ಅಭಿಮಾನಿಗಳ ನಡೆಗೆ ಕಿಚ್ಚ ಸುದೀಪ್ ಫುಲ್ ಖುಷ್

news18
Updated:September 2, 2018, 1:18 PM IST
ಅಭಿಮಾನಿಗಳ ನಡೆಗೆ ಕಿಚ್ಚ ಸುದೀಪ್ ಫುಲ್ ಖುಷ್
@KKSFA @Villain
news18
Updated: September 2, 2018, 1:18 PM IST
-ನ್ಯೂಸ್ 18 ಕನ್ನಡ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಕಿಚ್ಚ ಸುದೀಪ್ ಸಖತ್ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಅಭಿಮಾನಿಗಳು. ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳಬೇಕೆಂದು ಮನವಿ ಮಾಡಿದ್ದ ಸುದೀಪ್ ಮಾತಿಗೆ ಬೆಲೆ ಕೊಟ್ಟಿರುವ ಅಭಿಮಾನಿಗಳು ಸರಳವಾಗಿ ಕಿಚ್ಚೋತ್ಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವು ಕಡೆ ಸುದೀಪ್ ಅಭಿಮಾನಿಗಳ ಸಂಘದ ವತಿಯಿಂದ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲೆಗಳಿಗೆ ದಿನಪಯೋಗಿ ವಸ್ತುಗಳನ್ನು ಒದಗಿಸಿ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ.


ಕೆಸಿಸಿ ಕ್ರಿಕೆಟ್​ ಪಂದ್ಯಾಟ ಮತ್ತು ಚಿತ್ರೀಕರಣದ ಬಿಝಿಯಲ್ಲಿದ್ದ ಸುದೀಪ್ ಅವರು ನಿನ್ನೆಯಷ್ಟೇ ಮನೆಗೆ ಮರಳಿದ್ದರು. ಅಭಿಮಾನಿಗಳ ಕಾತುರತೆ ಗಮನಿಸಿದ ಕಿಚ್ಚ ಇಂದು ಫ್ಯಾನ್ಸ್​ಗೆ ದರ್ಶನ ನೀಡಿ​ ಜೊತೆಯಾಗಿ ಫೋಟೋಗಳನ್ನು ಕ್ಲಿಕ್ಕಿಸಿಕೊಂಡದರು. ಈ ವೇಳೆ ಮಂಗಳ ಮುಖಿಯರು ಕಿಚ್ಚ ಸುದೀಪ್​ಗೆ ರಾಖಿ ಕಟ್ಟುವ ಮೂಲಕ ಹುಟ್ಟುಹಬ್ಬದಂದು ಅಣ್ಣ-ತಂಗಿಯರ ಬಾಂಧವ್ಯ ಸಾರಿದ್ದರು. ಕಿಚ್ಚನಿಗೆ ವಿಶ್​ ಮಾಡಲೆಂದೇ ಆಗಮಿಸಿದ್ದ ಮಂಗಳ ಮುಖಿ ಅಭಿಮಾನಿಗಳು ತಮ್ಮ ಪ್ರೀತಿಯ ನಟನ ಹುಟ್ಟುಹಬ್ಬದ ಸಂಭ್ರಮದಲ್ಲಿ ಭಾಗಿಯಾದರು. ಅವರು ನನ್ನ ಕುಟುಂಬದವರಲ್ಲ. ಆದರೂ ಅವರೆಲ್ಲಾ ಬಂದು ನನಗೆ ರಾಖಿ ಕಟ್ಟಿರುವುದು ಸಂತೋಷದ ವಿಚಾರ ಎಂದು ಕಿಚ್ಚ ಸುದೀಪ್ ಖುಷಿ ವ್ಯಕ್ತಪಡಿಸಿದರು.

ನಿನ್ನೆ ರಾತ್ರಿ ನಡೆದ ಲಾಠಿ ಪ್ರಹಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸುದೀಪ್, ಭದ್ರತೆಯ ದೃಷ್ಟಿಯಿಂದ ಈ ರೀತಿಯ ಘಟನೆ ನಡೆದಿರಬಹುದು. ನಾನು ಕಳೆದ 15 ದಿನಗಳಿಂದ ಹೊರಗಿದ್ದೆ. ನಿನ್ನೆಯಷ್ಟೇ ಮನೆಗೆ ಹಿಂತಿರುಗಿದ್ದೇನೆ. ಹೊರಗಡೆ ಏನಾಗಿತ್ತು ಎಂಬುದರ ಬಗ್ಗೆ ನನಗೆ ಸ್ಪಷ್ಟ ಚಿತ್ರಣವಿಲ್ಲ. ಮತ್ತೆ ಅದರ ಬಗ್ಗೆ ಹೇಗೆ ಮಾತನಾಡಲಿ ಎಂದು ಕೇಳಿದರು. ನಿನ್ನೆ ರಾತ್ರಿಯಿಂದಲೇ ಮನೆಯ ಮುಂದೆ ಜಮಾಯಿಸಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು.

ಇದೇ ವೇಳೆ ಕೊಡಗಿನ ಸಂತ್ರಸ್ತರ ನೆರವಿಗೆ ನಿಂತ ಅಭಿಮಾನಿಗಳ ಕಾರ್ಯಕ್ಕೆ ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದರು. ಅವರೂ ಕೂಡ ನಮ್ಮವರೇ. ಅವರಿಗೆ ನಾವು ಸಹಾಯ ಮಾಡಿದ್ದೀವಿ ಅನ್ನೋದಕ್ಕಿಂತಲೂ ಅವರಿಗೆ ಏನು ಬೇಕು ಅಂತ ನಾವು ಕೇಳಬೇಕಿರುವುದು ನಮ್ಮ ಕರ್ತವ್ಯ ಎಂದು ಅಭಿಮಾನಿಗಳ ಕಾರ್ಯವನ್ನು ಶ್ಲಾಘಿಸಿದರು.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...