ಕಬ್ಜ ಸಿನಿಮಾ ಸೆಟ್​ಗೆ ಕಿಚ್ಚ ಸುದೀಪ್​ ಎಂಟ್ರಿ: `ಭಾರ್ಗವ್ ಭಕ್ಷಿ’ ಅವತಾರ ಕಂಡು ಫ್ಯಾನ್ಸ್​ ಖುಷ್​!

ಈ ಚಿತ್ರದ ಲುಕ್​ಅನ್ನು ಸ್ವತಃ ಕಿಚ್ಚ ಸುದೀಪ್​ ಅವರೇ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್​(Fans) ಖುಷಿಪಟ್ಟಿದ್ದಾರೆ. ಬ್ಲ್ಯಾಕ್​ ಅಂಡ್​​ ವೈಟ್​ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ. ಕಬ್ಜ ಸಿನಿಮಾದಲ್ಲಿ ಕಿಚ್ಚ ಒಂದು ಪವರ್ ಫುಲ್(Power Full) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಕಿಚ್ಚ ಸುದೀಪ್​

ಕಿಚ್ಚ ಸುದೀಪ್​

  • Share this:
ರಿಯಲ್ ಸ್ಟಾರ್​ ಉಪೇಂದ್ರ (Real Star Upendra) ಅಭಿನಯದ 'ಕಬ್ಜ'(Kabza) ಚಿತ್ರದಲ್ಲಿ 'ಕಿಚ್ಚ' ಸುದೀಪ್ (Kiccha Sudeep) ಅವರು ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿತ್ತು. ಇದೀಗ ಚಿತ್ರದಲ್ಲಿ ಅವರ ಲುಕ್(Look) ಹೇಗಿರಲಿದೆ ಎಂಬ ಬಗ್ಗೆಯೂ ಮಾಹಿತಿ ಸಿಕ್ಕಿದೆ. ಹೌದು, 'ಕೆಂಪೇಗೌಡ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಂತೆ ಈ ಬಾರಿಯೂ ಅವರು ಡಿಫರೆಂಟ್ ಆಗಿ ಮತ್ತೊಂದು ವಿಶೇಷ ಲುಕ್‌ನಲ್ಲಿ 'ಕಬ್ಜ'ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಡಿ.15ರಂದು ಶೂಟಿಂಗ್ (Shooting) ಕೂಡ ಶುರುವಾಗಿದ್ದು, ಸುದೀಪ್ ಚಿತ್ರತಂಡ ಸೇರಿಕೊಂಡಿದ್ದಾರೆ. ರಿಲೀಸ್​​ಗೂ ಮೊದಲೇ ಉಪೇಂದ್ರ ಹಾಗೂ ಸುದೀಪ್ ನಟನೆಯ 'ಕಬ್ಜ' ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಪೋಸ್ಟರ್ (Poster) ಇತ್ತೀಚೆಗೆ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡಿತ್ತು. ಸುದೀಪ್ ​ ಅವರು ಈ ಪೋಸ್ಟರ್​ನಲ್ಲಿ ಭಿನ್ನ ಗೆಟಪ್​ ತಾಳಿದ್ದರು. ಈಗ ಈ ಚಿತ್ರದ ಲುಕ್​ಅನ್ನು ಸ್ವತಃ ಕಿಚ್ಚ ಸುದೀಪ್​ ಅವರೇ ಹಂಚಿಕೊಂಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ​(Fans) ಖುಷಿಪಟ್ಟಿದ್ದಾರೆ. ಬ್ಲ್ಯಾಕ್​ ಅಂಡ್​​ ವೈಟ್​ ಫೋಟೋ ಸಾಕಷ್ಟು ವೈರಲ್​ ಆಗುತ್ತಿದೆ. ಕಬ್ಜ ಸಿನಿಮಾದಲ್ಲಿ ಕಿಚ್ಚ ಒಂದು ಪವರ್ ಫುಲ್ (Power Full) ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

ಭಾರ್ಗವ ಭಕ್ಷಿಯಾದ ಕಿಚ್ಚ ಸುದೀಪ್​!

ಇನ್ನೂ ಕಬ್ಜ ಸಿನಿಮಾದಲ್ಲಿ  ಸುದೀಪ್ ಪಾತ್ರದ ಹೆಸರು ಭಾರ್ಗವ ಭಕ್ಷಿ. ಈ ಹೆಸರೇ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಹೆಚ್ಚಿಸಿದೆ. ಕಬ್ಜ ಸಿನಿಮಾ ಚಿತ್ರೀಕರಣದಲ್ಲಿ ಕಿಚ್ಚ ಸುದೀಪ್ ಭಾಗಿಯಾಗಿದ್ದಾರೆ. ಕಿಚ್ಚ ಸೆಟ್‌ನಲ್ಲಿ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಫೋಟೋ ರಿವೀಲ್ ಅದರೂ ಕಿಚ್ಚನ ಲುಕ್‌ ಮಾತ್ರ ರಿವೀಲ್‌ ಆಗಿಲ್ಲ. ಸಹ ಕಲಾವಿದರು ಖಾಕಿ ಧರಿಸಿದ್ದಾರೆ. ಆದರೆ, ಸುದೀಪ್‌ ಸಹಜ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಲುಕ್‌ ವಿಭಿನ್ನವಾಗಿ ಇರಲಿದೆ ಎನ್ನುವ ನಿರೀಕ್ಷೆಯಿದೆ.


ಇದನ್ನು ಓದಿ : ಮತ್ತೆ ಬರ್ತಿದ್ದಾರೆ `ಹಂಬಲ್​ ಪೊಲಿಟಿಷಿಯನ್​ ನೊಗ್​ರಾಜ್​​’: ವೂಟ್​ ಸೆಲೆಕ್ಟ್​ನ ಹೊಸ ವೆಬ್​ ಸೀರೀಸ್​ ಟೀಸರ್​ ಔಟ್​!

ಆರ್.​ ಚಂದ್ರು ನಿರ್ದೇಶನದ ಪ್ಯಾನ್​ ಇಂಡಿಯಾ ಸಿನಿಮಾ!

ನಿರ್ದೇಶಕ ಆರ್. ಚಂದ್ರು (R.Chandru) ನಿರ್ಮಿಸಿ, ನಿರ್ದೇಶನ ಮಾಡುತ್ತಿರುವ 'ಕಬ್ಜ' ಚಿತ್ರವು ಪ್ಯಾನ್ ಇಂಡಿಯಾ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಚಿತ್ರಕ್ಕಾಗಿ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಅದ್ದೂರಿ ಸೆಟ್ ಹಾಕಿ ಶೂಟಿಂಗ್ ಮಾಡಲಾಗಿದೆ. ಅಲ್ಲದೆ, ಈ ಸಿನಿಮಾ ಏಳು ಭಾಷೆಗಳಲ್ಲಿ ತೆರೆಗೆ ಬರಲಿದೆ. ಮೂಲಗಳ ಪ್ರಕಾರ, ಕನ್ನಡ, ತೆಲುಗು, ತಮಿಳು ಭಾಷೆಗಳಿಗೆ ಏಕಕಾಲದಲ್ಲಿ ಶೂಟಿಂಗ್ ಮಾಡಿ, ಮಿಕ್ಕ ಭಾಷೆಗಳಿಗೆ ಡಬ್ ಮಾಡುವ ಸಾಧ್ಯತೆಗಳಿವೆ. ರವಿ ಬಸ್ರೂರು ಸಂಗೀತ ನೀಡುತ್ತಿದ್ದಾರೆ.

ಕಮಾಲ್​ ಮಾಡಲಿದೆ ಮುಕುಂದ ಮುರಾರಿ ಜೋಡಿ!

ಹೌದು, ಈ ಹಿಂದೆ ಮುಕುಂದ ಮುರಾರಿ ಸಿನಿಮಾದಲ್ಲಿ ಕಿಚ್ಚ ಸುದೀಪ್​ ಹಾಗೂ ರಿಯಲ್​ ಸ್ಟಾರ್​ ಉಪೇಂದ್ರ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಸೂಪರ್​ ಹಿಟ್ ಆಗಿತ್ತು, ಹಿಂದಿಯ ಓ ಮೈ ಗಾಡ್​ ಸಿನಿಮಾದ ರಿಮೇಕ್​ ಆಗಿದ್ದ ಮುಕುಂದ ಮುರಾರಿ ಸಿನಿಮಾ ಬಾಕ್ಸಾಫೀಸ್​ನಲ್ಲಿ ಕಮಾಲ್​ ಮಾಡಿತ್ತು. ಉಪೇಂದ್ರ ದೇವರನ್ನು ನಂಬದ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದರು, ಕಿಚ್ಚ ಸುದೀಪ್​ ಶ್ರೀ ಕೃಷ್ಣ ಪರಮಾತ್ಮನ ಪಾತ್ರದಲ್ಲಿ ಮಿಂಚಿದ್ದರು. ಇದೀಗ ಕಬ್ಜ ಚಿತ್ರದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅವರ ಅಭಿಮಾನಿಗಳ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಇದನ್ನು ಓದಿ : ಸಮಂತಾ ಐಟಂ ಸಾಂಗ್​ಗೆ ಹುಚ್ಚೆದ್ದು ಕುಣಿದ ಫ್ಯಾನ್ಸ್​: ಒನ್ಸ್​ ಮೋರ್​ ಅಂತ ಥಿಯೇಟರ್​ನಲ್ಲೇ ಕಿರಿಕ್​!

ಸಚಿವ ಎಂಟಿಬಿ ನಾಗರಾಜ್ (NTB Nagaraj), ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. 'ಕಬ್ಜ' ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಪ್ರಮೋದ್ ಶೆಟ್ಟಿ, ಜಗಪತಿ ಬಾಬು, ಅನೂಪ್ ರೇವಣ್ಣ, ರಾಹುಲ್ ಜಗತಪ್, ರಾಹುಲ್ ದೇವ್, ನವೀನ್, ಜಾನ್ ಕೊಕೇನ್, ಕೋಟ ಶ್ರೀನಿವಾಸ್ ರಾವ್, ಜಯಪ್ರಕಾಶ್, ಸುಬ್ಬರಾಜು, ಕಾಮರಾಜ್ ಮುಂತಾದವರ ದೊಡ್ಡ ತಾರಾಬಳಗವೇ ಇದೆ.
Published by:Vasudeva M
First published: