Anitha EAnitha E
|
news18-kannada Updated:November 27, 2020, 9:50 AM IST
ಕಿಚ್ಚ ಸುದೀಪ್
ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಫ್ಯಾಂಟಮ್. ಅನೂಪ್ ಭಂಡಾರಿ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೆ ಹೈದರಾಬಾದಿನಲ್ಲಿ ಪೂರ್ಣಗೊಂಡಿದೆ. ಲಾಕ್ಡೌನ್ ಸಡಿಲಗೊಂಡ ನಂತರ ಸುದೀಪ್ ಹೈದರಾಬಾದಿಗೆ ಹೋಗಿದ್ದರು. ಅಲ್ಲಿ ಫ್ಯಾಂಟಮ್ ಸಿನಿಮಾಗಾಗಿ ನಿರ್ಮಿಸಲಾಗಿರುವ ಸೆಟ್ನಲ್ಲಿ ಚಿತ್ರೀಕರಣ ಆರಂಭಿಸಿದ್ದರು. ಅದಕ್ಕಾಗಿ ಇಲ್ಲಿಂದಲೇ ಕಾರ್ಮಿಕರನ್ನೂ ತಮ್ಮೊಂದಿಗೆ ಹೈದರಾಬಾದಿಗೆ ಕರೆದುಕೊಂಡು ಹೋಗಿದ್ದರು. ಸುಮಾರು ಮೂರು ತಿಂಗಳಿನಿಂದ ಹೈದರಾಬಾದಿನಲ್ಲೇ ಚಿತ್ರೀಕರಣ ನಡೆಸುತ್ತಿದ್ದ ಫ್ಯಾಂಟಮ್ ಚಿತ್ರತಂಡ ಇತ್ತೀಚೆಗಷ್ಟೆ ಬೆಂಗಳೂರಿಗೆ ಮರಳಿದ್ದಾರೆ. ಇನ್ನು ಸಿನಿಮಾದ ಕೊನೆ ಹಂತದ ಶೂಟಿಂಗ್ ಮಾತ್ರ ಬಾಕಿ ಉಳಿದಿದ್ದು, ಅದಕ್ಕಾಗಿ ಚಿತ್ರತಂಡ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ಹೀಗಿರುವಾಗಲೇ ಕಿಚ್ಚ ಸುದೀಪ್ ಹಾಗೂ ಅವರ ತಂಡ ಕೇರಳಕ್ಕೆ ಹೋಗಲಿದ್ದಾರೆ ಅನ್ನೋ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಈ ಕುರಿತಂತೆ ಸುದೀಪ್ ಈಗ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಹೌದು, ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ. ಡಿಸೆಂಬರ್ 4ರಿಂದ ಈ ಚಿತ್ರದ ಕೊನೆಯ ಶೆಡ್ಯೂಲ್ನ ಶೂಟಿಂಗ್ ಆರಂಭವಾಗಲಿದೆ. ಕ್ಲೈಮ್ಯಾಕ್ಸ್ಗಾಗಿ ಕಳೆದ ಒಂದು ತಿಂಗಳಿನಿಂದ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದೆಯಂತೆ.
ಕಿಚ್ಚ ಸುದೀಪ್ ಮಾಡಿರುವ ಪೋಸ್ಟ್ನಲ್ಲಿ ಒಂದು ಪ್ರಮುಖ ವಿಷಯವಿದೆ. ಸುದೀಪ್ ತಮ್ಮ ರಾಕ್ ಸಾಲಿಡ್ ಬಾಡಿಯ ಬ್ಯಾಕ್ ಪೋಸ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸುದೀಪ್ ಮತ್ತೆ ಫ್ಯಾಂಟಮ್ ಸಿನಿಮಾದ ಕ್ಲೈಮ್ಯಾಕ್ಸ್ಗಾಗಿ ವರ್ಕೌಟ್ ಆರಂಭಿಸಿದ್ದಾರಂತೆ. ಸಿನಿಮಾದ ಕ್ಲೈಮ್ಯಾಕ್ಸ್ಗಾಗಿ ಇಡೀ ಚಿತ್ರತಂಡ ಸಿಕ್ಕಾಪಟ್ಟೆ ಶ್ರಮಪಟ್ಟಿದ್ದಾರೆ ಎಂದು ಕಿಚ್ಚಸುದೀಪ್ ಟ್ವೀಟ್ ಮಾಡಿದ್ದಾರೆ.
Gud food,,, a bit of decent lifestyle,,,n a lil Discipline,, isn't bad after all ye!!.🥂🤗
ಜೊತೆಗೆ ಲೈಫ್ಸ್ಟೈಲ್ ಬಗ್ಗೆ ಒಂದು ಕಿವಿ ಮಾತು ಸಹ ಹೇಳಿದ್ದಾರೆ. ಒಳ್ಳೆಯ ಆಹಾರ, ಡಿಸೆಂಟ್ ಲೈಫ್ ಸ್ಟೈಲ್ ಹಾಗೂ ಸ್ವಲ್ಪ ಶಿಸ್ತು ಇದ್ದರೆ ಸಾಕು ಜೀವನಕ್ಕೆ ಎಂದಿದ್ದಾರೆ ಸುದೀಪ್.
ಅಲ್ಲದೆ, ಪೈಲ್ವಾನ್ ಸಿನಿಮಾಗಾಗಿ ಸುದೀಪ್ ಮೊದಲ ಬಾರಿಗೆ ಜಿಮ್ ಮೆಟ್ಟಿಲು ತುಳಿದಿದ್ದು. ಆಗಲು ಸಹ ಸುದೀಪ್ ಅವರ ಬ್ಯಾಕ್ ಪೋಸ್ ಇರುವ ಫೋಟೋವನ್ನು ಸುದೀಪ್ ಹಂಚಿಕೊಂಡಿದ್ದರು. ಆಗ ಕೆಲವರು ಇದು ಮಾರ್ಫ್ ಮಾಡಿದ ಚಿತ್ರ ಎಂದು ಸುದೀಪ್ ಅವರನ್ನು ಟ್ರೋಲ್ ಮಾಡಿದ್ದರು. ಆಗ ಸಿನಿಮಾದ ನಿರ್ದೇಶಕ ಸುದೀಪ್ ಪರವಾಗಿ ನಿಂತು ಇದು ನಿಜವಾದ ಫೋಟೋ ಎಂದು ಅವರ ಮತ್ತೊಂದು ಫೋಟೋ ರಿಲೀಸ್ ಮಾಡುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದರು.
ಇನ್ನು ಸಲ್ಮಾನ್ ಖಾನ್ ಜೊತೆ ಸುದೀಪ್ ದಬಾಂಗ್ 3 ಸಿನಿಮಾದಲ್ಲೂ ಖಳನಾಯಕನಾಗಿ ನಟಿಸಿದರು. ಅದರಲ್ಲಿ ಬಲ್ಲಿಸಿಂಗ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದು, ಆಗಲೂ ತಮ್ಮ ರಾಕ್ ಸಾಲಿಡ್ ದೇಹದ ಪ್ರದರ್ಶನ ಮಾಡಿದ್ದರು. ಸಲ್ಮಾನ್ ಖಾನ್ ಜೊತೆ ಶರ್ಟ್ಲೆಸ್ ಆಗಿ ಫೈಟಿಂಗ್ ಮಾಡಿದ್ದರು. ಆದರೆ ಈ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಸದ್ದು ಮಾಡಲೇ ಇಲ್ಲ.
ಇನ್ನು ಈಗ ಸುದೀಪ್ ಮತ್ತೆ ಫ್ಯಾಂಟಮ್ಗಾಗಿ ಮತ್ತೆ ಬಾಡಿ ಬಿಲ್ಡ್ ಮಾಡಿದ್ದಾರೆ. ಅವರ ಈ ಬ್ಯಾಕ್ ಪೋಸ್ ನೋಡಿದ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಫ್ಯಾಂಟಮ್ ಸಿನಿಮಾದ ರಿಲೀಸ್ ದಿನಾಂಕ ಯಾವಾಗ ಪ್ರಕಟವಾಗುತ್ತೆ ಅಂತ ಕಾತರದಿಂದ ಕಾಯುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣದ ವೇಳೆ ತೆಗೆದ ವಿಡಿಯೋ ತುಣುಕುಗಳನ್ನು ಈಗಾಗಲೇ ಸುದೀಪ್ ಹಂಚಿಕೊಂಡಿದ್ದು, ಚಿತ್ರದ ಬಗ್ಗೆ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ.
Published by:
Anitha E
First published:
November 27, 2020, 7:06 AM IST