• Home
  • »
  • News
  • »
  • entertainment
  • »
  • Kiccha Sudeep: ಜಾಕ್ಲಿನ್ ಗಾಗಿ ಕಿಚ್ಚ ಸ್ಪೆಷಲ್ ಡ್ಯಾನ್ಸ್, ರಕ್ಕಮ್ಮ ಸ್ಟೆಪ್ ಈಗ ಸಖತ್ ವೈರಲ್

Kiccha Sudeep: ಜಾಕ್ಲಿನ್ ಗಾಗಿ ಕಿಚ್ಚ ಸ್ಪೆಷಲ್ ಡ್ಯಾನ್ಸ್, ರಕ್ಕಮ್ಮ ಸ್ಟೆಪ್ ಈಗ ಸಖತ್ ವೈರಲ್

ಕಿಚ್ಚ ಸುದೀಪ್ , ಜಾಕ್ಲಿನ್​ ​ ಫರ್ನಾಂಡೀಸ್

ಕಿಚ್ಚ ಸುದೀಪ್ , ಜಾಕ್ಲಿನ್​ ​ ಫರ್ನಾಂಡೀಸ್

Kiccha Sudeep Reels: ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ನಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರೂ ರಾ, ರಾ ರಕ್ಕಮ್ಮ ಎಂದು ಕುಣಿಯುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ಅದೇ ಹಾಡನ್ನು ಭಜನೆ ಮಾಡಿಕೊಂಡಿದ್ದಾರೆ ಎನ್ನಬಹುದು.

  • Share this:

ವಿಕ್ರಾಂತ್ ರೋಣ (Vikrant Rona) ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ (Kiccha) ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ರಂಗಿತರಂಗ ಮೂಲಕ ಕಮಾಲ್ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಪೋಸ್ಟರ್ (Poster), ಟೀಸರ್(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಸದ್ಯ ಸೋಷಿಯಲ್ ಮೀಡಿಯಾ(Social media)ದಲ್ಲಿ ಹವಾ ಸೃಷ್ಟಿಸಿದೆ.


ಸಾಮಾಜಿಕ ಜಾಲಾತಾಣದಲ್ಲಿ ರೀಲ್ಸ್​ನಿಂದ ಹಿಡಿದು ಸೆಲೆಬ್ರಿಟಿವರೆಗೆ ಎಲ್ಲರೂ ರಾ, ರಾ ರಕ್ಕಮ್ಮ ಎಂದು ಕುಣಿಯುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳಂತೂ ಅದೇ ಹಾಡನ್ನು ಭಜನೆ ಮಾಡಿಕೊಂಡಿದ್ದಾರೆ ಎನ್ನಬಹುದು.  ಈಗ ಕಿಚ್ಚ ಸುದೀಪ್ ಕೂಡ ಈ ಹಾಡಿಗೆ ಕುಣಿದಿದ್ದು, ಅದನ್ನು ಜಾಕ್ಲಿನ್​ ​ ಫರ್ನಾಂಡೀಸ್​ ಅವರಿಗೆ ಅರ್ಪಿಸಿದ್ದಾರೆ. ವಿಡಿಯೋವನ್ನು ಸಾಮಾಜಿಕ ಜಾಲಾತಾಣದಲ್ಲಿ ಹಾಕಿರುವ ಕಿಚ್ಚ ಸುದೀಪ್, ಹೇ ಜಾಕಿ ಇದು ನಿಮಗಾಗಿ. ನಿಮ್ಮ ಆಸೆಯನ್ನು ಈಡೇರಿಸಿದ್ದೇನೆ. ನನ್ನ ಮೊದಲ ರೀಲ್ಸ್ ಎಂದು ಬರೆದುಕೊಂಡಿದ್ದಾರೆ.


ಕಿಚ್ಚನ ಡ್ಯಾನ್ಸ್​ ವಿಡಿಯೋ ನೋಡಿ
ಇನ್ನು ವಿಕ್ರಾಂತ್ ರೋಣ ಲಿರಿಕಲ್ ವಿಡಿಯೋ ಈಗಾಗಲೇ ಕಿಚ್ಚು ಹಚ್ಚಿಸಿದ್ದು, ಲಕ್ಷ ಲಕ್ಷ ವೀಕ್ಷಣೆ ಪಡೆದಿದೆ. ಈಗಾಗಲೇ ಈ ಹಾಡು ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಿದ್ದು, ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.  ಕಿಚ್ಚನ ಸಿನಿಮಾ ಇದೇ ಮೊದಲ ಬಾರಿಗೆ ಇಡೀ ವಿಶ್ವದಾದ್ಯಂತ ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. ಅಲ್ಲದೆ, 3ಡಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ ಎಲ್ಲೆಡೆ ಕುತೂಹಲ ಹೆಚ್ಚಾಗಿದೆ.


ಈಗಾಗಲೇ ಓವರ್‌ಸೀನ್ ಸಿನಿಮಾ ರೈಟ್ಸ್ ಅನ್ನು 'ಒನ್ ಟ್ವೆಂಟಿ 8 ಮೀಡಿಯಾ' ಭಾರಿ ಮೊತ್ತಕ್ಕೆ ಪಡೆದುಕೊಂಡಿದೆ. ಇವರೇ ವಿಶ್ವದಾದ್ಯಂತ 'ವಿಕ್ರಾಂತ್ ರೋಣ' ಸಿನಿಮಾವನ್ನು ರಿಲೀಸ್ ಮಾಡಲಿದ್ದಾರೆ. 'ಒನ್ ಟ್ವೆಂಟಿ 8 ಮೀಡಿಯಾ' ಸುಮಾರು 1.3 ಮಿಲಿಯನ್‌ಗೆ ಓವರ್‌ಸೀಸ್ ಹಕ್ಕುಗಳನ್ನು ಪಡೆದುಕೊಂಡಿದೆ. ಅಂದರೆ, ಭಾರತದ 10 ಕೋಟಿ ರೂಪಾಯಿಗೆ ಸೇಲ್ ಆಗಿದೆ ಎನ್ನಲಾಗಿದೆ.


ಇದನ್ನೂ ಓದಿ: ಸಿನಿಮಾದತ್ತ ಮುಖ ಮಾಡಿದ ಕರ್ನಾಟಕದ ಸಿಂಗಂ, ಒಂದೇ ಒಂದು ರೂಪಾಯಿ ಸಂಭಾವನೆ ಪಡೆದ ಅಣ್ಣಾಮಲೈ


ಈ ಚಿತ್ರದ ಮತ್ತೊಂದು ವಿಶೇಷತೆ ಎಂದರೆ ಕನ್ನಡ, ಹಿಂದಿ, ತಮಿಳು, ಮಲಯಾಳಂ, ತೆಲುಗಿನಲ್ಲಿ ಈ ಚಿತ್ರ ಬಿಡುಗಡೆ ಆಗುತ್ತಿರುವುದು ಮಾತ್ರವಲ್ಲದೇ,  ಅಲ್ಲದೇ ಅರೇಬಿಕ್, ಜರ್ಮನ್, ರಷ್ಯನ್, ಮ್ಯಾಂಡರಿನ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಕಿಚ್ಚನ ಸಿನಿ ಜರ್ನಿಯಲ್ಲಿ ದಾಖಲೆಯ ಚಿತ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಹೇಳಲಾಗುತ್ತಿದೆ.


ಇನ್ನು ಈ ಚಿತ್ರದ ಟೀಸರ್​ ನೋಡಿದ ನಿರ್ದೇಶಕ ರಾಮ್​ ಗೋಪಾಲ್ ವರ್ಮಾ ಮೆಚ್ಚುಗೆ ವ್ಯಕ್ತಪಡಿಸಿದ್ದು, ಚಿತ್ರದ ಟೀಸರ್ ಉತ್ತಮವಾಗಿ ಮೂಡಿಬಂದಿದೆ. ಈ ಚಿತ್ರ ಸಹ ಸೂಪರ್ ಹಿಟ್ ಆಗಲಿದೆ. ಅಲ್ಲದೇ ಜುಲೈ 28ರಂದು ಈ ಸಿನಿಮಾವನ್ನು ನೋಡಲು ನಾನು ಕಾತುರನಾಗಿದ್ದೇನೆ‘ ಎಂದು ಟ್ವೀಟ್ ಮಾಡಿದ್ದರು.


ಇದನ್ನೂ ಓದಿ: ಜನರಿಲ್ಲದೇ ಬಿಕೋ ಎನ್ನುತ್ತಿವೆ ಚಿತ್ರಮಂದಿರಗಳು, ಮಕಾಡೆ ಮಲಗಿದ 30ಕ್ಕೂ ಹೆಚ್ಚು ಸಿನಿಮಾಗಳು


ಒಟ್ಟಾರೆಯಾಗಿ ಕೆಜಿಎಫ್​ 2 ನಂತರ ಮತ್ತೊಂದು ಕನ್ನಡದ ಪ್ಯಾನ್​ ಇಂಡಿಯಾ ಚಿತ್ರ ಪ್ರಪಂಚದಾದ್ಯಂತ ಸದ್ದು ಮಾಡಲಿದ್ದು, ಇದು ನಿಜಕ್ಕೂ ಹೆಮ್ಮೆಯ ವಿಚಾರವೇ ಸರಿ.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು