ನನ್ನ ಚಿತ್ರ ದಕ್ಷಿಣ ಭಾರತದಲ್ಲಿ ಯಾಕೆ ಓಡಲ್ಲ ಎಂದ Salman Khan​ ಪ್ರಶ್ನೆಗೆ ಉತ್ತರಿಸಿದ Yash​​

ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಹ RRRನ ಯಶಸ್ಸನ್ನು ಹೊಗಳಿದ್ದು, ಆದರೆ ದಕ್ಷಿಣದಲ್ಲಿ ನಮ್ಮ ಚಲನಚಿತ್ರಗಳು ಏಕೆ ಕೆಲಸ ಮಾಡುವುದಿಲ್ಲ ಎಂಬ ಪ್ರಶ್ನೆಯನ್ನು ಸಹ ಎತ್ತಿದ್ದರು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಯಾಂಡಲ್ ವುಡ್, ಟಾಲಿವುಡ್, ಕಾಲಿವುಡ್ ಸೇರಿ ದೇಶ, ವಿಶ್ವದಾದ್ಯಂತ ಸೌತ್ ಸಿನಿಮಾಗಳು ಹಿಂದಿ ಸಿನಿಮಾಗಳನ್ನು ಮೀರಿ ಸಕತ್ ಸುದ್ದಿ ಮಾಡುತ್ತಿವೆ. ಒಂದು ಕಾಲದಲ್ಲಿ ಕೇವಲ ಹಿಂದಿ ಸಿನಿಮಾಗಳು ಮಾತ್ರ ಪ್ಯಾನ್ ಇಂಡಿಯಾ ಸಿನಿಮಾ ಆಗುತ್ತಿದ್ದವು. ಆದರೆ ಪ್ರಸ್ತುತ ದಕ್ಷಿಣದ ಸಿನಿಮಾಗಳು ಭಾರತೀಯ ಚಿತ್ರರಂಗವನ್ನು ಆಳುತ್ತಿವೆ. ಅಲ್ಲದೇ ಹಿಂದಿ ಪ್ರೇಕ್ಷಕರು ಸಹ ಈ ಚಿತ್ರಗಳನ್ನು ಒಪ್ಪಿಕೊಂಡಿದ್ದು, ಅಲ್ಲೂ ಕಮಾಲ್ ಮಾಡುತ್ತಿವೆ.

ನನ್ನ ಚಿತ್ರ ಯಾಕೆ ಓಡಲ್ಲ ಎಂದಿದ್ದ ಸಲ್ಮಾನ್​ ಖಾನ್​

'ಬಾಹುಬಲಿ', 'ಕೆಜಿಎಫ್ ಚಾಪ್ಟರ್ 1', 'ಪುಷ್ಪ', 'ಆರ್‌ಆರ್‌ಆರ್‌'ನಂತಹ ಚಿತ್ರಗಳು ಖಾನ್‌ಗಳ ಚಿತ್ರಕ್ಕಿಂತ ಗಳಿಕೆ, ಮನ್ನಣೆಯಲ್ಲಿ ಮಂಚೂಣಿಯಲ್ಲಿವೆ. ರಾಜಮೌಳಿಯವರ RRR ಚಿತ್ರ ಪ್ರಪಂಚದಾದ್ಯಂತ 1000 ಕೋಟಿ ಗಳಿಸಿತು ಮತ್ತು ಅದು ಹಿಂದಿ ವಲಯದಲ್ಲೂ ಸಕ್ಸಸ್ ಆಗಿದೆ. ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಸಹ RRRನ ಯಶಸ್ಸನ್ನು ಹೊಗಳಿದ್ದು, ಆದರೆ ದಕ್ಷಿಣದಲ್ಲಿ ನಮ್ಮ ಚಲನಚಿತ್ರಗಳು ಏಕೆ ಕೆಲಸ ಮಾಡುವುದಿಲ್ಲ ಎಂಬ ಪ್ರಶ್ನೆಯನ್ನು ಸಹ ಎತ್ತಿದ್ದರು.

ಸಲ್ಮಾನ್​  ಖಾನ್​ ಪ್ರಶ್ನೆಗೆ ಯಶ್​​ ಉತ್ತರ

ಈ ನಡುವೆ, KGF ಅಧ್ಯಾಯ 1ರ ದೊಡ್ಡ ಹಿಟ್ ನಂತರ KGF ಅಧ್ಯಾಯ 2 ರ ಪ್ಯಾನ್ ಇಂಡಿಯಾ ಬಿಡುಗಡೆಗೆ ಸಿದ್ಧವಾಗಿರುವ KGF ಸ್ಟಾರ್ ಯಶ್ ಅವರೊಂದಿಗೆ ಬಾಲಿವುಡ್‌ಲೈಫ್ ಸಂವಾದ ನಡೆಸಿದೆ. ಅದರಲ್ಲಿ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಪ್ರಶ್ನೆಯನ್ನು ಯಶ್ ಅವರಿಗೆ ಕೇಳಿದಾಗ ಅದಕ್ಕೆ ಅವರು ಪರಿಪೂರ್ಣ ಉತ್ತರವನ್ನು ನೀಡಿದ್ದಾರೆ.

ಇದನ್ನು ಓದಿ:  Sanjay Dutt: ಬಾಲಿವುಡ್​ನಲ್ಲಿ `ಆ’ ರೀತಿಯ ಸಿನಿಮಾಗಳು ಮತ್ತೆ ಬರಲಿ! ಹಿಂಗ್ಯಾಕ್​ ಅಂದ್ರು ಸಂಜಯ್​ ದತ್​ ನೀವೇ ನೋಡಿ..

ಆರಂಭದಲ್ಲಿ ಅದು ಬೇರೆಯೇ ಆಗಿತ್ತು

ಸಲ್ಮಾನ್ ಖಾನ್ ಪ್ರಶ್ನೆಗೆ ಉತ್ತರಿಸಿದ ರಾಕಿಂಗ್ ಸ್ಟಾರ್ ಯಶ್, ನಮ್ಮ ಸಿನಿಮಾಗಳಿಗೂ ಈ ತರಹದ ರಿಸೀವ್‌ಗಳು ಬರುತ್ತಿರಲಿಲ್ಲ,  ಇಲ್ಲಿ ಡಬ್ಬಿಂಗ್ ವರ್ಶನ್‌ಗಳನ್ನು ಮಾಡಲಾರಂಭಿಸಿದ್ದಾರೆ. ಇದರಿಂದ ನಾವು ಏನು ಎಂಬ ವಿಷಯ ಜನರಿಗೆ ಪರಿಚಯವಾಯಿತು.  ಆರಂಭದಲ್ಲಿ ಯಾರೂ ಆ ವಿಷಯಕ್ಕೆ ಪ್ರಾಮುಖ್ಯತೆ ನೀಡದ ಕಾರಣ ಇದು ಮನರಂಜನೆಗಾಗಿ ತಮಾಷೆಯಾಗಿ ಪ್ರಾರಂಭವಾಯಿತು.

ರಾತ್ರೋ ರಾತ್ರಿ ನಡೆದ ಜಾದು ಅಲ್ಲ ಇದು

ಆದರೆ ಇಂದು ಅದು ಕೆಲಸ ಮಾಡಿದೆ. ನಮ್ಮ ಕಥೆ ಹೇಳುವ ವಿಧಾನ, ನಮ್ಮ ಸಿನಿಮಾದ ಬಗ್ಗೆ ಜನರಿಗೆ ಪರಿಚಿತವಾಗಿದೆ, ಆದರೆ, ಇದ್ಯಾವುದು ರಾತ್ರೋರಾತ್ರಿ ನಡೆದಿಲ್ಲ, ಅದು ಕೆಲವು ವರ್ಷಗಳ ಸಮಯ ತೆಗೆದುಕೊಂಡಿತು. ಅಂತಿಮವಾಗಿ ನಮ್ಮ ಚಿತ್ರಗಳ ವಿಷಯ, ನಿರ್ದೇಶನದ ಅಭಿವ್ಯಕ್ತಿ ಮತ್ತು ಎಲ್ಲವನ್ನೂ ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದರು. 'ಕೆಜಿಎಫ್' ನಂತರ ಪ್ರಭಾಸ್ ಅವರು ಆ ಕ್ರಮ ತೆಗೆದುಕೊಂಡರು. ಇದು ವಾಣಿಜ್ಯ ಕೋನದೊಂದಿಗೆ ಪ್ರವೇಶಿಸಿತು ಎಂದು  ತಿಳಿಸಿದರು.

ಇದನ್ನು ಓದಿ: 2 ಸ್ಟೇಟ್ಸ್ ಚಿತ್ರದಲ್ಲಿ ಆಲಿಯಾ ಭಟ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ ಶಿವ ಸುಬ್ರಮಣ್ಯಂ ಇನ್ನಿಲ್ಲ..!

ನಾನು ಬಾಲಿವುಡ್ ಸಿನಿಮಾಗಳನ್ನು ನೋಡುತ್ತೇನೆ

ಆ ಕಡೆಯಿಂದ ಅದು ಹೇಗೆ ಬರಬೇಕು ಎಂದು ನಾನು ಭಾವಿಸುತ್ತೇನೆ, ಈಗ ಅವರು ಅದನ್ನು ಮಾಡುತ್ತಿದ್ದಾರೆ, ಜನರು ಕೂಡ ವೀಕ್ಷಿಸುತ್ತಾರೆ. ಮಾರುಕಟ್ಟೆಯು ತುಂಬಾ ದೊಡ್ಡದಾಗಿರುವಾಗ - ಈ ವಿಷಯಗಳಿಗೆ ಹೇಗೆ ಅಂಟಿಕೊಳ್ಳುವುದು ಎಂಬುದು ಮುಖ್ಯ. ನಮ್ಮ ಸಂಸ್ಕೃತಿಯಲ್ಲಿ ಹಲವು ಭಿನ್ನತೆಗಳಿದ್ದು, ಅವು ನಮ್ಮ ದೌರ್ಬಲ್ಯವಾಗುವ ಬದಲು ನಮ್ಮ ಶಕ್ತಿಯಾಗಬೇಕು. ಇದರ ಹೊರತಾಗಿ ಉತ್ತರದ ಚಿತ್ರಗಳು ಭಾರಿ ಹಿಟ್ ಆಗಿವೆ. ನಾವು ಹಿಂದಿ ತಾರೆಯರ ಸಾಕಷ್ಟು ಚಲನಚಿತ್ರಗಳನ್ನು ನೋಡಿದ್ದೇವೆ, ನಾವೆಲ್ಲರೂ ಅವರನ್ನು ಪ್ರೀತಿಸುತ್ತೇವೆ ಎಂದು  ಹೇಳಿದರು.

ಉತ್ತಮ ವಿಷಯ ಅಗತ್ಯವಿದೆ

ಹಿಂದಿ ಚಿತ್ರಗಳ ನಿರ್ಮಾಪಕರು ದಕ್ಷಿಣಕ್ಕೂ ಕಾಲಿಟ್ಟಿದ್ದಾರೆ. ಚಿತ್ರವನ್ನು ಬಿಡುಗಡೆ ಮಾಡುವ ಬದಲು ಉತ್ತಮ ಕಂಟೆಂಟ್, ಒಳ್ಳೆ ಪ್ರೊಡಕ್ಷನ್ ಹೌಸ್ ಮುಂತಾದ ಅಂಶಗಳನ್ನು ಪರಿಗಣಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಯಶ್ ಪ್ರಕಾರ, ನಿರ್ಮಾಪಕರು ಚಿತ್ರವನ್ನು ಮಾರಾಟ ಮಾಡುವ ನಟರನ್ನು ಹುಡುಕಬೇಕು. ಅವರು ಚಿತ್ರವು ಭಾರತದಾದ್ಯಂತ ಬಿಡುಗಡೆಯಾಗುವ ಪರಿಸ್ಥಿತಿಯನ್ನು ನೋಡಲು ಬಯಸುತ್ತಾರೆ. ಅದು ಶೀಘ್ರದಲ್ಲೇ ಸಂಭವಿಸುತ್ತದೆ ಎಂದು ತಿಳಿಸಿದರು
Published by:Seema R
First published: