ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಸಿನಿಮಾ ಕಥೆ ಬಹಿರಂಗ..!

KGF Chapter 2: ಅಷ್ಟೇ ಅಲ್ಲದೆ ರಾಕಿ ಭಾಯ್ ಜತೆ ಒಂದು ಸುತ್ತಿನ ಮಾತುಕಥೆಯನ್ನು ಕೂಡ ಮುಗಿಸಿದ್ದಾರೆ.  ಕನ್ನಡದಲ್ಲಿ ಅಪ್ಪುನಂತಹ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಪೂರಿ ಜಗನ್ನಾಥ್ ಇದೀಗ ಯಶ್​ ಜತೆ ಚಿತ್ರಕಥೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ.

zahir | news18-kannada
Updated:August 18, 2019, 6:21 PM IST
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಮುಂದಿನ ಸಿನಿಮಾ ಕಥೆ ಬಹಿರಂಗ..!
yash
  • Share this:
ಸ್ಯಾಂಡಲ್​ವುಡ್​ನ ಗೆಲ್ಲುವ ಕುದುರೆ ರಾಕಿಂಗ್ ಸ್ಟಾರ್ ಯಶ್ ಟಾಲಿವುಡ್​ನತ್ತ ಮುಖ ಮಾಡಲಿರುವುದು ಗೊತ್ತಿರುವ ವಿಷಯ. ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಆ್ಯಕ್ಷನ್ ಕಟ್ ಹೇಳಲಿರುವ ಸಿನಿಮಾದಲ್ಲಿ ರಾಕಿ ಭಾಯ್ ಜಬರ್ದಸ್ತ್ ಪಾತ್ರದಲ್ಲಿ ಕಾಣಿಸಲಿದ್ದಾರೆ. ಈಗಾಗಲೇ 'ಕೆಜಿಎಫ್ 2' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಈ ಸಿನಿಮಾದ ಕೊನೆಯ ಹಂತದಲ್ಲಿ ಯಶ್ ನಾಯಕತ್ವದಲ್ಲಿ 'ಜನ ಗಣ ಮನ' ಎಂಬ ಬಹುಭಾಷಾ ಸಿನಿಮಾ ಸೆಟ್ಟೇರಲಿದೆ.

'ಕೆಜಿಎಫ್' ಚಿತ್ರದ ಮೂಲಕ ನ್ಯಾಷನಲ್ ಸ್ಟಾರ್ ಎನಿಸಿಕೊಂಡಿರುವ ಯಶ್​ಗಾಗಿಯೇ 'ಜನ ಗಣ ಮನ'ದಲ್ಲಿ ಪೂರಿ ವಿಭಿನ್ನ ಕಥೆಯನ್ನು ಸಿದ್ಧಪಡಿಸಿದ್ದಾರೆ. 'ಇಸ್ಮಾರ್ಟ್​ ಶಂಕರ್' ಚಿತ್ರದ ಸಕ್ಸಸ್ ಖುಷಿಯಲ್ಲಿರುವ ಟಾಲಿವುಡ್ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್​ ಕೆಲಸಗಳನ್ನು ಅಂತಿಮ ಹಂತಕ್ಕೆ ತಂದು ನಿಲ್ಲಿಸಿದ್ದಾರೆ.

ಪೂರಿ ಜಗನ್ನಾಥ್-ಯಶ್


ಅಷ್ಟೇ ಅಲ್ಲದೆ ರಾಕಿ ಭಾಯ್ ಜತೆ ಒಂದು ಸುತ್ತಿನ ಮಾತುಕಥೆಯನ್ನು ಕೂಡ ಮುಗಿಸಿದ್ದಾರೆ.  ಕನ್ನಡದಲ್ಲಿ 'ಅಪ್ಪು'ನಂತಹ ಸೂಪರ್ ಡೂಪರ್ ಹಿಟ್ ಚಿತ್ರ ನೀಡಿದ್ದ ಪೂರಿ ಜಗನ್ನಾಥ್ ಇದೀಗ ಯಶ್​ ಜತೆ ಚಿತ್ರಕಥೆ ಹಂಚಿಕೊಳ್ಳಲು ರೆಡಿಯಾಗಿದ್ದಾರೆ. 'ಜನ ಗಣ ಮನ' ಕಥೆಯು ಭಾರತದಲ್ಲಿನ ಪ್ರಸ್ತುತ ಸಮಸ್ಯೆಯ ಮೇಲೆ ಹಣೆಯಲಾಗಿದ್ದು, ಹೀಗಾಗಿ ಈ ಚಿತ್ರವನ್ನು ಬಿಗ್ ಬಜೆಟ್​ನಲ್ಲಿ ನಿರ್ಮಿಸಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.

ಕೆಲ ವರ್ಷಗಳ ಹಿಂದೆ ದೇಶವನ್ನು ಬೆಚ್ಚಿ ಬೀಳಿಸಿದ ಅತ್ಯಾಚಾರ ಪ್ರಕರಣ ಹಾಗೂ ಭೀಕರ ಕೊಲೆಗಳು ಮತ್ತು ರಾಜಕೀಯ ಚದುರಂಗ ಆಟವನ್ನು ಮನಸಲ್ಲಿಟ್ಟುಕೊಂಡು ಜನ ಗಣ ಮನ ಕಥೆ ಹೆಣೆಯಲಾಗಿದೆ. ಇದೊಂದು ಯೂತ್​ಫುಲ್ ಸಬ್ಜೆಕ್ಟ್ ಹೊಂದಿರುವ ಕಥೆಯಾಗಿದ್ದು, ಈ ಮೂಲಕ ದೇಶದ ಪರಿಸ್ಥಿತಿಯನ್ನು ಯುವ ತಲೆಮಾರಿಗೆ ದೃಶ್ಯದ ರೂಪದಲ್ಲಿ ತಿಳಿಸಲು ಪೂರಿ ಜಗನ್ನಾಥ್ ಯೋಜನೆ ಹಾಕಿಕೊಂಡಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಬಗ್ಗೆ ಯಶ್ ಜತೆ ನಿರ್ದೇಶಕರು ಎರಡು ಬಾರಿ ಚರ್ಚೆ ನಡೆಸಿದ್ದಾರೆ.

ಇನ್ನು ಅಂತಿಮ ನಿರೂಪಣೆಗಾಗಿ ಶೀಘ್ರದಲ್ಲೇ ರಾಕಿಂಗ್ ಸ್ಟಾರ್ ಹಾಗೂ ಪೂರಿ ಜಗನ್ನಾಥ್ ಬೆಂಗಳೂರಿನಲ್ಲಿ ಭೇಟಿಯಾಗಲಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಸದ್ಯ ಯಶ್ 'ಕೆಜಿಎಫ್ 2' ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈ ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗಲಿದೆ. ಅದರೊಳಗೆ ಬೇರೊಂದು ಚಿತ್ರವನ್ನು ಕೈಗೆತ್ತಿಕೊಳ್ಳಲು ಪೂರಿ ನಿರ್ಧರಿಸಿದ್ದಾರೆ.

ಈ ಎರಡು ಚಿತ್ರಗಳ ಬಳಿಕ ಯಶ್-ಪೂರಿ ಕಾಂಬಿನೇಷನ್​ನಲ್ಲಿ 'ಜನ ಗಣ ಮನ' ಸೆಟ್ಟೇರಲಿದೆ. ಒಟ್ಟಿನಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದ್ದ ಯಶ್ ಅವರ ಮುಂದಿನ ಸಿನಿಮಾ ಯಾವುದೆಂಬ ಚರ್ಚೆಗೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.ಇದನ್ನೂ ಕ್ಲಿಕ್ ಮಾಡಿ: ರವಿ ಬೋಪಣ್ಣ ಚಿತ್ರದಲ್ಲಿ ಕಿಚ್ಚ-ಕ್ರೇಜಿ ಜೋಡಿ: ಈ ಪಾತ್ರದಲ್ಲಿ ಕಾಣಿಸಲಿದ್ದಾರೆ ಅಭಿನಯ ಚಕ್ರವರ್ತಿ
First published: August 18, 2019, 6:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading