KGF Star Yash: ರಾಕಿಂಗ್​ ಸ್ಟಾರ್​ ಯಶ್​ಗೆ ದಾದಾಸಾಹೇಬ್​ ಫಾಲ್ಕೆ ಸೌತ್​ ಪ್ರಶಸ್ತಿ

Dadasaheb Phalke Award 2019: ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಅತ್ಯುತ್ತಮ ನಟಿಯಾಗಿ ಮಹಾನಟಿ ನಾಯಕಿ ಕೀರ್ತಿ ಸುರೇಶ್​ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಮತ್ತೊಮ್ಮೆ ದಾದಾಸಾಹೇಬ್​ ಫಾಲ್ಕೆ ಸೌತ್​ ಪ್ರಶಸ್ತಿ ಸಮಾರಂಭದಲ್ಲಿ ಯಶ್ ಹಾಗೂ ಕೀರ್ತಿ ಸುರೇಶ್​ ಅತ್ಯುತ್ತಮ ನಾಯಕ-ನಾಯಕಿಯಾಗಿ ಹೊರಹೊಮ್ಮಿದ್ದಾರೆ.

Sushma Chakre | news18-kannada
Updated:September 22, 2019, 1:14 PM IST
KGF Star Yash: ರಾಕಿಂಗ್​ ಸ್ಟಾರ್​ ಯಶ್​ಗೆ ದಾದಾಸಾಹೇಬ್​ ಫಾಲ್ಕೆ ಸೌತ್​ ಪ್ರಶಸ್ತಿ
ಯಶ್​
  • Share this:
ಹೈದರಾಬಾದ್​:  ದಕ್ಷಿಣ ಭಾರತದ ಚಿತ್ರರಂಗದ ಸಾಧಕರಿಗೆ ನೀಡಲಾಗುವ 'ದಾದಾಸಾಹೇಬ್ ಫಾಲ್ಕೆ ​​ ಸೌತ್'​ ಪ್ರಶಸ್ತಿಯನ್ನು ರಾಕಿಂಗ್ ಸ್ಟಾರ್​ ಯಶ್​ ಎತ್ತಿಹಿಡಿದಿದ್ದಾರೆ. 'ದಾದಾಸಾಹೇಬ್ ಫಾಲ್ಕೆ' ಪ್ರಶಸ್ತಿಯನ್ನು ದೇಶದ ಚಿತ್ರರಂಗದ ಸಾಧಕರಿಗೆ ನೀಡಿ ಗೌರವಿಸಲಾಗುತ್ತದೆ. ಅದೇ ಮಾದರಿಯಲ್ಲಿ ಅದೇ ಹೆಸರಿನಲ್ಲಿ ತಮಿಳು, ತೆಲುಗು, ಕನ್ನಡ, ಮಲೆಯಾಳಂ ಭಾಷೆಯ ಚಿತ್ರಂಗದ ಸಾಧಕರಿಗೆ ಈ ವರ್ಷದಿಂದ ಪ್ರಶಸ್ತಿ ನೀಡಲಾಗುತ್ತಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭ ಹೈದರಾಬಾದ್​ನಲ್ಲಿ ನಡೆದಿದ್ದು, ಈ ವರ್ಷದ ಅತ್ಯುತ್ತಮ ನಟನೆಗಾಗಿ 'ಕೆಜಿಎಫ್'​ ಸಿನಿಮಾ ನಾಯಕ ಯಶ್​ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಈ ವರ್ಷದ ಉತ್ತಮ ನಟನೆಗಾಗಿ ಟಾಲಿವುಡ್ ನಟರಾದ ಮಹೇಶ್​ ಬಾಬು ಮತ್ತು ಅನುಷ್ಕಾ ಶೆಟ್ಟಿ 'ದಾದಾಸಾಹೇಬ್ ಫಾಲ್ಕೆ ಸೌತ್ ಪ್ರಶಸ್ತಿ' ಪಡೆದಿದ್ದಾರೆ. 'ಭರತ್ ಅನೇ ನೇನು' ಸಿನಿಮಾದ ಉತ್ತಮ ನಟನೆಗಾಗಿ ಮಹೇಶ್​ ಬಾಬು, 'ಭಾಗಮತಿ' ಸಿನಿಮಾದ ನಟನೆಗಾಗಿ ಅನುಷ್ಕಾ ಶೆಟ್ಟಿ 'ದಾದಾಸಾಹೇಬ್ ಫಾಲ್ಕೆ ಸೌತ್'​ ಮೊದಲ ಆವೃತ್ತಿಯ ಅತ್ಯುತ್ತಮ ನಟ-ನಟಿಯಾಗಿ ಹೊರಹೊಮ್ಮಿದ್ದಾರೆ.

ಆಸ್ಕರ್​​ಗೆ ಗಲ್ಲಿ ಬಾಯ್​: ಭಾರತದಿಂದ ಆಯ್ಕೆಯಾದ ಚಿತ್ರಗಳ ಪಟ್ಟಿಯಲ್ಲಿತ್ತು ಕನ್ನಡದ ಸ್ಟಾರ್ ನಟನ ಸಿನಿಮಾ..!ಈ ವರ್ಷದ ಔಟ್​ಸ್ಟಾಂಡಿಂಗ್ ಅಭಿನಯಕ್ಕಾಗಿ 'ಕೆಜಿಎಫ್'​ ಸಿನಿಮಾದ ನಾಯಕ ಯಶ್​ ಹಾಗೂ 'ಮಹಾನಟಿ' ಸಿನಿಮಾ ನಾಯಕಿ ಕೀರ್ತಿ ಸುರೇಶ್​ ಅವರಿಗೆ ವಿಶೇಷ ಪ್ರಶಸ್ತಿ ನೀಡಲಾಗಿದೆ. ಟಾಲಿವುಡ್​ ಸಿನಿಮಾ 'ರಂಗಸ್ಥಲಂ' ನಿರ್ದೇಶನಕ್ಕಾಗಿ ಸುಕುಮಾರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಟಾಲಿವುಡ್​ನ 'ಆರ್​ಎಸ್​ 100' ಸಿನಿಮಾ ನಾಯಕಿ ಪಾಯಲ್ ರಜಪೂತ್​ ಅತ್ಯುತ್ತಮ ಚೊಚ್ಚಲ ನಾಯಕಿ ಪ್ರಶಸ್ತಿ ಪಡೆದಿದ್ದಾರೆ. ಅತ್ಯುತ್ತಮ ಖಳನಟನಾಗಿ 'ಅರವಿಂದ ಸಮೇತ ವೀರ ರಾಘವ' ಸಿನಿಮಾದ ವಿಲನ್ ಜಗಪತಿ ಬಾಬು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.SIIMA Awards: ಸೈಮಾದಲ್ಲಿ ಕೆಜಿಎಫ್​ ಸಿನಿಮಾಗೆ 4 ಪ್ರಶಸ್ತಿ, ರಾಕಿಂಗ್ ಸ್ಟಾರ್​ ಯಶ್​ ಅತ್ಯುತ್ತಮ ನಟ; ಇಲ್ಲಿದೆ ಪೂರ್ತಿ ವಿವರ...

ಶುಕ್ರವಾರ ಸಂಜೆ ಹೈದರಾಬಾದ್​ನಲ್ಲಿ ನಡೆದ ಸಮಾರಂಭದಲ್ಲಿ ನೀಲಿ ಸೂಟ್​ನಲ್ಲಿ ಮಿಂಚುತ್ತಿದ್ದ ರಾಕಿಂಗ್ ಸ್ಟಾರ್​ ಯಶ್​ಗೆ ಈ ವರ್ಷ ಪ್ರಶಸ್ತಿಗಳದೇ ಹಬ್ಬ. ಈ ಮೊದಲು 'ಸೈಮಾ' ಪ್ರಶಸ್ತಿ ಸಮಾರಂಭದಲ್ಲೂ 'ಕೆಜಿಎಫ್'​ ಹವಾ ಜೋರಾಗಿತ್ತು. 'ಸೈಮಾ'ದಲ್ಲಿ 4 ಪ್ರಶಸ್ತಿಗಳು 'ಕೆಜಿಎಫ್'​ ಪಾಲಾಗಿದ್ದವು. 'ಸೈಮಾ' ಸಮಾರಂಭದಲ್ಲಿ ಕೂಡ ಯಶ್​  ಅತ್ಯುತ್ತಮ ನಟ ಪ್ರಶಸ್ತಿಗೆ ಪಾತ್ರರಾಗಿದ್ದರು. ವಿಶೇಷವೆಂದರೆ 'ಸೈಮಾ' ಪ್ರಶಸ್ತಿ ಪ್ರದಾನ ಸಮಾರಂಭದಲ್ಲೂ ಅತ್ಯುತ್ತಮ ನಟಿಯಾಗಿ 'ಮಹಾನಟಿ' ನಾಯಕಿ ಕೀರ್ತಿ ಸುರೇಶ್​ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಮತ್ತೊಮ್ಮೆ 'ದಾದಾಸಾಹೇಬ್​ ಫಾಲ್ಕೆ ಸೌತ್'​ ಪ್ರಶಸ್ತಿ ಸಮಾರಂಭದಲ್ಲಿ ಯಶ್ ಹಾಗೂ ಕೀರ್ತಿ ಸುರೇಶ್​ ಅತ್ಯುತ್ತಮ ನಾಯಕ-ನಾಯಕಿಯಾಗಿ ಹೊರಹೊಮ್ಮಿದ್ದಾರೆ.

 

First published:September 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ