KGF 2 Actor: ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ ರಾಕಿಭಾಯ್ ಪ್ರೀತಿಯ ಚಾಚಾ! ಹರೀಶ್ ರೈ ಆರೋಗ್ಯ ಹೇಗಿದೆ?

KGF 2: ಕೆಜಿಎಫ್ ಸಿನಿಮಾದಲ್ಲಿ ರಾಕಿ ಭಾಯ್ ಪ್ರೀತಿಯ ಚಾಚಾ ಆಗಿ ನಟಿಸಿದ್ದ ಹರೀಶ್ ರೈ ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದು ಅವರ ಆರೋಗ್ಯ ಹದಗೆಡುತ್ತಿದೆ. ಈಗ ಹೇಗಿದ್ದಾರೆ ನಟ?

ಹರೀಶ್ ರೈ

ಹರೀಶ್ ರೈ

  • Share this:
ಸ್ಯಾಂಡಲ್​ವುಡ್​ನ ಟಾಪ್ ಸಿನಿಮಾ ಕೆಜಿಎಫ್​​ನಲ್ಲಿ (KGF) ನಟಿಸಿದ ಹರೀಶ್ ರೈ  (Harish Rai) ಅವರು ಕ್ಯಾನ್ಸರ್​ನಿಂದ (Cancer) ಬಳಲುತ್ತಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ (Cinema) ರಾಕಿ ಭಾಯ್ ಪ್ರೀತಿಯ ಚಾಚಾನಾಗಿ ನಟಿಸಿದ್ದ ಹರೀಶ್ ರೈ ಅವರ ಆರೋಗ್ಯ ಸ್ಥಿತಿಯು (Health Condition) ಗಂಭೀರವಾಗಿದ್ದು ನಟ ಕ್ಯಾನ್ಸರ್​ನೊಂದಿಗೆ ಹೋರಾಡುತ್ತಿರುವ ವಿಚಾರ ಈಗ ತಿಳಿದುಬಂದಿದೆ. ಹರೀಶ್ ರೈ ಕನ್ನಡ ಚಲನಚಿತ್ರೋದ್ಯಮದಲ್ಲಿ ಬಹಳಷ್ಟು ವರ್ಷಗಳಿಂದ ಕೆಲಸ ಮಾಡಿದ್ದಾರೆ. KGF ಚಾಪ್ಟರ್ 2ನಂತಹ ಜನಪ್ರಿಯ ಸಿನಿಮಾಗಳಲ್ಲಿ ಹರೀಶ್ ಕೆಲಸ ಮಾಡಿದ್ದಾರೆ. 

ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿಯೇ ನಟಿಸಿದ್ದ ಹರೀಶ್ ರೈ ಅವರು ಕೆಜಿಎಎಫ್ ಚಾಪ್ಟರ್​ಗಳಲ್ಲಿ ಪಾಸಿಟಿವ್ ಶೇಡ್​ನ ಪಾತ್ರದಲ್ಲಿ ನಟಿಸಿ ಭಾರೀ ಖ್ಯಾತಿಗೆ ಏರಿದರು. ಅಲ್ಲಿಯವರೆಗೂ ನೆಗೆಟಿವ್ ಶೇಡ್​ನ ಪಾತ್​ರದಲ್ಲಿಯೇ ಜನ ಅವರನ್ನು ಕಂಡಿದ್ದರು ಸಹ ಕೆಜಿಎಫ್​ ನಲ್ಲಿ ಅವರ ಪಾತ್ರ ಪ್ರೇಕ್ಷರನ್ನು ಸೆಳೆಯುವಲ್ಲಿ ಸಕ್ಸಸ್ ಆಯಿತು.

ಹರೀಶ್ ಅವರು ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದು ನಟ ಸದ್ಯ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾರೆ. ನಟ ಕೊನೆಯ ಸ್ಟೇಜ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು ಕುಟುಂಬಸ್ಥರು ನಟನ ಉಳಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಇನ್ನು ಚಿಕಿತ್ಸೆ ವೆಚ್ಚ ಭರಿಸಲು ಕುಟುಂಬ ಕಷ್ಟಪಡುತ್ತಿದೆ ಎನ್ನಲಾಗಿದೆ.

ಹರೀಶ್ ರೈ ಅವರ ಸಿನಿಮಾಗಳು

K.G.F: ಚಾಪ್ಟರ್ 2 (ಖಾಸಿಂ)2022, 2018 K.G.F: ಚಾಪ್ಟರ್ 1 1(ಖಾಸಿಂ), 2017 ಬೆಂಗಳೂರು ಅಂಡರ್​ ವರ್ಲ್ಡ್, 2016ಮೀಂದುಮ್ ಒರು ಕಾದಲ್ ಕಧೈ(ಮನೋಜ್), 2016 ರಾಜ್ ಬಹದ್ದೂರ್, 2011 ಧನ್ ಧನಾ ಧನ್, 2011 ಸಂಜು ವೆಡ್ಸ್ ಗೀತಾ, 2010ಸ್ವಯಂವರ, 2007 ಭೂಗತ, 2006 ನನ್ನ ಕನಸಿನ ಹೂವೆ, 2004 -ನಲ್ಲ, ಜಾಫರ್ ಅಲಿಯಾಸ್ ಮುರ್ಗಿ ಜಾಫರ್, 1997ಜೋಡಿ ಹಕ್ಕಿ, 1997 ತಾಯವ್ವ, 1995 ಓಂ ಸಿನಿಮಾಗಳಲ್ಲಿ ಹರೀಶ್ ಅಭಿನಯಿಸಿದ್ದಾರೆ.

ಇದನ್ನೂ ಓದಿ: Chiyaan Vikram: 3 ವರ್ಷ ಶವದಂತೆ ಒಂದೇ ಕಡೆ ಮಲಗಿದ್ದ ಸ್ಟಾರ್​ ನಟ! ವಿಕ್ರಮ್ ಬದುಕೇ ಒಂದು ಹೋರಾಟ

 ಪಾಸಿಟಿವ್ ಶೇಡ್​ನ ಪಾತ್ರ ಕ್ಲಿಕ್ ಆಯ್ತು

ಹಲವಾರು ಸಿನಿಮಾಗಳಲ್ಲಿ ವಿಲನ್ ಆಗಿಯೇ ನಟಿಸಿದ್ದ ಹರೀಶ್ ರೈ ಅವರು ಕೆಜಿಎಎಫ್ ಚಾಪ್ಟರ್​ಗಳಲ್ಲಿ ಪಾಸಿಟಿವ್ ಶೇಡ್​ನ ಪಾತ್ರದಲ್ಲಿ ನಟಿಸಿ ಭಾರೀ ಖ್ಯಾತಿಗೆ ಏರಿದರು. ಅಲ್ಲಿಯವರೆಗೂ ನೆಗೆಟಿವ್ ಶೇಡ್​ನ ಪಾತ್ರದಲ್ಲಿಯೇ ಜನ ಅವರನ್ನು ಕಂಡಿದ್ದರು ಸಹ ಕೆಜಿಎಫ್​ ನಲ್ಲಿ ಅವರ ಪಾತ್ರ ಪ್ರೇಕ್ಷರನ್ನು ಸೆಳೆಯುವಲ್ಲಿ ಸಕ್ಸಸ್ ಆಯಿತು.
Published by:Divya D
First published: