ನವವಿವಾಹಿತರಾದ ಕಿಯಾರಾ ಅಡ್ವಾಣಿ (Kiara Advani) ಮತ್ತು ಸಿದ್ಧಾರ್ಥ್ ಮಲ್ಹೋತ್ರಾ (Siddharth Malhotra) ಜೈಸಲ್ಮೇರ್‌ನಲ್ಲಿ ನಡೆದ ತಮ್ಮ ಮದುವೆಯ ಮೊದಲ ವೀಡಿಯೊವನ್ನು (Video) ಶೇರ್ ಮಾಡಿದ್ದಾರೆ. ಡ್ರೀಮಿ ವೆಡ್ಡಿಂಗ್ (Dreamy Wedding) ಅಂದರೆ ಹೇಗಿರುತ್ತೆ ಎನ್ನುವುದು ಈ ವಿಡಿಯೋದಲ್ಲಿ ಕಾಣಬಹುದು. ಇದು ಫ್ಯಾಂಟಸಿ ವೆಡ್ಡಿಂಗ್ ವೈಬ್ಸ್ (Wedding Vibes) ಕೊಡುತ್ತದೆ. ವಧು ಕಿಯಾರಾ ಅಡ್ವಾಣಿ ಮದುವೆ ಮಂಟಪ ಪ್ರವೇಶಿಸುವುದರೊಂದಿಗೆ ವೀಡಿಯೊ ಪ್ರಾರಂಭವಾಗುತ್ತದೆ. ರಾಯಲ್ ಸ್ಟೈಲ್ನಲ್ಲಿ (Royal Style) ಕಿಯಾರಾ ಎಂಟ್ರಿ ಕೊಟ್ಟಿದ್ದಾರೆ. ಕಿಯಾರಾ ಮತ್ತು ಸಿದ್ಧಾರ್ಥ್‌ನ 2021 ರ ಸಿನಿಆ ಶೆರ್ಷಾ ಚಿತ್ರದ ರಾಂಜಾ ಹಾಡಿಗೆ ನಟಿ ಡ್ಯಾನ್ಸ್ (Dance) ಮಾಡಿದ್ದಾರೆ. ಅಲ್ಲದೆ, ಕಿಯಾರಾ ಅಡ್ವಾಣಿಯನ್ನು ನೋಡಿದ ಸಿದ್ಧಾರ್ಥ್ ಮಲ್ಹೋತ್ರಾ ಅವರ ಪ್ರತಿಕ್ರಿಯೆ ಇನ್ನೂ ಫನ್ನಿಯಾಗಿದೆ.
ವಧು ಕುಣಿಯುತ್ತಾ ಬರುವಾಗ ಸಿದ್ಧಾರ್ಥ್ ಮೆಲ್ಲನೆ ತಮ್ಮ ವಾಚ್ ನೋಡಿಕೊಳ್ಳುತ್ತಾರೆ. ಕಿಯಾರಾ ಮುದ್ದಾಗಿ ಕಾಣಿಸುವ ತನ್ನ ನೆಚ್ಚಿನ ವರನ ಲುಕ್ ಅನ್ನು ಪ್ರೀತಿಯಿಂದ ಪ್ರಶಂಸಿಸುತ್ತಾರೆ. ಇದೆಲ್ಲವೂ ಕನಸಿನ ವಿವಾಹದಂತೆಯೇ ವಿಡಿಯೋದಲ್ಲಿ ದಾಖಲಾಗಿದೆ.
ವರಮಾಲೆ ಬದಲಾಯಿಸಿ ಲಿಪ್ ಲಾಕ್
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ವರಮಾಲೆ ಬದಲಾಯಿಸಿಕೊಂಡು ತಬ್ಬಿಕೊಂಡು ಲಿಪ್ಲಾಕ್ ಮಾಡುತ್ತಾರೆ. ದಂಪತಿಗಳು ತಮ್ಮ ವಿವಾಹದ ದಿನ ಕೈಗಳನ್ನು ಮಡಚಿ ಪರಸ್ಪರ ವಂದಿಸುವ ಫೋಟೋ ಶೇರ್ ಮಾಡಿದ್ದರು.
ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ವಿವಾಹವಾದ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಆರತಕ್ಷತೆಗಾಗಿ ದೆಹಲಿಗೆ ಬಂದರು. ಅವರು ದೆಹಲಿಯಲ್ಲಿ ಕಾಣಿಸಿಕೊಂಡಾಗ ಮ್ಯಾಚಿಂಗ್ ಕೆಂಪು ಬಣ್ಣದ ಉಡುಗೆಗಳನ್ನು ಧರಿಸಿದ್ದರು.
ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಹೀಗೆ ಬರೆದಿದ್ದಾರೆ. ಈಗ ನಮ್ಮ ಪರ್ಮನೆಂಟ್ ಬುಕ್ಕಿಂಗ್ ಆಗಿದೆ. ನಮ್ಮ ಮುಂದಿನ ಪಯಣಕ್ಕೆ ನಿಮ್ಮೆಲ್ಲರ ಆಶಿರ್ವಾದ ಬೇಕು ಎಂದಿದ್ದಾರೆ.
View this post on Instagram
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರೂ ಮುಂದೆ ತುಂಬಾ ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ನಟಿ ಕೊನೆಯದಾಗಿ ಧರ್ಮ ಪ್ರೊಡಕ್ಷನ್ಸ್‌ನ ಗೋವಿಂದ ನಾಮ್ ಮೇರಾ ಚಿತ್ರದಲ್ಲಿ ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಜೊತೆ ನಟಿಸಿದ್ದರು.
ಇದನ್ನೂ ಓದಿ: Kiara Advani Lehanga: ಕಿಯಾರಾ ಲೆಹೆಂಗಾದಲ್ಲಿ ರೋಮನ್ ವಾಸ್ತುಶಿಲ್ಪ! ಮದುವೆ ಉಡುಗೆಯಲ್ಲಿರೋ ಪ್ರೀತಿಯ ರಹಸ್ಯವೇನು?
ಅವರು ಕಳೆದ ವರ್ಷ ನೀತು ಕಪೂರ್, ಅನಿಲ್ ಕಪೂರ್ ಮತ್ತು ವರುಣ್ ಧವನ್ ಸಹ-ನಟರಾಗಿ ಜಗ್ಗುಗ್ ಜೀಯೋದಲ್ಲಿ ನಟಿಸಿದ್ದಾರೆ. ಅವರು ಮುಂದಿನ ಪ್ರಾಜೆಕ್ಟ್ನಲ್ಲಿ ರಾಮ್ ಚರಣ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಅವರು ಸತ್ಯಪ್ರೇಮ್ ಕಿ ಕಥಾದಲ್ಲಿ ಕಾರ್ತಿಕ್ ಆರ್ಯನ್ ಜೊತೆ ನಟಿಸಲಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಅವರು ರಶ್ಮಿಕಾ ಮಂದಣ್ಣ ಅವರೊಂದಿಗೆ ಥ್ರಿಲ್ಲರ್ ಮಿಷನ್ ಮಜ್ನುದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರ ಕಳೆದ ತಿಂಗಳು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಮುಂದೆ ಅವರು ಯೋಧಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ನಟ ರೋಹಿತ್ ಶೆಟ್ಟಿ ಅವರ ಇಂಡಿಯನ್ ಪೊಲೀಸ್ ಫೋರ್ಸ್‌ನಲ್ಲಿ ಶಿಲ್ಪಾ ಶೆಟ್ಟಿ ಅವರೊಂದಿಗೆ ನಟಿಸಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ