• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Bollywood Couple: ಸಿದ್ಧಾರ್ಥ್ ಆದರ್ಶ ಪತಿ ಎಂದ್ರು ಕಿಯಾರಾ! ಅಮ್ಮನ ಮನೆ ಬಿಟ್ಟು ಹೋಗುವಾಗ ಕಣ್ಣೀರು ಹಾಕಿದ್ರಾ ನಟಿ?

Bollywood Couple: ಸಿದ್ಧಾರ್ಥ್ ಆದರ್ಶ ಪತಿ ಎಂದ್ರು ಕಿಯಾರಾ! ಅಮ್ಮನ ಮನೆ ಬಿಟ್ಟು ಹೋಗುವಾಗ ಕಣ್ಣೀರು ಹಾಕಿದ್ರಾ ನಟಿ?

ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ

ಕಿಯಾರಾ ಅಡ್ವಾಣಿ-ಸಿದ್ಧಾರ್ಥ್ ಮಲ್ಹೋತ್ರಾ

ಮದುವೆಯ ನಂತರದ ಜೀವನವು ತನ್ನ ತಾಯಿಯನ್ನು ಇನ್ನಷ್ಟು ಮೆಚ್ಚುವಂತೆ ಮಾಡಿದೆ ಎಂದು ನಟಿ ಕಿಯಾರಾ ಅಡ್ವಾಣಿ ಹೇಳಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಅವರು ಇದೇ ಮೊದಲ ಬಾರಿಗೆ ನಾನು ಮನೆ ನಡೆಸುವ ಜವಾಬ್ದಾರಿ ಹೊತ್ತಿದ್ದೇನೆ ಎಂದ್ರು.

  • Trending Desk
  • 3-MIN READ
  • Last Updated :
  • Karnataka, India
  • Share this:

ಮದುವೆಗೂ (Marriage) ಮುಂಚೆ ಬಹುತೇಕರು ತಮ್ಮ ತಮ್ಮ ತಂದೆ-ತಾಯಿಯ ಜೊತೆಯಲ್ಲಿ ಇರುವುದು ಮತ್ತು ಮದುವೆಯ ನಂತರದಲ್ಲಿ ಪೋಷಕರನ್ನು (Parents) ಬಿಟ್ಟು ಗಂಡನ ಮನೆಗೆ ಹೋಗಬೇಕಾದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಹೀಗೆ ಮದುವೆ ಆಗುವ ಮುಂಚೆ ಇರುವ ಜೀವನ (Life) ಮತ್ತು ಮದುವೆಯಾದ ನಂತರದ ಜೀವನದಲ್ಲಿ ತುಂಬಾನೇ ಬದಲಾವಣೆ ಇರುತ್ತದೆ ಅಂತ ಹೇಳಬಹುದು.


ಸಾಮಾನ್ಯ ಜನರಂತೆ ಈ ಸೆಲೆಬ್ರಿಟಿಗಳು ಸಹ ಮದುವೆಯಾದ ನಂತರ ತಮ್ಮ ಪೋಷಕರ ಮನೆಯನ್ನು ಬಿಟ್ಟು ಗಂಡನ ಮನೆಗೆ ಬರಬೇಕಾಗುತ್ತದೆ. ಮನೆಯ ಸಂಪೂರ್ಣ ಜವಾಬ್ದಾರಿ ಹೋರಬೇಕಾಗುತ್ತದೆ. ಇತ್ತೀಚೆಗೆ ಮದುವೆಯಾದ ಒಬ್ಬ ನಟಿ ಇದೆಲ್ಲದರ ಬಗ್ಗೆ ಏನ್ ಹೇಳಿದ್ದಾರೆ ನೋಡಿ. ನಟಿ ಕಿಯಾರಾ ಅಡ್ವಾಣಿ (Actress Kiara Advani) ಸಂದರ್ಶನದಲ್ಲಿ ಪತಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ವಿವಾಹವಾದ ನಂತರ ಸ್ಥಳಾಂತರಗೊಳ್ಳುವ ಬಗ್ಗೆ ಮಾತನಾಡಿದ್ದಾರೆ.


ಸಿದ್ಧಾರ್ಥ್-ಕಿಯಾರಾ ಕಳೆದ ತಿಂಗಳು ರಾಜಸ್ಥಾನದಲ್ಲಿ ಮದುವೆ ಆಗಿದ್ರು..


ದಂಪತಿಗಳು ಕಳೆದ ತಿಂಗಳು ರಾಜಸ್ಥಾನದಲ್ಲಿ ಒಂದು ಖಾಸಗಿ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದರು. ತನ್ನ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ ಕಿಯಾರಾ ಅದನ್ನು ಸುಂದರವಾದ ಕ್ಷಣ ಎಂದು ನೆನಪಿಸಿಕೊಂಡರು ಮತ್ತು ಅವರು ಸಂತೋಷವಾಗಿದ್ದಾರೆ ಎಂದು ಹೇಳಿದರು.


ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ‘ಶೆರ್ಷಾ’ ಚಿತ್ರದಲ್ಲಿ ಕೆಲಸ ಮಾಡುವಾಗ ಒಬ್ಬರನೊಬ್ಬರು ಇಷ್ಟಪಟ್ಟರು ಎಂದು ಹೇಳಲಾಗಿದೆ. ನಂತರ ಇಬ್ಬರೂ ರಹಸ್ಯವಾಗಿ ಡೇಟಿಂಗ್ ಮಾಡಿದರು ಮತ್ತು ಅವರ ಸಂಬಂಧದ ವದಂತಿಗಳಿಗೆ ಅವರು ಯಾವಾಗಲೂ ಪ್ರತಿಕ್ರಿಯಿಸಲಿಲ್ಲ. ಫೆಬ್ರವರಿ 7 ರಂದು, ದಂಪತಿಗಳು ತಮ್ಮ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳಾದ ಇಶಾ ಅಂಬಾನಿ, ಕರಣ್ ಜೋಹರ್, ಶಾಹಿದ್ ಕಪೂರ್, ಮೀರಾ ರಜಪೂತ್, ಜೂಹಿ ಚಾವ್ಲಾ ಮತ್ತು ಇತರರ ಸಮ್ಮುಖದಲ್ಲಿ ವಿವಾಹವಾದರು.


ಮದುವೆಯಾದ ನಂತರ ತನ್ನ ತಾಯಿಯ ಮೇಲೆ ಇದ್ದ ಗೌರವ ಇನ್ನಷ್ಟು ಜಾಸ್ತಿ ಆಯ್ತಂತೆ..


ಹೊಸ ಸಂದರ್ಶನವೊಂದರಲ್ಲಿ, ಕಿಯಾರಾ ಮದುವೆಯ ನಂತರದ ಜೀವನವು ತನ್ನ ತಾಯಿಯನ್ನು ಇನ್ನಷ್ಟು ಮೆಚ್ಚುವಂತೆ ಮಾಡಿದೆ ಎಂದು ಹಂಚಿಕೊಂಡಿದ್ದಾರೆ. ನ್ಯೂಸ್ 18 ಜೊತೆ ಮಾತನಾಡಿದ ಅವರು "ಇದೇ ಮೊದಲ ಬಾರಿಗೆ ನಾನು ಮನೆ ನಡೆಸುತ್ತಿದ್ದೇನೆ. ನಾನು ನನ್ನ ಹೆತ್ತವರ ಮನೆಯಲ್ಲಿ ವಾಸಿಸುತ್ತಿದ್ದೆ. ನನ್ನ ಅಮ್ಮ ಎಲ್ಲವನ್ನೂ ನೋಡಿಕೊಂಡಿದ್ದರು ಮತ್ತು ನಾವು ಇದೀಗ ಅವಳ ಬಗ್ಗೆ ನನಗೆ ಇರುವ ಗೌರವ ಈಗ ಇನ್ನಷ್ಟು ಹೆಚ್ಚಾಗಿದೆ. ಆದರೆ ಇದು ಒಂದು ಸುಂದರವಾದ ಜೀವನದ ಹಂತವಾಗಿದ್ದು, ನಾನು ತುಂಬಾ ಸಂತೋಷವಾಗಿದ್ದೇನೆ" ಎಂದು ನಟಿ ಹೇಳಿದರು.




ಸಿದ್ಧಾರ್ಥ್ ಒಬ್ಬ ಆದರ್ಶ ಪತಿ ಎಂದ ಕಿಯಾರಾ


ಅದೇ ಸಂಭಾಷಣೆಯಲ್ಲಿ, ಕಿಯಾರಾ ತಮ್ಮ ಪತಿ ಸಿದ್ಧಾರ್ಥ್ ಬಗ್ಗೆಯೂ ಮಾತನಾಡಿದರು. "ಅವರು ಹಿರಿಯರು, ಕಿರಿಯರು ಮತ್ತು ಎಲ್ಲರನ್ನೂ ತುಂಬಾನೇ ಗೌರವಿಸುತ್ತಾರೆ. ಅವನಲ್ಲಿ ಆ ಗುಣವಿದೆ, ಅಷ್ಟೇ ಅಲ್ಲದೆ ತನ್ನ ಅಭಿಮಾನಿಗಳ ಜೊತೆಗೂ ತುಂಬಾನೇ ಆತ್ಮೀಯರಾಗಿದ್ದಾರೆ. ಅವರು ಜನರನ್ನು ತುಂಬಾ ಪ್ರೀತಿಸುತ್ತಾರೆ. "ಅವರೊಬ್ಬ ಉತ್ತಮ ಜೀವನ ಸಂಗಾತಿ ಆಗುತ್ತಾರೆ. ಕೆಲಸ ಮಾಡಲು ಅಥವಾ ಹೊಸ ವಿಷಯಗಳನ್ನು ಪ್ರಯತ್ನಿಸಲು ಅವರು ಯಾವಾಗಲೂ ನನ್ನನ್ನು ಪ್ರೇರೇಪಿಸುತ್ತಾರೆ" ಎಂದು ಅವರು ಸಿದ್ಧಾರ್ಥ್ ಅವರನ್ನು 'ಆದರ್ಶ ಪತಿ' ಎಂದು ಹೇಳಿದ್ದಾರೆ.




ಮದುವೆಯ ನಂತರ, ಕಿಯಾರಾ ಕಳೆದ ತಿಂಗಳು ಕಾರ್ತಿಕ್ ಆರ್ಯನ್ ಅವರೊಂದಿಗೆ ತಮ್ಮ ಮುಂಬರುವ ‘ಸತ್ಯಪ್ರೇಮ್ ಕಿ ಕಥಾ’ ಚಿತ್ರದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಮತ್ತೊಂದೆಡೆ, ಸಿದ್ಧಾರ್ಥ್ ಮಲ್ಹೋತ್ರಾ ಕೊನೆಯದಾಗಿ ಮಿಷನ್ ಮಜ್ನು ಚಿತ್ರದಲ್ಲಿ ನಟಿಸಿದ್ದರು, ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಜೊತೆ ತೆರೆ ಹಂಚಿಕೊಂಡಿದ್ದರು.

Published by:ಪಾವನ ಎಚ್ ಎಸ್
First published: