news18-kannada Updated:July 6, 2020, 2:26 PM IST
ವರಲಕ್ಷ್ಮೀ ಶರತ್ ಕುಮಾರ್
ಮಹಾಮಾರಿ ಕೊರೋನಾ ಅಟ್ಟಹಾಸ ದಿನೇ ದಿನೇ ಮುಂದುವರಿಯುತ್ತಲೇ ಇದೆ. ಇತ್ತ ಎಲ್ಲಾ ಚಿತ್ರರಂಗಗಳು ಸ್ತಬ್ಧವಾಗಿದೆ. ಬಾಕಿ ಇರುವ ಸಿನಿಮಾಗಳಿಗ ಶೂಟಿಂಗ್ಗೆ ಅವಕಾಶ ನೀಡಿದರೂ ಹೆಚ್ಚಿನ ಚಿತ್ರತಂಡಗಳು ಸಿನಿಮಾ ಶೂಟಿಂಗ್ ಮಾಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ ಚಿತ್ರತಾರೆಯರು ಅತ್ತ ಶೂಟಿಂಗ್ ಇಲ್ಲದೆ ಮನೆಯಲ್ಲಿ ಕುಳಿತು ಫ್ಯಾಮಿಲಿ ಜೊತೆಗೆ ಸಮಯ ಕಳೆಯುತ್ತಿದ್ದಾರೆ. ಹೀಗಿರುವಾಗ ಕನ್ನಡ ‘ಮಾಣಿಕ್ಯ’, ‘ರಣಂ’, ‘ವಿಸ್ಮಯ’ ಸಿನಿಮಾದಲ್ಲಿ ನಟಿಸಿದ ನಟಿ ವರಲಕ್ಷ್ಮೀ ಶರತ್ ಕುಮಾರ್ ಹೊಸ ಬ್ಯುಸಿನೆಸ್ ಶುರುಮಾಡಿದ್ದಾರೆ.
ಕೊರೋನಾ ಸಮಯದಲ್ಲಿ ಸುಮ್ಮನೆ ಕೂರದ ನಟಿ ವರಲಕ್ಷ್ಮೀ ಬೇಕಿಂಗ್ ಕಂಪೆನಿ ಶುರು ಮಾಡಿದ್ದಾರೆ. ಮೊದಲಿನಿಂದಲು ಅಡುಗೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ನಟಿ ವರಲಕ್ಷ್ಮೀ ‘ಲೈಫ್ ಆಫ್ ಪೈ’ ಎಂಬ ಚೀಸ್ ಕೇಕ್ಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಆ ಮೂಲಕ ಲಾಕ್ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.
ಕೊರೋನಾ ಸಮಯದಲ್ಲಿ ಅನೇಕ ಬ್ಯುಸಿನೆಸ್ಗಳು ನೆಲಕಚ್ಚಿ ಹೋಗಿವೆ. ಹೀಗಿರುವಾಗ ನಟಿ ವರಲಕ್ಷ್ಮೀ ಪ್ರಾರಂಭಿಸಿದ ಬ್ಯುಸಿನೆಸ್ ಲಾಭ ಕಾಣಬಹುದೇ ಎಂಬ ಪ್ರಶ್ನೆ ಮೂಡುವುದು ಸಹಜ. ಆದರೆ ಹಂತ ಹಂತವಾಗಿ ಲಾಭ ಕಾಣುತ್ತಿದ್ದಾರಂತೆ ನಟಿ. ಅನೇಕರು ಚೀಸ್ ಕೇಕ್ ಅನ್ನು ಆರ್ಡರ್ ಮಾಡುತ್ತಿದ್ದಾರಂತೆ. ಅಷ್ಟೇ ಅಲ್ಲದೆ ದಿನೇ ದಿನೇ ಲೈಫ್ ಆಫ್ ಪೈ ಚೀಸ್ ಕೇಕ್ ಜನಪ್ರಿಯತೆ ಪಡೆಯುತ್ತಿದೆಯಂತೆ.

ಚೀಸ್ ಕೇಕ್
ಸ್ಟಾರ್ ನಟ-ನಟಿಯರು ಕೊರೋನಾ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಸುಮ್ಮನೆ ಕೂರಲಾಗದೆ ಏನಾದರೊಂದು ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವು ನಟರು ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದರೆ, ಮತ್ತಿತರು ಆನ್ಲೈನ್ ಕಾರ್ಯಕ್ರಮಗಳನ್ನು ಮಾಡುತ್ತಾ ಅದರ ಮೂಲಕ ಹಣ ಸಂಗ್ರಹಿಸುತ್ತ ಕೊರೋನಾ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಬಂದ ಹಣವನ್ನು ಸಂಕಷ್ಟದಲ್ಲಿರುವವರಿಗೆ ನೀಡುತ್ತಿದ್ದಾರೆ. ಅದರಂತೆ ನಟಿ ವರಲಕ್ಷ್ಮೀ ಚೀಸ್ ಕೇಕ್ಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ.
Published by:
Harshith AS
First published:
July 6, 2020, 2:25 PM IST