Sudeep & Ramya: ನಿಮಗೆ ವಯಸ್ಸೇ ಆಗಲ್ವಾ? ರಮ್ಯಾ ಪ್ರಶ್ನೆಗೆ ಸುದೀಪ್ ನೀಡಿದ ಪ್ರತಿಕ್ರಿಯೆ ಹೀಗಿತ್ತು

ಕೋಟಿಗೊಬ್ಬ-3 ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ರಮ್ಯಾ, ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಲಿಂಕ್ ಶೇರ್ ಮಾಡಿಕೊಂಡು ಕೆಲ ಸಾಲುಗಳನ್ನು ಬರೆದಿಕೊಂಡಿದ್ದರು. ಸುದೀಪ್ ನಿಮಗೆ ವಯಸ್ಸು ಆಗಲ್ವಾ? ಎಂದು ಪ್ರಶ್ನೆ ಮಾಡಿ, ಅಭಿನಯ ಚಕ್ರವರ್ತಿಯನ್ನು ಹಾಲಿವುಡ್ ನ ಬೆಂಜ್‍ಮಿನ್ ಪಾತ್ರಕ್ಕೆ ಹೋಲಿಸಿದ್ದರು.

ರಮ್ಯಾ-ಸುದೀಪ್​

ರಮ್ಯಾ-ಸುದೀಪ್​

 • Share this:
  ಚಂದನವನ(Sandalwood)ದಲ್ಲಿ ಕೋಟಿಗೊಬ್ಬ-3 (Kotigobba 3) ಅಬ್ಬರ ಶುರುವಾಗಿದೆ. ಟ್ರೈಲರ್ ನಿಂದ ಗಾಂಧಿನಗರದಲ್ಲಿ ಕಿಚ್ಚು ಹಚ್ಚಿರುವ ಕಿಚ್ಚನ ದರ್ಶನಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ. ಟ್ರೈಲರ್ (Kotigobba Trialer) ನಿಂದಲೇ ಸಿನಿಮಾ ಹೇಗೆ ರೋಚಕವಾಗಿರಲಿದೆ ಎಂಬುದನ್ನು ತಿಳಿಸಿರುವ ಚಿತ್ರತಂಡ, ಸಿನಿಮಾ ಪ್ರಮೋಶನ್ ನಲ್ಲಿ ತೊಡಗಿಕೊಂಡಿದೆ. ಚಿತ್ರದ ಸುದ್ದಿಗೋಷ್ಠಿ ವೇಳೆ ಕಿಚ್ಚ ಸುದೀಪ್ (Sudeep) ಟ್ರೈಲರ್ ಬಗ್ಗೆ ಸ್ಯಾಂಡಲ್‍ವುಡ್ ಕ್ವೀನ್ ರಮ್ಯಾ (Ramya) ಪೋಸ್ಟ್ ಕುರಿತು ಸುದೀಪ್ ಉತ್ತರಿಸಿದ್ದಾರೆ. ಸುದೀಪ್ ಅಭಿನಯದ ಕೋಟಿಗೊಬ್ಬ-3 ಚಿತ್ರ ಇದೇ ತಿಂಗಳು 14ರಂದು ಬೆಳ್ಳಿತೆರೆಗೆ ಅಪ್ಪಳಿಸಲಿದೆ.

  ಸುದೀಪ್‍ಗೆ ರಮ್ಯಾ ಪ್ರಶ್ನೆ?

  ಕೋಟಿಗೊಬ್ಬ-3 ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದ ರಮ್ಯಾ, ತಮ್ಮ ಇನ್‍ಸ್ಟಾಗ್ರಾಂ ಸ್ಟೋರಿಯಲ್ಲಿ ಲಿಂಕ್ ಶೇರ್ ಮಾಡಿಕೊಂಡು ಕೆಲ ಸಾಲುಗಳನ್ನು ಬರೆದಿಕೊಂಡಿದ್ದರು. ಸುದೀಪ್ ನಿಮಗೆ ವಯಸ್ಸು ಆಗಲ್ವಾ? ಎಂದು ಪ್ರಶ್ನೆ ಮಾಡಿ, ಅಭಿನಯ ಚಕ್ರವರ್ತಿಯನ್ನು ಹಾಲಿವುಡ್ ನ ಬೆಂಜ್‍ಮಿನ್ ಪಾತ್ರಕ್ಕೆ ಹೋಲಿಸಿದ್ದರು. ಬೆಂಜ್‍ಮಿನ್ ಪಾತ್ರದಲ್ಲಿ ವೃದ್ಧನೋರ್ವ ಮಗುವಾಗಿ ಅಂತ್ಯವಾಗುತ್ತಾನೆ. ಅದರಂತೆ ಸುದೀಪ್ ಟ್ರೈಲರ್ ನಲ್ಲಿ ಯಂಗ್ ಸ್ಟಾರ್ ಆಗಿ ಮಿಂಚಿದ್ದು, ವಯಸ್ಸು ಆದಂತೆ ಕಾಣಿಸಲ್ಲ ಎಂದು ಹೇಳಿದ್ದರು. ಕಿಚ್ಚ ಸುದೀಪ್ ಗೆ ವಯಸ್ಸು ಆಗೋದೇ ಇಲ್ಲವಾ ಎಂದು ಬರೆದು ಫೈರ್ ಎಮೋಜಿ ಚಪ್ಪಾಳೆ ತಟ್ಟುತ್ತಿರುವ  ಜಿಐಎಫ್ ಹಾಕಿ, ಟ್ರೈಲರ್ ಲಿಂಕ್ ಶೇರ್ ಮಾಡಿಕೊಂಡಿದ್ದರು.

  ಮೋಹಕ ತಾರೆಯ ಪ್ರಶ್ನೆಗೆ ಚಕ್ರವರ್ತಿಯ ಉತ್ತರ ಹೀಗಿತ್ತು

  ಇಂದಿನ ಸುದ್ದಿಗೋಷ್ಠಿಯಲ್ಲಿ ಸುದೀಪ್ ಅವರಿಗ ರಮ್ಯಾ ಪೋಸ್ಟ್ ಕುರಿತು ಕೇಳಲಾಗಿತ್ತು. ಕೋಟಿಗೊಬ್ಬ-3 ಚಿತ್ರದ ಬಗ್ಗೆ ರಮ್ಯಾ ಅವರು ಪ್ರತಿಕ್ರಿಯಿಸಿದ್ದಕ್ಕೆ ಸಂತೋಷವಾಗಿದೆ. ರಾಜಕೀಯ ಕೆಲಸದ ನಡುವೆ ಹಲವು ವರ್ಷಗಳ ಬಳಿಕ ಸಿನಿಮಾ ಬಗ್ಗೆ ಪೋಸ್ಟ್ ಮಾಡಿದ್ದು ಸಂತಸವಾಗಿದೆ. ಸಾಹಸಸಿಂಹ ವಿಷ್ಣುವರ್ಧನ್ ಮತ್ತು ನಮ್ಮ ತಂದೆ ಆಲದಮರಗಳು. ನಾನು ಅವರಿಬ್ಬರ ನೆರಳಿನಲ್ಲಿಯೇ ಬೆಳೆದು ಬದುಕುತ್ತಿದ್ದೇವೆ ಎಂದು ವಿಷ್ಣುವರ್ಧನ್ ಅವರನ್ನು ಸ್ಮರಿಸಿಕೊಂಡರು. 2001ರಲ್ಲಿ ಬಿಡುಗಡೆಯಾಗಿದ್ದ ಕೋಟಿಗೊಬ್ಬ ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದರು. ಮಾಸ್ ಆ್ಯಂಡ್ ಕಾಮನ್ ಮ್ಯಾನ್ ಲುಕ್‍ನಲ್ಲಿ ಮಿಂಚಿದ್ದ ವಿಷ್ಣುದಾದ ಪಾತ್ರ ಅಭಿಮಾನಿಗಳಿಗೆ ಇಷ್ಟವಾಗಿತ್ತು ಚಿತ್ರದಲ್ಲಿ ವಿಷ್ಣುವರ್ಧನ್ ಅವರಿಗೆ ಪ್ರಿಯಾಂಕಾ ಉಪೇಂದ್ರ ಜೊತೆಯಾಗಿದ್ದಾರೆ. ನಂತರ ಕೋಟಿಗೊಬ್ಬ ಶೀರ್ಷಿಕೆಯಲ್ಲಿ ಸರಣಿ ಚಿತ್ರಗಳು ಹೊರ ಬರುತ್ತಿದ್ದು, ಸುದೀಪ್ ನಾಯಕ ನಟನಾಗಿ ನಟಿಸುತ್ತಿದ್ದಾರೆ.

  ಇದನ್ನೂ ಓದಿ:Esha Gupta- ಟಾಪ್​ಲೆಸ್ ಆಗಿ ಬಾಲ್ಕನಿಯಲ್ಲಿ ನಿಂತ ನಟಿ ಈಶಾ ಗುಪ್ತಾಳ ಫೋಟೋಗಳು ವೈರಲ್

  ಸುದೀಪ್-ರಮ್ಯಾ ಜೊತೆಯಾಗಿ ನಟನೆ

  ಸುದೀಪ್ ಮತ್ತು ರಮ್ಯಾ ಜೊತೆಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮುಸ್ಸಂಜೆ ಮಾತು(2008), ರಂಗ ಎಸ್‍ಎಸ್‍ಎಲ್‍ಸಿ (2004), ಜಸ್ಟ್ ಮಾತ್ ಮಾತಲ್ಲಿ(2010), ಹುಚ್ಚ ಕಿಚ್ಚ (2010) ಚಿತ್ರಗಳಲ್ಲಿ ನಟಿಸಿದ್ದರು. ನಾಲ್ಕು ಚಿತ್ರಗಳು ಬಾಕ್ಸ್ ಆಫಿಸ್ ನಲ್ಲಿ ಸದ್ದು ಮಾಡೋದರ ಜೊತೆಗೆ ಒಳ್ಳೆಯ ವಿಮರ್ಶೆಯನ್ನು ಪಡೆದುಕೊಂಡಿದ್ದವು. ರಂಗ ಎಸ್‍ಎಸ್‍ಎಲ್‍ಸಿ ಚಿತ್ರದಲ್ಲಿನ ಡೈಲಾಗ್ ಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತವೆ. ಅಭಿಮಾನಿಗಳು ಸುದೀಪ್ ಮತ್ತು ರಮ್ಯಾ ಮತ್ತೆ ತೆರೆ ಮೇಲೆ ಜೊತೆಯಾಗಿ ನೋಡಲು ಇಷ್ಟಪಡುತ್ತಿದ್ದಾರೆ.

  ರಮ್ಯಾ ಇರೋದಾದ್ರೂ ಎಲ್ಲಿ?

  ಸ್ಯಾಂಡಲ್‍ವುಡ್ ಮೋಹಕ ತಾರೆ ರಮ್ಯಾ(ದಿವ್ಯ ಸ್ಪಂದನಾ) ಎಲ್ಲಿದ್ದಾರೆ ಎಂಬವುದು ಯಾರಿಗೂ ಗೊತ್ತಿಲ್ಲ. ಬಣ್ಣದ ಲೋಕ ಮತ್ತು ರಾಜಕೀಯದಿಂದಲೂ ದೂರವಾಗಿರುವ ರಮ್ಯಾ ವಿದೇಶದಲ್ಲಿ ನಲೆಸಿದ್ದಾರೆ ಎಂದು ಆಪ್ತರು ಹೇಳುತ್ತಾರೆ. ಕೆಲ ದಿನಗಳ ಇನ್‍ಸ್ಟಾಗ್ರಾಂನಲ್ಲಿ ಲೈವ್ ಬಂದಾಗ ಅಭಿಮಾನಿಗಳು ಎಲ್ಲಿದ್ದೀರಿ ಎಂಬ ಪ್ರಶ್ನೆಗೆ ನಾನು ಮನೆಯಲ್ಲಿಯೇ ಇದ್ದೇನೆ ಎಂದು ಜಾಣತನದ ಉತ್ತರ ನೀಡಿದ್ದರು.

  ವರದಿ: ಮೊಹ್ಮದ್​ ರಫೀಕ್​ ಕೆ
  Published by:Kavya V
  First published: