Kiccha Sudeep: ಕೆಜಿಎಫ್​ಗೆ ಮತ್ತೆ ಟಾಂಗ್​ ಕೊಟ್ರಾ ಕಿಚ್ಚ? ದೇವಸ್ಥಾನದ ಕಥೆ ಹೇಳಿದ್ದಾದರೂ ಯಾಕೆ? ಹಳೆ ವಿಡಿಯೋ ವೈರಲ್​

ಕಿಚ್ಚ ಮತ್ತೊಮ್ಮೆ ಕೆಜಿಎಫ್​ ಸಿನಿಮಾದ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದೆ. ರಿಪೋರ್ಟರ್​ ಒಬ್ಬರು ಕೇಳಿದ ಪ್ರಶ್ನೆಗೆ ತಮ್ಮದೇ ಸ್ಟೈಲ್​​ನಲ್ಲಿ ಕಿಚ್ಚ ಉತ್ತರ ನೀಡಿದ್ದಾರೆ.

ಕಿಚ್ಚ ಸುದೀಪ್​, ಯಶ್​

ಕಿಚ್ಚ ಸುದೀಪ್​, ಯಶ್​

  • Share this:
ಭಾರತ (India) ದ ರಾಷ್ಟ್ರ ಭಾಷೆಯ ಬಗ್ಗೆ ಸೂಪರ್ ಸ್ಟಾರ್ ಕಿಚ್ಚ ಸುದೀಪ್ (Kiccha Sudeep) ಅವರ ಕಾಮೆಂಟ್‌ಗೆ ಅಜಯ್ ದೇವಗನ್ (Ajay Devgan) ಟ್ವಿಟರ್ (Twitter) ನಲ್ಲಿ ಪ್ರತಿಕ್ರಿಯೆ ನೀಡಿದ್ದರು. ಹಿಂದಿ (Hindi) ನಮ್ಮ ರಾಷ್ಟ್ರಭಾಷೆಯಲ್ಲ ಎಂದು ಸುದೀಪ್ ಹೇಳಿದ ಮಾತಿಗೆ, ಹಾಗಾದರೆ ಹಿಂದಿ ಭಾಷೆಯಲ್ಲೇಕೆ ನಿಮ್ಮ ಚಿತ್ರಗಳನ್ನು ಡಬ್ (Dub) ಮಾಡುತ್ತೀರಿ ಎಂದು ಸಂಪೂರ್ಣ ಹಿಂದಿಯಲ್ಲಿಯೇ ಬರೆದ ಟ್ವೀಟ್ ಮೂಲಕ ಪ್ರಶ್ನೆ ಮಾಡಿದ್ದರು. ಆದರೆ, ಅಜಯ್ ದೇವಗನ್ ಅವರ ಟ್ವೀಟ್ ಗೆ  (Tweet) ಸುದೀಪ್ ಕೂಡ ತಕ್ಕ ಉತ್ತರ ನೀಡಿದ್ದರು. ಈ ವಿಚಾರ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಕಿಚ್ಚ  ಸುದೀಪ್​ಗೆ ಆಭೂತ ಪೂರ್ವ ಬೆಂಬಲ ವ್ಯಕ್ತವಾಗಿತ್ತು. ಕಿಚ್ಚ ಸುದೀಪ್​ ಮೊದಲಿನಿಂದಲೂ ನೇರ ವ್ಯಕ್ತಿ. ಸುತ್ತಿ ಬಳಸಿ ಮಾತನಾಡದೇ ಡೈರೆಕ್ಟ್​ ಆಗಿ ಮಾತನಾಡುತ್ತಾರೆ.

ಕೆಜಿಎಫ್​ಗೆ ಮತ್ತೆ ಟಾಂಗ್​ ಕೊಟ್ರಾ ಕಿಚ್ಚ? ಹಳೆ ವಿಡಿಯೋ ವೈರಲ್​

ಈ ಹಿಂದೆ ಕೆಜಿಎಫ್​ ಸಿನಿಮಾ ಬಗ್ಗೆ ಮಾತನಾಡಿದ್ದ ಹಳೆ ವಿಡಿಯೋ ವೈರಲ್​ ಆಗಿತ್ತು. ಇದೀಗ ಕಿಚ್ಚ ಅವರ ಮತ್ತೊಂದು  ಹಳೆ ವಿಡಿಯೋ ಕೆಜಿಎಫ್​ ಸಿನಿಮಾದ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್​ ಆಗುತ್ತಿದೆ. ರಿಪೋರ್ಟರ್​ ಒಬ್ಬರು ಕೇಳಿದ ಪ್ರಶ್ನೆಗೆ ತಮ್ಮದೇ ಸ್ಟೈಲ್​​ನಲ್ಲಿ ಕಿಚ್ಚ ಉತ್ತರ ನೀಡಿದ್ದಾರೆ. ಕೆಜಿಎಫ್​ ಸಿನಿಮಾ ಬಂದಮೇಲೆ ಕನ್ನಡ ಸಿನಿಮಾಗಳ ಮಾರ್ಕೆಟ್​ ಹೆಚ್ಚಾಯ್ತು. ಈ ಬಗ್ಗೆ ಏನು ಹೇಳುತ್ತೀರಾ ಎಂದು ಕಿಚ್ಚನಿಗೆ ಕೇಳಲಾಯ್ತು. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್​ ಕಥೆಯೊಂದನ್ನು ಹೇಳಿ ಉತ್ತರಿಸಿದ್ದಾರೆ. ಈ ವಿಡಿಯೋ ನೋಡಿದ ಅಭಿಮಾನಿಗಳು ಯಾಕೆ ಹೀಗೆ ಹೇಳಿದ್ದಾರೆ ಅಂತ ಹೇಳುತ್ತಿದ್ದಾರೆ. ಇನ್ನೂ ಕೆಲವರು ಕಿಚ್ಚ ಸುದೀಪ್​ ಹೇಳಿದ್ದು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ ಎಂದಿದ್ದಾರೆ.

ದೇವಸ್ಥಾನದ ಕಥೆ ಹೇಳಿದ ಕಿಚ್ಚ!

ಒಂದು ದೇವಸ್ಥಾನ ಇರುತ್ತೆ ಅಂದುಕೊಳ್ಳಿ, ಅಲ್ಲಿಗೆ ನನ್ನ ಸ್ನೇಹಿತ ರವಿ ಹೋಗಿ ಬರುತ್ತಾರೆ. ಆಗ ಅವರು ಅಂದುಕೊಂಡ ಕೆಲಸ ಆಗುತ್ತೆ. ಅವರು ಬಂದು ಹೀಗೆ ಆಯ್ತು ಅಂತ ಹೇಳುತ್ತಾರೆ. ಅವರು ಹೇಳಿದ ಮಾತ್ರಕ್ಕೆ ದೇವರು ಆಗ ಮಾತ್ರ ಇಲ್ಲ. ದೇವಸ್ಥಾನದಲ್ಲಿ ಮೊದಲಿನಿಂದಲೂ ದೇವರು ಇರುತ್ತಾರೆ. ನಿಮಗೆ ಒಳ್ಳೆದಾಗಿದೆ ಅಂತ ಈಗ ದೇವರು ಇದ್ದಾರೆ ಎಂದು ಹೇಳೋಕೆ ಆಗುತ್ತಾ? ಕನ್ನಡ ಚಿತ್ರರಂಗವೂ ಅಷ್ಟೇ. ಮೊದಲಿನಿಂದಲೂ ಹೆಸರು ಇದೆ. ಕೆಲವೊಂದು ಸಿನಿಮಾಗಳಿಂದ  ಅದರ ಮಹತ್ವ ಬೇರೆ ಯವರಿಗೆ ಗೊತ್ತಾಗಿದೆ ಎಂದು ವಿಕ್ರಾಂತ್​ ರೋಣ ತಮಿಳು ಪ್ರಚಾರದ ವೇಳೆ ಹೇಳಿದ್ದಾರೆ.



ಇದನ್ನೂ ಓದಿ: ಸುದೀಪ್​ ಹಳೆ ವಿಡಿಯೋ ವೈರಲ್​ ಮಾಡಿದ ಕಿಡಿಗೇಡಿಗಳು! ಅಪ್ಪು ಹೇಳಿದ್ದು ಮರೆತುಬಿಟ್ರಾ?

ಕಿಚ್ಚನ ಹಳೇ ವಿಡಿಯೋ ವೈರಲ್​ ಮಾಡಿದ್ದ ಕಿಡಿಗೇಡಿಗಳು!

ಕೆಜಿಎಫ್-2 ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಜಿಎಫ್-2 ಟ್ರೆಂಡಿಂಗ್​ನಲ್ಲಿದೆ. ಈ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ಅವರ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಸುದೀಪ್ ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಲಾಗಿದೆ. ಯಶ್ ಮತ್ತು ಸುದೀಪ್ ಅಭಿಮಾನಿಗಳ ನಡುವೆ ಸಮಾಜಿಕ ಜಾಲತಾಣದಲ್ಲಿ ಕಿತ್ತಾಟ ನಡೆಯುತ್ತಿದೆ. ಯಶ್​ ಮತ್ತು ಸುದೀಪ್​ ಅಭಿಮಾನಿಗಳ ನಡುವೆ ಕಿಡಿಗೇಡಿಗಳು ತಂದಿಟ್ಟು ತಮಾಷೆ ನೋಡಿದ್ದರು.

ಇದನ್ನೂ ಓದಿ: ಅನುಶ್ರೀಗೆ ಶಿವಣ್ಣ ಕೊಟ್ರು ಸೂಪರ್ ಗಿಫ್ಟ್, ಭಾವುಕರಾಗಿ ಹೀಗಂದ್ರು ನಿರೂಪಕಿ!

ಸುದೀಪ್​ ಹಳೆ ವಿಡಿಯೋದಲ್ಲಿ ಏನಿದೆ?

ವೈರಲ್ ಆಗಿದ್ದ ವಿಡಿಯೋದಲ್ಲಿ ಪತ್ರಕರ್ತರೊಬ್ಬರು ಕೆಜಿಎಫ್ ಬಗ್ಗೆ ಏನು ಹೇಳುತ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್ ಕೆಜಿಎಫ್ ನಲ್ಲಿ ನಾನಿಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಂದಹಾಗೆ ಸುದೀಪ್ ಕೆಜಿಎಫ್-2 ಬಿಡುಗಡೆ ಬಳಿಕ ಮಾತನಾಡಿದ ವಿಡಿಯೋ ಎಂದು ಬಿಂಬಿಸಲಾಗಿದೆ. ಆದರೆ , ಇದು ಸುಳ್ಳು ಇದು ಹಳೆಯ ವಿಡಿಯೋ, ಕೆಜಿಎಫ್​ ಚಾಪ್ಟರ್​ 1 ಸಿನಿಮಾ ಬಿಡುಗಡೆ ಸಂದರ್ಭದ ವಿಡಿಯೋ.
Published by:Vasudeva M
First published: