ರಾಕಿ ಭಾಯ್ ಯಶ್ (Yash) ಅವರ ಕೆಲವು ಫೋಟೋಸ್ (Photos) ವೈರಲ್ ಆಗುತ್ತಿದೆ. ಸ್ಯಾಂಡಲ್ವುಡ್ (Sandalwood) ನಟ, ಕೆಜಿಎಫ್ ಸ್ಟಾರ್ ಯಶ್ ಫೋಟೋಸ್ ಶೇರ್ ಮಾಡಿಕೊಂಡಿದ್ದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಹಾಗೆಯೇ ನಟನ ಅಭಿಮಾನಿಗಳು (Fans) ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಮಾಡಿದ್ದಾರೆ. ಆದರೆ ಈ ಫೋಟೋಗಳ ಗುಟ್ಟೇನು? ದಿಢೀರ್ ಆಗಿ ಸ್ಟೈಲಿಷ್ ಫೋಟೋಸ್ ಶೇರ್ ಮಾಡಿದ್ದೇಕೆ ರಾಕಿ ಭಾಯ್? ಈ ಸ್ಪೆಷಲ್ ಫೋಟೋ ಶೂಟ್ ಹಿಂದೆ ಯಾವುದಾದರೂ ಸಿನಿಮಾ (Cinema) ಹಿಂಟ್ ಇದೆಯಾ? ಇಲ್ಲಿದೆ ಎಲ್ಲದಕ್ಕೂ ಉತ್ತರ.
ವೈರಲ್ ಆದ ರಾಕಿ ಭಾಯ್ ಲುಕ್
ಯಶ್ ಅವರು ಬಿಳಿ ಬಣ್ಣದ ಪುರುಷರ ಅಂಡರ್ಗಾರ್ಮೆಂಟ್ ಧರಿಸಿದ ಫೋಟೋದಲ್ಲಿ ಭರ್ಜರಿಯಾಗಿ ಕಾಣಿಸಿದ್ದಾರೆ. ನಟನ ಹೇರ್ಸ್ಟೈಲ್ ಅಂತೂ ಇದಕ್ಕೆ ತುಂಬಾ ಸುಂದರವಾಗಿ ಮ್ಯಾಚ್ ಆಗಿದೆ. ಇದು ನಟನ ಕಂಪ್ಲೀಟ್ ಲುಕ್ ಹೈಲೈಟ್ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಅಲ್ಲ
ಯಶ್ ಸೋಷಿಯಲ್ ಮೀಡಿಯಾದಲ್ಲಿ ಅಷ್ಟು ಆ್ಯಕ್ಟಿವ್ ವ್ಯಕ್ತಿ ಅಲ್ಲ. ಕೆಜಿಎಫ್ನಂತಹ ಸಿನಿಮಾ ಮಾಡಿದರೂ ಯಶ್ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚು ಆ್ಯಕ್ಟಿವ್ ಆಗಿ ಫೋಟೋಸ್, ವಿಡಿಯೋಸ್ ಶೇರ್ ಮಾಡುವುದಿಲ್ಲ. ಅವರ ಪತ್ನಿಯೇ ಅವರ ಫೋಟೋವನ್ನು ಶೇರ್ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಯಶ್ ಶೇರ್ ಮಾಡಿದ ಫೋಟೋಗಳು ವೈರಲ್ ಆಗಿವೆ.
ಅಪರೂಪಕ್ಕೆ ಇನ್ಸ್ಟಾ ಪೋಸ್ಟ್ ಹಾಕಿದ ನಟ
ಯಶ್ ಅವರು ಲೇಟೆಸ್ಟ್ ಆಗಿ ಒಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ನಲ್ಲಿ ಸ್ಪೆಷಲ್ ಆಗಿರುವಂತಹ ಒಂದು ಕ್ಯಾಪ್ಶನ್ ಕೂಡಾ ಕೊಟ್ಟಿದ್ದಾರೆ. ನಟ ಶೇರ್ ಮಾಡಿರುವ ಕಂಟೆಂಟ್ ಹಾಗೂ ಕ್ಯಾಪ್ಶನ್ ಸಖತ್ ಮ್ಯಾಚಿಂಗ್ ಆಗಿದೆ.
View this post on Instagram
ಇದು ಅಲೆಗಳಲ್ಲಿ ರೈಡ್ ಮಾಡುವವರಿಗಲ್ಲ, ಇದು ಅಲೆಗಳನ್ನೇ ಸೃಷ್ಟಿಸುವವರಿಗಾಗಿ! ಇದು ಗೇಮ್ ಆಡುವವರಿಗಲ್ಲ, ಅದನ್ನೇ ಜೀವಿಸುವವರಿಗೆ, ಇದು ಸಾಮಾನ್ಯವಾಗಿರಲು ಇಷ್ಟಪಡುವವರಿಗಲ್ಲ, ಇದು ಬಿರುಗಾಳಿ ಸೃಷ್ಟಿಸುವವರಿಗೆ. ಇದು ಮ್ಯಾಕ್ರೋಮ್ಯಾನ್ನಂತೆ ಬದುಕಲು ಬಯಸುವವರಿಗೆ ಎಂದು ನಟ ಬರೆದಿದ್ದಾರೆ.
ಇದನ್ನೂ ಓದಿ: Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್
ಈ ವಿಡಿಯೋ ಮಾಡಿದ್ದೇಕೆ?
ನಟ ಯಶ್ ಅವರು ಮ್ಯಾಕ್ರೋ ಮ್ಯಾನ್ ಅಥವಾ ಮ್ಯಾಕ್ರೋ ವುಮೆನ್ ಎನ್ನುವ ಒಳುಡುಪುಗಳ ಬಟ್ಟೆ ಬ್ರ್ಯಾಂಡ್ಗೆ ಜಾಹೀರಾತು ಕೊಟ್ಟಿದ್ದಾರೆ. ಆ ಜಾಹೀರಾತಿನ ಭಾಗವಾಗಿ ನಟ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ: Yash New Look: ರಾಕಿ ಭಾಯ್ ನ್ಯೂ ಲುಕ್! ಇಲ್ಲಿದೆ ನೋಡಿ Exclusive ಫೋಟೋಸ್
ವೈರಲ್ ಆಯ್ತು ಯಶ್ ವಿಡಿಯೋ
ಯಶ್ ಅವರು ಪೋಸ್ಟ್ ಮಾಡಿದ ವಿಡಿಯೋಗೆ 3 ಲಕ್ಷ ಲೈಕ್ಸ್ ಬಂದಿವೆ. ಒಂದೂವರೆ ಸಾವಿರಕ್ಕೂ ಹೆಚ್ಚು ಜನರು ವಿಡಿಯೋಗೆ ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿದ್ದಾರೆ.
ನೆಟ್ಟಿಗರ ಪ್ರತಿಕ್ರಿಯೆ ಏನು?
ವಿಡಿಯೋ ನೋಡಿದ ಯಶ್ ಅಭಿಮಾನಿಗಳು ನೆಕ್ಟ್ಸ್ ಮೂವಿ ಅಪ್ಡೇಟ್ ಕೊಡಿ ಬಾಸ್ ಎಂದು ಕೇಳಿದ್ದಾರೆ. ಈ ಹೇರ್ಸ್ಟೈಲ್ ಯಶ್19 ಸಿನಿಮಾಗೋಸ್ಕರ ಮಾಡಿರೋದಲ್ವೇ ಎಂದು ಕೇಳಿದ್ದಾರೆ. ಸಿನಿಮಾ ಕುರಿತ ಅಪ್ಡೇಟ್ ಬೇಗ ಕೊಟ್ಟು ದ್ವೇಷಿಸುವವರ ಬಾಯಿ ಮುಚ್ಚಿಸಿ ಎಂದಿದ್ದಾರೆ ಇನ್ನೊಬ್ಬರು.
ಸರ್ ನೀವು ಜಾಹೀರಾತು ಮಾಡಬೇಡಿ. ಸಿನಿಮಾ ಮಾಡಿ. ನಾವು ನಿಮ್ಮ ಸಿನಿಮಾ ಅಪ್ಡೇಟ್ಗಳಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ ಇನ್ನೊಬ್ಬರು. ಇನ್ನೂ ಕೆಲವರು ನಾವು ಕೆಜಿಎಫ್ 2ಗಾಗಿ ಕಾಯುತ್ತಿದ್ದೇವೆ. ತುಂಬಾ ಎಕ್ಸೈಟ್ ಆಗಿದ್ದೇವೆ ಎಂದಿದ್ದಾರೆ ನೆಟ್ಟಿಗರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ