‘ನನ್ನಪ್ಪ ಯಾರ್ ಗೊತ್ತಾ?’; ಸಿನಿಮಾ ಸ್ಟೈಲ್​ನಲ್ಲೇ ಆವಾಜ್ ಹಾಕಿದ ರಾಕಿಂಗ್​ ಸ್ಟಾರ್​ ಮಗಳು ಆಯ್ರಾ

Ayra-Yash: ಈ ಫೋಟೋದಲ್ಲಿ ಆಯ್ರಾ ಸಖತ್​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು, ಯಶ್​ ಸಖತ್​ ರಗಡ್​ ಆಗಿ ಪೋಸ್​ ಕೊಟ್ಟಿದ್ದಾರೆ. ಸದ್ಯ ಈ ಫೋಟೋಗೆ ಸಾಕಷ್ಟು ಉತ್ತಮ ಕಮೆಂಟ್​ಗಳು ಬಂದಿವೆ.

Rajesh Duggumane | news18
Updated:August 2, 2019, 1:27 PM IST
‘ನನ್ನಪ್ಪ ಯಾರ್ ಗೊತ್ತಾ?’; ಸಿನಿಮಾ ಸ್ಟೈಲ್​ನಲ್ಲೇ ಆವಾಜ್ ಹಾಕಿದ ರಾಕಿಂಗ್​ ಸ್ಟಾರ್​ ಮಗಳು ಆಯ್ರಾ
ಯಶ್​-ಆಯ್ರಾ
  • News18
  • Last Updated: August 2, 2019, 1:27 PM IST
  • Share this:
‘ರಾಕಿಂಗ್​ ಸ್ಟಾರ್’​ ಯಶ್​ ಹಾಗೂ ನಟಿ ರಾಧಿಕಾ ಪಂಡಿತ್​ ದಂಪತಿ ತಮ್ಮ ಮಗಳು ಆಯ್ರಾಳ ಹೊಸ ಹೊಸ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾರೆ. ಆಯ್ರಾ ನೋಡಲು ಥೇಟ್​ ರಾಧಿಕಾ ಪಂಡಿತ್​ ರೀತಿಯೇ ಇದ್ದರೂ ಅವಳ ಆಟ್ಯಿಟೂಡ್​ ಮಾತ್ರ ಅಪ್ಪನದ್ದೇ! ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಪುಟಾಣಿ ಆವಾಜ್​​ ಹಾಕಿದ್ದಾಳೆ!

ಅರೆ! ಇಷ್ಟು ಚಿಕ್ಕ ವಯಸ್ಸಿನಲ್ಲಿ ಆಯ್ರಾ ಹೆದರಿಸುವುದೇ? ಅಷ್ಟಕ್ಕೂ ಆಕೆ ಆವಾಜ್​ ಹಾಕಿದ್ದು ಯಾರಿಗೆ? ಹೀಗೆ ಸಾಲು ಸಾಲು ಪ್ರಶ್ನೆಗಳು ಮೂಡದೇ ಇರದು. ಇದಕ್ಕೆಲ್ಲ ಉತ್ತರ ಯಶ್​ ಹಾಕಿರುವ ಹೊಸ ಫೋಟೋ. ಯಶ್ ಇನ್​ಸ್ಟಾಗ್ರಾಮ್​ನಲ್ಲಿ ಹಾಕಿಕೊಂಡಿರುವ ತಮ್ಮ ಮಗಳ ಹೊಸ ಫೋಟೋ ಸಖತ್​ ವೈರಲ್​ ಆಗಿದೆ.

‘ಕೆಜಿಎಫ್​’  ಚಿತ್ರದಲ್ಲಿ ಡೈಲಾಗ್​ ಒಂದಿದೆ. ​‘ಇಫ್​ ಯು ಥಿಂಕ್​ ಯು ಆರ್​ ಬ್ಯಾಡ್​, ಐ ಆ್ಯಮ್​ ಯುವರ್​ ಡ್ಯಾಡ್​’ ಎಂದು ಯಶ್ ತಮ್ಮ​ ವಿರೋಧಿಗಳಿಗೆ ಡೈಲಾಗ್​ನಲ್ಲೇ ಟಾಂಗ್​ ನೀಡುತ್ತಾರೆ. ಇದೇ ಸಂಭಾಷಣೆಯನ್ನು ಸ್ವಲ್ಪ ಬದಲಾಯಿಸಿ ಮಗಳ ಜೊತೆ ಇರುವ ಫೋಟೋಗೆ ಕ್ಯಾಪ್ಶನ್​ ಕೊಟ್ಟಿದ್ದಾರೆ ಯಶ್. ‘ಇಫ್​ ಯು ಥಿಂಕ್​ ಯು ಆರ್​ ಬ್ಯಾಡ್​, ಯು ನೋ ಹೂ ಈಸ್​ ಮೈ ಡ್ಯಾಡ್​’ ಎಂದು ಬರೆದುಕೊಂಡು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. View this post on Instagram
 

@iamradhikapandit


A post shared by Yash (@thenameisyash) on


ಈ ಫೋಟೋದಲ್ಲಿ ಮಗಳು ಆಯ್ರಾ ಎಷ್ಟು​ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾಳೋ ಅಪ್ಪ ಯಶ್ ಅಷ್ಟೇ​ ರಗಡ್​ ಆಗಿ ಪೋಸ್​ ಕೊಟ್ಟಿದ್ದಾರೆ. ಸದ್ಯ ಈ ಫೋಟೋ ವೈರಲ್ ಆಗಿದ್ದು, ಟ್ವಿಟ್ಟರ್​ನಲ್ಲೂ ಶೇರ್ ಆಗುತ್ತಿದೆ. ಇಂದು ಬೆಳಗ್ಗೆಯಷ್ಟೇ ಮಗಳಿಗೆ 8 ತಿಂಗಳು ತುಂಬಿದ ಖುಷಿಯನ್ನು ಹಂಚಿಕೊಂಡಿದ್ದ ರಾಧಿಕಾ ತಮ್ಮ ಮತ್ತು ಮಗಳ ಮುದ್ದಾದ ಫೋಟೋವನ್ನು ಇನ್​​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು. 
View this post on Instagram
 

Our baby girl turns 8months today 🤗 #radhikapandit #nimmaRP


A post shared by Radhika Pandit (@iamradhikapandit) on


ಸದ್ಯ 'ಕೆ.ಜಿ.ಎಫ್ 2' ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ರಾಖಿ ಭಾಯ್​ಗೆ ಟಕ್ಕರ್ ಕೊಡುವ ಅಧೀರನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ಮತ್ತೊಂದು ಪ್ರಮುಖ ಪಾತ್ರದಲ್ಲಿ ಬಿಟೌನ್ ನಟಿ ರವೀನಾ ಟಂಡನ್ ಸಹ ಬಣ್ಣ ಹಚ್ಚುತ್ತಿದ್ದಾರೆ. ಈ ವರ್ಷದಲ್ಲೇ ಸಿನಿಮಾ ತೆರೆಗೆ ತರುವ ಆಲೋಚನೆ ನಿರ್ದೇಶಕ ಪ್ರಶಾಂತ್​ ನೀಲ್​ ಅವರದ್ದು.

First published: August 2, 2019, 1:27 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading