Kiccha Sudeep: ಕಿಚ್ಚ ಸುದೀಪ್ ಕೊಟ್ರು ಬಿಗ್ ಅಪ್​ಡೇಟ್; ರಿಯಲ್ ಸ್ಟಾರ್ ಜೊತೆ ಕಮಾಲ್

ಕಬ್ಜ ಸಿನಿಮಾದ ಬಗ್ಗೆ ಕಿಚ್ಚ ಸುದೀಪ್ ಫಸ್ಟ್ ಟೈಮ್ ಮಾತನಾಡಿದ್ದಾರೆ. ಇಡೀ ಚಿತ್ರಕ್ಕೆ ಶುಭ ಕೋರಿದ ಕಿಚ್ಚ ಸುದೀಪ್, ಸೆಪ್ಟೆಂಬರ್-17 ರಂದು ಸಂಜೆ 5 ಗಂಟೆಗೆ 4 ನಿಮಿಷಕ್ಕೆ ರಿಲೀಸ್ ಆಗುತ್ತದೆ. ಎಲ್ಲರೂ ನೋಡಿ ಶೇರ್ ಮಾಡಿ ಅಂತಲೂ ಕೇಳಿಕೊಂಡಿದ್ದಾರೆ.

ಕಬ್ಬ ಚಿತ್ರದ ಬಗ್ಗೆ ಕಿಚ್ಚನ ಮೊದಲ ಮಾತು

ಕಬ್ಬ ಚಿತ್ರದ ಬಗ್ಗೆ ಕಿಚ್ಚನ ಮೊದಲ ಮಾತು

  • Share this:
ಕನ್ನಡದಲ್ಲಿ ಕೆಜಿಎಫ್ ಸಿನಿಮಾ ಬಂದ್ಮೆಲೆ ಪ್ಯಾನ್ ಇಂಡಿಯಾ ರಿಲೀಸ್ ದಾರಿ ತೆರೆದುಕೊಂಡಿದೆ. ಅದನ್ನೆ ಇಲ್ಲಿ ಅನೇಕ ಸಿನಿಮಾಗಳು ಅನುಸರಿಸುತ್ತಲೇ ಇವೆ. ಅದರಂತೆ ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಕಬ್ಜ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರೆಡಿ ಆಗಿದೆ. ಕನ್ನಡದ ಹೊರತಾಗಿ ಹಿಂದಿ, ತೆಲುಗು, ತಮಿಳು, ಇನ್ನಿತರ ಭಾಷೆಯಲ್ಲೂ ಕನ್ನಡದ ಕಬ್ಜ ಚಿತ್ರವನ್ನ ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ರಿಲೀಸ್ ಮಾಡುತ್ತಿದ್ದಾರೆ. ಬಹುಕೋಟಿ ವೆಚ್ಚದ ಕಬ್ಜ ಸಿನಿಮಾದ ಬಗ್ಗೆ ಈಗ ವಿಶೇಷವಾಗಿ ಕನ್ನಡದ ಬಹು ಭಾಷಾ ನಟ ಕನ್ನಡಿಗರ ಕಿಚ್ಚ ಸುದೀಪ್ ಕೂಡ ಮಾತನಾಡಿದ್ದಾರೆ. ಸಿನಿಮಾದ ಬಗ್ಗೆ ಇವರು ಯಾಕೆ ಮಾತನಾಡಿದ್ದಾರೆ ಅಂತ ನೀವು ಕೇಳಬಹುದು. ಆದರೆ ಈ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ಕೂಡ ಅಭಿನಯಿಸಿದ್ದಾರೆ. ತಮ್ಮ ಈ ಚಿತ್ರದ ಬಗ್ಗೆ ಕಿಚ್ಚನ ಮಾತು ಹೇಗಿತ್ತು ಗೊತ್ತೇ ? ಇಲ್ಲಿದೆ ಆ ಡಿಟೈಲ್ಸ್.

ಕನ್ನಡದ ಬಹುಕೋಟಿ ವೆಚ್ಚದ ಕಬ್ಜ ಸಿನಿಮಾವನ್ನ ಪ್ಯಾನ್ ಇಂಡಿಯಾ ಮಟ್ಟದಲ್ಲಿಯೇ ರಿಲೀಸ್ ಮಾಡೋಕೆ ಪ್ಲಾನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕಬ್ಜ ಬಹು ಭಾಷೆಯಲ್ಲೂ ರಿಲೀಸ್ ಆಗುತ್ತದೆ. ಅದರಂತೆ ಈ ಸಿನಿಮಾದ ಕೆಲಸಗಳೂ ಭರ್ಜರಿಯಾಗಿಯೇ ನಡೆಯುತ್ತಿವೆ.

ಕನ್ನಡದ ಪ್ಯಾನ್ ಇಂಡಿಯಾ ಕಬ್ಜ ಚಿತ್ರದ ಸಖತ್ ಪೋಸ್ಟರ್
ಚಿತ್ರದ ನಿರ್ದೇಶಕ-ನಿರ್ಮಾಪಕ ಭರ್ಜರಿಯಾಗಿಯೇ ಸಿನಿಮಾದ ಪ್ರಚಾರಕ್ಕೆ ಪ್ಲಾನ್ ಮಾಡಿದ್ದಾರೆ. ಸಾಕಷ್ಟು ಗಮನ ಸೆಳೆಯೋ ಪೋಸ್ಟರ್​ಗಳನ್ನ ಮಾಡಿಸಿದ್ದಾರೆ. ರೆಟ್ರೋ ಶೈಲಿಯಲ್ಲಿಯೇ ಸಿನಿಮಾ ಇರೋದ್ರಿಂದಲೇ ಚಿತ್ರದ ಪೋಸ್ಟರ್​ಗಳಲ್ಲಿ ಆ ಒಂದು ಸತ್ಯದ ಝಲಕ್ ಕಂಡು ಬರುತ್ತದೆ.

ಕನ್ನಡಿಗರ ಈ ಕಬ್ಜ ಸಿನಿಮಾದಲ್ಲಿ ಬಹುಕೋಟಿ ದುಡ್ಡನ್ನೆ ಹೂಡಲಾಗಿದೆ. ನಿರ್ದೇಶಕ-ನಿರ್ಮಾಪಕ ಆರ್.ಚಂದ್ರು ಈ ಚಿತ್ರದ ರಿಲೀಸ್ ಗೆ ಒಳ್ಳೇ ದಿನವನ್ನೆ ಪ್ಲಾನ್ ಮಾಡುತ್ತಿದ್ದಾರೆ. ಆದರೆ ಅದಕ್ಕೂ ಮೊದಲೇ ಸಿನಿಮಾದ ಒಂದು ವಿಶೇಷ ಟೀಸರ್ ಅನ್ನ ಉಪ್ಪಿ ಜನ್ಮ ದಿನಕ್ಕೆ ರಿಲೀಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Radhika Madan: ಬ್ಲ್ಯಾಕ್ ಬ್ಯೂಟಿಯಾದ ರಾಧಿಕಾ ಮದನ್! ಟೊರೊಂಟೋ ಬೀದಿಗಳಲ್ಲಿ ಗ್ಲಾಮರಸ್ ಫೋಟೋಶೂಟ್

ರಿಯಲ್ ಸ್ಟಾರ್ ಉಪೇಂದ್ರ ಜನ್ಮ ದಿನಕ್ಕೆ ಕಬ್ಜ ಫಸ್ಟ್ ಟೀಸರ್

ಇದೇ ಸೆಪ್ಟೆಂಬರ್-18 ರಂದು ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ದಿನದ ವಿಶೇಷತೆಯ ಹಿನ್ನೆಲೆಯಲ್ಲಿಯೇ ಡೈರೆಕ್ಟರ್ ಆರ್.ಚಂದ್ರು ಒಂದು ಟೀಸರ್ ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ. ಅದೇ ಟೀಸರ್ ಅನ್ನ ಒಂದು ದಿನದ ಮುಂಚೇ ಅಂದ್ರೆ ಸೆಪ್ಟೆಂಬರ್-17 ರಂದು ರಿಲೀಸ್ ಮಾಡೋಕೆ ಪ್ಲಾನ್ ಮಾಡಿದ್ದಾರೆ.

ಕಬ್ಜ ಸಿನಿಮಾ ಬಗ್ಗೆ ಕಿಚ್ಚನ ಮೊಟ್ಟ ಮೊದಲ ಮಾತು ಏನು?
ಚಿತ್ರದ ಟೀಸರ್ ಇದೇ ಸೆಪ್ಟೆಂಬರ್-17ಕ್ಕೆ ರಿಲೀಸ್ ಆಗುತ್ತದೆ ಎಂದು ವಿಶೇಷ ವ್ಯಕ್ತಿಯಿಂದಲೇ ಚಂದ್ರು ಹೇಳಿಸಿದ್ದಾರೆ. ಹೌದು, ಅದು ಬೇರೆ ಯಾರೋ ಅಲ್ಲ, ಕನ್ನಡಿಗರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಸುದೀಪ್ ಕೂಡ ಕಬ್ಜ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರವನ್ನೆ ನಿಭಾಯಿಸಿದ್ದಾರೆ.

ಕಬ್ಜ ಚಿತ್ರ ತಂಡಕ್ಕೆ ಕಿಚ್ಚ ಸುದೀಪ್ ಶುಭ ಹಾರೈಕೆ
ನಿಜ, ಈ ಮೂಲಕ ಕಿಚ್ಚ ಸುದೀಪ್ ತಮ್ಮ ಈ ಸಿನಿಮಾದ ಬಗ್ಗೆ ಫಸ್ಟ್ ಟೈಮ್ ಮಾತನಾಡಿದ್ದಾರೆ. ಇದೇ ಸೆಪ್ಟಂಬರ್-17 ರಂದು ಸಂಜೆ 5 ಗಂಟೆ 04 ನಿಮಿಷಕ್ಕೆ ಚಿತ್ರದ ಟೀಸರ್ ರಿಲೀಸ್ ಆಗುತ್ತದೆ. ಮೂರು ವರ್ಷದ ಶ್ರಮದ ಫಲ ಈ ಸಿನಿಮಾ ರೆಡಿ ಆಗಿದೆ. ಇಡೀ ಸಿನಿಮಾ ತಂಡಕ್ಕೆ ನನ್ನ ಶುಭ ಹಾರೈಕೆ ಅಂತಲೂ ಕಿಚ್ಚ ಸುದೀಪ್ ವೀಡಿಯೋ ಮೂಲಕ ಹೇಳಿದ್ದಾರೆ.

ಕಬ್ಜ ಸಿನಿಮಾದ ಪೋಸ್ಟರ್​ಗಳನ್ನ ನೀವೂ ನೋಡಿರುತ್ತೀರಾ. ಈಗ ಈ ಚಿತ್ರದ ಮೊದಲ ಟೀಸರ್ ರಿಲೀಸ್ ಆಗುತ್ತಿದೆ. ಈ ಟೀಸರ್ ಅನ್ನ ನೋಡಿ, ಶೇರ್ ಮಾಡಿ ಅಂತಲೂ ಸುದೀಪ್ ತಿಳಿಸಿದ್ದಾರೆ.

ಇದನ್ನೂ ಓದಿ: Regina Cassandra: ನಂಗೆ ಸ್ಟಾಮಿನಾ ಜಾಸ್ತಿ ಕಣಮ್ಮಾ! ಪುರುಷರ ಆ ಸಾಮರ್ಥ್ಯದ ಬಗ್ಗೆ ಟೀಕಿಸಿದ ನಟಿಗೆ ನಟನ ತಿರುಗೇಟು

ಕಬ್ಜ ಸಿನಿಮಾದ ಬಗ್ಗೆ ಆರಂಭದಿಂದಲೂ ಒಂದು ಕುತೂಹಲ ಇದೆ. ಕಿಚ್ಚ ಸುದೀಪ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಸ್ಕ್ರೀನ್ ಶೇರ್ ಮಾಡಿಕೊಂಡಿರೋ ಈ ಚಿತ್ರದ ಬಗ್ಗೆ ಈಗಲೇ ಕುತೂಹಲ ಹುಟ್ಟಿಕೊಂಡಿದೆ. ಚಿತ್ರದ ಫಸ್ಟ್ ಟೀಸರ್ ಬಂದ್ಮೇಲೆ ಆ ಕ್ಯೂರಿಯಾಸಿಟಿ ಇನ್ನೂ ಡಬಲ್ ಆಗೋ ಸಾಧ್ಯತೆ ಜಾಸ್ತಿ ಇದೆ.
First published: