‘ನನ್ನೂರೆ ಚಂದ’; ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಚಿನ್ ಬಸ್ರೂರ್​​ರಿಂದ ವಿಶೇಷ ಹಾಡು

ಸಚಿನ್ ಬಸ್ರೂರ್ ಈ ಆಲ್ಬಮ್ ಸಾಂಗ್ ಅನ್ನು ನಿರ್ದೇಶನ ಮಾಡುವ ಜೊತೆಗೆ ಸಂಗೀತ ಸಂಯೋಜಿಸಿ ಹಾಡಿಗೆ ಧ್ವನಿಗೂಡಿಸಿದ್ದಾರೆ.

Vinay Bhat | news18
Updated:August 1, 2019, 8:41 PM IST
‘ನನ್ನೂರೆ ಚಂದ’; ವಿಶ್ವ ಕುಂದಾಪುರ ಕನ್ನಡ ದಿನಕ್ಕೆ ಸಚಿನ್ ಬಸ್ರೂರ್​​ರಿಂದ ವಿಶೇಷ ಹಾಡು
ನನ್ನೂರೆ ಚಂದ ಹಾಡಿನ ಪೋಸ್ಟರ್
  • News18
  • Last Updated: August 1, 2019, 8:41 PM IST
  • Share this:
ಕರ್ನಾಟಕದ ಅನೇಕ‌ ಗ್ರಾಮೀಣ ಭಾಗದಲ್ಲಿ ಅವರದ್ದೇಯಾದ ಆಡುಭಾಷೆಗಳಿವೆ. ಅವುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಬರುವ ಕುಂದಾಪುರ ಕೂಡ ಒಂದು. ಅರೆ ಭಾಷೆಯನ್ನು ಮಾತನಾಡುತ್ತಾ ಇಂದು ಕರ್ನಾಟಕದಾದ್ಯಂತ ಪ್ರಸಿದ್ಧಿ ಪಡೆದಿರುವುದು ಕುಂದಾಪುರ ಕನ್ನಡ.

ಕುಂದಾಪುರ ಕನ್ನಡವನ್ನು ಸಿನಿಮಾ, ಧಾರವಾಹಿ, ನಾಟಕಗಳಲ್ಲಿ ಬಳಸಿಕೋಳ್ಳುತ್ತಿದ್ದು ಇದೀಗ ರಿಯಾಲಿಟಿ ಶೋ, ಆಲ್ಬಮ್ ಸಾಂಗ್ ಮೂಲಕ ಮಿಂಚುತ್ತಿದೆ.

ಇಂದು ‘ವಿಶ್ವ ಕುಂದಾಪುರ ಕನ್ನಡ ದಿನ’. ಇದೇ ಅಂಗವಾಗಿ ಯೂ ಟ್ಯೂಬ್​​ನಲ್ಲಿ ಬಿಡುಗಡೆಯಾಗಿರುವ ಕುಂದಾಪುರ ಕನ್ನಡದ 'ನನ್ನೂರೆ ಚಂದ' ಎಂಬ ಆಲ್ಬಮ್ ಸಾಂಗ್ ಸಖತ್ ಸೌಂಡ್ ಮಾಡುತ್ತಿದೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಕಂಡಿದೆ. ರವಿ ಬಸ್ರೂರ್ ಅರ್ಪಿಸಿದ ಈ ಆಲ್ಬಮ್ ಸಾಂಗ್ ಅನ್ನು  ಸಚಿನ್ ಬಸ್ರೂರ್ ನಿರ್ದೇಶನ ಮಾಡುವ ಜೊತೆಗೆ ಸಂಗೀತ ಸಂಯೋಜಿಸಿ ಹಾಡಿಗೆ ಧ್ವನಿಗೂಡಿಸಿದ್ದಾರೆ. ಅಲ್ಲದೆ ಪಲ್ಲವಿ ಐಥಾಲ್ ಹಾಗೂ ಪ್ರಮೋದ್ ಅವರ ಜೊತೆ ಸೇರಿ ಸಾಹಿತ್ಯ ಕೂಡ ರಚಿಸಿದ್ದಾರೆ.ಸಚಿನ್ ಬಸ್ರೂರ್ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲಿ ಒಬ್ಬರಾದ ರವಿ ಬಸ್ರೂರು ಅವರ ಅಳಿಯ. ಇವರ ಗರಡಿಯಲ್ಲಿ ಪಳಗಿದ ಸಚಿನ್ ಅವರು ಸಂಗೀತ, ಗಾಯನ ಹಾಗೂ ಛಾಯಾಗ್ರಹಣದಲ್ಲಿ ಪರಿಣಿತರು. ಕೆ.ಜಿ.ಎಫ್ ಚಿತ್ರದಲ್ಲೂ ಇವರು ಕೆಲಸ ಮಾಡಿದ್ದು, ಧೀರ ಧೀರ ಇವ ಸುಲ್ತಾನ ಹಾಡು ಸೇರಿ ಸ್ಯಾಂಡಲ್​ವುಡ್​ನಲ್ಲಿ ಅನೇಕ ಹಾಡುಗಳನ್ನು ಹಾಡಿದ್ದಾರೆ. ಅಲ್ಲದೆ 'ಇದು ನಮ್ಮೂರು', 'ಅಮ್ಮ', ' ನಿಹಾರಿಕ' ಸೇರಿದಂತೆ ಅನೇಕ ಆಲ್ಬಮ್ ಸಾಂಗ್ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಸದ್ಯ ಬಿಡುಗಡೆಯಾಗಿರುವ 'ನನ್ನೂರೆ ಚಂದ' ಹಾಡುಕೂಡ ಎಲ್ಲಡೆ ವೈರಲ್ ಆಗುತ್ತಿದೆ. ಅನೇಕರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ.
First published:August 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading