• Home
  • »
  • News
  • »
  • entertainment
  • »
  • Kiara Advani - Sidharth Malhotra: ಮುಂದಿನ ವರ್ಷ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ; ಬಿ ಟೌನ್​ನಲ್ಲಿ ಹರಿದಾಡುತ್ತಿದೆ ಸುದ್ದಿ

Kiara Advani - Sidharth Malhotra: ಮುಂದಿನ ವರ್ಷ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆ; ಬಿ ಟೌನ್​ನಲ್ಲಿ ಹರಿದಾಡುತ್ತಿದೆ ಸುದ್ದಿ

ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾನಿ

ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾನಿ

ಈ ಮುದ್ದಾದ ಜೋಡಿ ಈಗ ನಿಜ ಜೀವನದಲ್ಲಿ ಗಂಡ-ಹೆಂಡತಿಯಾಗಲಿದ್ದಾರೆ ಅಂತ ಸುದ್ದಿಗಳು ಹರಿದಾಡುತ್ತಿವೆ

  • Trending Desk
  • Last Updated :
  • Bangalore [Bangalore], India
  • Share this:

‘ಶೆರ್ಶಾಹ್’ದಲ್ಲಿ ಮೋಡಿ ಮಾಡಿಎದ  ನಟ ಸಿದ್ಧಾರ್ಥ್ ಮಲ್ಹೋತ್ರಾ (Sidharth Malhotra) ಮತ್ತು ನಟಿ ಕಿಯಾರಾ ಅಡ್ವಾಣಿ (Kiara Advani)  ನಡುವಿನ ಆ ಆನ್‌ಸ್ಕ್ರೀನ್ ಕೆಮಿಸ್ಟ್ರಿ ನೋಡಿದ ಅಭಿಮಾನಿಗಳು ಇವರು ನಿಜ ಜೀವನದಲ್ಲಿ ಕೂಡ ಜೋಡಿ ಆಗಲಿ ಎಂದು ಆಶಿಸಿದ್ದರು. ಇದಕ್ಕೆ ತಕ್ಕಂತೆ ಇವರ ನಡುವಿನ ಒಡನಾಟ ಕೂಡ ಪುಷ್ಟಿ ನೀಡಿತ್ತು. ಬಿಟೌನ್​ ಗಲ್ಲಿ ಕೂಡ ಇದೇ ಮಾತು ಹರಿದಾಡುತ್ತಿತ್ತು. ಈ ಮುದ್ದಾದ ಜೋಡಿ ಈಗ ನಿಜ ಜೀವನದಲ್ಲಿ ಗಂಡ-ಹೆಂಡತಿಯಾಗಲಿದ್ದಾರೆ ಅಂತ ಸುದ್ದಿಗಳು ಹರಿದಾಡುತ್ತಿವೆ ನೋಡಿ. ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ರಹಸ್ಯವಾಗಿಡುವಲ್ಲಿ ಈ ಜೋಡಿ ಯಶಸ್ವಿಯಾಗಿದ್ದರು ಅಂತ ಹೇಳಬಹುದು.


ಸಿದ್ದಾರ್ಥ್ ಮತ್ತು ಕಿಯಾರಾ ಇಬ್ಬರು ಉತ್ತಮ ಸ್ನೇಹಿತರಿಗಿಂತಲೂ ಹೆಚ್ಚಂತೆ!


ಇತ್ತೀಚೆಗೆ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರಲ್ಲಿ ಬಾಲಿವುಡ್ ನಿರ್ಮಾಪಕ ಮತ್ತು ಶೋ ಅನ್ನು ನಡೆಸಿಕೊಡುವ ಹೋಸ್ಟ್ ಕರಣ್ ಜೋಹರ್ ಅವರು ಈ ಇಬ್ಬರು ನಟ ಮತ್ತು ನಟಿ 'ಉತ್ತಮ ಸ್ನೇಹಿತರು' ಎಂಬುವುದಕ್ಕಿಂತಲೂ ಹೆಚ್ಚಿನ ಸ್ನೇಹ ಇದೆ ಅಂತ ಒಪ್ಪಿಕೊಳ್ಳುವಂತೆ ಮಾಡಿದರು.


ಇದನ್ನೂ ಓದಿ:  Rocketry Movie: ಓಟಿಟಿಯಲ್ಲಿ ರಾಕೆಟ್ರಿ ಸಿನಿಮಾ, ಸ್ಪೆಷಲ್​ ಸ್ಟ್ರೀಮಿಂಗ್ ಡೇಟ್​ ಅನೌನ್ಸ್​ !


2018 ರಲ್ಲಿ ‘ಲಸ್ಟ್ ಸ್ಟೋರಿಸ್’ ನ ರ್‍ಯಾಪ್ ಅಪ್ ಪಾರ್ಟಿಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಮೊದಲ ಬಾರಿಗೆ ಭೇಟಿಯಾದರು. ಅವರು ಯಾವ ಸಮಯದಲ್ಲಿ ಸ್ನೇಹಿತರಾದರು. ಸಂಬಂಧ ಗಟ್ಟಿಯಾಯಿತು ಎಂಬುದರ ಬಗ್ಗೆ ಹೆಚ್ಚು ಯಾರಿಗೂ ತಿಳಿದಿಲ್ಲ ಅಂತ ಹೇಳಬಹುದು. ಈ ಜೋಡಿಯ ತೆರೆಯ ಮೇಲಿನ ಪ್ರೀತಿಯನ್ನು ಜನರು ‘ಶೆರ್ಶಾಹ್’ ಚಿತ್ರದಲ್ಲಿ ನೋಡಿ ಹೆಚ್ಚು ಇಷ್ಟಪಟ್ಟರು ಅಂತ ಹೇಳಿದರೆ ತಪ್ಪಾಗುವುದಿಲ್ಲ.


ಸುದ್ದಿ ರಿವೀಲ್​ ಮಾಡಿದ ಕಿಯಾರಾ


ಶಾಹಿದ್ ಕಪೂರ್ ಮತ್ತು ಕರಣ್ ಜೋಹರ್ ಅವರು ಕೂಡ ಇವರ ವಿವಾಹದ ಬಗ್ಗೆ ತುಂಬಾ ಉತ್ಸುಕರಾಗಿದ್ದರು  ಕಾಫಿ ವಿತ್ ಕರಣ್ ಶೋ ನಲ್ಲಿ ಅವರ ಸಂಭಾಷಣೆಯ ಸಮಯದಲ್ಲಿ ಕಿಯಾರಾ ಅವರು ಖುದ್ದಾಗಿ ತಾವು ಮದುವೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿದರು.


ಈ ಜೋಡಿಯ ಬಗ್ಗೆ ಏನ್ ಹೇಳುತ್ತೇ ಆ ವರದಿ?


ಈಗ, ಬಾಲಿವುಡ್ ಲೈಫ್ ನ ವರದಿಯ ಪ್ರಕಾರ, ಮದುವೆಯನ್ನು ರಹಸ್ಯವಾಗಿ ಯೋಜಿಸಲಾಗುತ್ತಿದೆ! ಸಿದ್ಧಾರ್ಥ್ ಮತ್ತು ಕಿಯಾರಾ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದಾರೆ. ಅವರು ತಮ್ಮ ಸಂಬಂಧದ ಪ್ರತಿಯೊಂದು ಹಂತವನ್ನು ತುಂಬಾನೇ ಆನಂದಿಸುತ್ತಿದ್ದಾರೆ. ಈಗ ಅವರಿಬ್ಬರು ಮದುವೆಯಾಗಲು ಬಯಸುತ್ತಿದ್ದಾರೆ ಎಂದು ಖಚಿತವಾಗಿದೆ.


ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋ ನ ಸೀಸನ್ 7 ರಲ್ಲಿ ಎಲ್ಲರೂ ಅವರ ಸಂಬಂಧದ ಬಗ್ಗೆ ತಿಳಿದುಕೊಂಡರು, ಕರಣ್ ಗೆ ತುಂಬಾನೇ ಧನ್ಯವಾದಗಳು. ನಾವೂ ಕೂಡ ಅವರನ್ನು ಮದುವೆಗೆ ಆಹ್ವಾನಿಸುತ್ತಾರೆ ಅಂತ ಭಾವಿಸುತ್ತೇವೆ" ಎಂದು ವರದಿ ಹೇಳಿದೆ.


ಇವರಿಬ್ಬರ ಮದುವೆ ದೆಹಲಿಯಲ್ಲಿ 2023 ರಲ್ಲಿ ನಡೆಯುತ್ತಂತೆ!


"ಸಿದ್ಧಾರ್ಥ್ ಮತ್ತು ಕಿಯಾರಾ ತಮ್ಮ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ, ಏಕೆಂದರೆ ಅವರು ಪರಸ್ಪರರ ಬಗ್ಗೆ ಖಚಿತವಾಗಿದ್ದಾರೆ" ಎಂದು ಈ ಎಲ್ಲಾ ಬೆಳವಣಿಗೆಯನ್ನು ತುಂಬಾನೆ ಹತ್ತಿರದಿಂದ ನೋಡಿದವರು ಹೇಳಿದ್ದಾರೆ.


ಮುಂದಿನ ವರ್ಷ ಏಪ್ರಿಲ್ ನಲ್ಲಿ ಈ ಜೋಡಿಯು ಮದುವೆಯಾಗಬಹುದು. ಇದು ಬಹಳ ಹತ್ತಿರದವರನ್ನು ಒಳಗೊಂಡಿರುವ ಮದುವೆ ಸಮಾರಂಭವಾಗಿರುತ್ತದೆ.


ಕುಟುಂಬ ಸಮ್ಮುಖದಲ್ಲೇ ನಡೆಯಲಿದೆ ಮದುವೆ


ವಾಸ್ತವವಾಗಿ, ಬಾಲಿವುಡ್ ನಿಂದ ಯಾರನ್ನೂ ಮದುವೆಗೆ ಆಹ್ವಾನಿಸಲಾಗುವುದಿಲ್ಲ, ಏಕೆಂದರೆ ಇದು ಹೆಚ್ಚಾಗಿ ಸಿದ್ಧಾರ್ಥ್ ಅವರ ಕುಟುಂಬದವರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ದೆಹಲಿಯಲ್ಲಿ ನಡೆಯಲಿದೆ.


ಇದನ್ನೂ ಓದಿ: Adam Levine: ಪತ್ನಿಗೆ ತಿಳಿಯದಂತೆ ಇನ್ನೊಂದು ಸಂಬಂಧ ಇಟ್ಕೊಂಡಿದ್ರಾ ಗಾಯಕ ಆಡಮ್ ಲೆವಿನ್? ಇಲ್ಲಿದೆ ಮಾಹಿತಿ


ಕಿಯಾರಾ ಮತ್ತು ಸಿದ್ದಾರ್ಥ್ ಮೊದಲು ನೋಂದಾಯಿತ ವಿವಾಹವನ್ನು ಮಾಡಿಕೊಳ್ಳುತ್ತಾರೆ. ನಂತರ ಅವರು ಕಾಕ್ಟೈಲ್ ಪಾರ್ಟಿಯನ್ನು ಇಟ್ಟುಕೊಳ್ಳಬಹುದು.


ಆದರೆ ದೆಹಲಿಯಲ್ಲಿ ಎಲ್ಲವೂ ನಡೆಯುತ್ತಿರುವುದರಿಂದ ಸೆಲೆಬ್ರಿಟಿಗಳನ್ನು ರಿಸೆಪ್ಷನ್ ಪಾರ್ಟಿಗೆ ಆಹ್ವಾನಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಇನ್ನೂ ತಿಳಿದಿಲ್ಲ" ಎಂದು ಕೆಲ ಮೂಲಗಳಿಂದ ತಿಳಿದುಬಂದಿದೆ.

Published by:Seema R
First published: