Actor Accident: ಕೆಜಿಎಫ್ ನಟನ ಕಾರು ಅಪಘಾತ, ಸಂಪೂರ್ಣ ನಜ್ಜುಗುಜ್ಜಾದ ಐಷಾರಾಮಿ ಕಾರು

ಕೆಜಿಎಫ್ 1 ಮತ್ತು 2ನೇ ಭಾಗದಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ಆ್ಯಡ್ರೂಸ್ ಅಲಿಯಾಸ್ ಬಿಎಸ್ ಅವಿನಾಶ್ ಅವರ ಬೆನ್ಜ್ ಕಾರು ಅಫಘಾತಕ್ಕೆ ಒಳಗಾಗಿದೆ.

ನಟ ಬಿಎಸ್ ಅವಿನಾಶ್

ನಟ ಬಿಎಸ್ ಅವಿನಾಶ್

  • Share this:
ಭಾರತೀಯ ಚಿತ್ರರಂಗವೇ ಸ್ಯಾಂಡಲ್​ ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ ಕನ್ನಡದ ಹೆಮ್ಮೆಯ ರಾಕಿಂಗ್ ಸ್ಟಾರ್​ ಯಶ್ ಅಭಿನಯದ ಕೆಜಿಎಫ್ ಮತ್ತು KGF 2 ಚಿತ್ರವು ಈಗಾಗಳೇ ಬಿಡುಗಡೆಯಾಗಿ ಎಲ್ಲಡೆ ಅಬ್ಬರಿಸಿದೆ. ಈ ಚಿತ್ರ ನಿರ್ಮಿಸಿದ ದಾಖಲೆಗಳು ಒಂದಲ್ಲಾ ಎರಡಲ್ಲಾ. ಸಾಲು ಸಾಲು ದಾಖಲೆಗಳನ್ನು ಪುಡಿಗಟ್ಟಿರುವ ಕೆಜಿಎಫ್ 2 ಚಿತ್ರದಲ್ಲಿ ಪ್ರತಿಯೊಬ್ಬರ ಶ್ರಮವೂ ಮಹತ್ವದ್ದಾಗಿದೆ. ಯಶ್ (Yash) ನಟರಾಗಿ ಅಬ್ಬರಿಸಿದರೆ, ಅವರ ಹಿಂದೆ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ಮತ್ತು ಕ್ಯಾಮರಾಮನ್ ಭುವನ್ ಗೌಡ ಹೀಗೆ ಎಲ್ಲರ ಶ್ರಮದ ಭಾಗವಾಗಿ ಸಿದ್ದವಾಗಿದ್ದೆ ಈ ಕೆಜಿಎಫ್  ಎಂಬ ಚಿತ್ರ. ಇದರ ಯಶಸ್ಸಿನ ಹಿಂದೆ ಇವರಗಳಷ್ಟೇ ಅಲ್ಲದೇ ಖಳನಟರೂ ಅಷ್ಟೇ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅದರಲ್ಲಿಯೂ ಬಿಎಸ್ ಅವಿನಾಶ್ (BS Avinash) ಅವರ ಪಾತ್ರಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಆದರೆ ಇಂದು ಅವರ ಕಾರಿಗೆ ಅಪಘಾತವಾಗಿದ್ದು, ಅವರಿಗೆ ಯಾವುದೇ ಅಪಾಯವಾಗಿಲ್ಲ  ಎಂದು ತಿಳಿದುಬಂದಿದೆ.

ಅವಿನಾಶ್ ಕಾರು ಅಫಘಾತ:

ಕೆಜಿಎಫ್ 1 ಮತ್ತು 2ನೇ ಭಾಗದಲ್ಲಿ ವಿಲನ್ ಪಾತ್ರದಲ್ಲಿ ಅಬ್ಬರಿಸಿದ್ದ ಆ್ಯಡ್ರೂಸ್ ಅಲಿಯಾಸ್ ಬಿಎಸ್ ಅವಿನಾಶ್ ಅವರ ಬೆನ್ಜ್ ಕಾರು ಅಫಘಾತಕ್ಕೆ ಒಳಗಾಗಿದೆ. ಅಪಘಾತದಲ್ಲಿ ನಟನ ಬೆನ್ಜ್ ಕಾರು ಸಂಪೂರ್ಣವಾಗಿ ಜಖಂ ಆಗಿದೆ. ಆದರೆ ಅದೃಷ್ಟವಶಾತ್ ಅವರಿಗೆ ಯಾವದುಏ ತೊಂದರೆಯಾಗಿಲ್ಲ. ಇಂದು ಮುಂಜಾನೆ ನಗರ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಘಟನೆ ನಡೆದಿದ್ದು, ಮುಂಜಾನೆ ಆರು ಗಂಟೆ ಸಮಯಲ್ಲಿ ಎಂಜಿ ರಸ್ತೆ ಕಡೆ ಹೋಗುವಾಗ ಕ್ಯಾಂಟರ್ ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿದೆ. ಅವಿನಾಶ್ ಅವರು ಜಿಮ್ ಗೆ ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದ್ದು, ಅವಘಡದಲ್ಲಿ  ಅವಿನಾಶ್ ಗೆ ಯಾವುದೇ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಸದ್ಯ ಕ್ಯಾಂಟರ್ ಚಾಲಕ ಶಿವನಗೌಡ ಎಂಬುವವನನ್ನು ಬಂಧಿಸಲಾಗಿದ್ದು, ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜಖಂಗೊಂಡ ಅವಿನಾಶ್ ಕಾರು


ಸಖತ್ ಫಿಟ್​ ಆಗಿರುವ ಅವಿನಾಶ್:

ಇನ್ನು, ನಟ ಅವಿನಾಶ್ ಎಂದಿಗೂ ಜಿಮ್​ ನಲ್ಲಿ ಸಖತ್ ಆಗಿ ಬೆವರು ಹರಿಸುತ್ತಾರೆ. ದಿನಿತ್ಯ ಜಿಮ್​ ಗೆ ಹೋಗುವ ಅವರು, ಹೀರೋಗಳಂತೆ 6 ಪ್ಯಾಕ್ ಮಾಡಿಕೊಂಡಿದ್ದು, ಯುವಕರಿಗೆ ಸ್ಪೂರ್ತಿಯಾಗಿದ್ದಾರೆ. ಅಲ್ಲದೇ ಅವರು ತಮ್ಮ ಜಿಮ್ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ಇದ್ದಂತೆ ಎಲ್ಲಡೆ ಸಖತ್ ವೈರಲ್ ಸಹ ಆಗುತ್ತದೆ. ಹೀಗಾಗಿ ಅವರಿಗೆ ಇನ್ಸ್ಟಾಗ್ರಾಂ ನಲ್ಲಿ 69.9K ಫಾಲೋವರ್ಸ್ ಸಹ ಇದ್ದಾರೆ, ಸದ್ಯಅ ವರೂ ಸಹ ಸಾಲು ಸಾಲು ಸಿನಿಮಾಗಳಲ್ಲಿ ಸಖತ್ ಬ್ಯಸುಸಿಯಾಗಿದ್ದಾರೆ. ಅವರ ಕಜಿಎಫ್ ನಲ್ಲಿನ ಆ್ಯಡ್ರೂಸ್ ಪಾತ್ರಕ್ಕೆ ಎಲ್ಲಡೆ ಉತ್ತಮ ಪ್ರತಿಕ್ರಯೆ ವ್ಯಕ್ತವಾಗಿತ್ತು.

ಇದನ್ನೂ ಓದಿ: ತಮಿಳಿನ ಖ್ಯಾತ ಡೈರೆಕ್ಟರ್ Yash ಗೆ ಆಕ್ಷನ್ ಕಟ್ ಹೇಳ್ತಾರಾ? ಈ ಚಿತ್ರದ ಬಜೆಟ್ ಕೇಳಿದ್ರೆ ಶಾಕ್ ಆಗೋದಂತೂ ಗ್ಯಾರೆಂಟಿ!

ತಮಿಳಿನ ಸ್ಟಾರ್​ ಡೈರೆಕ್ಟರ್ ಜೊತೆ ರಾಕಿ ಭಾಯ್?:

ಇದರ ಜೊತೆ ಮತ್ತೊಂದು ಸೂಪರ್ ಸುದ್ದಿ ಹರಿದಾಡುತ್ತಿದ್ದು, ರೋಬೋ, ರೋಬೋ 2.0ನ ನಂತಹ ಅದ್ದೂರಿ ಚಿತ್ರಗಳನ್ನು ನಿರ್ದೇಶಿಸಿರುವ ತಮಿಳಿನ ನಿರ್ದೇಶಕ ಶಂಕರ್ ಅವರು ಯಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಶಂಕರ್ ನಿರ್ದೇಶನದಲ್ಲಿ ಬರೋಬ್ಬರಿ 800 ಕೋಟಿ ಬಜೆಟ್​ ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯಶ್ ಆಲೋಚಿಸುತ್ತಿದ್ದಾರೆ ಎಂಬ ಮಾಹಿತಿಗಳು ಎಲ್ಲಡೆ ಪಸರಿಸಿದ್ದು, ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:  KGF 3 ಕುರಿತು ಬಿಗ್​ ಅಪ್​ಡೇಟ್​ ನೀಡಿದ ನೀಲ್, ಶೂಟಿಂಗ್ ಆರಂಭ ಯಾವಾಗ?

ಇದರ ನಡುವೆ ಯಶ್ ಮುಂದಿನ ಚಿತ್ರವನ್ನು ನರ್ತನ್ ಮಾಡಲಿದ್ದಾರೆ ಎಂಬ ಬಲವಾದ ಮಾತುಗಳೂ ಸಹ ಕೇಳಿಬರುತ್ತಿದೆ.ಕೆಜಿಎಫ್ 2 ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕ ದಿಲ್ ರಾಜು ಅವರು ಯರ್ಶ ಅವರ ಸಿನಿಂಆಗೆ ಬಂಡವಾಳ ಹೂಡಲಿದ್ದಾರೆ ಎಂಬ ಮಾತುಗಳಿವೆ.  ಅಲ್ಲದೇ ಯಶ್ ಅವರಿಗೆ 100 ಕೋಟಿ ಸಂಭಾವನೆಯನ್ನೂ ಸಹ ನೀಡಲಿದ್ದಾರೆ ಎನ್ನಲಾಗಿದೆ.
Published by:shrikrishna bhat
First published: