ಗರ್ಭಿಣಿಯಾದ ಕಿಯಾರಾ: ಇನ್​ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡ ನಟಿ..!

ಇತ್ತೀಚೆಗಷ್ಟೆ ಶಾಹಿದ್​ ಕಪೂರ್​ ಜತೆ 'ಕಬೀರ್​ ಸಿಂಗ್​' ಹಿಟ್​ ಸಿನಿಮಾದಲ್ಲಿ ನಟಿಸಿದ್ದ ನಟಿ ಕಿಯಾರಾ ಈಗ ಅಭಿಮಾನಿಗಳಿಗೆ ಸಡನ್​ ಶಾಕ್​ ಕೊಟ್ಟಿದ್ದಾರೆ. ಅವರು ಗರ್ಭಿಣಿಯಾಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಿಯಾರಾ ಅಡ್ವಾನಿ

ಕಿಯಾರಾ ಅಡ್ವಾನಿ

  • Share this:
ಬಾಲಿವುಡ್​ ಹಾಗೂ ಟಾಲಿವುಡ್​ನಲ್ಲಿ ಈಗಾಗಲೇ ತಮ್ಮ ಸಿನಿಮಾಗಳಿಂದಲೇ ಹೆಸರುವಾಸಿಯಾಗಿರುವ ನಟಿ ಕಿಯಾರಾ ಅಡ್ವಾನಿ. ಸದ್ಯ ಇನ್​ಸ್ಟಾಗ್ರಾಂನಲ್ಲಿ ತಮ್ಮ ಲೆಟೆಸ್ಟ್​ ಫೋಟೋವನ್ನು ಹಂಚಿಕೊಂಡಿದ್ದು, ಅದು ವೈರಲ್​ ಆಗುತ್ತಿದೆ.

ಇತ್ತೀಚೆಗಷ್ಟೆ ಶಾಹಿದ್​ ಕಪೂರ್​ ಜತೆ 'ಕಬೀರ್​ ಸಿಂಗ್​' ಹಿಟ್​ ಸಿನಿಮಾದಲ್ಲಿ ನಟಿಸಿದ್ದ ನಟಿ ಕಿಯಾರಾ ಈಗ ಅಭಿಮಾನಿಗಳಿಗೆ ಸಡನ್​ ಶಾಕ್​ ಕೊಟ್ಟಿದ್ದಾರೆ. ಅವರು ಗರ್ಭಿಣಿಯಾಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 
ಇನ್ನೂ ವಿವಾಹವಾಗದೆಯೇ, ಸಿನಿ ರಂಗದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿರುವಾಗಲೇ ಕಿಯಾರಾ ಈ ಚಿತ್ರವನ್ನು ಹಂಚಿಕೊಂಡಿರುವುದು ಸಾಕಷ್ಟು ಕೂತೂಹಲಕ್ಕೆ ಕೆರಳಿಸಿದೆ.

ಇದನ್ನೂ ಓದಿ: #SSMB27: ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತಿದೆ ಪ್ರಿನ್ಸ್​ ಮಹೇಶ್​ ಬಾಬು-ಪ್ರಶಾಂತ್​ ನೀಲ್​ರ ಹೊಸ ಸಿನಿಮಾ ಸುದ್ದಿ..!

ಹೌದು, ಕಿಯಾರಾ ಗರ್ಭಿಣಿಯಾಗಿರುವ ಚಿತ್ರ ಹಂಚಿಕೊಂಡಿರುವ ಸುದ್ದಿ ನಿಜ. ಆದರೆ ಅದು ಅವರ ಹೊಸ ಸಿನಿಮಾದ ಪೋಸ್ಟರ್​ನದ್ದು. ಅಕ್ಷಯ್​ ಕುಮಾರ್​, ದಿಲ್​ ಜಿತ್​ ಹಾಗೂ ಕರೀನಾ ಕಪೂರ್​ ಪ್ರಮುಖ ಪಾತ್ರಲದಲ್ಲಿ ಅಭಿನಯಿಸುತ್ತಿರುವ 'ಗುಡ್​ ನ್ಯೂಸ್​' ಸಿನಿಮಾದ ಪೋಸ್ಟರ್​. ಇದರಲ್ಲಿ ಕಿಯಾರಾ ಹಾಗೂ ಕರೀನಾ ಗರ್ಭಿಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಧರ್ಮ ಪ್ರೊಡಕ್ಷನ್ಸ್​ ಅವರ ಬ್ಯಾನರ್ ಅಡಿ ನಿರ್ಮಾಣಗೊಳ್ಳುತ್ತಿರುವ ರೊಮ್ಯಾಂಟಿಕ್​ ಕಾಮಿಡಿ ಸಿನಿಮಾ ಇದೇ ವರ್ಷ ಡಿಸೆಂಬರ್​ 25ಕ್ಕೆ ತೆರೆ ಕಾಣಲಿದೆ.

 

DeepVeer Tirupati Visit : ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ದೀಪಿಕಾ-ರಣವೀರ್..!​


First published: