ಶಿವ ರಾಜ್​ಕುಮಾರ್​ ಹುಟ್ಟುಹಬ್ಬ; ಅಡ್ವಾನ್ಸ್​ ವಿಶ್​ ಮಾಡುವ ಮೂಲಕ ಕಿಚ್ಚ ನೀಡಿದ್ರು ಸ್ಪೆಷಲ್​ ಗಿಫ್ಟ್​

Shivaraj Kumar Birthday: ಕಿಚ್ಚ ಸುದೀಪ್​​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಶಿವ ರಾಜ್​ಕುಮಾರ್​ ಅವರ ಹುಟ್ಟಹಬ್ಬಕ್ಕಾಗಿ ಸಿದ್ಧಪಡಿಸಿದ್ದ ವಿಶೇಷ ಡಿಪಿಯ ಪೋಸ್ಟ್ ಮಾಡುವ ಮೂಲಕ ​ ಅಡ್ವಾನ್ಸ್​ ವಿಶ್​​ ಮಾಡಿದ್ದಾರೆ.

ಶಿವಣ್ಣನ ಮಹೋತ್ಸವ

ಶಿವಣ್ಣನ ಮಹೋತ್ಸವ

 • Share this:
  ಸ್ಯಾಂಡಲ್​ವುಡ್​ ಸೆಂಚುರಿ ಸ್ಟಾರ್​ ಶಿವ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ಇನ್ನು  8 ದಿನಗಳು ಮಾತ್ರ ಬಾಕಿ ಉಳಿದಿದೆ. ಶಿವಣ್ಣ ಹುಟ್ಟುಹಬ್ಬವೆಂದರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಸಡಗರ. ಹಾಗಾಗಿ ಜುಲೈ 12ನೇ ತಾರೀಖು ಬಂತೆಂದರೆ ಅಭಿಮಾನಿಗಳ ಹಬ್ಬದಂತೆ ಶಿವ ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.

  ಪ್ರತಿ ವರ್ಷ ಶಿವ ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು ಸ್ಪೆಷಲ್​ ಆಗಿ ಆಚರಣೆ ಮಾಡುತ್ತಾರೆ. ಅದರಂತೆ ಈ ವರ್ಷ ಅಭಿಮಾನಿಗಳು ಗಾಜನೂರಿನ ಗಂಡಿಗೆ ವಿಶೇಷ ಡಿಪಿಯನ್ನು ಸಿದ್ಧಪಡಿಸಿ ಬಿಡುಗಡೆ ಮಾಡುವ ಪ್ಲಾನ್​ ಮಾಡಿಕೊಂಡಿದ್ದರು. ಅದರಂತೆ ಇಂದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ಅವರ ಮೂಲಕ ನೂತನ ಡಿಪಿಯನ್ನು ಬಿಡುಗಡೆ ಮಾಡಿಸಿದ್ದಾರೆ. ಆ ಮೂಲಕ ಶಿವ ರಾಜ್​ಕುಮಾರ್​ ಹುಟ್ಟುಹಬ್ಬಕ್ಕೆ ಕಿಚ್ಚ ಹಾಗೂ ಶಿವಣ್ಣನ ಅಭಿಮಾನಿಗಳು ಅಡ್ವಾನ್ಸ್​ ವಿಶ್​ ಮಾಡಿದ್ದಾರೆ. ಜೊತೆಗೆ ಅಭಿಮಾನಿಗಳು ರೆಡಿ ಮಾಡಿರುವ ಭಜರಂಗಿ 2 ಸಿನಿಮಾದ ಮೋಷನ್​ ಪಿಕ್ಚರ್ಸ್​ ಕೂಡ ರಿವೀಲ್​​ ಮಾಡಲಾಗಿದೆ.

  ಕಿಚ್ಚ ಸುದೀಪ್​​ ತನ್ನ ಟ್ವಿಟ್ಟರ್​ ಖಾತೆಯಲ್ಲಿ ಶಿವ ರಾಜ್​ಕುಮಾರ್​ ಅವರ ಹುಟ್ಟಹಬ್ಬಕ್ಕಾಗಿ ಸಿದ್ಧಪಡಿಸಿದ್ದ ವಿಶೇಷ ಡಿಪಿಯ ಪೋಸ್ಟ್ ಮಾಡುವ ಮೂಲಕ ​ ಅಡ್ವಾನ್ಸ್​ ವಿಶ್​​ ಮಾಡಿದ್ದಾರೆ.

   


  ಹುಟ್ಟುಹಬ್ಬ ಆಚರಿಸಿಕೊಳ್ಳದ ಶಿವಣ್ಣ!

  ಶಿವ ರಾಜ್​ಕುಮಾರ್​ ಹುಟ್ಟುಹಬ್ಬದಂದು ಅಭಿಮಾನಿಗಳ ಹಿಂಡೇ ಅವರ ಮನೆಯ ಮುಂದೆ ಬಂದು ಕೇಕ್​ ಕಟ್​ ಮಾಡಿಸುತ್ತಿದ್ದರು. ಆದರೆ ಈ ವರ್ಷ ಮಹಾಮಾರಿ ಕೊರೋನಾದಿಂದಾಗಿ ದೇಶವೇ ಸಂಕಷ್ಟದಲ್ಲಿದೆ. ಈ ಕಾರಣಕ್ಕಾಗಿ ಶಿವಣ್ಣ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಲ್ಲಿ ವಿನಂತಿಸಿಕೊಂಡಿದ್ದಾರೆ.

  Tata Sky+ HD Set-Top Box: ಟಾಟಾ ಸ್ಕೈ ಸೆಟ್​​​-​ಟಾಪ್​​ ಬಾಕ್ಸ್​​ ಮೇಲೆ ಭರ್ಜರಿ ಡಿಸ್ಕೌಂಟ್​​!

  Maidaan: ಅಜಯ್​ ದೇವಗನ್​ ‘ಮೈದಾನ್’​ ಸಿನಿಮಾ ರಿಲೀಸ್​ ಯಾವಾಗ ಗೊತ್ತಾ?

   
  Published by:Harshith AS
  First published: