• Home
  • »
  • News
  • »
  • entertainment
  • »
  • KGF Chapter 2: ಮಹಿಳಾ ದಿನಾಚರಣೆಗೆ​ ಕೆಜಿಎಫ್​ 2 ಸಿನಿಮಾ ತಂಡದಿಂದ ಬಿಗ್ ಗಿಫ್ಟ್​​!

KGF Chapter 2: ಮಹಿಳಾ ದಿನಾಚರಣೆಗೆ​ ಕೆಜಿಎಫ್​ 2 ಸಿನಿಮಾ ತಂಡದಿಂದ ಬಿಗ್ ಗಿಫ್ಟ್​​!

ವುಮೆನ್ಸ್​ ಡೇಗೆ ಸ್ಪೆಷಲ್​ ಪೋಸ್ಟರ್​​

ವುಮೆನ್ಸ್​ ಡೇಗೆ ಸ್ಪೆಷಲ್​ ಪೋಸ್ಟರ್​​

ಈ ಪೋಸ್ಟರ್​​ನಲ್ಲಿ ‘ಕೆಜಿಎಫ್​ 2’ನಲ್ಲಿ ಬರುವ ಎಲ್ಲಾ ಪ್ರಮುಖ ಮಹಿಳಾ ಪಾತ್ರಗಳನ್ನು ಪೋಸ್ಟರ್​ನಲ್ಲಿ ತೋರಿಸಲಾಗಿದೆ.ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ರಿಲೀಸ್​ ಮಾಡಲಾಗಿದೆ.

  • Share this:

ರಾಕಿಂಗ್ ಸ್ಟಾರ್’ (Rocking Star) ಯಶ್(Yash) ಅಭಿನಯದ ಬಹುನಿರೀಕ್ಷಿತ ‘ಕೆಜಿಎಫ್: ಚಾಪ್ಟರ್ 2’(KGF Chapter 2) ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಂತಿದ್ದಾರೆ. 2018ರ ಡಿಸೆಂಬರ್‌ನಲ್ಲಿ ಪಾರ್ಟ್ 1 ರಿಲೀಸ್ ಆಗಿತ್ತು. ಇದೀಗ ಏಪ್ರಿಲ್ 14ರಂದು ಪಾರ್ಟ್ 2 ರಿಲೀಸ್ ಆಗಲಿದೆ. ಕೆಜಿಎಫ್​ ಇಡೀ ವಿಶ್ವವನ್ನೇ ಕನ್ನಡ(Kannada) ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಕೆಜಿಎಫ್​ ಹೆಸರನಲ್ಲೇ ಒಂದು ಖದರ್​ ಇದೆ. ಅದರಲ್ಲಿ ನಟಿಸಿದ ಯಶ್​ಗೊಂದು ಫೇಮ್​ ಇದೆ. ರಾಕಿ ಭಾಯ್ ಅಂದರೆ ಜನ ಹುಚ್ಚೆದ್ದು ಕುಣಿಯುತ್ತಾರೆ. ಅಷ್ಟರ ಮಟ್ಟಿಗೆ ಕೆಜಿಎಫ್​ ಸಿನಿಮಾ ಜನರ ತಲೆಯೊಳಗೆ ಹೊಕ್ಕಿದೆ. ‘ಕೆಜಿಎಫ್‌’ ಚಿತ್ರ ಆಧುನಿಕ ಕಾಲದಲ್ಲಿ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತಿಗೇ ಪರಿಚಯಿಸಿದ ಸಿನಿಮಾ. ಮಹಿಳಾ ದಿನಾಚರಣೆಗೆ ಇಂದು ಕೆಜಿಎಫ್​ ಚಿತ್ರತಂಡ ಬಿಗ್ ಗಿಫ್ಟ್​ ನೀಡಿದೆ. ಅದೇನು ಅಂತೀರಾ? ನೀವೇ ನೋಡಿ..


ಹೊಸ ಪೋಸ್ಟರ್​ ರಿಲೀಸ್ ಮಾಡಿದ ಕೆಜಿಎಫ್​ ಚಿತ್ರತಂಡ!


ಮಾರ್ಚ್​ 27ರಂದು ಟ್ರೇಲರ್ ರಿಲೀಸ್ ಮಾಡುವ ಬಗ್ಗೆ ಈಗಾಗಲೇ ಘೋಷಣೆ ಆಗಿದೆ. ಈಗ ಸಿನಿಮಾ ತಂಡದಿಂದ ಹೊಸ ಪೋಸ್ಟರ್​ ರಿಲೀಸ್​ ಆಗಿದೆ. ‘ವಿಶ್ವ ಮಹಿಳಾ ದಿನಾಚರಣೆ’ (International Women’s Day) ಹಿನ್ನೆಲೆಯಲ್ಲಿ ಈ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್​​ನಲ್ಲಿ ‘ಕೆಜಿಎಫ್​ 2’ನಲ್ಲಿ ಬರುವ ಎಲ್ಲಾ ಪ್ರಮುಖ ಮಹಿಳಾ ಪಾತ್ರಗಳನ್ನು ಪೋಸ್ಟರ್​ನಲ್ಲಿ ತೋರಿಸಲಾಗಿದೆ.ಮಾಳವಿಕಾ ಅವಿನಾಶ್, ಅರ್ಚನಾ ಜೋಯಿಸ್​, ರವೀನಾ ಟಂಡನ್​ ಮೊದಲಾದ ಮಹಿಳಾ ಕಲಾವಿದರು ಇರುವ ಫೋಟೋವನ್ನು ರಿಲೀಸ್​ ಮಾಡಲಾಗಿದೆ. ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗುತ್ತಿದೆ.


ಮಹಿಳಾ ದಿನಾಚರಣೆಗೆ ವಿಶಿಷ್ಟ ಪೋಸ್ಟರ್​!


‘ನೀವು ಜನ್ಮ ನೀಡುತ್ತೀರಿ. ನೀವು ಪೋಷಿಸುತ್ತೀರಿ. ನೀವು ತ್ಯಾಗ ಮಾಡುತ್ತೀರಿ. ನೀವು ಪ್ರೀತಿಸುತ್ತೀರಿ. ನೀವು ಕಾಳಜಿ ವಹಿಸುತ್ತೀರಿ. ನೀವು ಶಕ್ತಿವಂತರು. ನೀವು ಸೃಷ್ಟಿಕರ್ತರು. ನೀವೇ ಬ್ರಹ್ಮಾಂಡ. ಅವರೆಲ್ಲರಿಗೂ ವಂದನೆಗಳು’ ಎಂದು ಬರೆದುಕೊಂಡು ಹಂಚಿಕೊಳ್ಳಲಾಗಿದೆ. ಈ ಫೋಟೋ ಕಂಡ ಮಹಿಳಾ ಅಭಿಮಾನಿಗಳು ಫುಲ್​  ದಿಲ್​ಖುಷ್ ಆಗಿದ್ದಾರೆ.


ಇದನ್ನೂ ಓದಿ: ಕೆಜಿಎಫ್​ ಗತ್ತು ಇಡೀ ವಿಶ್ವಕ್ಕೇ ಗೊತ್ತು! ಗೂಗಲ್ ಮ್ಯಾಪ್​ನಲ್ಲೂ ರಾಕಿ ಭಾಯ್​ ಸಿನಿಮಾದೇ ಹವಾ..


ಕೆಜಿಎಫ್​ 2 ಟ್ರೈಲರ್​ ನೋಡಿದ ಸೆನ್ಸಾರ್​ ಸದಸ್ಯ!


ಹೊರ ದೇಶಗಳಲ್ಲಿಯೂ ಟ್ರೈಲರ್​ ಬಿಡುಗಡೆ ಮಾಡಲು ಟ್ರೇಲರ್‌ನ ಸೆನ್ಸಾರ್ ಮಾಡಲಾಗಿದ್ದು, ‘ಕೆಜಿಎಫ್ 2’ ಸಿನಿಮಾದ ಟ್ರೈಲರ್​​ ನೋಡಿದ ಸೆನ್ಸಾರ್‌ ಸದಸ್ಯರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಉಮೈರ್ ಸಾಂಧು ಹೆಸರಿನ ಸಾಗರೋತ್ತರ ಸೆನ್ಸಾರ್‌ಬೋರ್ಡ್ ಸದಸ್ಯ ತಾವು ‘ಕೆಜಿಎಫ್ 2’ ಸಿನಿಮಾದ ಟ್ರೈಲರ್​ ನೋಡಿರುವುದಾಗಿ ಹೇಳಿಕೊಂಡಿದ್ದಾರೆ. ಟ್ರೈಲರ್​ ಬಗ್ಗೆ ಸಹ ಹೇಳಿದ್ದಾರೆ. ‘ಈ ಟ್ರೈಲರ್​​ ಅದ್ಭುತವಾಗಿದೆ, ಗೂಸ್ಬಂಪ್ಸ್ ಮತ್ತು ಮೈಂಡ್ಬ್ಲೋವಿಂಗ್ ​ಆಗಿದೆ. ಯಶ್‌ಗೆ ದೊಡ್ಡ ಅಭಿನಂದನೆಗಳು’ ಎಂದು ಪೋಸ್ಟ್ ಮಾಡಿದ್ದಾರೆ.


ಇದನ್ನೂ ಓದಿ: KGF Chapter 2 ಟ್ರೈಲರ್​ ನೋಡಿದ ಸೆನ್ಸಾರ್​ ಸದಸ್ಯ ಹೇಳಿದ್ದೇನು? ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ!


ಗೂಗಲ್​ ಮ್ಯಾಪ್​ನಲ್ಲೂ ಕೆಜಿಎಫ್​ ಹವಾ!


ಹೌದು, ಕೆಜಿಎಫ್​ ಸೃಷ್ಟಿಮಾಡಿರವ ಹೊಸ ದಾಖಲೆಗಳನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ. ಪ್ರಶಾಂತ್​ ನೀಲ್​ ಆ ರೀತಿಯ ಸಿನಿಮಾ ಮಾಡಿದ್ದರು. ಮಾರ್ಚ್ 27ರಂದು ಕೆಜಿಎಫ್ ಚಾಪ್ಟರ್​ 2 ಸಿನಿಮಾ ಟ್ರೈಲರ್​ ರಿಲೀಸ್​ ಆಗಲಿದೆ. ಈಗಿನಿಂದಲೇ ಟ್ರೈಲರ್​ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಮತ್ತೊಂದು ಇಂಟ್ರೆಸ್ಟಿಂಗ್​ ವಿಚಾರ ಒಂದು ಸಖತ್​ ವೈರಲ್ ಆಗುತ್ತಿದೆ. ಅದನ್ನು ಕಂಡ ಅಭಿಮಾನಿಗಳು ಇದು ಕೆಜಿಎಫ್​ ಸಿನಿಮಾದ ಗತ್ತು ಅಂದರೆ ಅಂತ ಹೇಳುತ್ತಿದ್ದಾರೆ. ಗೂಗಲ್  ಮ್ಯಾಪ್​ನಲ್ಲೂ ಕೆಜಿಎಫ್​ ಅಬ್ಬರಿಸುತ್ತಿದೆ. ಸಿನಿಮಾ ಶೂಟಿಂಗ್ ಮಾಡಿದ ಸ್ಥಳಕ್ಕೆ ಗೂಗಲ್​ ಮ್ಯಾಪ್​ನಲ್ಲಿ ಕೆಜಿಎಫ್​ ಶೂಟಿಂಗ್ ಸ್ಪಾಟ್​ ಅಂತ ಲೋಕೇಷನ್​ ರೀ ನೇಮ್​ ಆಗಿದೆ.

Published by:Vasudeva M
First published: