Kiccha Sudeep: ಇಂದಿನಿಂದ ಅಸಲಿ ಆಟ ಶುರು ಅಂದಿದ್ಯಾಕೆ ಕಿಚ್ಚ? ಹಿಂಗ್​​ ಹೇಳಿದ್ದು ಅವ್ರಲ್ಲ.. `ವಿಕ್ರಾಂತ್​ ರೋಣ’!

ಪೋಸ್ಟರ್ (Poster)​, ಟೀಸರ್​​(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿದ್ದಾನೆ ವಿಕ್ರಾಂತ್​ ರೋಣ.ಇದೇ ಮೊದಲ ಬಾರಿಗೆ ಸುದೀಪ್‌(Sudeep)ಗೆ ನಿರ್ದೇಶನ ಮಾಡಿದ್ದಾರೆ ಅನೂಪ್ ಭಂಡಾರಿ.

ಕಿಚ್ಚ ಸುದೀಪ್

ಕಿಚ್ಚ ಸುದೀಪ್

  • Share this:
ವಿಕ್ರಾಂತ್​ ರೋಣ (Vikrant Rona).. ಇಡೀ ಕನ್ನಡ ಚಿತ್ರರಂಗ ಈ ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿದೆ. ಅದರಲ್ಲೂ ಕಿಚ್ಚ(Kiccha)ನ ಅಭಿಮಾನಿಗಳು (Fans) ಮೊದಲು ಸಿನಿಮಾ ರಿಲೀಸ್ (Release) ಆಗಲಿ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ವಿಕ್ರಾಂತ್​ ರೋಣ ಪ್ಯಾನ್​ ಇಂಡಿಯಾ (Pan India) ಸಿನಿಮಾ ಸುಮಾರು 10ಕ್ಕೂ ಹೆಚ್ಚು ಭಾಷೆ(Languages)ಗಳಲ್ಲಿ ರಿಲೀಸ್ ಆಗಲಿದೆ. ರಂಗಿತರಂಗ ಮೂಲಕ ಕಮಾಲ್​ ಮಾಡಿದ್ದ ಅನೂಪ್ ಭಂಡಾರಿ (Anup Bhandari) ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಅದರ ಜೊತೆಗ ಈ ಸಿನಿಮಾ 3ಡಿ(3D)ಯಲ್ಲಿ ತೆರೆಕಾಣುತ್ತಿರುವುದು ಮತ್ತೊಂದು ವಿಶೇಷ. ಇದೀಗ ಈ ಸಿನಿಮಾದಿಂದ ಬಿಗ್​ ಅಪ್​ಡೇಟ್​(Big Update)ವೊಂದು ಸಿಕ್ಕಿದೆ. ಸ್ವತಃ ಕಿಚ್ಚ ಸುದೀಪ್​ ಅವರು ಈ  ವಿಚಾರವನ್ನು ತಿಳಿಸಿದ್ದಾರೆ. ಅರೇ ಅದೆನಪ್ಪಾ ಅಂತೀರಾ? ಮುಂದೆ ನೋಡಿ

ಇಂಗ್ಲಿಷ್​ ಡಬ್ಬಿಂಗ್​ ಮುಗಿಸಿದ ಕಿಚ್ಚ ಸುದೀಪ್!

ಹೌದು, ಪೋಸ್ಟರ್ (Poster)​, ಟೀಸರ್​​(Teaser)ಗಳಿಂದಲೇ ಸಾಕಷ್ಟು ಸದ್ದು ಮಾಡಿದ್ದಾನೆ ವಿಕ್ರಾಂತ್​ ರೋಣ.ಇದೇ ಮೊದಲ ಬಾರಿಗೆ ಸುದೀಪ್‌(Sudeep)ಗೆ ನಿರ್ದೇಶನ ಮಾಡಿದ್ದಾರೆ ಅನೂಪ್ ಭಂಡಾರಿ. ಕನ್ನಡ , ತೆಲುಗು, ಹಿಂದಿ, ತಮಿಳು, ಮಲಯಾಳಂ, ಇಂಗ್ಲಿಷ್​ ಭಾಷೆ ಸೇರಿ ಹಲವು ಭಾಷೆಗಳಲ್ಲಿ ವಿಕ್ರಾಂತ್​ ರೋಣನ ದರ್ಶನವಾಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಹೊಸ ವಿಚಾರ ಏನಪ್ಪ ಅಂದರೆ ಇಂಗ್ಲಿಷ್​ ವರ್ಷನ್​ನಲ್ಲೂ ಕಿಚ್ಚ ಸುದೀಪ್​ ಡಬ್​ ಮಾಡಿ ಮುಗಿಸಿದ್ದಾರೆ. ಇದಕ್ಕಾಗಿ ಸಣ್ಣದೊಂದು ವಿಡಿಯೋ ಮಾಡಿ ಅದನ್ನು ಚಿತ್ರತಂಡ ಪೋಸ್ಟ್​ ಮಾಡಿದೆ.

ಅಸಲಿ ಆಟ ಈಗ ಶುರು ಎಂದ ಕಿಚ್ಚ ಸುದೀಪ್​!

ಹೌದು, ಈ ವಿಡಿಯೋದಲ್ಲಿ ಕಿಚ್ಚ ಸುದೀಪ್​ ಸಖತ್ತಾಗಿ ಇಂಗ್ಲಿಷ್​ ಡಬ್​ ಮಾಡಿದ್ದಾರೆ. ಅದರಲ್ಲೂ ರಿಲೀಸ್​ ಆಗಿರುವ ವಿಡಿಯೋದಲ್ಲೇ ಸಖತ್ ಡೈಲಾಗ್​ ಹೊಡೆದಿದ್ದಾರೆ. ಈಗ ಅಸಲಿ ಆಟ ಶುರುವಾಗುತ್ತೆ ಎಂದು ಹೇಳಿದ್ದಾರೆ. ಈ ದೃಶ್ಯದಲ್ಲೇ ಕಿಚ್ಚನ ಗೆಟ್​ಅಪ್​ ಕಂಡು ಸಿನಿಮಾ ಮೇಲಿರುವ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಇದನ್ನೂ ಓದಿ: ಅನೂಪ್ ಭಂಡಾರಿ ಜೊತೆ ಮತ್ತೊಂದು ಸಿನಿಮಾ ಮಾಡ್ತಾರಾ ಕಿಚ್ಚ? ಟೇಕ್ ಆಫ್​ ಆಗುತ್ತಾ `ಬಿಲ್ಲ ರಂಗ ಬಾಷಾ’? 

ಯಾವಾಗ ರಿಲೀಸ್​ ಆಗುತ್ತೆ ವಿಕ್ರಾಂತ್​ ರೋಣ!

ಅದ್ದೂರಿ ವೆಚ್ಚದಲ್ಲಿ ಸಿದ್ಧಗೊಂಡಿರುವ ಈ ಸಿನಿಮಾವು ಯಾವಾಗ ತೆರೆಗೆ ಬರಲಿದೆ ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ಈ ಹಿಂದೆ 2022ರ ಫೆ.24ರಂದು ಅದ್ದೂರಿಯಾಗಿ 'ವಿಕ್ರಾಂತ್ ರೋಣ' ತೆರೆಗೆ ಬರಬೇಕಿತ್ತು. ಕೊರೋನಾ (Corona) ಕಾರಣದಿಂದ ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಲಾಗಿತ್ತು. ಶೀಘ್ರದಲ್ಲೆ ಹೊಸ ರಿಲೀಸ್ ದಿನಾಂಕವನ್ನು ಚಿತ್ರತಂಡ ಘೋಷಣೆ ಮಾಡಲಿದೆ. ವಿಕ್ರಾಂತ್​ ರೋಣ ಸಿನಿಮಾ 3ಡಿಯಲ್ಲಿ ಅದ್ಬುತವಾಗಿ ಮೂಡಿಬಂದಿದೆ. ಚಿತ್ರತಂಡಕ್ಕೆ ಧನ್ಯವಾದಗಳು ಎಂದು ಕಿಚ್ಚ ಸುದೀಪ್​ ಟ್ವೀಟ್​ ಮಾಡಿದ. ಇನ್ನೂ ಈ ಸಿನಿಮಾದ ರಿಲೀಸ್ ದಿನಾಂಕವನ್ನು ನಿರೀಕ್ಷಿಸಿ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: `ವಿಕ್ರಾಂತ್ ರೋಣ‘ನಿಗೆ OTTಯಿಂದ ಭರ್ಜರಿ ಆಫರ್​.. ಇಷ್ಟು ಹಣ ಈ ಹಿಂದೆ ಯಾವ ಸಿನಿಮಾಗೂ ಕೊಟ್ಟಿಲ್ವಂತೆ!

ಮರುಜೀವ ಪಡೆಯುತ್ತಾ ಬಿಲ್ಲ ರಂಗ ಭಾಷಾ?

ವಿಕ್ರಾಂತ್ ರೋಣ ಸಿನಿಮಾಗೂ ಮುನ್ನ ಅನೂಪ್​ ಭಂಡಾರಿ ಕಿಚ್ಚ ಸುದೀಪ್​ ಅವರ ಬಳಿ ಬಿಲ್ಲ ರಂಗ ಭಾಷಾ ಸಿನಿಮಾದ ಕಥೆಯನ್ನು ಹೇಳಿ ಒಕೆ ಮಾಡಿಸಿದ್ದರು. ಈ ಸಿನಿಮಾ ಕೂಡ ಅನೌನ್ಸ್​ ಆಗಿತ್ತು. ಆದರೆ, ಈ ಸಿನಿಮಾ ಟೇಕ್ ಆಫ್​ ಆಗಲಿಲ್ಲ. ಇದರ ಬದಲು ವಿಕ್ರಾಂತ್​ ರೋಣ ಸಿನಿಮಾ ಟೇಕ್​ ಆಫ್​ ಆಯ್ತು. ಈಗ ಕಿಚ್ಚ ನನ್ನ ಮುಂದಿನ ಸಿನಿಮಾ ವಿತ್​ ಅನೂಪ್​ ಭಂಡಾರಿ ಅಂತ  ಪೋಸ್ಟ್ ಮಾಡಿರುವುದ ಒಂದು ವೇಳೆ ಇದೇ ಸಿನಿಮಾವನ್ನು ಈಗ ಟೇಕ್​ ಆಫ್​ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ಕೆಲವೇ ದಿನಗಳಲ್ಲಿ ಇದಕ್ಕೆ ಉತ್ತರ ಸಿಗಲಿದೆ.
Published by:Vasudeva M
First published: