• Home
  • »
  • News
  • »
  • entertainment
  • »
  • Kantara-Yash: ಕಾಂತಾರ ನನ್ನ ಸಿನಿಮಾ ಎಂದ ಯಶ್, ಹೀಗಂದಿದ್ದೇಕೆ ರಾಕಿಂಗ್ ಸ್ಟಾರ್?

Kantara-Yash: ಕಾಂತಾರ ನನ್ನ ಸಿನಿಮಾ ಎಂದ ಯಶ್, ಹೀಗಂದಿದ್ದೇಕೆ ರಾಕಿಂಗ್ ಸ್ಟಾರ್?

ರಿಷಬ್​, ಯಶ್​

ರಿಷಬ್​, ಯಶ್​

ಕಾಂತಾರ ಸಿನಿಮಾ ಬಗ್ಗೆ ನಟ ಯಶ್ ಮಾತನಾಡಿದ್ದು ಅದು ಕೂಡಾ ನನ್ನ ಸಿನಿಮಾ ಎಂದು ಹೇಳಿದ್ದಾರೆ. ರಾಕಿಂಗ್ ಸ್ಟಾರ್ ಹೇಳಿದ್ದೇನು? ಇಲ್ಲಿದೆ ಡೀಟೆಲ್ಸ್.

  • News18 Kannada
  • Last Updated :
  • Bangalore, India
  • Share this:

ಕಾಂತಾರ ಸಿನಿಮಾ ದೇಶಾದ್ಯಂತ ಭಾರೀ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ಎಲ್ಲೆಡೆ ಕನ್ನಡ ಸಿನಿಮಾದ ಘಮ ಹರಡಿದ್ದು ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಕಾಂತಾರ (Kantara) ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಸಿನಿಮಾ ಬಗ್ಗೆ ಹಿರಿಯ ನಟ, ನಟಿಯರು, ಸ್ಟಾರ್, ಸೆಲೆಬ್ರಿಟಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಯಶ್ (Yash) ಅವರು ಸಿನಿಮಾ ಬಗ್ಗೆ ಏನೂ ಹೇಳಿಲ್ಲ ಎನ್ನುವ ಆರೋಪ ಇತ್ತು. ಆದರೆ ವಾಸ್ತವದಲ್ಲಿ ರಿಷಬ್ ಶೆಟ್ಟಿ ಅವರೇ  ಹೆಳಿದಂತೆ ನಟ ಯಶ್ ಅವರು ಕಾಂತಾರ ಸಿನಿಮಾ (Cinema) ಬಿಡುಗಡೆಯ ದಿನವೇ ಬೆಳಗ್ಗೆ ಕಾಲ್ ಮಾಡಿ ಶುಭ ಹಾರೈಸಿದ್ದರು. ಇನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ (Interview) ಯಶ್ ಮತ್ತೊಮ್ಮೆ ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.


ಕಾಂತಾರ ನನ್ನ ಸಿನಿಮಾ ಎಂದ ಯಶ್


ಸ್ಯಾಂಡಲ್​​ವುಡ್ ರಾಕಿಂಗ್ ಸ್ಟಾರ್ ಯಶ್ ಅವರು ಕಾಂತಾರ ಸಿನಿಮಾ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಮಾಧ್ಯಮದ ಸಂದರ್ಶನದಲ್ಲಿ ಮಾತನಾಡಿದ ಯಶ್ ಅವರು ಕಾಂತಾರ ನನ್ನ ಸಿನಿಮಾ ಅಲ್ಲ, ಕನ್ನಡದ ಸಿನಿಮಾ ಎಂದಿದ್ದೀರಿ, ಕಾಂತಾರ ಕೂಡಾ ನನ್ನ ಸಿನಿಮಾ ಎಂದಿದ್ದಾರೆ ಕೆಜಿಎಫ್ ಸ್ಟಾರ್.
ಕಾಂತಾರ ಸಿನಿಮಾ ಕೂಡಾ ನನ್ನದು


ಕಾಂತಾರ ನಿಮ್ಮ ಸಿನಿಮಾ, ನಿಮ್ಮ ಸಿನಿಮಾ ಅಲ್ಲ ಕನ್ನಡದ ಸಿನಿಮಾ ಸದ್ಯ ಅಲೆಗಳನ್ನು ಸೃಷ್ಟಿಸಿದೆ. ಲೋ ಬಜೆಟ್ ಸಿನಿಮಾ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿದೆ ಎಂದಾಗ ಇದಕ್ಕೆ ಉತ್ತರಿಸಿದ ಯಶ್ ಅವರು ಕಾಂತಾರ ಕೂಡಾ ನನ್ನ ಸಿನಿಮಾ. ನನ್ನ ಇಂಡಸ್ಟ್ರಿ ದೃಷ್ಟಿಯಿಂದ ನೋಡುವುದಾದರೆ ನಮಗೆ ಎಟಿಟ್ಯೂಡ್ ಶಿಫ್ಟ್ ಬೇಕಾಗಿದೆ. ಜನರಲ್ಲಿ ಪ್ರತಿಭೆ ಇದೆ. ವಿಶ್ವಾಸವಿದೆ. ಆದರೆ ನೀವು ಹೊರಗೆ ಬಂದು ಜನ ನಿಮ್ಮನ್ನು ಜಡ್ಜ್ ಮಾಡಲು ಪ್ರಾರಂಭಿಸಿದಾಗ, ನಿಮ್ಮ ಇಂಡಸ್ಟ್ರಿ ಬಗ್ಗೆ ಒಂದು ರೀತಿಯಾಗಿ ಮಾತನಾಡಿದಾಗ ಆ ದೃಷ್ಟಿಕೋನವನ್ನು ಬ್ರೇಕ್ ಮಾಡುವುದಕ್ಕೆ ತುಂಬಾ ಶ್ರಮ ವಹಿಸಬೇಕಾಗಿ ಬರುತ್ತದೆ ಎಂದಿದ್ದಾರೆ.


ಆ ಪ್ರಯತ್ನ ತುಂಬಾ ಮುಖ್ಯ. ನಾನು ನನ್ನ ಕೆರಿಯರ್​ನ ಆರಂಭದಲ್ಲಿ ಇದನ್ನು ಅನುಭವಿಸಿದ್ದೆ. ಎಲ್ಲರೂ ನಮ್ಮ ಇಂಡಸ್ಟ್ರಿ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದರು. ನಮ್ಮದು ಚಿಕ್ಕ ಇಂಡಸ್ಟ್ರಿ, ನಮ್ಮಲ್ಲಿ ಬಹಳಷ್ಟು ಇತಿ ಮಿತಿಗಳಿವೆ. ನಮಗೆ ಬೇರೆ ಇಂಡಸ್ಟ್ರಿ ಜೊತೆ ಸ್ಪರ್ಧಿಸೋಕಾಗಲ್ಲ. ಅವರದ್ದು ಬಿಗ್ ಬಜೆಟ್ ಸಿನಿಮಾಗಳು. ಬಂಡವಾಳ ಹೆಚ್ಚಿರುತ್ತದೆ. ಅವರ ಮಾರುಕಟ್ಟೆಯೂ ದೊಡ್ಡದಿದೆ. ಕನ್ನಡ ಸಿನಿಮಾ ಇಂಡಸ್ಟ್ರಿ ಅಷ್ಟು ಮಾಡುವುದು ಸಾಧ್ಯವಿಲ್ಲ ಎಂದು ಬಹಳಷ್ಟು ಜನರು ಹೇಳುತ್ತಿದ್ದರು.


ಇದನ್ನೂ ಓದಿ: Rajinikanth-Yash: ರಜನಿ ಅವರಿಂದ ಹೆಚ್ಚು ಪ್ರಭಾವಕ್ಕೆ ಒಳಗಾಗ್ತಾರಂತೆ ಯಶ್! ರಾಕಿ ಭಾಯ್ ರೋಲ್ ಮಾಡೆಲ್ಸ್ ಯಾರ್ಯಾರು?


ಕನ್ನಡ ಇಂಡಸ್ಟ್ರಿಯಲ್ಲಿ ಕೆಲವು ವರ್ಷಗಳ ಹಿಂದೆ ಸೆಲ್ಫ್ ಬಿಲೀವ್ ಕಡಿಮೆ ಇತ್ತು. ಆದರೆ ಶೀಘ್ರ ಇದೆಲ್ಲವೂ ಬದಲಾಯಿತು ಎಂದಿದ್ದಾರೆ.


ಇದನ್ನೂ ಓದಿ: Yash: ನಾರ್ತ್ ಜನ ಸೌತ್ ಸಿನಿಮಾವನ್ನು ತಮಾಷೆ ಮಾಡ್ತಿದ್ರು! ಯಶ್ ಹೇಳಿದ್ದಿಷ್ಟು


ಸೌತ್ ಸಿನಿಮಾಗಳ ಬಗ್ಗೆ ತಮಾಷೆ


ನಟ ಸೌತ್ ಸಿನಿಮಾಗಳನ್ನು ಯಾವ ರೀತಿ ತಮಾಷೆ ಮಾಡಲಾಗುತ್ತಿತ್ತು ಎನ್ನುವುದರ ಬಗ್ಗೆಯೂ ಮಾತನಾಡಿದ್ದಾರೆ. ದಕ್ಷಿಣದ ಸಿನಿಮಾಗಳ ಆ್ಯಕ್ಷನ್ ನೋಡಿ ಇದೆಂಥಾ ಆ್ಯಕ್ಷನ್ ಗಾಳಿಯಲ್ಲಿ ಹಾರುತ್ತಿದ್ದಾರೆ ಎನ್ನುತ್ತಿದ್ದರು. ವಾಸ್ತವದಲ್ಲಿ ದಕ್ಷಿಣದ ಸಿನಿಮಾಗಳನ್ನು ಅಲ್ಲಿ ಕೆಟ್ಟದಾಗಿ ಪ್ರಸ್ತುತಪಡಿಸಲಾಗುತ್ತಿತ್ತು. ಅದರ ಪರಿಣಾಮವಾಗಿ ಜನರು ಸಿನಿಮಾದ ಬಗ್ಗೆ ಕೆಟ್ಟ ಅಭಿಪ್ರಾಯ ಹೊಂದಿದ್ದರು. ಈಗ ಅದು ಬದಲಾಗಿದೆ ಎಂದಿದ್ದಾರೆ ಯಶ್.

Published by:Divya D
First published: