ಬಾಲಿವುಡ್ ಮಂದಿಯ ಕಣ್ಣು ದಕ್ಷಿಣದ (Koffee with Karan Show Updates) ಮೇಲೆ ಬಿದ್ದಾಗಿದೆ. ಇಲ್ಲಿಯ ಕಥೆಗಳನ್ನ ರಿಮೇಕ್ ಮಾಡೋದು ಕಾಮನ್ ಆಗಿದೆ. ಇಲ್ಲಿಂದ ಅಲ್ಲಿಗೆ ಹೋಗುವ ಕನ್ನಡ ಸಿನಿಮಾಗಳನ್ನ ವಿತರಿಸೋಕೂ (Kannada Star in Karan Show) ಮುಂಬೈ ಮಂದಿ ಇಂಟ್ರಸ್ಟ್ ತೋರಿದ್ದಾರೆ. ಅದರಲ್ಲಿ ಕರಣ್ ಜೋಹರ್ ಕೂಡ ಒಬ್ಬರು. ಈ ಹಿಂದಿನ ಕೆಜಿಎಫ್ ಚಿತ್ರದ ವಿತರಣೆಯಲ್ಲು ಕರಣ್ ಜೋಹರ್ (Rocking Star Yash in Karan Show) ಇದ್ದರು ಅನ್ನುವ ಸುದ್ದಿ ಕೂಡ ಇದೆ. ಆದರೆ ಅದೇ ಕರಣ್ ಜೋಹರ್ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕನ್ನಡದ ಇಬ್ಬರು ಸ್ಟಾರ್‌ಗಳನ್ನ ತಮ್ಮ ಈ ಕಾಫಿ ವಿಥ್ ಕರಣ್ ಶೋಗೆ ಇನ್‌ವೈಟ್ ಮಾಡ್ತಾರೆ ಅನ್ನೋ ಸುದ್ದಿ ಇದೀಗ ದಟ್ಟವಾಗಿದೆ.
ರಿಷಬ್ -ಯಶ್ ಕರಣ್ ಜೋಹರ್ ಶೋಗೆ ಹೋಗೊದು ನಿಜಾನಾ?
ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಖ್ಯಾತಿ ಈಗ ಎಲ್ಲೆಡೆ ಹರಡಿ ಆಗಿದೆ. ಕಾಂತಾರ ಚಿತ್ರದ ಮೂಲಕ ದಕ್ಷಿಣದ ರಿಷಬ್ ಶೆಟ್ರು ಬಾಲಿವುಡ್ ಸಿನಿಪ್ರಿಯರಿಗೂ ಪರಿಚಯ ಆಗಿದ್ದಾರೆ. ಬಾಲಿವುಡ್ ಸಿನಿಮಾ ಮಂದಿಗೂ ಚಿರಪರಿಚಿತರಾಗಿದ್ದಾರೆ.
ಬಾಲಿವುಡ್ ಮಂದಿಗೆ ಯಶ್-ರಿಷಬ್ ಇದೀಗ ಚಿರಪರಿಚಿತ
ಮೊನ್ನೆ ಬಾಲಿವುಡ್‌ನಿಂದ ಬೆಂಗಳೂರಿಗೆ ಬಂದ ಅನುಪಮ್ ಖೇರ್ ಕೂಡ ಇದೇ ರಿಷಬ್ ಶೆಟ್ರನ್ನ ಕೇಳಿದರು. ಕನ್ನಡದಲ್ಲಿ ಎಸ್‌ಎಂಎಸ್ ಮಾಡೋ ಮೂಲಕ ಪ್ರಾಂಕ್ ಕೂಡ ಮಾಡಿ ಖುಷಿ ಪಟ್ಟರು. ಅಷ್ಟು ಆತ್ಮೀಯರಾಗಿರೋ ರಿಷಬ್ ಶೆಟ್ರು ಎಲ್ಲರಿಗೂ ಎಲ್ಲೆಡೆ ಬೇಕಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಸಕ್ಸಸ್ ರೇಟ್ ಅದ್ಭುತ ಬಿಡಿ. ಪ್ಯಾನ್ ಇಂಡಿಯಾದಂತಹ ಹೊಸ ದಾರಿಯನ್ನ ತೋರಿದ ರಾಕಿ ಭಾಯ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಇವರ ಗತ್ತು ಬೇರೆ ಇದೆ. ಇವರ ಬೇಡಿಕೆಯೂ ಬೇರೆ ಇದೆ.
ಕಾಫಿ ವಿತ್ ಕರಣ್ ಶೋಗೆ ರಿಷಬ್-ಯಶ್ ಹೋಗ್ತಾರಾ?
ಕನ್ನಡದ ಈ ಸೂಪರ್ ಸ್ಟಾರ್‌ಗಳ ಮೇಲೆ ಕಣ್ಣು ಹಾಕಿರೋ ಮಿಸ್ಟರ್ ಕರಣ್ ಜೋಹರ್, ಇದೀಗ ಈ ಸ್ಟಾರ್‌ಗಳನ್ನ ತಮ್ಮ ಕಾಫಿ ವಿತ್ ಕರಣ್ ಜೋಹರ್ ಶೋಗೆ ಕರೆತರೋ ಪ್ಲಾನ್ ಮಾಡಿದ್ದಾರೆ. ಅಧಿಕೃತವಾಗಿ ಈ ಬಗ್ಗೆ ಎಲ್ಲೂ ಇನ್ನೂ ಏನೂ ಮಾಹಿತಿ ಹೊರ ಬಂದಿಲ್ಲ.
ಕಾಪಿ ವಿತ್ ಕರಣ್ ಸೀಸನ್-8 ರಲ್ಲಿ ರಾಕಿ ಭಾಯ್-ರಿಷಬ್ ಜೋಡಿ?
ಸ್ವತಃ ಕರಣ್ ಜೋಹರ್ ಕೂಡ ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಹೇಳಿಕೊಂಡಿಲ್ಲ. ಆದರೆ ಕಾಫಿ ವಿತ್ ಕರಣ್ ಸೀಸನ್-8 ಕ್ಕೆ ರಿಷಬ್ ಶೆಟ್ಟಿ ಮತ್ತು ರಾಕಿಂಗ್ ಸ್ಟಾರ್ ಯಶ್ ಹೋಗುತ್ತಿದ್ದಾರೆ ಅನ್ನುವ ಸುದ್ದಿ ದಿನೇ ದಿನೇ ದಟ್ಟವಾಗಿದೆ.
ಕರಣ್ ಜೋಹರ್ ಶೋದಲ್ಲಿ ಎಲ್ಲವೂ ಖುಲ್ಲಂ ಖುಲ್ಲಾ!
ಕಾಫಿ ವಿತ್ ಕರಣ್ ಶೋ ಒಂದು ರೀತಿ ಬೋಲ್ಡೆಸ್ಟ್ ಶೋ ಅಂತಲೇ ಹೇಳಬಹುದು. ಇಲ್ಲಿ ಎಲ್ಲವೂ ಖುಲ್ಲಂ ಖುಲ್ಲಾನೇ ನೋಡಿ. ಕರಣ್ ಜೋಹರ್ ಕೇಳುವ ಪ್ರಶ್ನೆಗಳು ಎಲ್ಲ ವಿಷಯಗಳನ್ನ ಒಳಗೊಂಡಿರುತ್ತವೆ. ಹಾಗಿರೋವಾಗ ಬಾಲಿವುಡ್ ಮಂದಿಗೆ ಈ ಶೋ ಓಕೆ ಓಕೆ ಅನ್ನಬಹುದೇನೋ.
ಕರಣ್ ಶೋಗೆ ರಿಷಿಬ್-ಯಶ್ ಹೋಗೋದು ಗ್ಯಾರಂಟೀನಾ?
ಆದರೆ ಕನ್ನಡ ಸ್ಟಾರ್ ನಟರು ಏನ್ ಮಾಡ್ತಾರೆ ಅನ್ನೋದು ಈಗಿನ ಪ್ರಶ್ನೆ ಆಗಿದೆ. ಹಾಗಂತ ಈ ಬಗ್ಗೆ ಯಾರೂ ಏನೂ ಹೇಳಿಕೊಂಡಿಲ್ಲ.
ಇದನ್ನೂ ಓದಿ: Actor Rishabh Shetty: ಪ್ರತಿಯೊಬ್ಬರು ತಪ್ಪದೇ ವೋಟ್ ಮಾಡಿ, ಜನರಿಗೆ ಕರೆ ಕೊಟ್ಟ ನಟ-ನಿರ್ದೇಶಕ ರಿಷಬ್ ಶೆಟ್ಟಿ
ಹೌದು, ಕರಣ್ ಜೋಹರ್ ಶೋಗೆ ಆಹ್ವಾನ ಬಂದಿದೆ ಅಂತಲೂ ರಾಕಿ ಭಾಯ್ ಆಗಿರಲಿ, ಡಿವೈನ್ ಸ್ಟಾರ್ ರಿಷಬ್ ಇರಲಿ, ಇವರಾರೂ ಎಲ್ಲೂ ಏನೂ ಬಿಟ್ಟುಕೊಟ್ಟಿಲ್ಲ ನೋಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ