news18-kannada Updated:June 1, 2020, 6:37 PM IST
ಕಿಚ್ಚ ಸುದೀಪ್
ಬಾದ್ ಷಾ ಕಿಚ್ಚ ಸುದೀಪ್ ತಮ್ಮ ಆಪ್ತ ಸಹಾಯಕನ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ ನೀಡಿದ್ದಾರೆ. ಕಿಚ್ಚ ಮಾತಿನ ಚತುರ, ಹಾಡುಗಾರ, ಗಿಟಾರ್ ನುಡಿಸುತ್ತಾರೆಂದು ಎಲ್ಲರಿಗೂ ಗೊತ್ತು. ಆದರೆ ಕೀ ಬೋರ್ಡ್ ಕೂಡ ಅಷ್ಟೇ ಚೆನ್ನಾಗಿ ನುಡಿಸುತ್ತಾರೆ. ತಮ್ಮ ಸಹಾಯಕ ಮಹದೇವ್ ಅವರ ಹುಟ್ಟು ಹಬ್ಬಕ್ಕೆ ಕೀ ಬೋರ್ಡ್ ನುಡಿಸುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ಕಿಚ್ಚ ಸುದೀಪ್ ಅವರು ಮಹದೇವ್ ಅವರಿಗೆ ವಿಶ್ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂದು ಯಾರೆಲ್ಲಾ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರೋ ಅವರೆಲ್ಲರಿಗೂ ಹುಟ್ಟು ಹಬ್ಬದ ಶುಭಾಶಯ ಎಂದಿದ್ದಾರೆ.
ಇನ್ನು ವಿಡಿಯೋದಲ್ಲಿ ‘ ನನಗೆ ಬಹಲ ಬೇಕಾದ, ನನ್ನೊಟ್ಟಿಗೆ ಇರುವ ಮಹದೇವ್ ಅವರ ಹುಟ್ಟುಹಬ್ಬ, ಅವರಿಗೋಸ್ಕರ ಈ ಹಾಡು ಎಂದು ಶುಭಾಶಯ ತಿಳಿಸಿದ್ದಾರೆ. ಕಿಚ್ಚನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಂತೆ ಸಖತ್ ವೈರಲ್ ಆಗಿದೆ. ಸಾಕಷ್ಟು ಜನರು ಕಿಚ್ಚ, ಮಹದೇವ್ ಅವರಿಗೆ ಡಿಫರೆಂಟ್ ಆಗಿ ವಿಶ್ ಮಾಡಿದ್ದನ್ನು ನೋಡಿ ಕಾಮೆಂಟ್ ಬರೆದಿದ್ದಾರೆ.
ಸದ್ಯ ಕೊರೋನಾ ಲಾಕ್ಡೌನ್ನಿಂದಾಗಿ ಮನೆಯಲ್ಲಿದ್ದುಕೊಂಡು ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ ಕಿಚ್ಚ ಸುದೀಪ್. ಮತ್ತೊಂದೆಡೆ ಅವರ ನಟನೆಯ ‘ಕೋಟಿಗೊಬ್ಬ3‘ ಸಿನಿಮಾ ತೆರೆ ಕಾಣಲು ಸಜ್ಜಾಗಿ ನಿಂತಿದೆ. ಅದರೆ ಲಾಕ್ಡೌನ್ನಿಂದಾಗಿ ಬಿಡುಗಡೆ ದಿನಾಂಕವು ಮುಂದಕ್ಕೆ ಹೋಗಿದೆ.
ಅನೂಪ್ ಭಂಡಾರಿ ನಿರ್ದೇಶನ ‘ಫ್ಯಾಂಟಮ್‘ ಸಿನಿಮಾದಲ್ಲಿ ಕಿಚ್ಚ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ತೊಡಗಿಕೊಂಡಿದ್ದರು. ಆದರೆ ಲಾಕ್ಡೌನ್ನಿಂದಾಗಿ ಚಿತ್ರೀಕರಣಕ್ಕೆ ಸದ್ಯ ಬ್ರೇಕ್ ಬಿದ್ದಿದೆ.
ಬೇಸರದಲ್ಲಿದ್ದ ನನಗೆ-ಧೋನಿಗೆ ದ್ರಾವಿಡ್ ಸಿನಿಮಾ ತೋರಿಸಿದ್ದರು; ಇರ್ಫಾನ್ ಪಠಾಣ್
Published by:
Harshith AS
First published:
June 1, 2020, 6:35 PM IST