ರಿಮಿಕ್ಸ್ ಹಾಡಿಗೆ ಬಂತು ಭಾರೀ ಬೇಡಿಕೆ; ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ‘ಜೋಕೆ…’ ಸಾಂಗ್

‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ‘ಕೆಜಿಎಫ್​’ನಲ್ಲಿ ರಿಮಿಕ್ಸ್​ ಮಾಡಲಾಗಿದೆ. ಶನಿವಾರ ಸಂಜೆ ಈ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದ್ದು, 8 ಲಕ್ಷ ಬಾರಿ ವೀಕ್ಷಣೆ ಕಂಡಿದೆ.

Rajesh Duggumane | news18
Updated:December 16, 2018, 2:38 PM IST
ರಿಮಿಕ್ಸ್ ಹಾಡಿಗೆ ಬಂತು ಭಾರೀ ಬೇಡಿಕೆ; ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ ‘ಜೋಕೆ…’ ಸಾಂಗ್
ಕೆಜಿಎಫ್​ ಪೋಸ್ಟರ್​
  • News18
  • Last Updated: December 16, 2018, 2:38 PM IST
  • Share this:
ಹಳೆಯ ಕಾಲದಲ್ಲಿ ತೆರೆಕಂಡ ಸಿನಿಮಾ ಹಾಡುಗಳಿಗೆ ಹೊಸ ಟಚ್​ ನೀಡಿ ಜನರ ಮುಂದಿಡುವ ಪ್ರಯತ್ನವನ್ನು ಅನೇಕರು ಮಾಡುತ್ತಿದ್ದಾರೆ. ‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಕೆಜಿಎಫ್​’ ಚಿತ್ರದಲ್ಲೂ ಈ ಪ್ರಯತ್ನವಾಗಿದೆ ಎಂಬುದು ಈ ಮೊದಲೇ ಗೊತ್ತಾಗಿತ್ತು. ಈಗ ಈ ಕುತೂಹಲಕ್ಕೆ ತೆರೆಬಿದ್ದಿದೆ. ಅಂದರೆ, ಚಿತ್ರತಂಡ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡನ್ನು ಬಿಡುಗಡೆ ಮಾಡಿದ್ದು, ಎಲ್ಲ ಕಡೆಗಳಿಂದ ಮೆಚ್ಚುಗೆ ಕೇಳಿ ಬರುತ್ತಿದೆ.

1970ರಲ್ಲಿ ತೆರೆಕಂಡ ಡಾ.ರಾಜ್​ಕುಮಾರ್​ ನಟನೆಯ ‘ಪರೋಪಕಾರಿ’ ಚಿತ್ರ ಸೂಪರ್​ ಹಿಟ್​ ಆಗಿತ್ತು. ಈ ಚಿತ್ರದ ‘ಜೋಕೆ ನಾನು ಬಳ್ಳಿಯ ಮಿಂಚು’ ಹಾಡನ್ನು ‘ಕೆಜಿಎಫ್​’ನಲ್ಲಿ ರಿಮಿಕ್ಸ್​ ಮಾಡಲಾಗಿದೆ. ಶನಿವಾರ ಸಂಜೆ ಈ ಹಾಡು ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿದ್ದು, 8 ಲಕ್ಷ ಬಾರಿ ವೀಕ್ಷಣೆ ಕಂಡಿದೆ. ಹಳೆ ಹಾಡನ್ನು ರಿಮಿಕ್ಸ್​ ಮಾಡಿದಾಗ ಅದನ್ನು ಜನ ಮೆಚ್ಚಿಕೊಳ್ಳಲೇ ಬೇಕೆಂದಿಲ್ಲ. ಇತ್ತೀಚಿಗೆ ರಿಲೀಸ್​ ಆಗಿದ್ದ 'ಊರ್ವಶಿ...' ಹಾಡು ಅದಕ್ಕೆ ಉತ್ತಮ ಉದಾಹರಣೆ.  ಎ.ಆರ್​. ರೆಹಮಾನ್​​ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದ್ದ ಈ ಹಾಡನ್ನು ರಿಮಿಕ್ಸ್​ ಮಾಡಲಾಗಿತ್ತು. ಆದರೆ ಈ ಹಾಡಿಗೆ ನಕಾರಾತ್ಮಕ ಪ್ರತಿಕ್ರಿಯೆ ಕೇಳಿ ಬಂದಿತ್ತು.  ಆದರೆ, 'ಜೋಕೆ..'ಯನ್ನು ಎಲ್ಲರೂ ಪ್ರಶಂಸಿಸಿದ್ದಾರೆ.

‘ಕೆಜಿಎಫ್​’ನಲ್ಲಿರುವ ವಿಶೇಷ ಹಾಡು ಇದಾಗಿದ್ದು, ಬಹುಭಾಷಾ ನಟಿ ತಮನ್ನಾ ಭಾಟಿಯಾ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಹಾಗಾಗಿ ವಿಡಿಯೋ ಸಾಂಗ್​ ಮೇಲೂ ಎಲ್ಲರ ದೃಷ್ಟಿ ನೆಟ್ಟಿದೆ. ಸಿನಿಮಾ ಬಿಡುಗಡೆ ಆದ ನಂತರವೇ ಇದರ ವಿಡಿಯೋ ಸಾಂಗ್​ ರಿಲೀಸ್​ ಆಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಹಿಂದಿಯಲ್ಲಿ ಈ ಹಾಡಿನ ಬದಲಾಗಿ, ‘ಗಲಿ ಗಲಿ’ ಹಾಡನ್ನು ಬಳಕೆ ಮಾಡಲಾಗಿದೆ. ಮೌನಿ ರಾಯ್​ ಹಾಗೂ ಯಶ್​ ಕಾಂಬಿನೇಷನ್​ನಲ್ಲಿ ಮೂಡಿ ಬಂದಿರುವ ಈ ಸಾಂಗ್​ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, 2 ಕೋಟಿಗೂ ಅಧಿಕ ಬಾರಿ ವೀಕ್ಷಣೆ ಕಂಡು ದಾಖಲೆ ಬರೆದಿದೆ.

ಇದನ್ನೂ ಓದಿ: ಭಾನುವಾರ ಆರಂಭವಾಗಲಿದೆ ‘ಕೆಜಿಎಫ್’ ಚಿತ್ರದ ಮುಂಗಡ ಬುಕಿಂಗ್

First published:December 16, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading