• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Yash: ರಾಕಿ ಭಾಯ್​ ಹಾಡಿ ಹೊಗಳಿದ ವಿಕ್ರಾಂತ್​ ರೋಣ! ಸುಖಾಸುಮ್ಮನೆ ಟ್ರೋಲ್​ ಮಾಡ್ತಿದ್ದವರಿಗೆ ಟಾಂಗ್​ ಕೊಟ್ರಾ ಕಿಚ್ಚ?

Yash: ರಾಕಿ ಭಾಯ್​ ಹಾಡಿ ಹೊಗಳಿದ ವಿಕ್ರಾಂತ್​ ರೋಣ! ಸುಖಾಸುಮ್ಮನೆ ಟ್ರೋಲ್​ ಮಾಡ್ತಿದ್ದವರಿಗೆ ಟಾಂಗ್​ ಕೊಟ್ರಾ ಕಿಚ್ಚ?

ಯಶ್​ , ಸುದೀಪ್​

ಯಶ್​ , ಸುದೀಪ್​

Kiccha Sudeep: ಅಲ್ಲದೇ ಈ ಹಿಂದೆ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಬಿಡುಗಡೆಯ ಸಮಯದಲ್ಲಿ ಹಲವಾರು ಸುದ್ದಿಗಳು ಹರಿದಾಡಿದ್ದವು.

  • Share this:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ (KGF) ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ (Pan India  Star) ಆಗಿ ಮೆರೆಯುತ್ತಿದ್ದಾರೆ. ಅವರಿಗೆ ಅಭಿಮಾನಿ ಬಳಗ ಹೆಚ್ಚಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿ ಸಹ ಅವರಿಗೆ ಬಹಳಷ್ಟು ಜನ ಅಭಿಮಾನಿಗಳಿದ್ದಾರೆ. ರಾಕಿಭಾಯ್​ ಎಂದರೆ ಸಾಕು ಫ್ಯಾನ್ಸ್​ಗೆ ಅದೇನೋ ಇಷ್ಟ. ಯಶ್​ ನಮ್ಮ ಸ್ಯಾಂಡಲ್​ವುಡ್​ನ ಹೆಮ್ಮೆ. ರಾಷ್ಟ್ರಮಟ್ಟದಲ್ಲಿ ನಮ್ಮ ಕನ್ನಡ ಸಿನಿಮಾಗಳ ಗೌರವನ್ನು ಹೆಚ್ಚಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಬಗ್ಗೆ ಕಿಚ್ಚ ಸುದೀಪ್ ಕೂಡ ಹಾಡಿ ಹೊಗಳಿದ್ದು, ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


ಯಶ್​ ಹಾಡಿ ಹೊಗಳಿದ ಕಿಚ್ಚ


ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಪ್ರಚಾರ ಕಾರ್ಯವನ್ನು ದೇಶದ ವಿವಿಧ ನಗರಗಳಲ್ಲಿ ಮಾಡಿದ್ದರು. ಮುಂಬೈನಲ್ಲಿ ಸಹ ಪ್ರಚಾರ ಕಾರ್ಯ ಮಾಡಿದ್ದ ನಟ ಒಂದು ಸಂದರ್ಶನದಲ್ಲಿ ರಾಕಿಂಗ್ ಸ್ಟಾರ್ ಯಶ್​ ಅವರನ್ನು ಹಾಡಿ ಹೊಗಳಿದ್ದಾರೆ. ನಿರೂಪಕ ಸಂದರ್ಶನದಲ್ಲಿ ನೀವು ಯಶ್​ ಅವರನ್ನು ಯಾವುದೇ ಕಾರ್ಯಕ್ರಮ, ಚಾಟ್​ ಶೋಗಳಲ್ಲಿ ಪರಿಚಯ ಮಾಡಿಕೊಡಬೇಕು ಎಂದಾದರೆ ಹೇಗೆ ಮಾಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಕಿಚ್ಚ ಅದ್ಭುತವಾಗಿ ಉತ್ತರಿಸಿದ್ದಾರೆ.


ಯಶ್​ ಬಹಳ ಎನರ್ಜಿಟಿಕ್​ ಆಕ್ಟರ್​ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ಅವರು ಅದ್ಭುತ ಕನಸುಗಾರ, ಸಾಧಕ ಎಂದಿದ್ದಾರೆ. ಅಲ್ಲದೇ ನಾನು ಇದೇ ಪದಗಳಿಂದ ಅವರನ್ನು ಸ್ವಾಗತಿಸುತ್ತೇನೆ ಎಂದಿದ್ದಾರೆ. ಇದು ಸ್ಯಾಂಡಲ್​ವುಡ್​ ಅಭಿಮಾನಿಗಳಿಗೆ ಮಾತ್ರವಲ್ಲದೇ ಯಶ್ ಅಭಿಮಾನಿಗಳ ಸಂತೋಷಕ್ಕೆ ಸಹ ಕಾರಣವಾಗಿದೆ.


ಇದನ್ನೂ ಓದಿ: ಮುದ್ದು ಮಗಳ ಹೆಸರನ್ನು ರಿವೀಲ್ ಮಾಡಿದ ಪ್ರಣಿತಾ, ಸಖತ್ ಕ್ಯೂಟ್ ಅಂದ್ರು ಫ್ಯಾನ್ಸ್


ಸಾಮಾನ್ಯವಾಗಿ ಇಬ್ಬರು ಸ್ಟಾರ್ ನಟರು ಎಂದ ಮೇಲೆ ಪೈಪೋಟಿ ಇರುತ್ತದೆ. ಆದರೆ ಇಬ್ಬರು ನಟರ ಮಧ್ಯೆ ಹುಳಿ ಹಿಂಡುವ ಕೆಲಸವನ್ನು ಸಹ ಮಾಡುವವರು ಹಲವಾರಿರುತ್ತಾರೆ. ಆದರೆ ಅದ್ಯಾವುದು ಸ್ಯಾಂಡಲ್​ವುಡ್​ ನಟರ ಮಧ್ಯೆ ನಡೆಯಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಲ್ಲದೇ ಈ ಹಿಂದೆ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಬಿಡುಗಡೆಯ ಸಮಯದಲ್ಲಿ ಹಲವಾರು ಸುದ್ದಿಗಳು ಹರಿದಾಡಿದ್ದವು.


ಹಲವು ಸುದ್ದಿಗಳು ಹರಿದಾಡಿದ್ದವು


ಯಶ್​ ಹಾಗೂ ಸುದೀಪ್ ಮಧ್ಯೆ ಯಾವುದೂ ಸರಿಯಿಲ್ಲ. ಸುದೀಪ್​ ಕೆಜಿಎಫ್​ 2 ಬಗ್ಗೆ ಯಾವುದೇ ಮಾತನಾಡಿಲ್ಲ, ವಿಶ್​ ಮಾಡಿಲ್ಲ ಎಂದೆಲ್ಲಾ ಸುದ್ದಿಗಳಿಗೆ ರೆಕ್ಕೆ ಪುಕ್ಕ ಕಟ್ಟಿ ಮಾತನಾಡಲಾಗಿತ್ತು. ಅಲ್ಲದೇ, ಯಾವುದೋ ಹಳೆಯ ವಿಡಿಯೋವೊಂದನ್ನು ಎಲ್ಲೆಡೆ ಶೇರ್ ಮಾಡಿಕೊಂಡು ಸುಖಾ ಸುಮ್ಮನೆ ಇಬ್ಬರ ನಟರ ನಡುವೆ ತಂದಿಡುವ ಕೆಲಸ ನಡೆದಿತ್ತು. ಆದರೆ ಅದೆಲ್ಲದ್ದಕ್ಕೆ ಇದೀಗ ಉತ್ತರ ಲಭಿಸಿದೆ ಎನ್ನಬಹುದು. ಕಿಚ್ಚ ಯಶ್​ ಬಗ್ಗೆ ಆಡಿರುವ ಮಾತುಗಳು ಎಲ್ಲದಕ್ಕೂ ಫುಲ್​ ಸ್ಟಾಪ್​ ಇಟ್ಟಿದೆ.


ಇದನ್ನೂ ಓದಿ: ಲೈಗರ್ ಪ್ರಚಾರ ಕಾರ್ಯಕ್ರಮದಲ್ಲಿ ನೂಕುನುಗ್ಗಲು, ಉಸಿರಾಡಲು ಪರದಾಡಿದ ವಿಜಯ್ ಅಭಿಮಾನಿ


ಸದ್ಯ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ಸದ್ದು ಮಾಡುತ್ತಿದ್ದು, ನಿರೀಕ್ಷೆ ಹುಟ್ಟಿಸಿದ್ದ ಸಿನಿಮಾ ಎಲ್ಲೆಡೆ ಅಬ್ಬರಿಸಿದೆ. ಹಾಗೆಯೇ ಕೆಜಿಎಫ್ 2 ಸಿನಿಮಾ ಬಹಳ ದೊಡ್ಡ ಯಶಸ್ಸು ನೀಡಿದೆ. ವಿಶ್ವದಾದ್ಯಂತ ದಾಖಲೆಗಳನ್ನು ಮಾಡಿದೆ. ಸರಿ ಸುಮಾರು 1000 ಕೋಟಿ ಗಳಿಗೆ ಮಾಡಿದೆ. ಇದು ನಿಜಕ್ಕೂ ಸಾಮಾನ್ಯವಾದ ವಿಚಾರವಲ್ಲ. ಕನ್ನಡ ಒಂದು ಸಿನಿಮಾ ಪ್ಯಾನ್ ಇಂಡಿಯಾ ಮಾತ್ರವಲ್ಲದೇ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡಿದೆ. ಹಾಗಾಗಿ ಈ ಸಿನಿಮಾಗಳ ನಂತರ ಯಶ್​ ಇಡುವ ಪ್ರತಿ ಹೆಜ್ಜೆಯೂ ಬಹಳ ನಾಜೂಕಿರಬೇಕು. ಆಯ್ಕೆ ಮಾಡುವ ಸಿನಿಮಾ, ಕತೆ ಬಹಳ ಮುಖ್ಯವಾಗುತ್ತದೆ. ಹಾಗಾಗಿ ಯಶ್​ ಸಿನಿಮಾ ಬಗ್ಗೆ ಬಹಳ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

Published by:Sandhya M
First published: