HOME » NEWS » Entertainment » KICCHA SUDEEP BIGG BOSS KANNADA SEASON 8 SUSPENDED HG

Bigg Boss Kannada 8: ವೀಕ್ಷಕರಿಗೆ ನಿರಾಸೆ; ನಾಳೆಯಿಂದ ಬಿಗ್ ಬಾಸ್​​ ಕನ್ನಡ ಕಾರ್ಯಕ್ರಮ ಪ್ರಸಾರವಿಲ್ಲ!

ಕೊರೊನಾ ನಡುವೆಯೂ ಬಿಗ್​ ಬಾಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಕಿಚ್ಚನ ನಿರೂಪಣೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಆದರೆ ಕಳೆದ 2 ವಾರದಿಂದ ಸುದೀಪ್​ಗೆ ಅನಾರೋಗ್ಯವಿದ್ದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ವಾರದ ಕಾರ್ಯಕ್ರಮ ನಡೆದಿದೆ. ಮಾತ್ರವಲ್ಲದೆ ಎಲಿಮಿನೇಟ್​ ಪ್ರಕ್ರಿಯೆ ಕೂಡ ಆಗಿದೆ. ಆದರೀಗ ಬಹು ವೀಕ್ಷಕರನ್ನು ಹೊಂದಿದ್ದ ಈ ಕಾರ್ಯಕ್ರಮ ಕೊರೋನಾದಿಂದಾಗಿದೆ ರದ್ದಾಗಿದೆ. ಈ ಬಗ್ಗೆ ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಹೇಳಿಕೊಂಡಿದ್ದಾರೆ.

news18-kannada
Updated:May 8, 2021, 7:03 PM IST
Bigg Boss Kannada 8: ವೀಕ್ಷಕರಿಗೆ ನಿರಾಸೆ; ನಾಳೆಯಿಂದ ಬಿಗ್ ಬಾಸ್​​ ಕನ್ನಡ ಕಾರ್ಯಕ್ರಮ ಪ್ರಸಾರವಿಲ್ಲ!
bigg boss kannada season 8
  • Share this:
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ ಬಾಸ್​ ಸೀಸನ್​ 8 ಗ್ರಾಂಡ್​ ಫೀನಾಲೆಗೆ 29 ದಿನಗಳು ಬಾಕಿ ಇತ್ತು. ಆದರೀಗ ಕಿಚ್ಚ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಶೋ ಕೊರೊನಾ ಕಾರಣದಿಂದ ರದ್ದಾಗಿದೆ. ಮಾತ್ರವಲ್ಲದೆ ಈ ವಿಚಾರ ವೀಕ್ಷಕರಿಗೆ ನಿರಾಸೆ ಮೂಡಿಸಿದೆ.

ಕೊರೊನಾ ನಡುವೆಯೂ ಬಿಗ್​ ಬಾಸ್​ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಕಿಚ್ಚನ ನಿರೂಪಣೆಯಲ್ಲಿ ಈ ಕಾರ್ಯಕ್ರಮ ನಡೆಯುತ್ತಾ ಬಂದಿದೆ. ಆದರೆ ಕಳೆದ 2 ವಾರದಿಂದ ಸುದೀಪ್​ಗೆ ಅನಾರೋಗ್ಯವಿದ್ದ ಕಾರಣದಿಂದ ಅವರ ಅನುಪಸ್ಥಿತಿಯಲ್ಲಿ ವಾರದ ಕಾರ್ಯಕ್ರಮ ನಡೆದಿದೆ. ಮಾತ್ರವಲ್ಲದೆ ಎಲಿಮಿನೇಟ್​ ಪ್ರಕ್ರಿಯೆ ಕೂಡ ಆಗಿದೆ. ಆದರೀಗ ಬಹು ವೀಕ್ಷಕರನ್ನು ಹೊಂದಿದ್ದ ಈ ಕಾರ್ಯಕ್ರಮ ಕೊರೋನಾದಿಂದಾಗಿದೆ ರದ್ದಾಗಿದೆ. ಈ ಬಗ್ಗೆ ಕಲರ್ಸ್​ ಕನ್ನಡದ ಬ್ಯುಸಿನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಹೇಳಿಕೊಂಡಿದ್ದಾರೆ.

ಫೇಸ್​ಬುಕ್​ ಮೂಲಕ ಈ ಬಗ್ಗೆ ಮಾಹಿತಿ ಹಂಚಿಕೊಂಡ ಅವರು. ''ಬಿಗ್ ಬಾಸ್ ಶುರುವಾಗಿ ಇವತ್ತಿಗೆ ಎಪ್ಪತ್ತೊಂದನೇ ದಿನ. ಪಿಸಿಆರ್ ನಲ್ಲಿ ನಿಂತು ಈ ಮನೇಲಿರೋ ಹನ್ನೊಂದು ಜನ ಓಡಾಡುತ್ತಿರುವುದನ್ನು ನೋಡಿದಾಗ ಒಂದಕ್ಕಿಂತ ಹೆಚ್ಚು ಭಾವನೆಗಳು ಒಂದೇ ಸಲಕ್ಕೆ ಬಂದು ಮನಸ್ಸಿಗೆ ವಿಚಿತ್ರವಾದ ತಳಮಳ. ಹೊರಗಡೆ ಎದುರಾಗಿರುವ ಕಷ್ಟದ ಸವಾಲು ಗೊತ್ತಿಲ್ಲದೇ ಒಳಗಡೆ ಇರುವವರೆಲ್ಲಾ ಖುಷಿಯಾಗಿದ್ದಾರೆ. ಐಸೋಲೇಷನ್ನಿನಲ್ಲಿ ಇರುವುದರಿಂದ ಸುರಕ್ಷಿತವಾಗಿಯೂ ಇದ್ದಾರೆ. ಎಲ್ಲರಿಗೂ ಹೊರಗಡೆ ಆಗಿರುವ ಬೆಳವಣಿಗೆ ತಿಳಿಸಿ ನಾಳೆ ಹೊರಗಡೆ ಕರೆಯುತ್ತಿದ್ದೇವೆ. ಅನಂತರ ಅವರನ್ನು ಮತ್ತು ತಂಡವನ್ನು ಸುರಕ್ಷಿತವಾಗಿ ಮನೆಗೆ ಕಳುಹಿಸಲು ವ್ಯವಸ್ಥೆ ಆಗುತ್ತಿದೆ.

ನೂರಾರು ದಿನಗಳ ಕೆಲಸ. ನೂರಾರು ಜನರ ಕೆಲಸ. ಎಲ್ಲವನ್ನೂ ಪಕ್ಕಕ್ಕಿಟ್ಟು ಶ್ರದ್ಧೆಯಿಂದ ಕೆಲಸ ಮಾಡಿದ ಒಂದು ತಂಡದ ಕನಸು ಅರ್ಧಕ್ಕೇ ನಿಂತಿದೆ. ಕಷ್ಟದ ತೀರ್ಮಾನವಾದರೂ ಸಮಾಧಾನ ಕೊಟ್ಟ ತೀರ್ಮಾನ.


ಮನಸ್ಸು ಭಾರವಾಗಿದೆ. ಈ ಶೋ ನಿಲ್ಲುತ್ತಿದೆ ಅಂತಲ್ಲ. ಹೊರಗಡೆ ಗಾಳಿಯಲ್ಲಿ ಓಡಾಡುತ್ತಿರುವ ಕಣ್ಣಿಗೆ ಕಾಣದ ಅನಿಶ್ಚಿತತೆಯಿಂದ ಇನ್ನಿಲ್ಲದ ಕಳವಳ. ಎಲ್ಲರಿಗೂ ಈ ಕಳವಳಕ್ಕೊಂದು ಉತ್ತರ ಬೇಗ ಸಿಗಲಿ. ಸುರಕ್ಷಿತವಾಗಿರಿ’’ ಎಂದು ಬರೆದುಕೊಂಡಿದ್ದಾರೆ.


ಕಿಚ್ಚನ ನಿರೂಪಣೆಯಲ್ಲಿ ಮೂಡಿಬರುತ್ತಿದ್ದ ಈ ಕಾರ್ಯಕ್ರಮ ರದ್ದಾಗಿರುವುದು ಅನೇಕರಿಗೆ ಬೇಸರ ತರಿಸಿದೆ. ಸಾಕಷ್ಟು ವೀಕ್ಷರನ್ನು ಈ ಕಾರ್ಯಕ್ರಮ ಹೊಂದಿತ್ತು. ಆದರೀಗ ಮಹಾಮಾರಿ ಕೊರೊನಾ ನೆಚ್ಚಿನ ಕಾರ್ಯಕ್ರಮ ನಿಲ್ಲಿಸಿದ್ದಕ್ಕೆ ವೀಕ್ಷಕರು ಬೇಸರ ಹೊರಹಾಕಿದ್ದಾರೆ.





ಕಳೆದ ವರ್ಷ ಯಾವುದೇ ತೊಂದರೆಯಿಲ್ಲ ಬಿಗ್​ಬಾಸ್​ ಕಾಯ್ರಕ್ರಮ ನಡೆದಿತ್ತು. ಆದರೆ ಈ ವರ್ಷ ಏಪ್ರಿಲ್​ ತಿಂಗಳಿನಲ್ಲಿ ಪ್ರಾರಂಭವಾಗಿ 71 ದಿನವನ್ನು ಪೂರೈಸುತ್ತಾ ಬಂದಿದೆ. ಆದರೆ ಕರ್ನಾಟಕದಲ್ಲಿ ಹೆಚ್ಚಾಗುತ್ತಿರುವ ಕೊರೊನಾ ಅವಾಂತರದಿಂದಾಗಿ ಕಾರ್ಯಕ್ರಮ ರದ್ದುಮಾಡಬೇಕಾದ ಪ್ರಸಂಗ ಎದುರಾಗಿದೆ.




ಇನ್ನು ಸೀಸನ್​ 8ರ ಬಿಗ್​ ಬಾಸ್​ ಮನೆಗೆ 16 ಸ್ಪರ್ಧಿಗಳು ಒಳಹೊಕ್ಕಿದ್ದರು. ಅದರಲ್ಲಿ ಚಂದ್ರಕಲಾ, ಧನುಶ್ರೀ, ಗೀತಾ, ನಿರ್ಮಲಾ, ರಾಜೀವ್​, ಶಂಕರ್​ ಅಶ್ವಥ್​, ವಿಶ್ವನಾಥ್​ ಹಾವೇರಿ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ.  ಆ ಬಳಿಕ  ವೈಷ್ಣವಿ, ರಘು, ಅರವಿಂದ್​, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಸುರೇಶ್​, ನಿಧಿ ಸುಬ್ಬಯ್ಯ,  ಪ್ರಶಾಂತ್​ ಸಂಬರಗಿ, ಶಮಂತ್​ ಮನೆಯೊಳಕ್ಕಿದ್ದರು. ನಂತರ  ಪ್ರಿಯಾಂಕಾ ಮತ್ತು ಚಕ್ರವರ್ತಿ ಚಂದ್ರಚೂಡ್​ ವೈಲ್ಡ್​ ಕಾರ್ಡ್​ ಮೂಲಕ ಉಳಿದ ಸ್ಪರ್ಧಿಗಳ ಜೊತೆಗೆ ಸೇರಿದರು​. ಆದರೀಗ ಇವರೆಲ್ಲರು ಮನೆಯಿಂದ ಹೊರಬರುತ್ತಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ದಿವ್ಯಾ ಉರುಡುಗ ಅವರು ಅನಾರೋಗ್ಯ ಕಾರಣದಿಂದ ಹೊರಬಂದಿದ್ದರು.


First published: May 8, 2021, 6:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories