ್ಟವಂತೆ! ವಿಮಾನ ಹಾರಿಸುವ ಕನಸು ಬಿಚ್ಚಿಟ್ಟ ವಿಕ್ರಾಂತ್ ರೋಣ

Kiccha Sudeep: ಕಿಚ್ಚನಿಗೆ ತಿನ್ನೋದಕ್ಕಿಂತ ಅಡುಗೆ ಮಾಡಿ ಬಡಿಸೋದು ಇಷ್ಟವಂತೆ! ವಿಮಾನ ಹಾರಿಸುವ ಕನಸು ಬಿಚ್ಚಿಟ್ಟ ವಿಕ್ರಾಂತ್ ರೋಣ

ಕಿಚ್ಚ ಸುದೀಪ್

ಕಿಚ್ಚ ಸುದೀಪ್

Vikrant Rona: ಈ ಎಲ್ಲದರ ಮಧ್ಯೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿರುವ ಕಿಚ್ಚ, ಮೊದಲು ನನಗೆ ಪೈಲೆಂಟ್​ ಆಗಬೇಕು ಎಂಬ ಆಸೆ ಇತ್ತು, ನಂತರ ನನಗೆ ಪೊಲೀಸ್​ ಆಗಬೇಕು ಅಂತಿತ್ತು ಎಂದಿದ್ದಾರೆ.

  • Share this:

ಕಿಚ್ಚ ಸುದೀಪ್ (Kiccha Sudeep) ಸದ್ಯ ಎಲ್ಲರ ಬಾಯಲ್ಲಿ ಕೇಳಿ ಬರುತ್ತಿರುವ ಹೆಸರು. ಅವರ ಅಭಿನಯದ ವಿಕ್ರಾಂತ್ ರೋಣ (Vikrant Rona) ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ವಿಶ್ವದಾದ್ಯಂತ ಕಿಚ್ಚ ಅಭಿಮಾನಿಗಳು (Fans) ಈ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ್ದು, ಸದ್ಯ ಸಿನಿಮಾ ಯಶಸ್ವಿಯಾಗಿ ಮುನ್ನುಗುತ್ತಿದೆ. ಬಾಕ್ಸ್​ ಆಫೀಸ್​ನಲ್ಲಿ (Box Office) ಸಹ ಈ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಕಿಚ್ಚ ಸುದೀಪ್​ ಈ ಸಿನಿಮಾ ಪ್ರಚಾರವನ್ನು ಅದ್ಭುತವಾಗಿ ಮಾಡಿದ್ದರು. ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಸಂದರ್ಶನ ನೀಡಿದ್ದರು. ಹಾಗೆಯೇ ಮುಂಬೈಗೆ ಹೋಗಿದ್ದ ಸುದೀಪ್ ಅಲ್ಲಿ ನೀಡಿರುವ ಸಂದರ್ಶನವೊಂದು ಎಲ್ಲೆಡೆ ವೈರಲ್​ ಆಗುತ್ತಿದೆ. ಹಾಗಾದ್ರೆ ಕಿಚ್ಚ ಸುದೀಪ್ ಹೇಳಿದ್ದೇನು? ಇಲ್ಲಿದೆ ಫುಲ್​ ಡೀಟೈಲ್ಸ್​.


ಎಲ್ಲವೂ ಟೈಮ್​ ಸರಿಯಾಗಿ ಆಗಬೇಕಂತೆ


ಕಿಚ್ಚ ಸುದೀಪ್ ಕರ್ಲಿ ಟೈಲ್ಸ್​ ಎನ್ನುವ ಎಂಟರ್​ಟೈನ್​ಮೆಂಟ್​ ಮೀಡಿಯಾಗೆ ಅದರ ವಿಶೇಷ ಕಾರ್ಯಕ್ರಮವಾದ ಸಂಡೇ ಬ್ರಂಚ್​ ಸಂದರ್ಶನ ನೀಡಿದ್ದು ಅದರಲ್ಲಿ ಅವರು ಡಯೆಟ್​, ಸಿನಿಮಾ, ಬಾಲಿವುಡ್​ ಹೀಗೆ ಎಲ್ಲದರ ಬಗ್ಗೆ ಮಾತನಾಡಿದ್ದಾರೆ. ಊಟದ ವಿಚಾರದ ಬಗ್ಗೆ ಕೇಳಿದಾಗ ಕಿಚ್ಚ ನಾನು ಬಹಳ ಸ್ಪೆಸಿಫಿಕ್​, ನನಗೆ ಸರಿಯಾದ ಸಮಯಕ್ಕೆ ಊಟ ಸಿಗದಿದ್ದರೆ, ನಾನು ಏನು ಬೇಕಾದರೂ ಮಾಡುತ್ತೇನೆ. ನನಗೆ ಎಲ್ಲವೂ ಸರಿಯಾದ ಸಮಯಕ್ಕೆ ಆಗಬೇಕು ಎಂದಿದ್ದಾರೆ. ಅಲ್ಲದೇ ಕಿಚ್ಚ ತನಗೆ ಬೆಳಗ್ಗೆ 11.45ಕ್ಕೆ  ಮಧ್ಯಾಹ್ನದ ಊಟ ಹಾಗೂ ಸಂಜೆ 6.45ಕ್ಕೆ ರಾತ್ರಿ ಊಟ ಆಗಬೇಕು. ಆ ಸಮಯ ಮೀರಬಾರದು ಎಂದು ಹೇಳಿದ್ದಾರೆ.


sandalwood actor kiccha sudeep movie vikrant rona piracy full movie leaked online


ಇನ್ನು ಈ ಸಂದರ್ಶನದಲ್ಲಿ ನನಗೆ ಅಡುಗೆ ಮಾಡುವುದು ಬಹಳ ಇಷ್ಟ. ಅದರಲ್ಲೂ ಅತಿಥಿಗಳಿಗೆ ಅಡುಗೆ ಮಾಡಿ ಬಡಿಸುವುದು ಇಷ್ಟವಾಗುತ್ತದೆ. ಯಾರೂ ಸಿಗದೇ ಇದ್ದರೆ ನಾನು ಸುಮ್ಮನೆ ಮಾಡಿ, ಮನೆಯಲ್ಲಿರುವವರಿಗೆ ಬಡಿಸುತ್ತೇನೆ ಎಂದಿದ್ದಾರೆ. ಅಲ್ಲದೇ, ಬ್ರೌನ್​ ರೈಸ್​ ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ. ಹಾಗೆಯೇ ಸಾಮಾನ್ಯವಾಗಿ ಈ ರೀತಿಯ ಸಂದರ್ಶನದಲ್ಲಿ ಸೆಲೆಬ್ರಿಟಿಗಳು ಚಮಚದಲ್ಲಿ ತಿನ್ನುತ್ತಾರೆ, ಆದರೆ ಸುದೀಪ್​ ಕೈನಲ್ಲಿಯೇ ಊಟ ಮಾಡಿದ್ದು, ನಿರೂಪಕಿ ಸಹ ಕಿಚ್ಚನಿಗೆ ಸಾಥ್ ನೀಡಿದ್ದಾರೆ.ಟ್ರಾವೆಲ್​ ಮಾಡೋದು ಇಷ್ಟವಿಲ್ಲವಂತೆ


ಈ ಕಾರ್ಯಕ್ರಮದಲ್ಲಿ ಹಲವಾರು ವಿಚಾರಗಳನ್ನು ಅವರು ಹಂಚಿಕೊಂಡಿದ್ದು, ಅವರಿಗೆ ಟ್ರಾವೆಲ್​ ಮಾಡುವುದು ಅದರಲ್ಲಿ ಫ್ಲೈಟ್​ ಜರ್ನಿ ಎಂದರೆ ಇಷ್ಟವಿಲ್ಲ ಎಂದಿದ್ದಾರೆ. ಅಲ್ಲದೇ, ಒಂದು ತಮಾಷೆಯ ವಿಚಾರವನ್ನು ಹೇಳಿದ್ದು, ಅವರು ಒಮ್ಮೆ ಲಂಡನ್​ಗೆ ಹೋಗುವಾಗ ಕಾಫಿ ತರಲು ಫ್ಲೈಟ್​ನಲ್ಲಿ ಸೀಟ್​ನಿಂದ ಎದ್ದಿದ್ದರಂತೆ. ಆಗ ಅಲ್ಲಿನ ಏರ್​ ಹೋಸ್ಟ್ರೆಸ್​ ಪ್ರಶ್ನೆ ಮಾಡಿದಾಗ, ಕಿಚ್ಚ ಡೋರ್ ಓಪನ್ ಮಾಡುವುದು ಹೇಗೆ ಎಂದು ಕೇಳಿದ್ದರಂತೆ. ನಟನ ಈ ಪ್ರಶ್ನೆಗೆ ದಂಗಾದ ಅವರು, ಸುದಿಪ್ ಸೀಟ್​ನಿಂದ ಎದ್ದರೆ ಅವರ ಮೇಲೆ ಕಣ್ಣಿಡುತ್ತಿದ್ದರಂತೆ. ನನಗೆ ಅದು ಎಂಟರ್​ಟೈನ್ಮೆಂಟ್ ಆಗಿತ್ತು ಎಂದು ಹೇಳಿದ್ದಾರೆ.


people are talking about kiccha sudeep remuneration for bigg boss


ಇನ್ನು ನಿರೂಪಕಿ ನಾನು ಬೆಂಗಳೂರಿಗೆ ಬರ್ತಿದ್ದೀನಿ ನಾನು ಲೋಕಲ್ ಎನಿಸುವಂತೆ ಏನಾದರೂ ಹೇಳಿಕೊಡಿ ಎಂದಿದ್ದಾರೆ. ಅದಕ್ಕೆ ಅವರು ಯಾರೂ ನೀವು ಲೋಕಲ್ ಎಂದರೆ ನಂಬುವುದಿಲ್ಲ ಎಂದಿದ್ದು. ಜೊತೆ ಮಗಾ ಹೇಗಿದಿಯಾ, ಮಚ್ಚಾ ಎಲ್ಲಿದಿಯಾ ಎಂದೆಲ್ಲಾ ಹೇಳಿಕೊಟ್ಟಿದ್ದಾರೆ. ಆಗ ನಿರೂಪಕಿ ನಾನು ಇದನ್ನು ಬಳಸುತ್ತೇನೆ ಎಂದಾಗ, ನೀವು ಹಾಗೆಲ್ಲಾ ಹೇಳಿದ್ರೆ, ಜನ ನಿಮ್ಮನ್ನ ಮನೆ ತನಕ ಫಾಲೋ ಮಾಡಿ ಬರ್ತಾರೆ ಎಂದು ತಮಾಷೆ ಮಾಡಿದ್ದಾರೆ.


ಹಾಗೆಯೇ ವಿಕ್ರಾಂತ್ ರೋಣ ಸಿನಿಮಾ ಬಗ್ಗೆ ಮಾತನಾಡಿದ್ದು, ಈ ಸಿನಿಮಾ ಹಾರರ್​ ಸಿನಿಮಾ ಅಲ್ಲ. ಇದು ಮಿಸ್ಟರಿ, ಥ್ರಿಲ್ಲರ್ ಮತ್ತು ಆಕ್ಷನ್​ ಸಿನಿಮಾ ಎಂದು ಹೇಳಿದ್ದಾರೆ. ಬಾಲಿವುಡ್​ ಹಾಗೂ ದಕ್ಷಿಣ ಸಿನಿಮಾದ ಬಗ್ಗೆ ಮಾತನಾಡಿದ ಅವರು ದಕ್ಷಿಣ ಸಿನಿಮಾ ರಂಗ ಸಹ ಕಷ್ಟಪಡುತ್ತಿದೆ. ನಾವು 80 ರಿಂದ 90 ಸಿನಿಮಾ ಮಾಡುತ್ತೇವೆ ವರ್ಷಕ್ಕೆ. ಆದರೆ ಕೇವಲ 4 ರಿಂದ 5 ಸಿನಿಮಾ ಹಿಟ್​ ಆದರೆ ಅದು ಒಳ್ಳೆಯದಲ್ಲ. ಕೇವಲ ಕೆಲ ಸಿನಿಮಾಗಳು ಹಿಟ್​ ಆಗಿ ನಂತರ ಥಿಯೇಟರ್​ ಖಾಲಿ ಇದ್ದರೆ, ಥಿಯೇಟರ್​ಗಳು ಮುಚ್ಚುವ ಸಾದ್ಯತೆ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.  ಯಾವುದೇ ಸಿನಿಮಾ ಹಿಟ್​ ಆದರೂ ಅದಕ್ಕೊಂದು ಬ್ರಾಂಡ್​ ಇರುತ್ತದೆ. ಉದಾಹರಣೆಗೆ ರಾಜಮೌಳಿ., ಕೆಜಿಎಫ್ 2ಗೆ ಸಹ ಕೆಜಿಎಫ್​ 1ರ ಬ್ರಾಂಡಿಂಗ್ ಇತ್ತು. ಈ ಎರಡು ಸಿನಿಮಾಗಳ ಪ್ರಚಾರ ಕೂಡ ಅದ್ಭುತವಾಗಿತ್ತು. ಪ್ರತಿಯೊಂದು ಸಿನಿಮಾ ರಂಗ ಕಷ್ಟಪಡುತ್ತಿದೆ ಎಂದಿದ್ದಾರೆ.


ಇದನ್ನೂ ಓದಿ: ಮತ್ತೆ ಸುದ್ದಿಯಾಗ್ತಿದೆ ಶೋಭಿತಾ - ನಾಗಚೈತನ್ಯ ಸ್ಟೋರಿ, ಇದಕ್ಕೆಲ್ಲಾ ಚೈ ರಿಯಾಕ್ಷನ್​ ಕಾರಣವಂತೆ


ಅಭಿಮಾನಿಗಳ ಪ್ರೀತಿ ಅಪಾರ


ಅಭಿಮಾನಿಗಳ ಪ್ರೀತಿಯ ಬಗ್ಗೆ ಸಹ ಮಾತನಾಡಿದ ಕಿಚ್ಚ, ಕೆಲವರು ದೇಹದ ತುಂಬೆಲ್ಲಾ ಟ್ಯಾಟೂ ಹಾಕಿಸಿಕೊಂಡಿರುತ್ತಾರೆ, ಅಲ್ಲದೇ ಒಂದು ಕುಟುಂಬ ಬಹಳ ದೂರದಿಂದ ಕೇವಲ ನನ್ನ ನೋಡಲು ಬಂದಿದ್ದರು. ಅವರ ಜೊತೆ ಸಮಯ ಕಳೆಯುವುದು ನಿಜಕ್ಕೂ ಸಂತೋಷವಾಗುತ್ತದೆ. ಅಭಿಮಾನಿಗಳು ನಮ್ಮ ಹೆಸರಿನಲ್ಲಿ ಪೂಜೆ ಮಾಡುತ್ತಾರೆ, ದೇವಸ್ಥಾನ ಕಟ್ಟಿಸುತ್ತಾರೆ. ಅದೆಲ್ಲಾ ಅವರ ಪ್ರೀತಿ ಎಂದಿದ್ದಾರೆ.


ಈ ಎಲ್ಲದರ ಮಧ್ಯೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿರುವ ಕಿಚ್ಚ, ಮೊದಲು ನನಗೆ ಪೈಲೆಂಟ್​ ಆಗಬೇಕು ಎಂಬ ಆಸೆ ಇತ್ತು, ನಂತರ ನನಗೆ ಪೊಲೀಸ್​ ಆಗಬೇಕು ಅಂತಿತ್ತು, ಆಮೇಲೆ ಕ್ರಿಕೆಟರ್​ ಆಗಬೇಕು ಅಂತಿತ್ತು, ಆದರೆ ಆಕ್ಟರ್​ ಆದೆ  ಎಂದಿದ್ದಾರೆ. ಹಾಗೆಯೇ ಅತಿ ಹೆಚ್ಚು ಮ್ಯಾಚ್​ ಆಡಿದ ಆಕ್ಟರ್ ನಾನು,  ಜೆಪಿ ಮಾರ್ಗನ್ ಟೂರ್ನಿಮೆಂಟ್​ ಆಡಿದ್ದೇನೆ. ಅಲ್ಲಿನ ಈಗಲೂ ಕ್ಯಾಪ್ಟನ್​ ಕೂಲ್ ಕಿಚ್ಚ​ ಎನ್ನುವ ಒಂದು ಬ್ರಿಕ್ ಇದೆ ಎನ್ನುವ ಮಾಹಿತಿಯನ್ನು ತಿಳಿಸಿದ್ದಾರೆ.


ಇದನ್ನೂ ಓದಿ: ಬಾಲಿವುಡ್​ ಸಿನಿಮಾಗಳನ್ನು ಹಿಂದಿಕ್ಕಿದ ವಿಕ್ರಾಂತ್ ರೋಣ, ಏಳನೇ ದಿನದ ಕಲೆಕ್ಷನ್ ಕೇಳಿದ್ರೆ ಶಾಕ್ ಆಗ್ತೀರಿ!


ಸಂದರ್ಶನದಲ್ಲಿ ಬಹಳಷ್ಟು ವಿಚಾರಗಳನ್ನು ಮಾತನಾಡಿದ್ದ ಕಿಚ್ಚ ಕೊನೆಯಲ್ಲಿ ಹೇಗೆ ಊಟವಾದ ನಂತರ ಬೆರಳನ್ನು ಚಪ್ಪರಿಸಿ ಆಸ್ವಾಧಿಸುವುದನ್ನ ಹೇಳಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಕಿಚ್ಚ ಸುದೀಪ್​  ವಿಕ್ರಾಂತ್ ರೋಣ ಸಿನಿಮಾ ಮೂಲಕ ಭರ್ಜರಿ ಹೆಸರುಗಳಿಸುತ್ತಿದ್ದಾರೆ.

Published by:Sandhya M
First published: