news18-kannada Updated:December 12, 2020, 5:26 PM IST
ಸೋನು ಶ್ರೀನಿವಾಸ್ ಗೌಡ- ಡ್ರೋನ್ ಪ್ರತಾಪ್
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಸೀಸನ್ 8ರ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಈ ಬಿಗ್ ರಿಯಾಲಿಟಿ ಶೋ ಪ್ರಾರಂಭವಾಗಲಿದೆ ಎಂಬ ಬಗ್ಗೆ ಕಲರ್ಸ್ ಕನ್ನಡದ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು. ಕಿಚ್ಚನ ಜೊತೆಗಿರುವ ಫೋಟೋ ಹಂಚಿಕೊಂಡ ಅವರು ಬಿಗ್ಬಾಸ್ ಕಾರ್ಯಕ್ರಮದ ಸಿದ್ಧತೆ ಕುರಿತಾಗಿ ಸಿಹಿ ಸಿದ್ದು ನೀಡಿದ್ದರು. ಅಂತೂ ಪ್ರೇಕ್ಷಕರಿಗೆ ಬಿಗ್ಬಾಸ್ ಸೀಸನ್ 8 ನಡಸೆಯಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಅದರ ಜೊತೆಗೆ ಬಿಗ್ ಬಾಸ್ ಮನೆಯೊಳಕ್ಕೆ ಯಾವ ಸ್ಪರ್ಧಿಗಳು ಎಂಟ್ರಿ ನೀಡಲಿದ್ದಾರೆ ಎಂಬ ಕೂತೂಹಲ ಹುಟ್ಟಿಕೊಂಡಿದೆ.
ಟಿಕ್ಟಾಕ್ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಿಗ್ ಬಾಸ್ ಮನೆಯೊಳಕ್ಕೆ ಹೋಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ನಡೆಯುತ್ತಿದೆ. ಟಿಕ್ಟಾಕ್ನಲ್ಲಿ ವೈರಲ್ ಆಗಿದ್ದ ಸೋನು ಶ್ರೀನಿವಾಸ್ ಗೌಡ ಆಗಾಗ ಟ್ರೋಲ್ ಕೂಡ ಆಗುತ್ತಿದ್ದರು. ಹಿಂದೊಮ್ಮೆ ಕನ್ನಡಿಗರು ಬೆಳೆಸಲ್ಲ, ತುಳಿತಾರೆ ಎಂಬ ಮಾತು ಹೇಳಿ ಟ್ರೋಲ್ ಆಗಿದ್ದರು.
ಆ ಬಳಿಕ ತೆಲುಗು ಇಂಡಸ್ಟ್ರಿಯ ಬಗ್ಗೆ ಹೊಗಳಿಕೆಯ ಮಾತನಾಡಿ ಸುದ್ದಿಯಾಗಿದ್ದರು. ಇದೀಗ ಈ ಬಾರಿಯ ಬಿಗ್ ಬಾಸ್ನಲ್ಲಿ ಸೋನು ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ಸೋನು ಗೌಡ ಮಾತನಾಡಿದ್ದರೆ.
ಫೇಸ್ಬುಕ್ ಲೈವ್ ಬಂದಿರುವ ಸೋನು ಶ್ರೀನಿವಾಸ್ ಗೌಡ ಅವರಿಗೆ ಬಿಗ್ ಬಾಸ್ ಮನೆಯೊಳಕ್ಕೆ ಹೋಗುತ್ತೀರಾ? ಎಂಬ ಪ್ರಶ್ನೆಗಳು ಬಂದಿದೆ. ಈ ಪ್ರಶ್ನೆಗೆ ಉತ್ತರಿಸಿದ ಅವರು ‘ಯಾರೋ ಸುಮ್ಮೆ ಪಬ್ಲಿಸಿಟಿ ಮಾಡುತ್ತಿದ್ದಾರೆ ನಾನು ಬಿಗ್ ಬಾಸ್ಗೆ ಹೋಗುತ್ತಿಲ್ಲ...ಆ ತರಹದ ಸುದ್ದಿಯಿದ್ದರೆ ನಾನು ಹೇಳ್ತಿನಿ’ ಎಂದು ಹೇಳಿದ್ದಾರೆ.
ಡ್ರೋನ್ ಪ್ರತಾಪ್ ಹೋಗುತ್ತಾರಾ?
ಇತ್ತೀಚೆಗೆ ಭಾರಿ ಸುದ್ದಿಯಾಗಿದ್ದ ಡ್ರೋನ್ ಪ್ರತಾಪ್ ಅವರ ಹೆಸರು ಕೂಡ ಕೇಳಿಬಂದಿದೆ. ಬಿಗ್ಬಾಸ್ ಮನೆಯೊಳಕ್ಕೆ ಹೋಗುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ. ಆದರೆ ಇದು ನಿಜವೇ? ಎಂಬುದು ಬಿಗ್ಬಾಸ್ ಕಾರ್ಯಕ್ರಮ ಪ್ರಾರಂಭವಾದ ನಂತರ ತಿಳಿದು ಬರಲಿದೆ.
Published by:
Harshith AS
First published:
December 12, 2020, 5:24 PM IST