ರಾಕಿಂಗ್ ಸ್ಟಾರ್ ಯಶ್ (Rocking Star Yash) ಅವರು ಅಪಾರ ಅಭಿಮಾನಿಗಳ (Fans) ಪ್ರೀತಿ ಗಳಿಸಿದ್ದಾರೆ. ಕೆಜಿಎಫ್ ಹಾಗೂ ಕೆಜಿಎಫ್ 2 (KGF 2) ಸಿನಿಮಾಗಳ ಮೂಲಕ ಯಶ್ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಸ್ಯಾಂಡಲ್ವುಡ್ ಮಾತ್ರವಲ್ಲ ವಿದೇಶದಲ್ಲಿಯೂ ಅಭಿಮಾನಿಗಳನ್ನು ಗಳಿಸಿದ ಯಶ್ ಕೆಜಿಎಫ್ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದರು. ಇದೀಗ ನಟ ಬೆಳ್ಳಂಬೆಳಗ್ಗೆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಗಾಲ್ಫ್ ಗ್ರೌಂಡ್ ಬಳಿಯ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ನ ಮುಂದೆ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ ಯಶ್.
ರಾಕಿಂಗ್ ಸ್ಟಾರ್ ಯಶ್ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಬಂದಿದ್ದರು. ಹುಟ್ಟುಹಬ್ಬದ ದಿನ ಸ್ಟಾರ್ ನಟರು ಅಭಿಮಾನಿಗಳನ್ನು ಭೇಟಿ ಮಾಡುವುದು ವಾಡಿಕೆ. ಆದರೆ ಈ ಸಲ ಯಶ್ ಅವರು ಫ್ಯಾಮಿಲಿ ಜೊತೆ ದುಬೈ ವೆಕೇಷನ್ಗೆ ಹೋದ ಕಾರಣ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆಯಲ್ಲಿ ಫೆಬ್ರವರಿ 2ರಂದು ಯಶ್ ಅವರು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕರ್ನಾಟಕದ ಮೂಲೆ ಮೂಲೆಯಿಂದ ಬಂದಿದ್ದ ಅಭಿಮಾನಿಗಳು ಯಶ್ ಅವರನ್ನು ಭೇಟಿಯಾಗಿದ್ದಾರೆ.
ಇದನ್ನೂ ಓದಿ: Raj B Shetty: ರಾಜ್ ಬಿ ಶೆಟ್ಟಿ ಬಿಗ್ ಬಜೆಟ್ ಮೂವಿ! ಇದು ಲವ್ ಸ್ಟೋರಿ ಅಲ್ಲ
ಬಾಗಲಕೋಟೆ, ಧಾರವಾಡ, ಉತ್ತರ ಪ್ರದೇಶದಿಂದಲೂ ಯಶ್ ಅವರನ್ನು ನೋಡಲು ಅಭಿಮಾನಿಗಳು ಬಂದಿದ್ದರು. ಯಶ್ ಭೇಟಿಗೆ ಅಭಿಮಾನಿಗಳ ದಂಡೇ ಹರಿದು ಬಂದಿತ್ತು. ಕೆಲವು ಅಭಿಮಾನಿಗಳಿಗೆ ಯಶ್ ಅವರು ಆಹ್ವಾನ ಕೊಟ್ಡಿದ್ದರು. ಈ ಸುದ್ದಿ ತಿಳಿದು ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಯಶ್ ಮನೆ ಬಳಿ ಸೇರಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ತಮ್ಮ ನಿವಾಸದ ಬಳಿ ನಟ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಕೆಲವು ಅಭಿಮಾನಿಗಳನ್ನು ಭೇಟಿ ಮಾಡಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಸಂದರ್ಭ ಸದ್ಯದಲ್ಲಿಯೇ ಯಶ್ 19 ಸಿನಿಮಾ ಅನೌನ್ಸ್ ಮಾಡುತ್ತೇನೆ ಎಂದು ನಟ ಹೇಳಿದ್ದಾರೆ.
ಯಶ್ 19 ನೇ ಸಿನಿಮಾಗೆ ಹೆಚ್ಚಿದ ಕುತೂಹಲ
ರಾಕಿ ಭಾಯ್ ಅವರ 19ನೇ ಸಿನಿಮಾ ಅನೌನ್ಸ್ಮೆಂಟ್ಗಾಗಿ ಕನ್ನಡ ಸಿನಿಪ್ರೇಕ್ಷಕರು ಮಾತ್ರವಲ್ಲದೆ ದೇಶಾದ್ಯಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಅವರ ಬರ್ತ್ಡೇ ದಿನ ಸಿನಿಮಾ ಅನೌನ್ಸ್ ಮಾಡುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ಹುಸಿಯಾಗಿದೆ.
ಕೆಜಿಎಫ್ 2 ಸಿನಿಮಾ ಯಾವಾಗ ಬರುತ್ತೆ?
ಕೆಜಿಎಫ್ ಡೈರೆಕ್ಟರ್ ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಹೊಂಬಾಳೆ ಫಿಲ್ಮ್ಸ್ ಕೂಡಾ ಕಾಂತಾರ 2 ಸಿನಿಮಾ ನಿರ್ಮಾಣದಲ್ಲಿ ಬ್ಯುಸಿಯಾಗಿದೆ. ಹಾಗಾಗಿ ಸದ್ಯ ಯಶ್ ಅಭಿನಯದ ಕೆಜಿಎಫ್ 3 ಸಿನಿಮಾ ಬಿಡುಗಡೆಯಾಗುತ್ತಿಲ್ಲ. ಬದಲಾಗಿ ಈ ಸಿನಿಮಾ 2026ರ ವೇಳೆಗೆ ರಿಲೀಸ್ ಆಗಲಿದೆ ಎಂದು ತಿಳಿದು ಬಂದಿದೆ.
ಕೆಜಿಎಫ್ ಪಾರ್ಟ್ 5 ಕೂಡ ಬರುತ್ತೆ
‘ಕೆಜಿಎಫ್ 3 ಸಿನಿಮಾದ ಪ್ರೀ ಪ್ರೊಡೆಕ್ಷನ್ ಕೆಲಸ ಆರಂಭವಾಗಿಲ್ಲ. ಆದ್ರೆ ಕೆಜಿಎಫ್ ಪಾರ್ಟ್ 3 ಪಕ್ಕಾ ಎಂದು ವಿಜಯ್ ಕಿರಂಗದೂರ್ ಹೇಳಿದ್ದಾರೆ. ಇನ್ನು ಕೆಜಿಎಫ್ ಪಾರ್ಟ್ 3 ಬಳಿಕ ಕೆಜಿಎಫ್ ಸೀರಿಸ್ನಲ್ಲಿ ಐದು ಪಾರ್ಟ್ಗಳು ಬರಬಹುದು ಎಂದು ನಿರ್ಮಾಪಕರು ಹೇಳಿದ್ದಾರೆ. ಕೆಜಿಎಫ್ ಸೀರಿಸ್ ಹೀಗೆ ಮುಂದಿವರಿಯುತ್ತಾ? ಹಾಗಾದ್ರೆ ಕೆಜಿಎಫ್ ಪಾರ್ಟ್ 5 ಬರೋದಕ್ಕೆ ಎಷ್ಟು ವರ್ಷಬೇಕು ಎಂದು ಅಭಿಮಾನಿಗಳು ಪ್ರಶ್ನೆ ಮಾಡ್ತಿದ್ದಾರೆ.
ಕೆಜಿಎಫ್ ಸೀರಿಸ್ನಲ್ಲಿ ಬದಲಾಗ್ತಾರಂತೆ ಹೀರೋ
ಕೆಜಿಎಫ್ 1, ಕೆಜಿಎಫ್ 2 ನಲ್ಲಿ ರಾಕಿ ಭಾಯ್ ಆಗಿ ಮಿಂಚಿದ್ದ ಯಶ್ ಕೆಜಿಎಫ್ 3ನಲ್ಲೂ ಅವರೇ ಇರ್ತಾರೆ ಎನ್ನಲಾಗ್ತಿದೆ. ಆದ್ರೆ ಮುಂದಿನ ಕೆಜಿಎಫ್ ಸರಣಿಯಲ್ಲಿ ಯಶ್ ನಾಯಕರಾಗಿರೋದಿಲ್ಲ. ಯಶ್ ಬದಲು ನಾಯಕನ ಪಾತ್ರವನ್ನು ಬೇರೆಯವರು ನಿರ್ವಹಿಸಲಿದ್ದಾರೆ ಎಂದು ನಿರ್ಮಾಪಕ ವಿಜಯ್ ಕಿರಂದೂರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ