ಕೆಜಿಎಫ್​ನಿಂದ ದಾಖಲೆಯ ಮೇಲೆ ದಾಖಲೆ; ಉಘೇ ಎಂದ ಪರಭಾಷಿಗರು!

ಶುಕ್ರವಾರ ಕೆಜಿಎಫ್​ ಟ್ರೈಲರ್​​ ಐದೂ ಭಾಷೆಗಳಲ್ಲಿ ತೆರೆಕಂಡಿತ್ತು. ಇದನ್ನು ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡಿರುವ ಟ್ರೈಲರ್​​ನ ಒಟ್ಟು ವೀಕ್ಷಣೆ 2 ಕೋಟಿಯ ಗಡಿ ದಾಟಿದೆ.

Rajesh Duggumane | news18
Updated:November 14, 2018, 3:35 PM IST
ಕೆಜಿಎಫ್​ನಿಂದ ದಾಖಲೆಯ ಮೇಲೆ ದಾಖಲೆ; ಉಘೇ ಎಂದ ಪರಭಾಷಿಗರು!
ಕೆಜಿಎಫ್​ ಪೋಸ್ಟರ್​
  • News18
  • Last Updated: November 14, 2018, 3:35 PM IST
  • Share this:
ನ್ಯೂಸ್​ 18 ಬೆಂಗಳೂರು

‘ರಾಕಿಂಗ್​ ಸ್ಟಾರ್​’ ಯಶ್​ ನಟನೆಯ ‘ಕೆಜಿಎಫ್​’ ಚಿತ್ರದ ಟ್ರೈಲರ್​ಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಮಧ್ಯೆ ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ದಾಖಲೆಯ ಮೇಲೆ ದಾಖಲೆ ಸೃಷ್ಟಿಯಾಗುತ್ತಿದೆ. ಅಚ್ಚರಿ ಏನೆಂದರೆ ಕೆಜಿಎಫ್​ ಟ್ರೇಲರ್​ ಬರೋಬ್ಬರಿ 2 ಕೋಟಿ ಬಾರಿ ವೀಕ್ಷಣೆ ಕಂಡಿದೆ.! ಕನ್ನಡ ಸಿನಿಮಾವೊಂದು  ಈ ರೀತಿ ದಾಖಲೆ ಮಾಡುತ್ತಿರುವುದು ಇದೇ ಮೊದಲು.

ಶುಕ್ರವಾರ ಕೆಜಿಎಫ್​ ಟ್ರೈಲರ್​​ ಐದೂ ಭಾಷೆಗಳಲ್ಲಿ ತೆರೆಕಂಡಿತ್ತು. ಚಿತ್ರದ ಟ್ರೈಲರ್​ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಐದು ಭಾಷೆಗಳಲ್ಲಿ ತೆರೆಕಂಡಿರುವ ಟ್ರೈಲರ್​​ನ ಒಟ್ಟು ವೀಕ್ಷಣೆ 2 ಕೋಟಿಯ ಗಡಿ ದಾಟಿದೆ. ಕೆಜಿಎಫ್​ ಮಾಡಿದ ಹೊಸ ಸಾಧನೆಗೆ ಪುನೀತ್​ ರಾಜ್​ಕುಮಾರ್​ ತಂಡದ ಬೆನ್ನು ತಟ್ಟಿದ್ದಾರೆ. ‘5 ಭಾಷೆಗಳಲ್ಲಿ ಸೇರಿ ಕೆಜಿಫ್​ ಟ್ರೈಲರ್​  20 ಮಿಲಿಯನ್​ಗೂ ಅಧಿಕ ವೀಕ್ಷಣೆ ಕಂಡಿರುವುದಕ್ಕೆ ನಾನು ಯಶ್​, ವಿಜಯ್​, ಪ್ರಶಾಂತ್​ ನೀಲ್​ ಹಾಗೂ ಇಡೀ ತಂಡಕ್ಕೆ ಶುಭ ಕೋರುತ್ತೇನೆ’ ಎಂದು ಪುನೀತ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.


ಇಲ್ಲಿ ಮತ್ತೊಂದು ಅಚ್ಚರಿ ಇದೆ. ಸಾಮಾನ್ಯವಾಗಿ ಪರಭಾಷೆಯ ಚಿತ್ರಗಳು ಕರ್ನಾಟಕದಲ್ಲಿ ಚೆನ್ನಾಗಿಯೇ ಓಡುತ್ತವೆ. ಅಷ್ಟೇ ಅಲ್ಲ ತೆಲುಗು, ಹಿಂದಿ, ತಮಿಳು ಚಿತ್ರಗಳ ಟ್ರೈಲರ್​​ ನೋಡಿ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ, ಕನ್ನಡ ಸಿನಿಮಾವೊಂದನ್ನು ಪರಭಾಷಿಗರು ತಿರುಗಿ ನೋಡುವಂತೆ ಮಾಡಿದೆ ‘ಕೆಜಿಎಫ್​’.

ಇದನ್ನೂ ಓದಿ: ಕೆಜಿಎಫ್​ ಹೊಸ ದಾಖಲೆ: ಸೂಪರ್ ಸ್ಟಾರ್​ಗಳನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್

ಕನ್ನಡದಲ್ಲಿ ಮಾತ್ರವಲ್ಲದೆ ಈ ಚಿತ್ರದ ಟ್ರೈಲರ್​​ ಪರಭಾಷೆಗಳಲ್ಲೂ ಮೆಚ್ಚುಗೆ ಗಳಿಸಿಕೊಂಡಿದೆ. ತೆಲುಗು ಅವತರಣಿಕೆಯ ಟ್ರೈಲರ್​​ ಟ್ರೆಂಡಿಂಗ್​ನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದೆ. ಹಿಂದಿ ಟ್ರೈಲರ್​ ಬರೋಬ್ಬರಿ 1 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಈ ಎಲ್ಲ ವಿಚಾರಗಳು ಸಿನಿಮಾ ಮೇಲಿನ ನಿರೀಕ್ಷೆಗೆ ಸಾಕಷ್ಟು ಮೈಲೇಜ್​ ನೀಡಿದೆ. ಈ ಬೆಳವಣಿಗೆಯಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ಸಿಕ್ಕಂತಾಗಿದೆ.
First published:November 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading