Radhika Pandit: ಫುಲ್‌ ರಿಲ್ಯಾಕ್ಸ್ ಮೂಡ್‌ನಲ್ಲಿ ರಾಧಿಕಾ ಪಂಡಿತ್.. ಬೀಚ್​ ಹೌಸ್​ನಲ್ಲಿ ಹಾಲಿಡೇ ಸ್ಪೆಂಡ್​ ಮಾಡಿದ ನಟಿ!

ಅಭಿಮಾನಿಯೊಬ್ಬರು ಎರಡು ಮಕ್ಕಳ ತಾಯಿಯಾದರೂ ಇಷ್ಟು ಚೆಲುವು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

 ರಾಧಿಕಾಪಂಡಿತ್

 ರಾಧಿಕಾಪಂಡಿತ್

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ತಮ್ಮ ಸಹಜ ಅಭಿನಯದಿಂದಲೇ ಅತ್ಯುತ್ತಮ ನಟಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ನಟಿ ರಾಧಿಕಾ ಪಂಡಿತ್. (Actress Radhika Pandit )ರಾಧಿಕಾ ಅವರ ಪತಿ, ನಟ ಯಶ್ (Actor Yash ) ಪ್ಯಾನ್ ಇಂಡಿಯಾ ಸ್ಟಾರ್ ಆದ ಬಳಿಕ ಈ ಶಿರಾಲಿ ಬೆಡಗಿ ಭಾರತಕ್ಕೆ ಕೆಜಿಎಫ್ ಸ್ಟಾರ್ ಪತ್ನಿಯೆಂದೇ ಚಿರಪರಿಚಿತ. ಸದ್ಯ ಇನ್​ಸ್ಟಾಗ್ರಾಂ (Instagram) ಮತ್ತು ಫೇಸ್​ಬುಕ್​ನಲ್ಲಿ ಕಾಣಸಿಗುವ ರಾಧಿಕಾ ಪಂಡಿತ್ ಮತ್ತೆ ಸುದ್ದಿಯಲ್ಲಿದ್ದಾರೆ. ಬೀಚ್ (Beach) ಬಳಿಯ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸಂತಸ ಮೂಡಿಸಿದ್ದಾರೆ.

ಸೂರ್ಯಾಸ್ತದ ಫೋಟೋ
ರಾಧಿಕಾ ಪಂಡಿತ್ ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುವುದು ಸಾಮಾನ್ಯ. ಆದರೆ ಈ ಫೋಟೋ ಸ್ವಲ್ಪ ವಿಶೇಷತೆಗಳನ್ನು ಒಳಗೊಂಡಿದೆ. ಫ್ಲೋರಲ್ ಟಾಪ್ ಮತ್ತು ಡೆನಿಮ್ ಶಾರ್ಟ್​​ನಲ್ಲಿ ಕಂಗೊಳಿಸುತ್ತಾ, ನಿದಿರೆಯ ಮಡಿಲಲ್ಲಿ ವಿಶ್ರಮಿಸುತ್ತಿರುವಂತೆ ಕಾಣಿಸುತ್ತಿದ್ದಾರೆ. ಅಲ್ಲದೇ ಸಮುದ್ರ ಕಿನಾರೆಯಲ್ಲಿ ಸೂರ್ಯಾಸ್ತದ ಸಂದರ್ಭದಲ್ಲಿ ಮಾಂತ್ರಿಕತೆಯ ಭಾವವನ್ನು ಈ ಫೋಟೋ ಅಭಿವ್ಯಕ್ತಿಸುತ್ತಿದೆ.

ಪೋಸ್ಟ್​​ಗೆ ಮೆಚ್ಚುಗೆ
'ನಾನು ಈ ಚಿತ್ರದಲ್ಲಿ ಅನುಭವಿಸುತ್ತಿರುವಂತೆ, ಈ ವರ್ಷ ಶಾಂತತೆ, ಸುಂದರತೆ, ಪ್ರಕಾಶಮಾನವಾಗಿ, ತೃಪ್ತಿಕರವಾಗಿ, ಸಂತೋಷ ಮತ್ತು ಮಾಂತ್ರಿಕತೆಯಿಂದ ಕೂಡಿರಲಿ' ಎಂದು ಶಿರ್ಷೀಕೆಯಲ್ಲಿ ವಿವರಿಸಿದ್ದಾರೆ. ಆ ಮೂಲಕ 2022 ರ ಹೊಸ ವರ್ಷ ಎಲ್ಲರಿಗೂ ಪ್ರಶಾಂತ ಮನಸ್ಥಿತಿಯನ್ನು ತರಲಿ ಎನ್ನುವ ಹಾರೈಕೆಯನ್ನು ತಿಳಿಸಿದ್ದಾರೆ.ಪ್ರತಿನಿತ್ಯ ಮನೆ, ಮಕ್ಕಳು, ವರ್ಕ್ ಫ್ರಮ್ ಹೋಂ ಎಂದು ಕಳೆದು ಹೋಗುವ ಎಷ್ಟೋ ಗೃಹಿಣಿಯರಿಗೆ ಈ ಫೋಟೋ ಹೊಸ ರೀತಿಯ ದೃಷ್ಟಿಕೋನವನ್ನು ಪರಿಚಯಿಸಿದೆ.

ಇದನ್ನೂ ಓದಿ: KGF 2 V/S Beast: ರಾಕಿ ಭಾಯ್​ ಎದುರು ತೊಡೆ ತಟ್ಟಿದ ಮತ್ತೊಬ್ಬ ಸ್ಟಾರ್​ ನಟ: ಪ್ಲೀಸ್..​ ತಪ್ಪು ಮಾಡ್ಬೇಡಿ ಅಂದಿದ್ಯಾಕೆ ಫ್ಯಾನ್ಸ್​?

ಅಲ್ಲದೇ ಈ ಚಿತ್ರಕ್ಕೆ ಅಭಿಮಾನಿಗಳು ಹಾರೈಕೆ ತಿಳಿಸುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇಲ್ಲಿಯವರೆಗೂ 19 ಸಾವಿರ ಜನರು ಲೈಕ್ ಮತ್ತು ಹಾರ್ಟ್ ಎಮೋಜಿಗಳನ್ನು ಈ ಫೋಟೋಗೆ ನೀಡುವ ಮೂಲಕ ರಾಧಿಕಾ ಪಂಡಿತ್ ಅವರ ಪೋಸ್ಟ್​​ಗೆ ಮೆಚ್ಚುಗೆ ಸೂಚಿಸಿದ್ದಾರೆ. ಕೆಲವರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ.

ಚೆಲುವು ಹೇಗೆ ಸಾಧ್ಯ
ಕೆಲವು ಅಭಿಮಾನಿಗಳು 'ಮೇಡಂ ಈಗ ನಿಮ್ಮ ಮಕ್ಕಳು ಬೆಳೆದಿದ್ದಾರೆ ಮತ್ತೆ ನೀವು ಸಿನಿಮಾಗಳಲ್ಲಿ ಅಭಿನಯಿಸಿ' ಎಂದು ಹೇಳಿದ್ದಾರೆ. ಇನ್ನೊಬ್ಬ ಅಭಿಮಾನಿ 'ಎರಡು ಮಕ್ಕಳ ತಾಯಿಯಾದರೂ ಇಷ್ಟು ಚೆಲುವು ಹೇಗೆ ಸಾಧ್ಯ' ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರಾಧಿಕಾ ಪಂಡಿತ್ ಅವರ ಎಲ್ಲಾ ಫೋಟೋಗಳನ್ನು ಅಭಿಮಾನಿಗಳು ಮೆಚ್ಚುತ್ತಲೇ ಇರುತ್ತಾರೆ. ಆ ಮೂಲಕ ರಾಧಿಕಾ ಅವರ ಪ್ರತಿ ನಡೆಗಳನ್ನು ಅಭಿಮಾನಿಗಳು ಪ್ರೀತಿಯಿಂದ ಗಮನಿಸುತ್ತಿರುತ್ತಾರೆ. ಅದಕ್ಕೆ ಚೆಂದದೊಂದು ಪ್ರತಿಕ್ರಿಯೆಯನ್ನು ನೀಡುತ್ತಲೇ ಇರುತ್ತಾರೆ, ಅದು ಈ ಫೋಟೋದಲ್ಲೂ ಮುಂದುವರಿದಿದೆ.

ಸಮುದ್ರ ತೀರವೆಂದರೆ ರಾಕಿಂಗ್ ಕಪಲ್​​ಗೆ ಅಚ್ಚುಮೆಚ್ಚು. ರಾಧಿಕಾ ಪಂಡಿತ್ ಮತ್ತು ಯಶ್ ಇಬ್ಬರೂ ಸಮುದ್ರ ತೀರದಲ್ಲೇ ಹೆಚ್ಚು ಸಮಯವನ್ನು ಕಳೆಯುತ್ತಾರೆ ಎನ್ನುವುದನ್ನು ಅವರ ಸಾಕಷ್ಟು ಫೋಟೋಗಳಲ್ಲಿ ಕಾಣಬಹುದು. ಅಲ್ಲದೇ ತಮ್ಮ ಮುದ್ದು ಮಗನ ಹುಟ್ಟು ಹಬ್ಬವನ್ನು ಕೂಡ ಸಮುದ್ರ ತೀರದಲ್ಲೇ ಆಚರಿಸುವ ಮೂಲಕ ಕಡಲಿನ ಮೇಲಿನ ತಮ್ಮ ಪ್ರೀತಿಯನ್ನು ಅಭಿಮಾನಿಗಳೊಟ್ಟಿಗೆ ಹಂಚಿಕೊಂಡಿದ್ದರು.

ಕಪಲ್ ಗೋಲ್ಸ್​​ ಎನ್ನುವ ವಿಶೇಷ
ಅಲ್ಲದೇ ಈ ಸ್ಟಾರ್ ಕಪಲ್ ಮೊನ್ನೆಯಷ್ಟೇ ವಿದೇಶದಲ್ಲಿ ಹೊಸ ವರ್ಷವನ್ನು ಬರಮಾಡಿಕೊಂಡಿದ್ದ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಕಪಲ್ ಗೋಲ್ಸ್​​ ಎನ್ನುವ ವಿಶೇಷ ಕಾನ್ಸೆಪ್ಟ್​​ಗೆ ಯುವ ಪೀಳಿಗೆಗೆ ಮಾದರಿ ಜೋಡಿ ಎನಿಸಿಕೊಂಡಿದ್ದಾರೆ ಮಿ ಅಂಡ್ ಮಿಸ್ಸಸ್ ರಾಮಾಚಾರಿ. ನಂದಗೋಕುಲ ಧಾರಾವಾಹಿ ಮೂಲಕ ಆರಂಭದ ರಾಧಿಕಾ ಪಂಡಿತ್ ಮತ್ತು ಯಶ್ ರ ಪಯಣ ಸದ್ಯ ಐರಾ ಮತ್ತು ಯಥರ್ವ್ ಪುಟಾಣಿಗಳೊಂದಿಗೆ ನಿಜವಾಗಿಯೂ ನಂದಗೋಕುಲವೇ ಆಗಿದೆ.

ಇದನ್ನೂ ಓದಿ: 2022 Most Expected Movies: ಈ ವರ್ಷ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಕೆಜಿಎಫ್​-2: ಕಂಪ್ಲೀಟ್​ ಡೀಟೆಲ್ಸ್​ ಇಲ್ಲಿದೆ..

ಸಕಲ ಸಿದ್ಧತೆ
ರಾಧಿಕಾ ಪಂಡಿತ್ ಮತ್ತು ಯಶ್ ಸಿನಿ ಪಯಣದಲ್ಲಿ ತಮ್ಮದೇ ಆದ ವಿಭಿನ್ನ ಚಾಪು ಮೂಡಿಸಿದ್ದಾರೆ. ಸದ್ಯ ಕುಟುಂಬ ಮತ್ತು ಮಕ್ಕಳ ಪಾಲನೆ ಪೋಷಣೆಯಲ್ಲಿರುವ ರಾಧಿಕಾ ಪಂಡಿತ್​ ಪತಿಯೊಡನೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಖುಷಿಗೆ ಪಾತ್ರರಾಗಿದ್ದಾರೆ. ಇನ್ನೂ ಯಶ್ ನಟನೆಯ ಕೆಜಿಎಫ್​ ಚಾಪ್ಟರ್ 1 ದಾಖಲೆ ನಿರ್ಮಿಸಿ ಚಾಪ್ಟರ್​​​ 2 ಆಗಮನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ನಿರ್ದೇಶಕ ಪ್ರಶಾಂತ್ ನೀಲ್, ಸಂಜಯ್ ದತ್, ರವೀನಾ ಟಂಡನ್ ಸೇರಿದಂತೆ ಭಾರತ ಸಿನಿರಂಗದ ದೊಡ್ಡ ಕಲಾವಿದರ ಪರಿಶ್ರಮ ಈ ಸಿನಿಮಾದಲ್ಲಿದೆ. ನಿರ್ಮಾಪಕ ವಿಜಯ್ ಕಿರಗಂದೂರು ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಏಪ್ರಿಲ್ 14 ರಂದು ಕೆಜಿಎಫ್ ಚಾಪ್ಟರ್ 2 ಬೆಳ್ಳಿತೆರೆಯಲ್ಲಿ ವಿಜೃಂಭಿಸಲಿದೆ.
Published by:vanithasanjevani vanithasanjevani
First published: