ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ (Ravi Basrur) ಈಗ ಎಲ್ಲೆಡೆ ಫೇಮಸ್. ಕನ್ನಡ ಮಾತ್ರವಲ್ಲ ಬೇರೆ ಭಾಷೆಗಳ ಸಿನಿಮಾ ತಂಡವೂ ಕನ್ನಡ ಖ್ಯಾತ ಸಂಗೀತ ನಿರ್ದೇಶಕನನ್ನು (Music Director) ಹುಡಕಿಕೊಂಡು ಬರುತ್ತಿದೆ. ಇಂದು ರವಿ ಬಸ್ರೂರ್ ಅವರಿಗೆ ಹುಟ್ಟಿದ ಹಬ್ಬದ ಸಂರ್ಭಮ. ದಾಖಲೆ ಸೃಷ್ಟಿಸಿದ ಕೆಜಿಎಫ್ (KGF) ಸಿನಿಮಾದ ಸಂಗೀತವನ್ನು ನಿರ್ದೇಶಿಸಿದ ಕಲಾವಿದ ಇವರು. ಇಂದು ಸ್ಟಾರ್ ಸಂಗೀತ ನಿರ್ದೇಶಕನಾಗಿ ಮೆರೆಯುತ್ತಿರುವ ಇವರು ಒಂದು ಸಮಯದಲ್ಲಿ ತಮ್ಮ ಕುಟುಂಬವ ಹೊಟ್ಟೆ ತುಂಬಿಸಲು ಚಿಕ್ಕ ವಯಸ್ಸಿನಲ್ಲಿಯೇ ದುಡಿಮೆಗೆ ನಿಂತರು.
ಕುಟುಂಬ ಸಲಹುವ ಹೊರೆ
ರವಿ ಅವರು ಚಿಕ್ಕ ವಯಸ್ಸಿನಲ್ಲಿಯೇ ಕೂಡು ಕುಟುಂಬವೊಂದು ಒಡೆದು ಹೋಗುವುದನ್ನು ನೋಡಿದ್ದರು. ವೈಯಕ್ತಿಕ ಸಮಸ್ಯೆಗಳಿಂದಾಗಿ ರವಿ ಅವರು ತುಂಬಿದ ಮನೆ ಒಡೆಯುವುದನ್ನು ನೋಡಿದರು. ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬಗಳು ಬೇರೆಯಾಗುವುದನ್ನು ನೋಡಬೇಕಾಯಿತು.
14ನೇ ವಯಸ್ಸಿಗೆ ದುಡಿಮೆ ಆರಂಭ
ಅಲ್ಲಿ ತನಕ ಅವರ ಚಿಕ್ಕಪ್ಪನ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದ ಅವರ ಸಹೋದರನನ್ನು ಅದರಿಂದ ತೆಗೆದುಹಾಕಲಾಯಿತು. ರವಿ 14 ವರ್ಷದವರಾಗಿದ್ದಾಗಲೇ ಅವರ ಕುಟುಂಬವನ್ನು ಬೆಂಬಲಿಸಲು ಪ್ರಾರಂಭಿಸಿದರು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ತಮ್ಮದೇ ಆದ ಆರ್ಕೆಸ್ಟ್ರಾವನ್ನು ಪ್ರಾರಂಭಿಸಿದರು.
ಅವರು ಮುಂದಿನ ಎರಡು ವರ್ಷಗಳ ಕಾಲ ಭಕ್ತಿಗೀತೆಗಳನ್ನು ಪ್ರದರ್ಶಿಸಿದರು. ಕೆಲಸ ಮಾಡಿದರು. ಸಂಗೀತದ ಕಡೆಗೆ ಅವರ ಉತ್ಸಾಹ ಮತ್ತು ಸ್ಫೂರ್ತಿ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಬಂತು. ಸಾವಿರಾರು ಕನಸುಗಳನ್ನು ಹೊತ್ತುಕೊಂಡು ಅವರು 17 ನೇ ವಯಸ್ಸಿನಲ್ಲಿ ತಮ್ಮ ಹಳ್ಳಿಯನ್ನು ತೊರೆದು ಬಂದರು.
ಸಹೋದರರಿಂದ ಸಿಕ್ತು ಸಪೋರ್ಟ್
ಅವರ ಸಹೋದರರು ಬೆಂಬಲ ನೀಡುತ್ತಲೇ ಇದ್ದರು. ಪ್ರಯಾಣ ಮತ್ತು ಸಂಗೀತ-ಸಂಬಂಧಿತ ಚಟುವಟಿಕೆಗಳಿಗೆ ಹಣವನ್ನು ಕಳುಹಿಸುತ್ತಿದ್ದರು. ರವಿ ಅವರು ಆರಂಭದಲ್ಲಿ ಭಕ್ತಿ ಗೀತೆಯನ್ನು ರೆಕಾರ್ಡ್ ಮಾಡಿದ್ದಾರೆ. ಆದರೆ ಸಿಡಿ ಬಿಡುಗಡೆ ಮಾಡಲು ಅವರ ಬಳಿ ಹಣವಿರಲಿಲ್ಲ. ಅವರು ಹಣಕ್ಕಾಗಿ ತಮ್ಮ ಏಕೈಕ ಕೀಬೋರ್ಡ್ ಅನ್ನು ಮಾರಾಟ ಮಾಡಿದ್ದರು.
ಅವರು ಸೊಲೊಮನ್ನನ್ನು ಭೇಟಿಯಾಗುತ್ತಾರೆ. ಸಂಗೀತ ಉದ್ಯಮದಲ್ಲಿ ತಾಂತ್ರಿಕ ಬೆಳವಣಿಗೆಯನ್ನು ಅರಿತುಕೊಳ್ಳುತ್ತಾರೆ. ಕೊನೆಗೆ ಎಲ್ಲ ಸೇವಿಂಗ್ಸ್ ಬಳಸಿ ಕಂಪ್ಯೂಟರ್ ಅನ್ನು ಖರೀದಿಸುತ್ತಾರೆ. ಇದೆಲ್ಲವೂ ರವಿ ಅವರ ಅತ್ಯಂತ ಕಷ್ಟದ ದಿನಗಳಾಗಿದ್ದವು. ಆದರೆ ನಂತರ ಕನ್ನಡ ಸಿನಿ ಹಾಡುಗಳ ಮೂಲಕ ಪ್ರೇಕ್ಷಕರ ಮನೆ-ಮನಗಳನ್ನು ಮುಟ್ಟಿದರು. ಈಗ ಅವರ ಹಾಡುಗಳು ಎಲ್ಲರ ಫೃವರಿಟ್.
ಮಹೆಬೂಬಾ ಹಾಡು
ಕೆಜಿಎಫ್ ಚಾಪ್ಟರ್ 2 ಸಿನಿಮಾದ ಮೆಹಬೂಬಾ ಹಾಡು ಎಲ್ಲರ ಫೇವರಿಟ್. ಶ್ರೀನಿಧಿ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ನಡುವಿನ ಈ ರೊಮ್ಯಾಂಟಿಕ್ ಪ್ರಯಣ ಗೀತೆಯನ್ನು ಸೌತ್ ಟು ನಾರ್ತ್ ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ಹಾಡನ್ನು ಅನನ್ಯಾ ಭಟ್ ಹಾಡಿದ್ದಾರೆ.
ಉಗ್ರಂ ಹಾಡು
ಪ್ರಶಾಂತ್ ನೀಲ್ ನಿರ್ದೇಶನದ ಶ್ರೀಮುರಳಿ ಅಭಿನಯದ ಉಗ್ರಂ ಸಿನಿಮಾದ ಹಾಡು ಸಖತ್ ಹಿಟ್ ಆಗಿತ್ತು. ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದು ರವಿ ಬಸ್ರೂರ್.
ಅಂಜನೀಪುತ್ರ
ಪುನೀತ್ ರಾಜ್ಕುಮಾರ್ ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ಅಂಜನೀಪುತ್ರ ಟೈಟಲ್ ಟ್ರ್ಯಾಕ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈ ಹಾಡನ್ನು ಕೂಡಾ ಕಂಪೋಸ್ ಮಾಡಿದ್ದು ರವಿ ಬಸ್ರೂರ್ ಅವರು.
ಮಫ್ತಿ ಹಾಡು
ಮಫ್ತಿ ಸಿನಿಮಾದ ಬಹುತೇಕ ಎಲ್ಲ ಹಾಡುಗಳೂ ಸೂಪರ್ ಹಿಟ್ ಆಗಿದ್ದವು. ಈ ಸಿನಿಮಾದ ಹಾಡುಗಳಿಗೂ ರವಿ ಬಸ್ರೂರ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ