Salaar Film: ಕೆಜಿಎಫ್ ತಾತನಿಗೆ ಮತ್ತೊಂದು ಅವಕಾಶ, ಸಲಾರ್ ಸಿನಿಮಾದಲ್ಲಿ ನಟಿಸ್ತಾರಂತೆ ಈ ನಟ

KGF 2: ಹಿರಿಯ ನಟ ಕೃಷ್ಣಾಜಿ ರಾವ್ ಎಂದರೆ ನಿಮಗೆ ಗೊತ್ತಾಗಲಿಕ್ಕಿಲ್ಲ. ಆದರೆ 'ಕೆಜಿಎಫ್' ತಾತ ಅಂದರೆ ತಕ್ಷಣವೇ ತಿಳಿಯುತ್ತದೆ. ಅವರು ಅಷ್ಟು ಫೇಮಸ್​ ಎನ್ನಬಹುದು.

ನಟ ಕೃಷ್ಣ ಜಿ ರಾವ್

ನಟ ಕೃಷ್ಣ ಜಿ ರಾವ್

  • Share this:
ಯಶ್ (Yash) ನಟನೆಯ ಕೆಜಿಎಫ್ ಚಾಪ್ಟರ್ (KGF 1) ಒಂದು ಮತ್ತು ಕೆಜಿಎಫ್ 2 (KGF 2)  ಕನ್ನಡ ಚಿತ್ರರಂಗ (Sandalwood) ಮಾತ್ರವಲ್ಲದೇ ಭಾರತದ (India) ಚಿತ್ರೋದ್ಯಮದಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಿದೆ. ಅದರಲ್ಲಿ ಅಭಿನಯಿಸಿರುವ ಪ್ರತಿಯೊಬ್ಬರಿಗೆ ಅವಕಾಶಗಳ ಸುರಿಮಳೆ ಸಹ ಸುರಿಯುತ್ತಿದೆ. ಅವರ ಬದುಕು ಒಂದು ರೀತಿಯಲ್ಲಿ ಬದಲಾಗಿದೆ ಎಂದರೆ ತಪ್ಪಲ್ಲ. ಈಗ ಇದರಲ್ಲಿ ನಟಿಸಿದ ಹಿರಿಯ ನಟರೊಬ್ಬರಿಗೆ ಅದೃಷ್ಣ ಒದಗಿ ಬಂದಿದೆ. ಒಂದೆಲ್ಲಾ ಒಂದು ಸಿನಿಮಾದಲ್ಲಿ ಅವರಕಾಶ ಲಭಿಸುತ್ತಿದೆ. ಇದೀಗ ಸಲಾರ್ ಚಿತ್ರದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ಏನಿದು ಸ್ಟೋರಿ? ಕಂಪ್ಲೀಟ್​ ಡೀಟೈಲ್ಸ್ ಇಲ್ಲಿದೆ.

ಹಿರಿಯ ನಟ ಕೃಷ್ಣಾಜಿ ರಾವ್ ಎಂದರೆ ನಿಮಗೆ ಗೊತ್ತಾಗಲಿಕ್ಕಿಲ್ಲ. ಆದರೆ 'ಕೆಜಿಎಫ್' ತಾತ ಅಂದರೆ ತಕ್ಷಣವೇ ತಿಳಿಯುತ್ತದೆ. ಅವರು ಅಷ್ಟು ಫೇಮಸ್​ ಎನ್ನಬಹುದು. ಹೌದು, ಕೆಜಿಎಫ್​ ಸಿನಿಮಾದಲ್ಲಿ ದೃಷ್ಟಿ ವಿಶೇಷಚೇತನ ಮುದುಕನಾಗಿ ಕಾಣಿಸಿಕೊಂಡು ಅದ್ಭುತ ನಟನೆ ಮಾಡಿ ಫೇಮಸ್ ಆಗಿದ್ದ ನಟ ಎಂಬುರಲ್ಲಿ ಯಾವುದೇ ಅನುಮಾನವಿಲ್ಲ.

ಸಲಾರ ಸಿನಿಮಾದಲ್ಲಿ ಕೃಷ್ಣ ಜಿ ರಾವ್ 

ಕೆಜಿಎಫ್ 1 ಹಾಗೂ ಕೆಜಿಎಫ್ ಚಾಪ್ಟರ್ 2 ನಂತರ ಕೃಷ್ಣ ಜಿ ರಾವ್ ಅವರಿಗೆ ಹಲವಾರು ಅವಕಾಶಗಳು ಒದಗಿಬಂದಿದೆ. ಅವರು ಸಹ ಒಳ್ಳೆಯ ಕತೆಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.   ಕೆಜಿಎಫ್ ಸಿನಿಮಾದಲ್ಲಿ ಇವರ ಪಾತ್ರ ಜಾಸ್ತಿ ಇರಲಿಲ್ಲ. ಆದರೂ ಸಹ ಸಣ್ಣ ಪಾತ್ರದ ಮೂಲಕವೇ ಜನರ ಮನಸಲ್ಲಿ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದರು. ಅಲ್ಲದೇ ಅವರ ಪಾತ್ರ ಸಣ್ಣದಿದ್ದರೂ ಸಹ ವಿಶೇಷವಾಗಿತ್ತು, ಹಾಗಾಗಿ ಜನರಿಗೆ ಬಹಳ ಇಷ್ಟ ಎನ್ನಬಹುದು.

ಇದೀಗ ಅವರಿಗೆ ಮತ್ತೊಂದು ಅವಕಾಶ ಲಭಿಸಿದ್ದು, ಅದು ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಸಿನಿಮಾದಲ್ಲಿ ಅಭಿನಯಿಸುವ ಚಾನ್ಸ್ ಸಿಕ್ಕಿದೆ. ಕೆಜಿಎಫ್​ 1 ಹಾಗೂ 2 ಸಿನಿಮಾಗಳ ನಂತರ ನಿರ್ದೇಶಕ ಪ್ರಶಾಂತ್ ನೀಲ್ ತೆಲುಗು ಸಿನಿಮಾ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಪ್ರಭಾಸ್​ ಅಭಿನಯದ ಸಲಾರ್' ಚಿತ್ರದ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ ತಮ್ಮ ಚಿತ್ರದಲ್ಲಿ ಕೃಷ್ಣ ಜಿ ರಾವ್ ಅವರಿಗೆ ಅವಕಾಶ ನೀಡುವ ಮೂಲಕ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. ಹೌದು, ಸಲಾರ್ ಚಿತ್ರದಲ್ಲಿ ಒಂದು ಪಾತ್ರ ಕೊಡುವಂತೆ ನಿರ್ದೇಶಕ ಪ್ರಶಾಂತ್ ನೀಲ್ ಹೇಳಿದ್ದಾರಂತೆ. ಆದರೆ ಇನ್ನೂ ಯಾವ ಪಾತ್ರ ಎನ್ನುವುದನ್ನು ಮಾತ್ರ ರಿವೀಲ್ ಮಾಡಿಲ್ಲ.

ಇದೊಂದೆ ಅಲ್ಲದೇ ಈ ತಾತ ಈಗಾಗಲೇ ಒಂದು ಚಿತ್ರಕ್ಕೆ ಹೀರೋ ಆಗಿ ಆಯ್ಕೆಯಾಗಿದ್ದಾರೆ. ಮಾಹಿತಿ ಪ್ರಕಾರ ಮುದುಕನ ಲವ್ ಸ್ಟೋರಿ ಎಂಬ ಚಿತ್ರದ ಶೂಟಿಂಗ್ ಈಗಾಗಲೇ ಮುಗಿದಿದೆ. ಸದ್ಯ ಡಬ್ಬಿಂಗ್ ನಡೆಯುತ್ತಿದ್ದು, ಇನ್ನೂ ಬಿಡುಗಡೆಯ ದಿನಾಂಕ ನಿಗಧಿಯಾಗಿಲ್ಲ.  ಇನ್ನು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ಅವರು, ನನಗೆ ಹಲವಾರು ಚಿತ್ರಗಳ ಆಫರ್ ಬರುತ್ತಿದೆ. ಅದಕ್ಕೆ ಕಾರಣ ಕೆಜಿಎಫ್ ಚಿತ್ರ ಎಂದು ಪ್ರಶಾಂತ್ ನೀಲ್​ ಹಾಗೂ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ: ಇಳಕಲ್ ಸೀರೆಯಲ್ಲಿ ಕನ್ನಡತಿ ಸುಂದರಿಯರು ಮಿಂಚಿಂಗ್, ಇದು ಬೆಸ್ಟ್ ಸೀರಿಯಲ್ ಅಂದ್ರು ಫ್ಯಾನ್ಸ್

ಕೆಜಿಎಫ್ 1 ಸಿನಿಮಾದ ನಂತರ ಕೃಷ್ಣ ರಾವ್ ಅವರಿಗೆ ಬಂದ ಆಫರ್​ ಹಲವಂತೆ. ಆದರೆ ಅವರು ಒಳ್ಳೆಯ ಕತೆಯನ್ನು ಆಯ್ಕೆ ಮಾಡಿದ್ದಾರೆ. ಆದರು ಸಹ ಚಾಪ್ಟರ್ 1 ರ ನಂತರ ಬರೋಬ್ಬರಿ  ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟನೆ ಮಾಡಿದ್ದೀನಿ ಎನ್ನುತ್ತಾರೆ ಕೃಷ್ಣ ಜಿ ರಾವ್. ಇನ್ನು ಕೆಜಿಎಫ್​ 2 ಬಿಡುಗಡೆಯ ನಂತರ 15 ಚಿತ್ರದಲ್ಲಿ ನಟಿಸಿದ್ದು, ನಿಜಕ್ಕೂ ಒಳ್ಳೆಯ ಆಫರ್​ಗಳು ಬರುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಒಂದು ಚಿಕ್ಕ ಪಾತ್ರ ಹೆಸರು ನೀಡಿದೆ

ಇನ್ನು ಚಿತ್ರರಂಗದಲ್ಲಿ ಬಹಳ ವರ್ಷಗಳಿಂದ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡುತ್ತಿರುವ ಕೃಷ್ಣ ಅವರು ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದು, ಇಷ್ಟು ವರ್ಷಗಳಲ್ಲಿ ಯಾರೂ ಗುರುತಿಸಿರಲಿಲ್ಲ. ಕಷ್ಟಪಟ್ಟು ದುಡಿದಿದ್ದೇನೆ, ಆದರೆ ಎನೂ ಸಂಪಾದನೆ ಮಾಡಿಲ್ಲ. ಈ ಒಂದು ಚಿಕ್ಕ ಪಾತ್ರ ನನಗೆ ಹೆಸರು ಕೊಟ್ಟಿದೆ ಜೊತೆಗೆ ಸಂಪಾದನೆಯನ್ನು ಸಹ ಎಂದಿದ್ದಾರೆ.

ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ಡಾರ್ಲಿಂಗ್ ಕೃಷ್ಣ, ದಿಲ್ ಪಸಂದ್ ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್

ಕೆಜಿಎಫ್ ಕಾರಣದಿಂದ ನನಗೆ ನೆಮ್ಮದಿ ಜೀವನ ನಡೆಸಲು ಸಹಾಯವಾಗಿದೆ ಎಂದು ಹೇಳಿಕೊಂಡಿದ್ದಾರೆ.  ಇನ್ನು ಮುದುಕನ ಲವ್ ಸ್ಟೋರಿ ನಿಜಕ್ಕೂ ವಿಭಿನ್ನ ಕತೆಯನ್ನು ಹೊಂದಿದ್ದು, ಕಾಮಿಡಿ ಚಿತ್ರವಾಗಿದೆ ಎಂದು ಚಿತ್ರತಂಡ ತಿಳಿಸಿದೆ.
Published by:Sandhya M
First published: