ಕೆಜಿಎಫ್ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿರುವ ರಾಕಿಂಗ್ ಸ್ಟಾರ್ ಯಶ್ (Rocking Star Yash), ಬಾಲಿವುಡ್ ವರ್ಸಸ್ ಸೌತ್ ಸಿನಿಮಾ ಇಂಡಸ್ಟ್ರಿ (Bollywood vs South Cinema Industry) ನಡುವೆ ನಡೆಯುತ್ತಿರುವ ಫೈಟ್ ಬಗ್ಗೆ ಮಾತಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತಾಡಿದ ನಟ ಯಶ್, ಎಲ್ಲಾ ಚಿತ್ರರಂಗಕ್ಕೂ (Cinema Industry) ಗೌರವ ನೀಡಬೇಕು ಎಂದು ಹೇಳಿದ್ದಾರೆ. ಕನ್ನಡಿಗರು ಬೇರೆ ಚಿತ್ರರಂಗದ ಬಗ್ಗೆ ಕೆಟ್ಟದಾಗಿ ಮಾತಾಡಬಾರದು ಎಂದು ಯಶ್ ಹೇಳಿದ್ದಾರೆ.
ಕನ್ನಡ ಜನರು ಯಾರನ್ನು ಕೀಳಾಗಿ ಕಾಣಬಾರದು
ಫಿಲ್ಮ್ ಕಂಪ್ಯಾನಿಯನ್ಗೆ ನೀಡಿದ ಸಂದರ್ಶನದಲ್ಲಿ ನಟ ಯಶ್ ಅನೇಕ ವಿಚಾರಗಳ ಬಗ್ಗೆ ಮಾತಾಡಿದ್ದಾರೆ. ಕರ್ನಾಟಕದ ಜನರು ಬೇರೆ ಯಾವುದೇ ಚಿತ್ರರಂಗದ ಬಗ್ಗೆ ಕೀಳಾಗಿ ಮಾತಾಡಬಾರದು. ನಾವು ಕೂಡ ಆ ಸಮಸ್ಯೆಯನ್ನು ಎದುರಿಸಿದ್ದೇವೆ. ಈ ಗೌರವ ಪಡೆಯಲು ಸಾಕಷ್ಟು ಶ್ರಮಿಸಿದ್ದೇವೆ. ಈಗ ನಾವು ಯಾರನ್ನು ಕೆಟ್ಟದಾಗಿ ನಡೆಸಿಕೊಳ್ಳಬಾರದು ಎಲ್ಲರನ್ನು ಗೌರವಿಸಬೇಕು ಎಂದು ನಟ ಯಶ್ ಹೇಳಿದ್ದಾರೆ.
ಬಾಲಿವುಡ್ನನ್ನು ಗೌರವಿಸಬೇಕು
ಬಾಲಿವುಡ್ ಬಗ್ಗೆ ಗೌರವ ಇರಲಿ. ಉತ್ತರ ಮತ್ತು ದಕ್ಷಿಣ ಅನ್ನುವುದನ್ನು ಮರೆತುಬಿಡಿ. ಎಲ್ಲರನ್ನು ಗೌರವಿಸಿ ಎಂದು ಯಶ್ ಕನ್ನಡಿಗರಿಗೆ ಮೆಸೇಜ್ ನೀಡಿದ್ದಾರೆ. ಯಾರನ್ನೂ ಮೂಲೆಗುಂಪು ಮಾಡುವುದು ಒಳ್ಳೆಯದಲ್ಲ, ಯಾರೋ ಒಬ್ಬರು ಬಾಲಿವುಡ್ನಲ್ಲಿ ಏನೂ ಅಲ್ಲ ಎಂದು ಅಪಹಾಸ್ಯ ಮಾಡುವುದು ಉತ್ತಮ ಬೆಳವಣಿಗೆಯಲ್ಲ ಎಂದು ಯಶ್ ಹೇಳಿದ್ದಾರೆ.
ನಾವೆಲ್ಲಾ ಒಂದೇ ಎಂದು ಕೆಲಸ ಮಾಡಬೇಕಿದೆ.
ಒಂದು ದೇಶದಲ್ಲಿ ನಾವೆಲ್ಲಾ ಒಂದೇ ಎಂದು ಕೆಲಸ ಮಾಡೋಣ ನಾವು, ಇನ್ನೂ ಉತ್ತಮ ಚಲನಚಿತ್ರಗಳನ್ನು ನೀಡಬೇಕಿದೆ. ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು, ಚಿತ್ರಮಂದಿರಗಳನ್ನು ನಿರ್ಮಿಸಬೇಕು, ಮಾಡಲು ತುಂಬಾ ಇದೆ. ನಮ್ಮ ನಮ್ಮಲ್ಲಿ ಜಗಳವಾಡಿಕೊಳ್ಳೋದನ್ನು ನಿಲ್ಲಿಸಿ ಹೊರಹೋಗಿ ಪ್ರಪಂಚದ ಇತರರೊಂದಿಗೆ ಸ್ಪರ್ಧಿಸಿ, ಸ್ಪರ್ಧೆಗೆ ಭಾರತ ಬಂದಿದೆ ಎಂದು ಹೇಳ್ಬೇಕು ಹಾಗೇ ನಾವು ಬೆಳೆಯಬೇಕು ಎಂದು ಯಶ್ ಹೇಳಿದ್ದಾರೆ.
ಯಶ್ ಮುಂದಿನ ಸಿನಿಮಾ ಯಾವುದು?
ಈ ವರ್ಷದ ಸೂಪರ್ ಹಿಟ್ ಮೂವಿ ಕೆಜಿಎಫ್ ಚಾಪ್ಟರ್ 2, ಅನೇಕ ಸಿನಿಮಾಗಳ ದಾಖಲೆ ಮುರಿದ ಚಿತ್ರ ಕನ್ನಡ ಕೆಜಿಎಫ್, ಈ ಸಿನಿಮಾ ಮೂಲಕವೇ ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆದ್ರು. ಇಡೀ ಸಿನಿಮಾ ಇಂಡಸ್ಟ್ರಿ ಸ್ಯಾಂಡಲ್ವುಡ್ ನೋಡುವಂತೆ ಮಾಡಿದ ಸಿನಿಮಾ ಕೆಜಿಎಫ್, ಬಾಲಿವುಡ್ನಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವ ಮೂಲಕ ರಾಕಿ ಭಾಯ್ ಸೈ ಎನಿಸಿಕೊಂಡಿದ್ರು.
ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರಗಳಲ್ಲಿ ಕೆಜಿಎಫ್ ಒಂದಾಗಿದೆ. ಕೆಜಿಎಫ್ 2 ರಿಲೀಸ್ ಆಗಿ ಸಕ್ಸಸ್ ಕಂಡು ಹಲವು ತಿಂಗಳುಗಳೇ ಕಳೆದಿದೆ. ಆದ್ರೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಮುಂದಿನ ಸಿನಿಮಾ ಯಾವುದು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಇತ್ತೀಚೆಗೆ ಯಶ್ ನೂರಾರು ಅಭಿಮಾನಿಗಳಿಗೆ ಸೆಲ್ಫಿಕೊಟ್ಟು ಅಭಿಮಾನಿಗಳ ಮನಗೆದ್ದಿದ್ರು. ನಟ ಅಭಿಮಾನಿಗಳಿಗೆ ನೀಡಿದ ಗೌರವ ಕಂಡು ನೆಟ್ಟಿಗರು ಯಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಇದನ್ನೂ ಓದಿ: Shivaraj Kumar: ಗೀತಾಳಲ್ಲಿ ಅಮ್ಮನ ಗುಣವಿದೆ, ನನ್ನ ಮನ ಮೆಚ್ಚಿದ ಮಡದಿ ಎಂದ ಶಿವಣ್ಣ
ಗೂಗಲ್ 2022ರ ಕನ್ನಡ ನಟರ ಹುಡುಕಾಟದ ಹಿಸ್ಟರಿ ತೆಗೆದು ನೋಡಿದರೆ, ವಿಶ್ವಾದ್ಯಂತ ಹೆಚ್ಚು ಸರ್ಚ್ ಆಗಿರುವುದು ಕೆಜಿಎಫ್ ಸ್ಟಾರ್ ಯಶ್. ಮೂರನೇ ಸ್ಥಾನದಲ್ಲಿ ನಟ ಕಿಚ್ಚ ಸುದೀಪ್ ಅವರು ಇದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾ ಮೂಲಕ ಹಿಟ್ ಆಗಿದ್ದರು. ಯಶ್ ಅವರ ಕೆಜಿಎಫ್ 2 ಸಿನಿಮಾ ಕೂಡಾ ಐಎಂಡಿಬಿಯ ಟಾಪ್ 10 ಮೂವಿಗಳ ಲಿಸ್ಟ್ನಲ್ಲಿ ಸ್ಥಾನ ಪಡೆದಿದೆ. 2022ರಲ್ಲಿ ಅತ್ಯಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ