ಎರಡನೇ ಮಗು ಜನಿಸಿದ ಬೆನ್ನಲ್ಲೇ ಯಶ್- ರಾಧಿಕಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ!

Girmit: ಹೊಸ ದಾಖಲೆಯನ್ನು ಬರೆಯಲು ‘ಗಿರ್ಮಿಟ್‘​ ಸಿನಿಮಾ ಸಿದ್ಧವಾಗಿದ್ದು, ಈ ಚಿತ್ರದಲ್ಲಿ 280 ಮಕ್ಕಳು ನಟಿಸಿದ್ದಾರೆ. ಆ್ಯಕ್ಷನ್​ ಕಾಮಿಡಿ ಚಿತ್ರ ಇದಾಗಿದ್ದು, ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಮಾತ್ರವಲ್ಲದೆ, ಇಂಗ್ಲಿಷ್​ ಭಾಷೆಯಲ್ಲೂ ಈ ಚಿತ್ರ ತೆರೆ ಕಾಣುತ್ತಿದೆ.

news18-kannada
Updated:November 7, 2019, 10:00 PM IST
ಎರಡನೇ ಮಗು ಜನಿಸಿದ ಬೆನ್ನಲ್ಲೇ ಯಶ್- ರಾಧಿಕಾ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ!
ಯಶ್- ರಾಧಿಕಾ
  • Share this:
‘ಕೆ.ಜಿ.ಎಫ್‘, ‘ಉಗ್ರಂ​‘ ಮುಂತಾದ ಹಿಟ್​ ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡಿದ  ರವಿ ಬಸ್ರೂರು ‘ಗಿರ್ಮಿಟ್‘ ಸಿನಿಮಾವನ್ನು ನಿರ್ದೇಶಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ, ಇದೀಗ ‘ಗಿರ್ಮಿಟ್‘​ ಸಿನಿಮಾ ತೆರೆ ಮೇಲೆ ಬರಲು ಸಿದ್ಧವಾಗಿದ್ದು, ನವೆಂಬರ್​ 8 ರಂದು ಪರದೆ ಮೇಲೆ ಬಿತ್ತರವಾಗಲಿದೆ.

ವಿಶೇಷವೆಂದರೆ ‘ಗಿರ್ಮಿಟ್‘​ ಸಿನಿಮಾ ಮಕ್ಕಳ ಸಿನಿಮಾವಾಗಿದೆ. ಮಕ್ಕಳೇ ಇಲ್ಲಿ ನಾಯಕ-ನಟಿ, ಪೋಷಕರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ಯಾಂಡಲ್​ವುಡ್​ನ ಖ್ಯಾತ ನಟ-ನಟಿಯರ ಧ್ವನಿಯಲ್ಲಿ ಮತ್ತು ಮಕ್ಕಳ ನಟನ ಕೌಶಲ್ಯವನ್ನು ಬಳಸಿಕೊಂಡು ರವಿ ಬಸ್ರೂರು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಮತ್ತೊಂದು ವಿಶೇಷವೆಂದರೆ ‘ಗಿರ್ಮಿಟ್‘​ ಸಿನಿಮಾದಲ್ಲಿ ಬರುವ ನಟ-ನಟಿಯ ಪಾತ್ರಕ್ಕೆ ರಾಕಿಂಗ್​ ಸ್ಟಾರ್​ ಯಶ್​- ನಟಿ ರಾಧಿಕಾ ಪಂಡಿತ್​ ಧ್ವನಿ ನೀಡಿದ್ದಾರೆ. ಚಿತ್ರದಲ್ಲಿ ಬರುವ ‘ಧೂಮರಟ್ಚ ಧೂಮರಚ್ಚ ಟಟ್ಟಾಬೇಸ್‘​ ಹಾಡಿಗೆ ಪವರ್​ ಸ್ಟಾರ್​ ಪುನೀತ್​ ರಾಜ್​ ಕುಮಾರ್​ ಧ್ವನಿ ನೀಡಿದ್ದಾರೆ.

ಇದನ್ನೂ ಓದಿ: Whatsapp: ​​ಗ್ರೂಪಿನ ಕಿರಿಕಿರಿ ತಪ್ಪಿಸಲು ವಾಟ್ಸ್​ಆ್ಯಪ್​ನಲ್ಲಿ ಬಂದಿದೆ ಹೊಸ ಫೀಚರ್​‘ಗಿರ್ಮಿಟ್‘​ ಸಿನಿಮಾದ ಕಥೆ ಒಂದು ಮದುವೆ ಮಾಡಿಸುವುದಕ್ಕೆ ಎಷ್ಟು ಕಷ್ಟ ಇದೆ ಎನ್ನುವ ವಿಚಾರವಾಗಿದೆ. ಇದೊಂದು ಸಾಂಸರಿಕ ಕಥೆಯಾಗಿದೆ. ಚಿತ್ರದಲ್ಲಿ ಹೀರೋಯಿನ್​ ತನ್ನ ಅಕ್ಕನಿಗೆ ಮದುವೆ ಮಾಡಬೇಕು ಅಂದುಕೊಂಡಿರುತ್ತಾಳೆ. ಹೀರೋ ಒಂದು ತಿಂಗಳಲ್ಲಿ ತಾಣು ಮದುವೆ ಆಗಬೇಕು ಅಂದುಕೊಂಡಿರುತ್ತಾರೆ. ಆದರೆ ಹೆಣ್ಣುಮಕ್ಕಳನ್ನು ಮದುವೆ ಮಾಡೋದು ಎಷ್ಟು ಕಷ್ಟವೆಂದು ಹೀರೋಗೆ ತಿಳಿಯುತ್ತದೆ. ಆನಂತರ ಮದುವೆ ವಿಚಾರದಲ್ಲಿ ಬರುವ ಸವಾಲುಗಳನ್ನು ಹೇಗೆ ಎದುರಿಸುತ್ತಾನೆ ಎನ್ನುವುದು ಈ ಚಿತ್ರದ ತಿರುಳಾಗಿದೆ.

ಹೊಸ ದಾಖಲೆಯನ್ನು ಬರೆಯಲು ‘ಗಿರ್ಮಿಟ್‘​ ಸಿನಿಮಾ ಸಿದ್ಧವಾಗಿದ್ದು, ಈ ಚಿತ್ರದಲ್ಲಿ 280 ಮಕ್ಕಳು ನಟಿಸಿದ್ದಾರೆ. ಆ್ಯಕ್ಷನ್​ ಕಾಮಿಡಿ ಚಿತ್ರ ಇದಾಗಿದ್ದು, ಆರು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಮಾತ್ರವಲ್ಲದೆ, ಇಂಗ್ಲಿಷ್​ ಭಾಷೆಯಲ್ಲೂ ಈ ಚಿತ್ರ ತೆರೆ ಕಾಣುತ್ತಿದೆ. ‘ಗಿರ್ಮಿಟ್‘​ ಚಿತ್ರದಲ್ಲಿ ಹೀರೋ ಆಗಿ ಮಾಸ್ಟರ್​ ಆಶ್ಲೇಷ್​ ರಾಜ್​ ಮತ್ತು ಹಿರೋಯಿನ್​ ಆಗಿ ಬೇಬಿ ಶಾಘ್ಲ ಸಾಲಿಗ್ರಾಮ ಕಾಣಿಸಿಕೊಂಡಿದ್ದಾರೆ. ನವೆಂಬರ್ ತಿಂಗಳ​ 2ನೇ ವಾರದಂದು ರಿಲೀಸ್​ ಆಗುತ್ತಿದೆ.ಇದನ್ನೂಓದಿ: BSNL Preapaid Plan: ಈ ಪ್ಲಾನ್ ಅಳವಡಿಸಿಕೊಂಡರೆ 425 ದಿನಗಳ ವ್ಯಾಲಿಡಿಟಿ ಜೊತೆಗೆ ದೈನಂದಿನ 3GB ಡೇಟಾ ಉಚಿತ!

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading