‘ಕೆಜಿಎಫ್’​ ಮೊದಲ ದಿನದ ಗಳಿಕೆಯೆಷ್ಟು ಗೊತ್ತಾ?; ಹೊಸ ದಾಖಲೆ ಬರೆದ ಯಶ್​!

ಕ್ರಿಸ್​ಮಸ್​ ಹಬ್ಬದ ಸಮಯದಲ್ಲೇ ಚಿತ್ರ ತೆರೆಕಂಡಿರುವುದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಲಿದೆ. ತಮಿಳಿನಲ್ಲಿ ತೆರೆಕಂಡ ಮಾರಿ 2 ಹಾಗೂ ಹಿಂದಿಯ ಝೀರೋ ಚಿತ್ರವನ್ನು ಯಶ್​ ಹಿಂದಿಕ್ಕಿದ್ದಾರೆ.

news18
Updated:December 22, 2018, 3:45 PM IST
‘ಕೆಜಿಎಫ್’​ ಮೊದಲ ದಿನದ ಗಳಿಕೆಯೆಷ್ಟು ಗೊತ್ತಾ?; ಹೊಸ ದಾಖಲೆ ಬರೆದ ಯಶ್​!
ಯಶ್​
  • News18
  • Last Updated: December 22, 2018, 3:45 PM IST
  • Share this:
ಐದು ಭಾಷೆಗಳಲ್ಲಿ ತೆರೆಕಂಡಿರುವ ‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಕೆಜಿಎಫ್​’ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸೌಂಡ್​ ಮಾಡುತ್ತಿದೆ. ಐದೂ ಭಾಷೆಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ಕೇಳಿ ಬಂದಿದ್ದು, ಸಿನಿಮಾ ಬರೋಬ್ಬರಿ 20-25 ಕೋಟಿ ರೂಪಾಯಿ ಬಾಚಿಕೊಂಡಿದೆ ಎನ್ನುವ ಮಾತು ಗಾಂಧಿ ನಗರದ ಅಂಗಳದಲ್ಲಿ ಕೇಳಿ ಬರುತ್ತಿದೆ.

‘ಕೆಜಿಎಫ್​’ ಚಿತ್ರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಚಿತ್ರದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಹಾಗೂ ಸಂಭಾಷಣೆ ಸಿನಿಮಾದ ಬೆನ್ನೆಲುಬಾಗಿ ನಿಂತಿತ್ತು. ಚಿತ್ರದ ಮೇಕಿಂಗ್​ ಮಾರ್ಕ್ಸ್​ ಗಿಟ್ಟಿಸಿಕೊಂಡಿತ್ತು. ಈಗ ಚಿತ್ರ ಇಷ್ಟು ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡಿರುವುದು ಎಲ್ಲರ ಗಮನ ಸೆಳೆದಿದೆ.

ಹಿಂದಿಯಲ್ಲಿ 'ಕೆಜಿಎಫ್​'  ಸಿನಿಮಾ 2 ಕೋಟಿ ರೂ. ಗಳಿಕೆ ಮಾಡಿದೆ. ಇದು ಸ್ವಲ್ಪ ಕಡಿಮೆ ಎನಿಸಿದರೂ ಮುಂದಿನ ದಿನಗಳಲ್ಲಿ ಕಲೆಕ್ಷನ್​ ಹೆಚ್ಚುವ ಲಕ್ಷಣ ಗೋಚರವಾಗಿದೆ. ಬಾಲಿವುಡ್​ನಲ್ಲಿ ಶಾರುಖ್​ ಖಾನ್​ ನಟನೆಯ ‘ಝೀರೋ’ ಚಿತ್ರಕ್ಕೆ ಋಣಾತ್ಮಕ ಪ್ರತಿಕ್ರಿಯೆ ಕೇಳಿ ಬಂದಿತ್ತು. ಇದು ‘ಕೆಜಿಎಫ್​’ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗುವ ಎಲ್ಲ ಲಕ್ಷಣ ಗೋಚರವಾಗಿದೆ. ಮುಂದಿನ ದಿನಗಳಲ್ಲಿ ಬಾಕ್ಸ್​​ ಆಫೀಸ್​ ಕಲೆಕ್ಷನ್ ಹೆಚ್ಚಲು ಇದೂ ಕೂಡ ಕಾರಣವಾಗಬಹುದು.

ಇದನ್ನೂ ಓದಿ: ಕೆಜಿಎಫ್​ ವಿಮರ್ಶೆ: ಈ ಚಿತ್ರದಲ್ಲಿ ಯಶ್ ಒಬ್ಬರೇ ಹೀರೋ ಅಲ್ಲ!


ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನಿಂದ ಚಿತ್ರದ ಗಲ್ಲಾ ಪೆಟ್ಟಿಗೆಗೆ ಎಷ್ಟು ಹಣ ಸಂದಾಯವಾಗಿದೆ ಎಂಬ ಸರಿಯಾದ ಚಿತ್ರಣ ಸಿಕ್ಕಿಲ್ಲ. ಕ್ರಿಸ್​ಮಸ್​ ಹಬ್ಬದ ಸಮಯದಲ್ಲೇ ಚಿತ್ರ ತೆರೆಕಂಡಿರುವುದು ಚಿತ್ರಕ್ಕೆ ಮೈಲೇಜ್​ ಒದಗಿಸಿದೆ.

ತಮಿಳಿನಲ್ಲಿ ತೆರೆಕಂಡ 'ಮಾರಿ 2' ಹಾಗೂ ಹಿಂದಿಯ 'ಝೀರೋ' ಚಿತ್ರವನ್ನು ಯಶ್​ ಹಿಂದಿಕ್ಕಿದ್ದಾರೆ. ಐಎಂಡಿಬಿ ಕೆಜಿಎಫ್​ಗೆ 10ಕ್ಕೆ 9.1 ರೇಟಿಂಗ್ ನೀಡಿದೆ. 'ಮಾರಿ 2'ಗೆ 6.6 ಹಾಗೂ ಝೀರೋ ಚಿತ್ರಕ್ಕೆ 7.1 ರೇಟಿಂಗ್​ ನೀಡಿದೆ ಐಎಂಡಿಬಿ. ಇದು ಯಶ್​ ಅಭಿಮಾನಿಗಳ ಖುಷಿ ಹೆಚ್ಚಿಸಿದೆ.

ಇದನ್ನೂ ಓದಿ: ಕಿಂಗ್​ ಖಾನ್​ಗೆ​ ‘ಝೀರೋ’ ಕಹಿ; ಒಂದು ವರ್ಷ ಚಿತ್ರರಂಗದಿಂದ ದೂರ ಉಳಿಯಲಿದ್ದಾರಂತೆ ಶಾರುಖ್​!

First published: December 22, 2018, 2:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading