ಬಸವನಾಡಿನಲ್ಲಿ ‘ಖೊಟ್ಟಿಪೈಸೆ’; ರೆಟ್ರೋ ಮತ್ತು ಸಮಕಾಲೀನ ವಿಚಾರಗಳ ಸಮ್ಮಿಶ್ರಣದ ಚಿತ್ರ ಜುಲೈನಲ್ಲಿ ತೆರೆಗೆ


Updated:June 23, 2018, 11:08 AM IST
ಬಸವನಾಡಿನಲ್ಲಿ ‘ಖೊಟ್ಟಿಪೈಸೆ’; ರೆಟ್ರೋ ಮತ್ತು ಸಮಕಾಲೀನ ವಿಚಾರಗಳ ಸಮ್ಮಿಶ್ರಣದ ಚಿತ್ರ ಜುಲೈನಲ್ಲಿ ತೆರೆಗೆ
ಖೊಟ್ಟಿಪೈಸೆ ಚಿತ್ರತಂಡದಿಂದ ಸುದ್ದಿಗೋಷ್ಠಿ

Updated: June 23, 2018, 11:08 AM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ: ಮೂರು ದಶಕಗಳ ಹಿಂದಿನ ಬಿಜಾಪುರ ನೆಲದ ಕಥೆಯೊಂದರ ಆಧಾರಿತ ಸ್ಯಾಂಡಲ್​ವುಡ್​ನ “ಖೊಟ್ಟಿಪೈಸೆ” ಚಿತ್ರದ ಪ್ರಚಾರ ನಿನ್ನೆ ವಿಜಯಪುರದಲ್ಲೂ ನಡೆಯಿತು. ಸಿನಿಮಾ ಪ್ರೊಮೋಷನ್​ಗಾಗಿ ಇಡೀ ಚಿತ್ರತಂಡವು ಬಸವನಾಡು ವಿಜಯಪುರಕ್ಕೆ ಆಗಮಿಸಿತು. ಈ ವೇಳೆ, ಸುದ್ದಿಗೋಷ್ಠಿಯಲ್ಲಿ ಸಿನಿಮಾ ಕುರಿತು ನಿರ್ದೇಶಕ ಕಿರಣ ಆರ್.ಕೆ. ಸೇರಿದಂತೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು.

1970-80ರ ದಶಕದ ಬಿಜಾಪುರದಲ್ಲಿ ನಡೆದ ಘಟನೆಯಾಧಾರಿತ ಚಿತ್ರ ಇದಾಗಿದೆ. ನೋಟ್ ಬ್ಯಾನ್ ಅಂಶವೂ ಖೊಟ್ಟಿ ಪೈಸೆಯಲ್ಲಿದೆ. ಉತ್ತರ ಕರ್ನಾಟಕದ ಸೊಗಡಿನ ಈ ಸಿನಿಮಾದಲ್ಲಿ ಬಹುತೇಕ ಕಲಾವಿದರು ಉತ್ತರ ಕರ್ನಾಟಕದವರೇ ಆಗಿದ್ದಾರೆ. ವಿಶೇಷವೆಂದರೆ ಭಾರತದಲ್ಲಿ ಜುಲೈನಲ್ಲಿ ಬಿಡುಗಡೆ ಆಗುವ ಮುನ್ನ ವಿದೇಶಗಳಲ್ಲಿ ಮೊದಲು ರಿಲೀಸ್ ಆಗುತ್ತಿದೆ. ಗಿರಿಜಾ ಕುಮಾರ್ ಅವರು ಕೇವಲ 40 ಲಕ್ಷ ರೂಪಾಯಿಗೆ ನಿರ್ಮಾಣ ಮಾಡಿರುವ ಈ ಚಿತ್ರ ರಾಜ್ಯಾದ್ಯಂತ 60 ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ನಿರ್ದೇಶಕ ಕಿರಣ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬಾರ್ಸಿಲೋನಾ, ದೆಹಲಿ, ದುಬೈ ಚಲನಚಿತ್ರೋತ್ಸವಗಳಲ್ಲಿ “ಖೊಟ್ಟಿಪೈಸೆ” ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿರುವುದನ್ನೂ ಚಿತ್ರತಂಡವು ಮಾಧ್ಯಮಗಳಿಗೆ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಆರ್.ಕೆ. ಅವರ ಜೊತೆ ನಟ ರಾಮ ಚೈತನ್ಯ, ನಟಿ ರಚಿತಾ, ಛಾಯಾಗ್ರಾಹಕ ಸದಾಶಿವ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...