news18-kannada Updated:February 21, 2020, 3:02 PM IST
ಕೋಟಿಗೊಬ್ಬ-3 ಟೀಸರ್
ಸ್ಯಾಂಡಲ್ವುಡ್ ಬಾದ್ ಷಾ ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ3 ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಟೀಸರ್ ನೋಡಿದ ಅಭಿಮಾನಿಗಳು ಅಭಿನಯ ಚಕ್ರವರ್ತಿಯ ನಟನೆಗೆ ಫಿದಾ ಆಗಿದ್ದಾರೆ.
ಟೀಸರ್ನಲ್ಲಿ ರವಿಶಂಕರ್ ಜೈಲಿನಲ್ಲಿದ್ದುಕೊಂಡು ಪೊಲೀಸರಿಗೆ ಕಿಚ್ಚನ ಬಗ್ಗೆ ಹೇಳುತ್ತಿರುತ್ತಾರೆ. ‘ಅವನು ಇಂಟರ್ ನ್ಯಾಷನಲ್ ಕಿಲಾಡಿ ಸರ್, ಅವನು ಲೋಕಲ್ನಲ್ಲಿ ಹೊಡೆದಾಗ್ಲೇ ಹೇಳಿದೆ ಸಾರ್. ಯಾರು ಕೇಳ್ಲಿಲ್ಲ. ಅವನನ್ನ ಈಗ ಬಿಟ್ಬಿಟ್ರೆ ಇನ್ನುಂದೆ ಯಾವತ್ತು ಹಿಡಿಯೋಕೆ ಸಾಧ್ಯನೇ ಇಲ್ಲ ಸಾರ್‘ ಅನ್ನೋ ಡೈಲಾಗ್ ಅಭಿಮಾನಿಗಳನ್ನು ಹುಚ್ಚೆಬ್ಬಿಸುವಂತೆ ಮಾಡಿದೆ.
ಶಿವರಾತ್ರಿ ಹಬ್ಬದ ಪ್ರಯುಕ್ತ ಕೋಟಿಗೊಬ್ಬ3 ಚಿತ್ರತಂಡ ಟೀಸರ್ ಬಿಡುಗಡೆ ಮಾಡುವುದಾಗಿ ಈ ಮುಂದೆಯೇ ಹೇಳಿತ್ತು. ಅದರಂತೆ ಟೀಸರ್ ಮೂಲಕ ಕಿಚ್ಚನ ಅವತಾರವನ್ನುಅಭಿಮಾನಿಗಳ ಮುಂದೆ ಬಿಚ್ಚಿಡಲಾಗಿದೆ. ಯೂಟ್ಯೂಬ್ ಆನಂದ್ ಆಡಿಯೋ ಚಾನೆಲ್ ಮೂಲಕ ಟೀಸರ್ ಬಿಡುಗಡೆಗೊಂಡಿದ್ದು, 99 ನಿಮಿಷದಲ್ಲಿ 4 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.
ಕಿಚ್ಚನ ಮಾಸ್ ಲುಕ್, ಅದಕ್ಕೆ ತಕ್ಕಂತೆ ಫೈಟಿಂಗ್ ದೃಶ್ಯಾವಳಿಗಳು, ಬ್ಯಾಗ್ರೌಂಡ್ ಮ್ಯೂಸಿಕ್ ಎಲ್ಲವೂ ಕೋಟಿಗೊಬ್ಬ 3 ಸಿನಿಮಾ ಟೀಸರ್ ಅನ್ನು ಮತ್ತಷ್ಟು ಜಳಪಿಸುವಂತೆ ಮಾಡಿದೆ. ಟೀಸರ್ನಲ್ಲಿ ಮೊದಲ ಬಾರಿ ಸ್ಯಾಂಡಲ್ವುಡ್ ಪ್ರವೇಶಿಸಿದ ಅಫ್ತಾಬ್ ಶಿವದಾಸನಿ ಪಾತ್ರವವನ್ನು ಟೀಸರ್ನಲ್ಲಿ ತೋರಿಸಲಾಗಿದೆ.
ಕೋಟಿಗೊಬ್ಬ 3 ಸಿನಿಮಾವನ್ನು ಶಿವ ಕಾರ್ತಿಕ್ ನಿರ್ದೇಶನ ಮತ್ತು ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಕಿಚ್ಚನ ನಾಯಕಿಯಾಗಿ ಮಡೋನ ಸೆಬಾಸ್ಟಿಯನ್ ಮತ್ತು ಶ್ರದ್ಧಾ ದಾಸ್ ಕಾಣಿಸಿಕೊಂಡೊದ್ದಾರೆ.
First published:
February 21, 2020, 2:28 PM IST