Prabhas: ಆದಿಪುರುಷ್​ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿ ಇವರೇ ಅಂತೆ..!

ಪ್ರಭಾಸ್

ಪ್ರಭಾಸ್

ಇತ್ತೀಚೆಗಷ್ಟೆ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್ ಹಾಗೂ ಮೋಷನ್​ ಪೋಸ್ಟರ್ ರಿಲೀಸ್​ ಮಾಡಿದ್ದು, ಪ್ರಭಾಸ್ ಅಭಿಮಾನಿಗಳು ಅದನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು. ಇನ್ನು ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿ ಯಾರು ಅನ್ನೋ ಮಾತು ಈಗ ಚರ್ಚೆಯಲ್ಲಿದೆ. ಈ ಹಿಂದೆ ಪ್ರಭಾಸ್​ ಜೊತೆ ಕೀರ್ತಿ ಸುರೇಶ್​ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಬೇರೆ ನಟಿಯ ಹೆಸರು ಕೇಳಿ ಬರುತ್ತಿದೆ.

ಮುಂದೆ ಓದಿ ...
  • Share this:

ಬಾಲಿವುಡ್​ನ ಖ್ಯಾತ ನಿರ್ದೇಶಕ ಓಂ ರಾವತ್​ ಹಾಗೂ ಬಾಹುಬಲಿ ಪ್ರಭಾಸ್​ ಅವರ ಕಾಂಬಿನೇಷನ್​ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ ಆದಿಪುರುಷ್​. ಈ ಚಿತ್ರದಲ್ಲಿ ಪ್ರಭಾಸ್​ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾಗಿ ನಿರ್ದೇಶಕ ಓಂ ರಾವತ್​ ಹೇಳಿಕೆ ನೀಡಿದ್ದಾರೆ. 


ಇತ್ತೀಚೆಗಷ್ಟೆ ಆದಿಪುರುಷ್​ ಚಿತ್ರದ ಟೈಟಲ್​ ಪೋಸ್ಟರ್ ಹಾಗೂ ಮೋಷನ್​ ಪೋಸ್ಟರ್ ರಿಲೀಸ್​ ಮಾಡಿದ್ದು, ಪ್ರಭಾಸ್ ಅಭಿಮಾನಿಗಳು ಅದನ್ನು ಟ್ವಿಟರ್​ನಲ್ಲಿ ಟ್ರೆಂಡ್​ ಮಾಡಿದ್ದರು. ಇನ್ನು ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿ ಯಾರು ಅನ್ನೋ ಮಾತು ಈಗ ಚರ್ಚೆಯಲ್ಲಿದೆ. ಈ ಹಿಂದೆ ಪ್ರಭಾಸ್​ ಜೊತೆ ಕೀರ್ತಿ ಸುರೇಶ್​ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಬೇರೆ ನಟಿಯ ಹೆಸರು ಕೇಳಿ ಬರುತ್ತಿದೆ.


First Look poster of Prabhas as Lord Ram in Om Rauts Adipurush movie
ಫ್ಯಾನ್​ ಮೇಡ್​ ಪೋಸ್ಟರ್​ನಲ್ಲಿ ರಾಮನಾಗಿ ಕಾಣಿಸಿಕೊಂಡ ಪ್ರಭಾಸ್​


ಬಾಲಿವುಡ್​ನಲ್ಲಿ ಈಗಾಗಲೇ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡಿರುವ ನಟಿ ಕಿಯಾರಾ ಈ ಸಲ ಪ್ರಭಾಸ್​ಗೆ ಜೋಡಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಟಾಲಿವುಡ್​ನಲ್ಲೂ ಕಿಯಾರಾ ಅವರ ಪರಿಚಯವಿದೆ. ಈಕಾರಣದಿಂದಲೇ ಕಿಯಾರಾ ಈ ಬಹುಭಾಷಾ ಸಿನಿಮಾಗೆ ಕಿಯಾರಾ ಉತ್ತಮ ಆಯ್ಕೆ ಎಂದು ಚಿತ್ರತಂಡ ನಿರ್ಧರಿಸಿದೆಯಂತೆ.


Kiara Advani donning an unbuttoned denim jumpsuit looks fresh and steamy on cosmopolitan magazine
ಕಿಯಾರ


ಇನ್ನು, ರಾಮನ ಪಾತ್ರಕ್ಕಾಗಿ ಪ್ರಭಾಸ್​ ಸಾಕಷ್ಟು ವರ್ಕೌಟ್​ ಮಾಡುತ್ತಿದ್ದು, ತಮ್ಮ ದೇಹದ ಆಕಾರದ ಮೇಲೆ ತುಂಬಾ ಕೆಲಸ ಮಾಡುತ್ತಿದ್ದಾರಂತೆ. ಜೊತೆಗೆ ಬಿಲ್ಲುವಿದ್ಯೆ ಸಹ ಕಲಿಯಲಿದ್ದಾರೆ ಎಂದು ನಿರ್ದೇಶಕ ಓಂ ರಾವತ್​ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.


kiara advani says no to act with mahesh babu here are the detail
ಕಿಯಾರಾ ಹಾಗೂ ಮಹೇಶ್​ ಬಾಬು


ಹಿಂದಿ, ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ ಇತರೆ ಅಂತರರಾಷ್ಟ್ರೀಯ ಭಾಷೆಗಳಲ್ಲಿ ಈ ಸಿನಿಮಾ ತೆರೆಕಾಣಲಿದ್ದು, 3ಡಿಯಲ್ಲಿ ರಿಲೀಸ್ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ. ಪ್ರಭಾಸ್​ ಅಭಿನಯದ ಆದಿಪುರುಷ್​ ಮುಂದಿನ ವರ್ಷ ಜನವರಿಯಿಂದ ಸೆಟ್ಟೇರಲಿದೆ.




ರಾಧಾಕೃಷ್ಣ ನಿರ್ದೇಶನದ ರಾಧೆ ಶ್ಯಾಮ್​ ಸಿನಿಮಾದಲ್ಲಿ ಪ್ರಭಾಸ್​ ಜೊತೆ ಪೂಜೆ ಹೆಗ್ಡೆ ನಟಿಸಿದ್ದು, ಇದು ಕೊರೋನಾ ಕಾರಣದಿಂದಾಗಿ ಚಿತ್ರೀಕರಣ ನಿಂತಿದೆ. ಸೆಪ್ಟೆಂಬರ್​ನಲ್ಲಿ ಮತ್ತೆ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ರಾಧೆ ಶ್ಯಾಮ್​ ನಂತರ ಪ್ರಭಾಸ್ ಹಾಗೂ ದೀಪಿಕಾ ಪಡುಕೋಣೆ ಅಭಿನಯಿಸಲಿರುವ ತ್ರಿಭಾಷೀಯ ಚಿತ್ರ ಸೆಟ್ಟೇರಲಿದ್ದು, ಇದನ್ನು ನಾಗ್​ ಅಶ್ವಿನ್​ ನಿರ್ದೇಶನ ಮಾಡಲಿದ್ದಾರೆ.

Published by:Anitha E
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು