ಕಿಚ್ಚ.. ಅಭಿನಯ ಚಕ್ರವರ್ತಿ.. ಸ್ಯಾಂಡಲ್ವುಡ್ ಬಾದ್ಶಾ ಕಿಚ್ಚ ಸುದೀಪ್ (Kiccha Sudeep) ಇತ್ತೀಚೆಗಷ್ಟೇ ಸ್ಯಾಂಡಲ್ವುಡ್(Sandalwood)ಗೆ ಬಂದು 26 ವರ್ಷ ಪೂರ್ಣವಾಗಿತ್ತು. ಕಳೆದ ವರ್ಷ 25ನೇ ವರ್ಷ ಪೂರೈಸಿದ್ದಕ್ಕಾಗಿ ಕಿಚ್ಚ ದುಬೈ(Dubai)ನಲ್ಲಿ ಸೆಲೆಬ್ರೇಷನ್ ಮಾಡಿದ್ದರು. 26 ವರ್ಷಗಳ ಕಾಲ ಕಿಚ್ಚ ಸುದೀಪ್ ಕನ್ನಡ ಸಿನಿರಸಿಕರನ್ನು ರಂಜಿಸಿಕೊಂಡು ಬರುತ್ತಿದ್ದಾರೆ. 26 ವರ್ಷಗಳ ಹಿಂದೆ ಜ.31 ರಂದು ಕಿಚ್ಚನ ಮೊದಲ ಸಿನಿಮಾ ‘ಬ್ರಹ್ಮ’ ಸೇಟ್ಟೇರಿತ್ತು. ಅದೇ ದಿನ ಕಿಚ್ಚ ಸುದೀಪ್ ಮೊದಲು ಮುಖಕ್ಕೆ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಟಿಸಿದರು. ಅಂದಿನ ‘ಬ್ರಹ್ಮ’ ಚಿತ್ರದ ಸುದೀಪ್ ಹಾಗೂ ಇಂದಿನ ‘ವಿಕ್ರಾಂತ್ ರೋಣ’ (Vikranth Rona) ಸುದೀಪ್ ನೋಡಿದರೆ ಬೆಳವಣಿಗೆ ಅಂದರೆ ಹೀಗಿರಬೇಕು ಎಂದು ಮಾತನಾಡುವ ಮಟ್ಟಕ್ಕೆ ಕಿಚ್ಚನ ಕಟೌಟ್ ಚಿತ್ರರಂಗದಲ್ಲಿ ನಿಂತಿದೆ. ಸುದೀಪ್ ಅಭಿಮಾನಿಗಳ ಸಂಖ್ಯೆ ಅಪಾರ. ಇದೀಗ ಕಿಚ್ಚನ ಕೆಲ ಅಭಿಮಾನಿಗಳು ಮಾಡಿದ ಆ ಕೆಲಸ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಕಿಚ್ಚನನ್ನು ನೋಡಲು 560 ಕಿ.ಮೀ ನಡೆದ ಫ್ಯಾನ್ಸ್!
ಹೌದು, ತನ್ನ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಏನು ಬೇಕಾದರೂ ಮಾಡುತ್ತಾರೆ. ಜೊತೆಗೆ ಅವರ ಫೇವರೆಟ್ ನಟನ ಜೊತೆ ಒಂದೇ ಒಂದು ಫೋಟೋ ಸಿಕ್ಕರೆ ಸಾಕು ಅವರ ಖುಷಿಗೆ ಪಾರವೇ ಇರುವುದಿಲ್ಲ.ನಟ ಕಿಚ್ಚ ಸುದೀಪ್(Kiccha Sudeep) ಅವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಹೀಗೆ ಕಿಚ್ಚ ಸುದೀಪ್ ಅವರನ್ನು ಭೇಟಿಯಾಗಬೇಕು ಎಂದು ಕೆಲ ಅಭಿಮಾನಿಗಳು ಕಲಬುರಗಿಯಿಂದ ನಡೆದುಕೊಂಡೇ ಬಂದಿದ್ದಾರೆ. ಹೌದು, ಕೇಳವುದಕ್ಕೆ ನಿಮಗೆ ಶಾಕ್ ಆದರೂ, ಇದು ನಿಜ.
ಸತತ 14 ದಿನ ನಡೆದುಕೊಂಡು ಬಂದ ಅಭಿಮಾನಿಗಳು!
ಕಲಬುರಗಿ(Kalaburagi) ಜಿಲ್ಲೆ ಜೇವರ್ಗಿ ತಾಲೂಕಿನ ಅವರಾದಿ ಗ್ರಾಮದ ನಿವಾಸಿಗಳಾದ ರೇಣುಕಾ, ಗೋಪಾಲ, ಮರೇಮ್ಮ ಅವರಿಗೆ ಕಿಚ್ಚ ಸುದೀಪ್ ಕಂಡರೆ ಪಂಚಪ್ರಾಣ. ಒಮ್ಮೆಯಾದರೂ ಅವರನ್ನು ಭೇಟಿಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದರು. ತಮ್ಮ ನೆಚ್ಚಿನ ನಟನನ್ನು ನೋಡಲೇಬೇಕೆಂಬ ಆಸೆಯಿಂದ ಊರಿನಿಂದ ಕಾಲ್ನಡಿಗೆಯಲ್ಲೇ ಹೊರಟ ಅಭಿಮಾನಿಗಳು ಏಪ್ರಿಲ್ 5ರಂದು ನಟ ಕಿಚ್ಚ ಸುದೀಪ್(Kiccha Sudeep)ರನ್ನು ಬೆಂಗಳೂರಿನ ಪುಟ್ಟೇನಹಳ್ಳಿ ನಿವಾಸದಲ್ಲಿ ಭೇಟಿ ಆಗಿದ್ದಾರೆ. ಕಿಚ್ಚ ಸುದೀಪ್ ಅವರನ್ನು ನೋಡಿದ ಅವರಿಗೆ ನಡೆದುಕೊಂಡು ಬಂದಿದ್ದ ನೋವೆಲ್ಲಾ ಮಾಯವಾಗಿತ್ತಂತೆ.
Respect & Love Towards his fans
Is Untouchable & Unmatchable❣️❤️@KicchaSudeep Love Anna...❣️#VikrantRonaJuly28#VikrantRona #KicchaSudeep𓃵 pic.twitter.com/Mf3Jz72f5I
— Kiccha Sudeep Sensations ™ (@Sudeepsensation) April 5, 2022
ಇದನ್ನೂ ಓದಿ: ಹೊಂಬಾಳೆ ಫಿಲ್ಮ್ಸ್ನಲ್ಲಿ `ಯುವರಾಜ’ನಿಗೆ ಅಪ್ಪು ಸ್ಥಾನ.. ಚಿಕ್ಕಪ್ಪನ ಹಾಗೇ ಮಿಂಚಿಲಿದ್ದಾರೆ ರಾಘಣ್ಣನ ಕಿರಿಮಗ!
ನಡೆದು ಬಂದವರ ಯೋಗ ಕ್ಷೇಮ ವಿಚಾರಿಸಿದ ಕಿಚ್ಚ!
ಪ್ರತಿದಿನ 40 ಕಿಲೋ ಮೀಟರ್ ದೂರ ನಡೆಯುತ್ತಾ ಬಂದು ಏಪ್ರಿಲ್ 5ರಂದಯ ರಾಜಧಾನಿ ಬೆಂಗಳೂರು ತಲುಪಿದ್ದರು. ಇನ್ನು ತಮ್ಮನ್ನು ನೋಡಲು ನಡೆಯುತ್ತಲೇ ಬಂದ ಅಭಿಮಾನಿಗಳನ್ನು ನಟ ಕಿಚ್ಚ ಸುದೀಪ್ ಅತ್ಯಂತ ಖುಷಿಯಿಂದ ಬರಮಾಡಿಕೊಂಡಿದ್ದಾರೆ. ಮನೆಗೆ ಕರೆಸಿ ಮಾನತಾಡಿಸಿದ ನಟ ಕಿಚ್ಚ ಸುದೀಪ್ ಅಭಿಮಾನಿಗಳ ಯೋಗಕ್ಷೇಮ ವಿಚಾರಿಸಿದ್ದಾರೆ. ಕಿಚ್ಚನ ಈ ನಡೆ ಎಲ್ಲರೂ ದಿಲ್ ಖುಷ್ ಆಗಿದ್ದಾರೆ.
ಇದನ್ನೂ ಓದಿ: ತಾಯಿ ಪ್ರೀತಿಗೆ ಮತ್ತೊಂದು ಹಾಡು, ಹೃದಯ ಮೀಟುವ ಹೊಸ ಹಾಡು ಕೇಳಿ
ಜುಲೈ 28ರಂದು ತೆರೆ ಮೇಲೆ ವಿಕ್ರಾಂತ್ ರೋಣ ಅಬ್ಬರ!
ಯುಗಾದಿ ಹಬ್ಬದಂದು ವಿಕ್ರಾಂತ್ ರೋಣ ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಇನ್ನು ವಿಶೇಷ ಅಂದ್ರೆ ಟೀಸರ್‌ನಲ್ಲೇ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಲವು ಭಾಷೆಗಳಲ್ಲಿ ವಿಕ್ರಾಂತ್ ರೋಣ ಜುಲೈ 28ರಂದು ರಿಲೀಸ್ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಈಗಾಗಲೇ ತೆರೆಕಂಡಿರಬೇಕಿತ್ತು. ಆದರೆ ಕೊವಿಡ್ ಕಾರಣದಿಂದ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿತ್ತು. ಇದೀಗ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ