ಸಾಮಾನ್ಯವಾಗಿ ಈ ಬಾಲಿವುಡ್ (Bollywood) ನಟರು ಎಲ್ಲೆ ಹೋದರೂ ಅವರನ್ನು ಹಿಂಬಾಲಿಸಿಕೊಂಡು ಹೋಗಿ ಫೋಟೋ ಕ್ಲಿಕ್ಕಿಸುವುದು ಈ ಸಿನೆಮಾ ಛಾಯಾಗ್ರಾಹಕರ ಕೆಲಸವಾಗಿರುತ್ತದೆ. ಮತ್ತು ಎಷ್ಟೋ ಬಾರಿ ಹೀಗೆ ನಟ ಮತ್ತು ನಟಿಯರನ್ನು ಹಿಂಬಾಲಿಸಿಕೊಂಡು ಹೋಗಿ ಅವರ ಒಂದು ಫೋಟೋವನ್ನು ಸೆರೆ ಹಿಡಿಯಲು ತುಂಬಾನೇ ಶ್ರಮ ಪಡುತ್ತಾರೆ ಈ ಛಾಯಾಗ್ರಾಹಕರು. ಈ ಪಾಪ್ಸ್ (Paparazzi) ಗಳ ಮೇಲೆ ಅನೇಕ ನಟ ಮತ್ತು ನಟಿಯರು ಕೋಪದಿಂದ ಮಾತಾಡಿದ್ದು, ಇವರ ಕ್ಯಾಮರಾಗಳನ್ನು (Camera) ತಳ್ಳಿಕೊಂಡು ಮುಂದಕ್ಕೆ ಹೋಗಿರುವ ಅನೇಕ ರೀತಿಯ ಘಟನೆಗಳನ್ನು ನಾವು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಆಗಾಗ್ಗೆ ನೋಡುತ್ತಿರುತ್ತೇವೆ.
ಕೆಲವು ತಿಂಗಳುಗಳ ಹಿಂದೆಯಷ್ಟೆ ಬಾಲಿವುಡ್ ನ ಹಿರಿಯ ನಟಿ ಜಯಾ ಬಚ್ಚನ್ ಅವರು ಸಹ ಛಾಯಾಗ್ರಾಹಕರ ಮೇಲೆ ಕೋಪ ಮಾಡಿಕೊಂಡಿದ್ದರು. ಹೀಗೆ ಅನೇಕ ನಟ ಮತ್ತು ನಟಿಯರು ತಮ್ಮ ಖಾಸಗಿ ಸಮಯಕ್ಕೆ ಧಕ್ಕೆ ಆಗುವಂತೆ ಫೋಟೋಗಳನ್ನು ಕ್ಲಿಕ್ಕಿಸಲು ಪ್ರಯತ್ನ ಮಾಡಿದಾಗಲೆಲ್ಲಾ ಈ ರೀತಿಯ ಜಗಳಗಳು ಆಗುವುದು ಹೆಚ್ಚು.
ಕೆಳಕ್ಕೆ ಬಿದ್ದ ಕ್ಯಾಮೆರಾ ಲೆನ್ಸ್ ಅನ್ನು ಮೇಲಕ್ಕೆ ಎತ್ತಿಕೊಟ್ಟ ನಟಿ
ಇದರ ಬಗ್ಗೆ ಈಗೇಕೆ ಮಾತು ಅಂತೀರಾ? ಇಲ್ಲಿ ಒಬ್ಬ ಬಾಲಿವುಡ್ ನಟಿ ಹೀಗೆ ಛಾಯಾಗ್ರಾಹಕರ ಕ್ಯಾಮೆರಾ ಲೆನ್ಸ್ ಜಾರಿ ಕೆಳಕ್ಕೆ ಬಿದ್ದಿರುವುದನ್ನು ನೋಡಿ ಎಂತಹ ಕೆಲಸ ಮಾಡಿದ್ದಾರೆ ನೀವೇ ನೋಡಿ.
ನಟಿ ಕಿಯಾರಾ ಅಡ್ವಾಣಿ ಸದಾ ವಿನಮ್ರವಾದ ಸ್ವಭಾವಕ್ಕೆ ಹೆಸರುವಾಸಿಯಾದವರು. ಬಾಲಿವುಡ್ ನಲ್ಲಿ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಬಳಿಕವೂ ಸಹ ನಟಿ ಕಿಯಾರಾ ಅಡ್ವಾಣಿ ತುಂಬಾನೇ ಸರಳವಾದ ವ್ಯಕ್ತಿತ್ವವನ್ನು ಹೊಂದಿರುವ ನಟಿ.
ಪ್ರಸ್ತುತ ‘ಸತ್ಯ ಪ್ರೇಮ್ ಕಿ ಕಥಾ’ ಎಂಬ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿರುವ ನಟಿ ಕಿಯಾರಾ ಅವರು ಏಪ್ರಿಲ್ 19 ರಂದು ರಾತ್ರಿ ಮುಂಬೈಗೆ ವಾಪಸಾದರು.
ಮುಂಬೈ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ನೋಡಿದ ಪಾಪರಾಜಿಗಳು ನಟಿಯ ಫೋಟೋವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯಲು ಮುಗಿಬಿದ್ದರು.
View this post on Instagram
ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಪಾಪ್ ಹಂಚಿಕೊಂಡ ವೀಡಿಯೋದಲ್ಲಿ, ನಟಿ ಕಿಯಾರಾ ನೆಲದ ಮೇಲೆ ಬಿದ್ದಿರುವಂತಹ ಛಾಯಾಗ್ರಾಹಕರ ಕ್ಯಾಮೆರಾದ ಲೆನ್ಸ್ ಅನ್ನು ನೋಡಿದ ತಕ್ಷಣವೇ ಅದನ್ನು ಕೈಯಿಂದ ಮೇಲಕ್ಕೆ ಎತ್ತಿಕೊಂಡು ಅಲ್ಲೇ ಇರುವ ಛಾಯಾಗ್ರಾಹಕರಿಗೆ ಕೊಡಲು ಮುಂದಾದರು. ಅವರ ಈ ವಿನಮ್ರವಾದ ಸನ್ನೆಯು ಅಭಿಮಾನಿಗಳ ಮತ್ತು ನೆಟ್ಟಿಗರ ಹೃದಯವನ್ನು ಗೆದ್ದಿದೆ.
ಈ ವೀಡಿಯೋ ನೋಡಿ ಕಿಯಾರಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು ನೆಟ್ಟಿಗರು
ಈ ವೀಡಿಯೋದಲ್ಲಿ, ನಟಿ ಕಿಯಾರಾ ಅಡ್ವಾಣಿ ಯಾವುದೇ ಮೇಕಪ್ ಇಲ್ಲದೆ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿರುವುದನ್ನು ಕಾಣಬಹುದು. ಅವರು ಸರಳವಾದ ನೀಲಿ ಉಡುಪನ್ನು ಮತ್ತು ನೌಕಾ ನೀಲಿ ವೆಲ್ವೆಟ್ ಪ್ಯಾಂಟ್ ಧರಿಸಿದ್ದರು.
ಅವರು ತಮ್ಮ ಜೊತೆ ಒಂದು ಪುಟ್ಟ ಬ್ಯಾಗ್ ಅನ್ನು ಮಾತ್ರವೇ ಹೊಂದಿದ್ದರು. ಅವರು ತಮ್ಮ ಕಾರಿನ ಕಡೆಗೆ ನಡೆಯುತ್ತಿದ್ದಂತೆ, ಛಾಯಾಗ್ರಾಹಕನೊಬ್ಬನು ತನ್ನ ಕ್ಯಾಮೆರಾದ ಲೆನ್ಸ್ ಅನ್ನು ಕೆಳಕ್ಕೆ ಬಿಳಿಸಿಕೊಂಡರು.
ಆಗ ಅದನ್ನು ನೋಡಿದ ನಟಿ ಖುದ್ದು ಕೆಳಕ್ಕೆ ಬಾಗಿ ಆ ಲೆನ್ಸ್ ಅನ್ನು ಕೈಯಿಂದ ಎತ್ತಿಕೊಂಡು ಅವರಿಗೆ ಕೊಟ್ಟರು. ಇದನ್ನು ನೋಡಿದ ಅನೇಕರು ನಟಿಯನ್ನು ‘ಕ್ಯೂಟ್ ಆಂಡ್ ಹಂಬಲ್’ ಅಂತ ಹೊಗಳಿದ್ದಾರೆ.
ಕಿಯಾರಾ ಅಡ್ವಾಣಿ ಮುಂದಿನ ಚಿತ್ರ ‘ಸತ್ಯ ಪ್ರೇಮ್ ಕಿ ಕಥಾ’ ದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ನಟಿ ತನ್ನ ಭೂಲ್ ಭುಲೈಯಾ 2 ಚಿತ್ರದ ಸಹ ನಟ ಕಾರ್ತಿಕ್ ಆರ್ಯನ್ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಸಮೀರ್ ವಿಧ್ವಾನ್ಸ್ ನಿರ್ದೇಶನದ ಈ ಚಿತ್ರವು ಈ ವರ್ಷದ ಜೂನ್ 29 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ