ಹೈವೇ ಮಾಫಿಯಾದಲ್ಲಿ ಯಶ್​; ಸದ್ದಿಲ್ಲದೆ ಹೊಸ ಕಥೆ ಒಪ್ಪಿಕೊಂಡ ರಾಕಿಂಗ್​ ಸ್ಟಾರ್​​?

‘ಕೆಜಿಎಫ್​ 2’ ಕಡೆ ಯಶ್​ ಹೆಚ್ಚು ಗಮನ ಹರಿಸುತ್ತಿದ್ದಾರೆ. ಪರಭಾಷೆಗಳಿಂದ ಸಾಕಷ್ಟು ಆಫರ್​ಗಳು ಬಂದರೂ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು. ಈಗ ಹೊಸ ಚಿತ್ರ ಒಪ್ಪಿಕೊಂಡಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳದ್ದು.

Rajesh Duggumane | news18
Updated:January 18, 2019, 11:01 AM IST
ಹೈವೇ ಮಾಫಿಯಾದಲ್ಲಿ ಯಶ್​; ಸದ್ದಿಲ್ಲದೆ ಹೊಸ ಕಥೆ ಒಪ್ಪಿಕೊಂಡ ರಾಕಿಂಗ್​ ಸ್ಟಾರ್​​?
ಯಶ್
  • News18
  • Last Updated: January 18, 2019, 11:01 AM IST
  • Share this:
‘ರಾಕಿಂಗ್​ ಸ್ಟಾರ್​’ ಯಶ್​ ‘ಕೆಜಿಎಫ್​’ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಮೊದಲ ಚಾಪ್ಟರ್​ ಹಿಟ್​ ಆಗಿರುವುದರಿಂದ ಹೆಚ್ಚು ಆತ್ಮವಿಶ್ವಾಸದೊಂದಿಗೆ ಚಾಪ್ಟರ್​ 2ನಲ್ಲಿ ಪಾಲ್ಗೊಳ್ಳಲು ಅವರು ಸಿದ್ಧತೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಶೂಟಿಂಗ್​ ಕೂಡ ಆರಂಭಗೊಳ್ಳಲಿದೆ. ಈಗ ಕೇಳಿ ಬರುತ್ತಿರುವ ಹೊಸ ಮಾಹಿತಿ ಏನೆಂದರೆ, ಕಾದಂಬರಿ ಆಧಾರಿಸಿ ಸಿದ್ಧಗೊಳ್ಳುತ್ತಿರುವ ಚಿತ್ರವೊಂದರಲ್ಲಿ ಯಶ್​ ಬಣ್ಣ ಹಚ್ಚಲಿದ್ದಾರಂತೆ. ಸದ್ಯ ಕಾಲಿವುಡ್​ ಅಂಗಳದಲ್ಲಿ ಹೀಗೊಂದು ವದಂತಿ ಹರಿದಾಡುತ್ತಿದೆ.

ಚೆನ್ನೈ ಮೂಲದ ಸಾಮಾಜಿಕ ಹೋರಾಟಗಾರ್ತಿ ಸುಚಿತ್ರಾ ಎಸ್​. ರಾವ್​ ‘ದಿ ಹೈವೇ ಮಾಫಿಯಾ’ ಹೆಸರಿನ ಕಾದಂಬರಿ ಬರೆದಿದ್ದಾರೆ. ಇದನ್ನು ಆಧರಿಸಿ, ತೆಲುಗು, ತಮಿಳು, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಸಿನಿಮಾ ಮಾಡುವುದಾಗಿ ಅವರು ಹೇಳಿಕೊಂಡಿದ್ದಾರೆ. ಕೆಲ ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿವೆಯಂತೆ.

ಇದನ್ನೂ ಓದಿ: ಯಶ್​ಗೆ ನಟನೆ ಕಲಿಸಿದ ಗುರು ಇವರೇ; ರಹಸ್ಯ ಬಿಚ್ಚಿಟ್ಟ 'ರಾಕಿಂಗ್ ಸ್ಟಾರ್'

ಇನ್ನು, ಕಲಾವಿದರ ಆಯ್ಕೆ ಬಗ್ಗೆಯೂ ಸುಚಿತ್ರಾ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಹೇಳಿಕೊಳ್ಳುವ ಅವರು, “ಈ ಚಿತ್ರ ನಾಲ್ಕು ಭಾಷೆಯಲ್ಲಿ ತೆರೆಕಂಡರೆ ಉತ್ತಮ. ಪ್ರತಿ ಭಾಷೆಯಲ್ಲೂ ಬೇರೆ ಬೇರೆ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳುವ ಯೋಚನೆ ಇದೆ. ಕನ್ನಡದಲ್ಲಿ ಯಶ್​, ತಮಿಳಿನಲ್ಲಿ ವಿಜಯ್​, ತೆಲುಗಿನಲ್ಲಿ ಮಹೇಶ್​ ಬಾಬು ಹಾಗೂ ಹಿಂದಿಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅಭಿನಯಿಸದರೆ ಉತ್ತಮ ಎನ್ನುವ ಆಲೋಚನೆ ನನ್ನದು” ಎಂದಿದ್ದಾರೆ. ಆದರೆ, ಇದು ಆಲೋಚನೆ ಮಾತ್ರವೋ ಅಥವಾ ಯಶ್​ ಜೊತೆ ಅವರು ಮಾತುಕತೆ ನಡೆಸಿದ್ದಾರೋ ಎಂಬುದನ್ನು ಹೇಳಿಕೊಂಡಿಲ್ಲ.

‘ಕೆಜಿಎಫ್​ 2’ ಕಡೆ ಯಶ್​ ಹೆಚ್ಚು ಗಮನ ಹರಿಸುತ್ತಿದ್ದಾರೆ. ಪರಭಾಷೆಗಳಿಂದ ಸಾಕಷ್ಟು ಆಫರ್​ಗಳು ಬಂದರೂ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದರು. ಈಗ ಕಾದಂಬರಿ ಆಧರಿಸಿ ಸಿನಿಮಾ ಮೂಡಿ ಬರುತ್ತಿರುವ ಸಿನಿಮಾವನ್ನು ಒಪ್ಪಿಕೊಳ್ಳಲಿದ್ದಾರೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳದ್ದು. ಇದಕ್ಕೆ ಯಶ್​ ಅವರೇ ಉತ್ತರಿಸಬೇಕಿದೆ.

ಇದನ್ನೂ ಓದಿ: 'ದಬಂಗ್​ 3' ಚಿತ್ರದಲ್ಲಿ ಸುದೀಪ್​ ನಟಿಸೋದು ಖಚಿತ?; ಹೌದೆನ್ನುತ್ತಿವೆ ಈ ಟ್ವೀಟ್​ಗಳು

ಪ್ರಶಾಂತ್​ ನೀಲ್​ ನಿರ್ದೇಶನದ ‘ಕೆಜಿಎಫ್​’ ಬಾಕ್ಸ್​​ ಆಫೀಸ್​ ಗಳಿಕೆಯಲ್ಲಿ 200 ಕೋಟಿ ರೂ. ದಾಟಿತ್ತು. ಈ ಚಿತ್ರ ಬಾಲಿವುಡ್​ನಲ್ಲೂ ಒಳ್ಳೆಯ ಗಳಿಕೆ ಮಾಡಿತ್ತು. ಶೀಘ್ರದಲ್ಲೇ ಚಾಪ್ಟರ್​ 2 ಆರಂಭಿಸುವುದಾಗಿ ಚಿತ್ರತಂಡ ಹೇಳಿಕೊಂಡಿದೆ.
First published:January 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading