Stars Movies: ಸ್ಯಾಂಡಲ್‍ವುಡ್ ದಸರಾದಲ್ಲಿ ಕೋಟಿಗೊಬ್ಬನ ಅಂಬಾರಿ? ದುನಿಯಾ ವಿಜಯ್ ಕೂಡ ನಡೆಸಲಿದ್ದಾರೆ ಸಲಗ ಸವಾರಿ!

ಸ್ಟಾರ್ ವಾರ್ ಅಂದರೆ ಸಾಮಾನ್ಯವಾಗಿ ಒಂದು ಚಿತ್ರತಂಡ ಮತ್ತೊಂದು ಚಿತ್ರತಂಡದ ಜತೆ ಹಗ್ಗಜಗ್ಗಾಟ ನಡೆಸಬೇಕು, ಇಬ್ಬರೂ ಸ್ಟಾರ್​ಗಗಳ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಆನ್‍ಲೈನ್‍ನಲ್ಲಿ ಅಬ್ಬರಿಸಿ ಬೊಬ್ಬಿರಿಯಬೇಕು. ಆದರೆ ಇದ್ಯಾವುದಕ್ಕೂ ಕಿಚ್ಚ ಸುದೀಪ್ ಅವರಾಗಲೀ ಅಥವಾ ದುನಿಯಾ ವಿಜಯ್ ಅವರಾಗಲೀ ಆಸ್ಪದ ನೀಡಿಲ್ಲ.

ಸಲಗ ಸಿನಿಮಾ ಪೋಸ್ಟರ್.

ಸಲಗ ಸಿನಿಮಾ ಪೋಸ್ಟರ್.

  • Share this:
ಅತ್ತ ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಥಿಯೇಟರ್​ಗಳಲ್ಲಿ (Cenima Theatre) ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡುತ್ತಲೇ ಇತ್ತ ಸ್ಯಾಂಡಲ್‍ವುಡ್‍ನಲ್ಲಿ  (Sandalwood Starwar) ಸ್ಟಾರ್​ ವಾರ್ ಶುರುವಾಗಿದೆ. ಹೌದು ಕಿಚ್ಚ ಸುದೀಪ್ (Kiccha Sudeep) ಮತ್ತು ದುನಿಯಾ ವಿಜಯ್ (Duniya Vijay) ಬಾಕ್ಸಾಫೀಸ್‍ನಲ್ಲಿ ಮುಖಾಮುಖಿಯಾಗಲು ಸಿದ್ಧತೆ ನಡೆಸಿದ್ದಾರೆ. ಅಕ್ಟೋಬರ್ 14ರಂದೇ ಕೋಟಿಗೊಬ್ಬ 3 ಹಾಗೂ ಸಲಗ ಸಿನಿಮಾಗಳ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಕೊರೋನಾ ಮಹಾಮಾರಿ ಕನ್ನಡ ಚಿತ್ರರಂಗವನ್ನು ಬೆಂಬಿಡದೇ ಕಾಡುತ್ತಲೇಯಿದೆ. ಅದರ ನಡುವೆಯೇ ಪೊಗರು, ಯುವರತ್ನ ಸೇರಿದಂತೆ ಕೆಲ ಸಿನಿಮಾಗಳು ರಿಲೀಸ್ ಆಗಿವೆ. ಆದರೆ ಮತ್ತೆ ಲಾಕ್‍ಡೌನ್ ಹೇರಿಕೆ ಥಿಯೇಟರ್​ಗಳ ಬಾಗಿಲು ಹಾಕಿಸಿತ್ತು. ಶೇಕಡಾ 50ರಷ್ಟು ಪ್ರದರ್ಶನಕ್ಕೆ ಅನುಮತಿ ನೀಡಿದರೂ, ಬಿಗ್ ಬಜೆಟ್ ಸಿನಿಮಾಗಳು ರಿಲೀಸ್‍ನಿಂದ ಹಿಂದೆ ಸರಿದಿದ್ದವು. ಆದರೆ ಈಗ ರಾಜ್ಯ ಸರ್ಕಾರ ಅಕ್ಟೋಬರ್ 1ರಿಂದ ಹೌಸ್‍ಫುಲ್ ಪ್ರದರ್ಶನಕ್ಕೆ ಅನುಮತಿ ನೀಡುತ್ತಲೇ ಸಲಗ, ಭಜರಂಗಿ 2, ಕೋಟಿಗೊಬ್ಬ 3 ಯಂತಹ ದೊಡ್ಡ ಸ್ಟಾರ್​ಗಳ ಸಿನಿಮಾಗಳು ರಿಲೀಸ್ ಡೇಟ್ ಅನೌನ್ಸ್ ಮಾಡಿಕೊಂಡಿವೆ. ಹೌದು, ಭಜರಂಗಿ 2 ಅಕ್ಟೋಬರ್ 29ರಂದು ತೆರೆಗೆ ಬರಲು ರೆಡಿಯಾಗಿದ್ದರೆ, ಕಿಚ್ಚ ಸುದೀಪ್ ಅವರ ಕೋಟಿಗೊಬ್ಬ 3 ಹಾಗೂ ದುನಿಯಾ ವಿಜಯ್ ಅವರ ಸಲಗ ಚಿತ್ರಗಳು ಅಕ್ಟೋಬರ್ 14ರಂದೇ ರಿಲೀಸ್‍ಗೆ ಮುಂದಾಗಿವೆ.

ಆದರೆ ಒಂದೇ ದಿನ ಸಲಗ ಹಾಗೂ ಕೋಟಿಗೊಬ್ಬ 3 ಚಿತ್ರಗಳ ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಬಾಕ್ಸಾಫೀಸ್‍ನಲ್ಲಿ ಮುಖಾಮುಖಿಯಾಗುತ್ತಿದ್ದರೂ ಇದು ಸ್ಟಾರ್ ವಾರ್ ಅಲ್ಲ ಅನ್ನುತ್ತಿದ್ದಾರೆ ಸಲಗ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ಧರಿಸಿರುವ ನಟ ದುನಿಯಾ ವಿಜಯ್. ಮಾತ್ರವಲ್ಲ ಒಂದೇ ದಿನ ಎರಡು ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿರುವ ಕಾರಣ ಪರಭಾಷೆಗಳ ಅಬ್ಬರ ಇರುವುದಿಲ್ಲ. ರಾಜ್ಯಾದ್ಯಂತ ಕನ್ನಡ ಚಿತ್ರಗಳೇ ಪ್ರದರ್ಶನಗೊಳ್ಳಲಿವೆ ಎನ್ನುತ್ತಾರೆ ಅವರು.

ಮತ್ತೊಂದೆಡೆ, ಮೊದಲೇ ನಿರ್ಮಾಪಕರ ನಡುವೆ ಮಾತುಕತೆ ಆಗಿತ್ತು. 15 ದಿನಗಳ ಗ್ಯಾಪ್‍ನಲ್ಲಿ ಬಿಗ್ ಬಜೆಟ್ ಸಿನಿಮಾಗಳನ್ನು ರಿಲೀಸ್ ಮಾಡುವ ಬಗ್ಗೆ ಚರ್ಚೆ ಮಾಡಿದ್ದೆವು. ಹಾಗೇ ಸಲಗ ಅಕ್ಟೋಬರ್ 14ರಂದೇ ರಿಲೀಸ್ ಮಾಡುವ ಬಗ್ಗೆಯೂ ಸ್ಪಷ್ಟತೆ ಇತ್ತು. ಆದರೆ ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು ಹಠಾತ್ತಾಗಿ ಈಗ ಡೇಟ್ ಅನೌನ್ಸ್ ಮಾಡಿದ್ದಾರೆ. ಆದರೆ ನಾವಂತೂ ಹಿಂದೆ ಸರಿಯುವ ಮಾತೇ ಇಲ್ಲ. ಮತ್ತೊಮ್ಮೆ ನಿರ್ಮಾಪಕರೆಲ್ಲರೂ ಸೇರಿ ಚರ್ಚಿಸುತ್ತೇವೆ' ಎನ್ನುತ್ತಾರೆ ಸಲಗ ಚಿತ್ರದ ನಿರ್ಮಾಪಕ ಕೆಪಿ ಶ್ರೀಕಾಂತ್.

ಇದನ್ನು ಓದಿ: Sandalwood: ಒಂದೇ ದಿನ ಸಲಗ, ಕೋಟಿಗೊಬ್ಬ 3 ಬಿಡುಗಡೆ; ಸ್ಟಾರ್ ವಾರ್ ಆತಂಕ, ಈ ಬಗ್ಗೆ ಕಿಚ್ಚ ಸುದೀಪ್, ದುನಿಯಾ ವಿಜಯ್ ಹೇಳಿದ್ದೇನು?

ಇನ್ನು ಸ್ಟಾರ್ ವಾರ್ ಅಂದರೆ ಸಾಮಾನ್ಯವಾಗಿ ಒಂದು ಚಿತ್ರತಂಡ ಮತ್ತೊಂದು ಚಿತ್ರತಂಡದ ಜತೆ ಹಗ್ಗಜಗ್ಗಾಟ ನಡೆಸಬೇಕು, ಇಬ್ಬರೂ ಸ್ಟಾರ್​ಗಗಳ ಅಭಿಮಾನಿಗಳು ಒಬ್ಬರ ಮೇಲೊಬ್ಬರು ಆನ್‍ಲೈನ್‍ನಲ್ಲಿ ಅಬ್ಬರಿಸಿ ಬೊಬ್ಬಿರಿಯಬೇಕು. ಆದರೆ ಇದ್ಯಾವುದಕ್ಕೂ ಕಿಚ್ಚ ಸುದೀಪ್ ಅವರಾಗಲೀ ಅಥವಾ ದುನಿಯಾ ವಿಜಯ್ ಅವರಾಗಲೀ ಆಸ್ಪದ ನೀಡಿಲ್ಲ. ಕಿಚ್ಚ ಸುದೀಪ್ ಸಲಗ ಚಿತ್ರತಂಡಕ್ಕೆ ಹಾಗೂ ಚೊಚ್ಚಲ ಬಾರಿಗೆ ನಿರ್ದೇಶಿಸಿರುವ ದುನಿಯಾ ವಿಜಯ್ ಅವರಿಗೆ ಟ್ವೀಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಸಲಗ ಚಿತ್ರತಂಡ ಕೂಡ ಅವರಿಗೆ ಧನ್ಯವಾದ ತಿಳಿಸಿ, ಅವರಿಗೂ ಶುಭಾಶಯ ತಿಳಿಸಿದೆ. ಅದರ ಬೆನ್ನಲ್ಲೇ ಸಂಜೆಯ ಹೊತ್ತಿಗೆ ಕಿಚ್ಚ ಸುದೀಪ್ ಕೋಟಿಗೊಬ್ಬ 3 ಸಿನಿಮಾ ಇದೇ ದಸರಾಗೆ ತೆರೆಗೆ ಬರುವುದಾಗಿಯೂ ಸುದ್ದಿ ಬ್ರೇಕ್ ಮಾಡಿದ್ದಾರೆ.

https://twitter.com/KicchaSudeep/status/1442108735501914118?s=19

ಒಟ್ಟಾರೆ ಒಂದೆಡೆ ಲಾಕ್‍ಡೌನ್ ಅನ್‍ಲಾಕ್ ಆಯಿತಲ್ಲಾ, ಇನ್ನು ಸ್ಯಾಂಡಲ್‍ವುಡ್‍ಗೆ ಒಳ್ಳೇ ಟೈಮ್ ಬಂತು ಎನ್ನುತ್ತಿರುವಾಗಲೇ ಬಿಗ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‍ನಲ್ಲಿ ಬಿಗ್ ಫೈಟ್‍ಗೆ ಸಜ್ಜಾಗುತ್ತಿವೆ. ಅದರ ನಡುವೆಯೇ ಇದೂ ಕೂಡ ಒಳ್ಳಯ ಬೆಳವಣಿಗೆಯೇ ಎಂದು ಎರಡೂ ಚಿತ್ರತಂಡಗಳೂ ಆತ್ಮವಿಶ್ವಾಸದಿಂದ ಇದ್ದಾರೆ. ಅದೇನೇ ಇರಲಿ, ದಸರಾ ಹಬ್ಬ ಯಾರಿಗೆ ಸಿಹಿ ನೀಡುತ್ತೋ ಕುತೂಹಲ ಮೂಡಿಸಿದೆ.
Published by:HR Ramesh
First published: