ಮಡದಿ ರಾಧಿಕಾ ಜತೆ ಸ್ಪರ್ಧೆಗಿಳಿದ ರಾಕಿಂಗ್​ ಸ್ಟಾರ್​ ಯಶ್​..!

ರಾಕಿಂಗ್​ ಸ್ಟಾರ್​ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಆಗೊಂದು ಈಗೊಂದು ಪೋಸ್ಟ್​ ಮಾಡುತ್ತಿದ್ದ ಯಶ್​ ಈಗ ಸಕ್ರಿಯರಾಗಿದ್ದಾರೆ. ಅದರಲ್ಲೂ ಮಡದಿ ರಾಧಿಕಾ ಜತೆಗೆ ಸ್ಪರ್ಧೆಗಿಳಿದಂತಿದೆ.

Anitha E | news18
Updated:April 19, 2019, 3:44 PM IST
ಮಡದಿ ರಾಧಿಕಾ ಜತೆ ಸ್ಪರ್ಧೆಗಿಳಿದ ರಾಕಿಂಗ್​ ಸ್ಟಾರ್​ ಯಶ್​..!
ಪತ್ನಿ ರಾಧಿಕಾ ಜತೆ ಯಶ್​
Anitha E | news18
Updated: April 19, 2019, 3:44 PM IST
ಒಂದೇ ಒಂದು ಸಿನಿಮಾಗಾಗಿ ವರ್ಷಗಳೇ ಮುಡುಪಾಗಿಟ್ಟಿದ್ದ ಯಶ್​ ಸಾಮಾಜಿಕ ಜಾಲತಾಣಗಳಲ್ಲೂ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಅವರ ಮಡದಿ ರಾಧಿಕಾ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಆಕ್ಟೀವ್​ ಆಗಿ ಇರುತ್ತಾರೆ. ​

ಇದನ್ನೂ ಓದಿ: ಮತ ಹಾಕಿ ಟ್ರೆಂಡ್​ ಆದ ರಿಯಲ್​ ಸ್ಟಾರ್: ಉಪ್ಪಿ ಸ್ಟೈಲ್​ಗೆ ಫಿದಾ ಆದ ಅಭಿಮಾನಿಗಳು..!

ರಾಧಿಕಾ, ಯಶ್​ರೊಂದಿಗೆ ಕಳೆದ ಕ್ಷಣಗಳು ಹಾಗೂ ತಮ್ಮ ಖುಷಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಇವರಿಗೆ ಹೋಲಿಸಿದರೆ, ಯಶ್​ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುವುದೇ ಕಡಿಮೆ.

ಆದರೆ ಈಗ ಅವರಲ್ಲಿ ಅದೇನು ಬದಲಾವಣೆ ಆಗಿದೆಯೋ ಗೊತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇದು ಯಸ್​ ಅಭಿಮಾನಿಗಳಿಗೆ ಒಂದು ರೀತಿಯ ಸಿಹಿ ಸುದ್ದಿಯಾಗಿದೆ. ಯಶ್​ ಕಳೆದ ಡಿಸೆಂಬರ್​ನಲ್ಲಿ ಇನ್​ಸ್ಟಾಗ್ರಾಂಗೆ ಎಂಟ್ರಿ ಕೊಟ್ಟಿದ್ದರು. ಆಗಿನಿಂದ ಅವರ ಖಾತೆಯಲ್ಲಿ ಕೇವಲ 29 ಪೋಸ್ಟ್ ಮಾತ್ರ ಆಗಿವೆ. ಇವುಗಳಲ್ಲಿ ಡಿಸೆಂಬರ್​ನಲ್ಲೇ 13 ಪೋಸ್ಟ್​ ಮಾಡಿದ್ದರು. ಆದರೆ ಜನವರಿಯಲ್ಲಿ ಕೇವಲ 3 ಪೋಸ್ಟ್​ ಮಾಡಿದ್ದರು. ಹೀಗೆ ಫೆಬ್ರವರಿ ಹಾಗೂ ಮಾರ್ಚ್​ನಲ್ಲಿ ಕೆಲ ಪೋಸ್ಟ್​ಗಳನ್ನು ಮಾಡಿದ್ದಾರೆ.


Loading...

 
View this post on Instagram
 

When the wink meets the pout.. which one wins 😜


A post shared by Actor Yash (@thenameisyash) on

ಆದರೆ ಮಾರ್ಚ್​ ತಿಂಗಳಿನ ಕೊನೆಯ ವಾರದಿಂದ ಅವರು ಇನ್​​ಸ್ಟಾಗ್ರಾಂನಲ್ಲಿ ಆಕ್ಟೀವ್​ ಆಗಿದ್ದಾರೆ. ಅದಕ್ಕೆ ಸಾಕ್ಷಿ ಅವರು ತಮ್ಮ ಮಡದಿ ಜೊತೆಗಿರುವ ಕೆಲವು ಪೋಟೋಗಳು​ ಹಾಗೂ ಇತರೆ ಪೋಸ್ಟ್​ಗಳನ್ನು ಮಾಡಿರುವುದು. ಅದರಲ್ಲೂ ರಾಧಿಕಾ ತಮ್ಮ ಖಾತೆಯಲ್ಲಿ ಯಶ್​ ಜೊತೆಗಿರುವ ಫೋಟೋಗಳನ್ನು ಹಂಚಿಕೊಂಡರೆ, ಅಂತಹ ಬೆರಳೆಣಿಕೆ ಚಿತ್ರಗಳು ಮಾತ್ರ ಯಶ್​ ವಾಲ್​ನಲ್ಲಿ ಕಾಣಸಿಗುತ್ತವೆ.

ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ


ಯಶ್​, ಸುಮಲತಾರ ಪರವಾಗಿ ಪ್ರಚಾರದಲ್ಲಿ ತೊಡಗಿದ್ದರೂ ಸಹ ಅವರು ಸಾಮಾಜಿಕ ಜಾಲತಾಣದಲ್ಲಿ ಮಡದಿಯೊಂದಿಗಿನ ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದರು. ಅಂದರೆ ಯಾವುದೇ ಕೆಲಸದಲ್ಲಿ ವ್ಯಸ್ತವಾಗಿದ್ದರೂ ಮಡದಿ ಹಾಗೂ ಕುಟುಂಬಕ್ಕೆ ಮಾತ್ರ ಸಮಯ ನೀಡುತ್ತಾರೆ ಅನ್ನೋದು ಇದರಿಂದಲೇ ತಿಳಿಯುತ್ತದೆ.

ಇದನ್ನೂ ಓದಿ: Celebrity Voting: ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡುವ ಮೂಲಕ ಬೇರೆಯವರಿಗೆ ಪ್ರೇರಣೆಯಾದ ರೀಲ್​ ಲೈಫ್​ ಸ್ಟಾರ್​ಗಳು

ಒಟ್ಟಾರೆ ಸಾಮಾಜಿಕ ಜಾಲತಾಣದಲ್ಲಿ ಪತ್ನಿ ಜತೆಗಿನ ಚಿತ್ರಗಳನ್ನು ಯಶ್​ ಹಂಚಿಕೊಳ್ಳುತ್ತಿರುವುದನ್ನು ಗಮನಿಸಿದರೆ ಮಾತ್ರ ರಾಧಿಕಾರಿಗೆ ಸ್ಪರ್ಧೆ ನೀಡುವುದು ಖಚಿತ ಎಂದೆನಿಸುತ್ತಿದೆ.

PHOTOS: ಹಾಟ್ ಫೋಟೋಶೂಟ್​ಗೆ ಪೋಸ್​ ನೀಡಿದ ಕರಾವಳಿ ಕನ್ನಡತಿ ಲಕ್ಷ್ಮಿ ರೈ
First published:April 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626