Bollywood: ಬರೋಬ್ಬರಿ 1.56 ಕೋಟಿ ರೂ. ಮೌಲ್ಯದ ಔಡಿ ಕಾರು ಖರೀದಿಸಿದ ನಟಿ ಕಿಯಾರಾ ಆಡ್ವಾಣಿ
Kiara Advani: ನಟಿ ಕಿಯಾರಾ ಕೊನೆಯ ಬಾರಿಗೆ ಸಿದ್ಧಾರ್ಥ್ ಮಲ್ಹೋತ್ರಾರೊಂದಿಗೆ ‘ಶೆರ್ಶಾಹ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರಿಬ್ಬರ ನಡುವಿನ ಸಿಜ್ಲಿಂಗ್ ಕೆಮಿಸ್ಟ್ರಿ ಸಾಕಷ್ಟು ಸುದ್ದಿ ಮಾಡಿತ್ತು.
ಬಾಲಿವುಡ್ ಮತ್ತು ಟಾಲಿವುಡ್ ಚಿತ್ರಗಳಲ್ಲಿ(Bollywood and Tollywood films) ನಟಿಸಿ ಸೈ ಎನಿಸಿಕೊಂಡ ನಟಿ ಕಿಯಾರಾ ಆಡ್ವಾಣಿ (Kiara Advani) ಯಾರಿಗೆ ಗೊತ್ತಿಲ್ಲ ಹೇಳಿ, ಆದರೆ ಇವರಿಗಿರುವ ಒಂದು ಅಭಿರುಚಿಯ ಬಗ್ಗೆ ಬಹಳಷ್ಟು ಅಭಿಮಾನಿಗಳಿಗೆ ತಿಳಿದಿರಲಿಕ್ಕಿಲ್ಲ.ಅದೇನು ಎಂದರೆ ಕೆಲವು ನಟ ನಟಿಯರಿಗೆ ಈ ಐಷಾರಾಮಿ ಕಾರುಗಳ ಬಗ್ಗೆ ತುಂಬಾನೇ ಒಲವು ಇರುತ್ತದೆ, ನಟಿ ಕಿಯಾರಾ ಸಹ ಇದರಿಂದ ಹೊರತಾಗಿಲ್ಲ. ಈಕೆಗೂ ಐಷಾರಾಮಿ ಕಾರುಗಳನ್ನು ಕೊಂಡುಕೊಳ್ಳುವುದು ಎಂದರೆ ತುಂಬಾನೇ ಪ್ರೀತಿ.ಈ ನಟಿ ಈಗ ಮತ್ತೆ ಸುದ್ದಿಯಲ್ಲಿರುವುದು ಇದೇ ಅಭಿರುಚಿಗೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ನಟಿ (Actress ) ಕಿಯಾರಾ ಡಿಸೆಂಬರ್ 15ರಂದು ಹೊಚ್ಚ ಹೊಸ ಔಡಿ ಎ8 ಎಲ್ ಐಷಾರಾಮಿ ( luxury cars) ಸೆಡಾನ್ ಖರೀದಿಸಿದ್ದಾರೆ.
ಐಷಾರಾಮಿ ಸೆಡಾನ್ ಬೆಲೆ ಗೊತ್ತೇ
ಕಿಯಾರಾ ತನ್ನ ಕಪ್ಪು ಬಣ್ಣದ ಔಡಿ ಎ8 ಎಲ್ ಐಷಾರಾಮಿ ಸೆಡಾನ್ ಮುಂದೆ ನಿಂತು ಪೋಸ್ ನೀಡುತ್ತಿದ್ದಂತೆಯೇ ಕಾರ್ ಬ್ರ್ಯಾಂಡ್ನ ಅಧಿಕೃತ ಪುಟವು ಈ ಫೋಟೋಗಳನ್ನು ಹಂಚಿಕೊಂಡಿದೆ. ಸರಿ, ಈ ಐಷಾರಾಮಿ ಸೆಡಾನ್ ಬೆಲೆಯನ್ನು ಕೇಳಿದರೆ ನೀವು ಬೆಚ್ಚಿ ಬೀಳುವುದು ಗ್ಯಾರಂಟಿ. ಇದರ ಮೌಲ್ಯ ಬರೋಬ್ಬರಿ 1.56 ಕೋಟಿ ರೂಪಾಯಿ ಅಂತೆ.
ಔಡಿ ಅನುಭವಕ್ಕೆ ಬಿಚ್ಚಿಟ್ಟ ನಟಿ
ಔಡಿ ಇಂಡಿಯಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಈ ಫೋಟೋಗಳನ್ನು ಪೋಸ್ಟ್ ಮಾಡಿದ್ದು ಅದರಲ್ಲಿ ಔಡಿ ಎ8 ಎಲ್ ಐಷಾರಾಮಿ ಸೆಡಾನ್ ಮುಂದೆ ನಟಿ ಕಿಯಾರಾ ನಿಂತಿದ್ದು ಔಡಿ ಇಂಡಿಯಾದವರು ಹೊಸದಾಗಿ ಕಾರು ಖರೀದಿ ಮಾಡಿದಕ್ಕಾಗಿ ಹೂಗುಚ್ಛ ನೀಡಿ ಶುಭಾಶಯ ಕೋರಿದ್ದನ್ನು ನೋಡಬಹುದಾಗಿದೆ. ಇದರ ಜೊತೆಗೆ "ಪ್ರಗತಿ ಮತ್ತು ಸೃಜನಶೀಲತೆ ಜೊತೆ ಜೊತೆಯಾಗಿ ಸಾಗುತ್ತಿವೆ, ಔಡಿ ಅನುಭವಕ್ಕೆ ಕಿಯಾರಾ ಆಡ್ವಾಣಿಗೆ ಸ್ವಾಗತಿಸಲು ನಮಗೆ ತುಂಬಾನೇ ಸಂತೋಷವಾಗಿದೆ" ಎಂದು ಶೀರ್ಷಿಕೆ ಬರೆದಿದ್ದಾರೆ. ಈ ಫೋಟೋವನ್ನು ಇನ್ಸ್ಟಾಗ್ರಾಮ್ ಪುಟದಲ್ಲಿ 49,000ಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ.
ಐಷಾರಾಮಿ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆ
ಕಿಯಾರಾ ಆಡ್ವಾಣಿ ಬಳಿ ಈಗಾಗಲೇ ಬಿಎಂಡಬ್ಲ್ಯು ಎಕ್ಸ್ 5, ಮರ್ಸಿಡಿಸ್-ಬೆನ್ಜ್ ಇ-ಕ್ಲಾಸ್ ಮತ್ತು ಬಿಎಂಡಬ್ಲ್ಯು 530ಡಿಯಂತಹ ಕೆಲವು ಐಷಾರಾಮಿ ಕಾರುಗಳು ಇವೆ ಎಂದು ಹೇಳಲಾಗುತ್ತಿದೆ. ಈ ಔಡಿ ಎ8 ಎಲ್ ಐಷಾರಾಮಿ ಸೆಡಾನ್ ಅವರ ಐಷಾರಾಮಿ ಕಾರುಗಳ ಪಟ್ಟಿಗೆ ಹೊಸ ಸೇರ್ಪಡೆ ಎಂದು ಹೇಳಬಹುದು. ಕುತೂಹಲಕಾರಿ ಸಂಗತಿಯೆಂದರೆ, ಕಿಯಾರಾ ಬಾಯ್ಫ್ರೆಂಡ್ ಎಂದು ಹೇಳಲಾದ ನಟ ಸಿದ್ಧಾರ್ಥ್ ಮಲ್ಹೋತ್ರಾ ಇತ್ತೀಚೆಗೆ ಅದೇ ಕಾರ್ ಬ್ರ್ಯಾಂಡ್ನ ಮಾದರಿಯನ್ನು ಬಿಡುಗಡೆ ಮಾಡಿದ್ದರು. ನಟಿ ಕಿಯಾರಾ ಕೊನೆಯ ಬಾರಿಗೆ ಸಿದ್ಧಾರ್ಥ್ ಮಲ್ಹೋತ್ರಾರೊಂದಿಗೆ ‘ಶೆರ್ಶಾಹ್’ ಚಿತ್ರದಲ್ಲಿ ಕಾಣಿಸಿಕೊಂಡರು. ಅಲ್ಲಿ ಅವರಿಬ್ಬರ ನಡುವಿನ ಸಿಜ್ಲಿಂಗ್ ಕೆಮಿಸ್ಟ್ರಿ ಸಾಕಷ್ಟು ಸುದ್ದಿ ಮಾಡಿತ್ತು.
ಕಿಯಾರಾ ಆಡ್ವಾಣಿ ನಂತರ ‘ಜುಗ್ ಜುಗ್ ಜೀಯೋ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದರಲ್ಲಿ ವರುಣ್ ಧವನ್, ಅನಿಲ್ ಕಪೂರ್ ಮತ್ತು ನೀತು ಕಪೂರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವು ಜೂನ್ 24, 2022ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ನಟಿ ಕಿಯಾರಾ ಅಡ್ವಾಣಿ ಕಳೆದ ವರ್ಷ ಸಹ ಫೋಟೋಶೂಟ್ ಒಂದರಲ್ಲಿ ಟಾಪ್ಲೆಸ್ ಆಗಿ ಎಲೆ ಮರೆಯಲ್ಲಿ ನಿಂತು ಪೋಸ್ ಕೊಟ್ಟು ಚರ್ಚೆಯ ವಿಷಯವಾಗಿದ್ದರು. ಆದರೆ ಈ ಸಲವೂ ಸಹ ಮತ್ತೆ ಕಿಯಾರಾ ಟಾಪ್ಲೆಸ್ ಆಗಿ ಫೋಸ್ ಕೊಡುವ ಮೂಲಕ ಸುದ್ದಿ ಮಾಡಿದ್ದರು.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ