ಡಿಯರ್ ರಶ್ಮಿಕಾಗೆ ಕೈ ಕೊಟ್ರಾ ಇಳಯ ದಳಪತಿ ವಿಜಯ್..!

Thalapathy 64: ಇನ್ನೂ ಟೈಟಲ್ ಫಿಕ್ಸ್ ಆಗದ ಈ ಚಿತ್ರದಲ್ಲಿ  ಮಲಯಾಳಂನ ಅಂಗಮಾಲಿ ಡೈರೀಸ್ ಸಿನಿಮಾ ನಾಯಕ ಆ್ಯಂಟೋನಿ ವರ್ಗೀಸ್ ಇಳಯ ದಳಪತಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಕಾಣಿಸಲಿದ್ದಾರೆ.

zahir | news18-kannada
Updated:August 7, 2019, 10:11 PM IST
ಡಿಯರ್ ರಶ್ಮಿಕಾಗೆ ಕೈ ಕೊಟ್ರಾ ಇಳಯ ದಳಪತಿ ವಿಜಯ್..!
ವಿಜಯ್-ರಶ್ಮಿಕಾ
  • Share this:
ಇಳಯ ದಳಪತಿ ವಿಜಯ್ ಅಭಿನಯದ 64ನೇ ಚಿತ್ರಕ್ಕೆ ನಾಯಕಿಯಾಗಿ ಕಿಯರಾ ಅಡ್ವಾಣಿ ಆಯ್ಕೆಯಾಗುವುದು ಬಹುತೇಕ ಖಚಿತ. 'ಭರತ್ ಅನೆ ನೇನು' ಚಿತ್ರದ ಮೂಲಕ ಟಾಲಿವುಡ್ ಪ್ರವೇಶಿಸಿದ್ದ ಬಾಲಿವುಡ್​ ಸುಂದರಿ ಇದರೊಂದಿಗೆ ಕಾಲಿವುಡ್​ಗೂ ಕಾಲಿಡಲಿರುವುದು ಪಕ್ಕಾ ಆದಂತಾಯಿತು. ಇದರ ನಡುವೆ ಇಲ್ಲಿ ಚರ್ಚೆಗೆ ಕಾರಣವಾಗಿರುವುದು  ಸ್ಯಾಂಡಲ್​ವುಡ್​ ಸಾನ್ವಿ ರಶ್ಮಿಕಾ ಮಂದಣ್ಣ ಅವರ ಹೆಸರು.

ಏಕೆಂದರೆ ಈ ಹಿಂದೆಯೇ ವಿಜಯ್ ಚಿತ್ರದಲ್ಲಿ ನಾಯಕಿಯಾಗುತ್ತಿರುವುದಾಗಿ ಡಿಯರ್ ರಶ್ಮಿಕಾ ಹೇಳಿಕೊಂಡಿದ್ದರು. ಆದರೀಗ 'ಮಹಾನಗರಂ' ಖ್ಯಾತಿಯ ನಿರ್ದೇಶಕ ಲೊಕೇಶ್ ಕನಗರಾಜ್ ಕಿಯರಾ ಹೆಸರನ್ನು ಫೈನಲ್ ಮಾಡಿದ್ದಾರಂತೆ. ಆಗಿದ್ರೆ ಈ ಹಿಂದೆ ವಿಜಯ್ ಸ್ಟೈಲ್​ನಲ್ಲಿ ನಿಂತು ರಶ್ಮಿಕಾ ನೀಡಿದ ಪೋಸ್ ಎಲ್ಲವೂ ವ್ಯರ್ಥವಾಯಿತೇ ಎಂಬ ಪ್ರಶ್ನೆಯೊಂದು ಅಭಿಮಾನಿಗಳಲ್ಲಿ ಹುಟ್ಟಿಕೊಂಡಿದೆ.

ವಿಜಯ್-ರಶ್ಮಿಕಾ


ಕೆಲ ತಿಂಗಳ ಹಿಂದೆಯಷ್ಟೇ ನಟ ಕಾರ್ತಿ ಚಿತ್ರಕ್ಕೆ ನಾಯಕಿಯಾಗಿ ರಶ್ಮಿಕಾ ತಮಿಳಿಗೆ ಕಾಲಿಟ್ಟಿದ್ದರು. ಇದರ ಬೆನ್ನಲ್ಲೇ ಇಳಯ ದಳಪತಿ ಮುಂದಿನ ಚಿತ್ರಕ್ಕೂ ನಾಯಕಿಯಾಗಲಿದ್ದಾರೆಂಬ ಸುದ್ದಿಗಳು ಕೇಳಿ ಬಂದಿದ್ದವು. ಈ ಸುದ್ದಿಯನ್ನು ಪುಷ್ಠೀಕರಿಸುವಂತೆ ರಶ್ಮಿಕಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದರು.

ಇನ್ನೇನು ಚಿತ್ರದ ತಾರಾಗಣ ಫೈನಲ್ ಆಗಲಿದೆ ಎನ್ನುವಷ್ಟರಲ್ಲಿ ಇದೀಗ 'ಧೋನಿ' ಚಿತ್ರದ ನಾಯಕಿ ಕಿಯರಾ ಹೆಸರು ಸ್ವಲ್ಪ ಜೋರಾಗಿಯೇ ಕೇಳಿ ಬಂದಿದೆ. ಇದರೊಂದಿಗೆ ವಿಜಯ್ 64 ಚಿತ್ರದಿಂದ ರಶ್ಮಿಕಾ ಔಟ್ ಎಂಬ ಗುಲ್ಲೆದ್ದಿದೆ.

ನಿರ್ದೇಶಕ ಲೊಕೇಶ್ 'ಭರತ್ ಅನೆ ನೇನು' ಚಿತ್ರದಲ್ಲಿ ಕಿಯರಾ ಅಭಿನಯವನ್ನು ಕಂಡು ವಿಜಯ್​ಗೆ ಸರಿಯಾದ ಜೋಡಿ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾಗಿ ರಶ್ಮಿಕಾರನ್ನು ಕೈ ಬಿಟ್ಟು ಕಿಯರಾರನ್ನು ಆಯ್ಕೆ ಮಾಡಿದ್ದಾರೆ. ಇದಕ್ಕೆ ನಟ ವಿಜಯ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಕಿಯರಾ-ವಿಜಯ್
ಈ ಹಿಂದೆ ಕೂಡ ರಶ್ಮಿಕಾ, ರಾಶಿ ಖನ್ನಾ ಹಾಗೂ ರಕುಲ್ ಪ್ರೀತ್ ಸಿಂಗ್ ಹೆಸರುಗಳು ವಿಜಯ್ 64 ಚಿತ್ರದೊಂದಿಗೆ ತಳುಕು ಹಾಕಿಕೊಂಡಿತ್ತು. ಇದೀಗ ಇವರಿಬ್ಬರನ್ನು ಸೈಡ್​ಗೆ ಸರಿಸಿ ಬಿಗ್ ಬಜೆಟ್ ಚಿತ್ರಕ್ಕೆ ಏಕಾಏಕಿ ಕಿಯರಾ ಎಂಟ್ರಿಯಾಗಿ ಕಾಲಿವುಡ್ ನಟಿಮಣಿಯರ ಹುಬ್ಬೇರುವಂತೆ ಮಾಡಿದ್ದಾರೆ.

ಸದ್ಯ ವಿಜಯ್ 'ಮೆರ್ಸಲ್' ನಿರ್ದೇಶಕ ಅಟ್ಲಿ ಆ್ಯಕ್ಷನ್ ಕಟ್ ಹೇಳುತ್ತಿರುವ 'ಬಿಗಿಲ್' ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದ ಕೊನೆಯ ಹಂತದ ಚಿತ್ರೀಕರಣದ ವೇಳೆ 64ನೇ ಸಿನಿಮಾ ಸೆಟ್ಟೇರುವ ಸಾಧ್ಯತೆಯಿದೆ. ಹಾಗೆಯೇ ಇನ್ನೂ ಟೈಟಲ್ ಫಿಕ್ಸ್ ಆಗದ ಈ ಚಿತ್ರದಲ್ಲಿ  ಮಲಯಾಳಂನ 'ಅಂಗಮಾಲಿ ಡೈರೀಸ್' ಸಿನಿಮಾ ನಾಯಕ ಆ್ಯಂಟೋನಿ ವರ್ಗೀಸ್ ಇಳಯ ದಳಪತಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಕಾಣಿಸಲಿದ್ದಾರೆ.

ಆ್ಯಂಟೋನಿ ವರ್ಗೀಸ್


ಇನ್ನು ಕಾಲಿವುಡ್​ನ​ ಗಲ್ಲಿ ಗಾಸಿಪ್​ಗಳ ಪ್ರಕಾರ ವಿಜಯ್​ ಅವರ 64ನೇ  ಚಿತ್ರದಲ್ಲಿ ಇಬ್ಬರು ನಾಯಕಿಯರಂತೆ. ಅದರಲ್ಲೊಂದು ಕಿಯರಾ ಅಡ್ವಾಣಿ ಪಾಲಾಗಿದೆ. ಇನ್ನೊಂದು ಯಾರಿಗೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎನ್ನಲಾಗಿದೆ. ಅಂದರೆ ಈ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ ಎಂಬ ಮಾತುಗಳು ಸಹ ಕಾಲಿವುಡ್​ ಕಡಲ ಕಿನಾರೆಯಲ್ಲಿ ಹರಿದಾಡುತ್ತಿದೆ. ಆ ಪಾತ್ರವಾದರೂ ನಮ್ಮ ಡಿಯರ್ ರಶ್ಮಿಕಾಗೆ ಸಿಗಲಿ ಎಂಬುದು ಸದ್ಯ ಕರುನಾಡ ಕ್ರಶ್ ಅಭಿಮಾನಿಗಳ ಅಂಬೋಣ.
First published:August 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ